ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

T20 World Cup: 2026ರ ಐಸಿಸಿ ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ, ಫೆ 15ಕ್ಕೆ ಭಾರತ vs ಪಾಕಿಸ್ತಾನ ಪಂದ್ಯ!

ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಮಂಗಳವಾರ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಲೀಗ್‌ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹಾಗಾಗಿ ಈ ಎರಡೂ ತಂಡಗಳು ಫೆಬ್ರವರಿ 15 ರಂದು ಮುಖಾಮುಖಿ ಕಾದಾಟ ನಡೆಸಲಿವೆ.

2026ರ ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ, ಫೆ 15ಕ್ಕೆ ಭಾರತ-ಪಾಕ್‌ ಪಂದ್ಯ!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟ. -

Profile
Ramesh Kote Nov 25, 2025 8:02 PM

ನವದೆಹಲಿ: ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC) ಮಂಗಳವಾರ ಪ್ರಕಟಿಸಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳು ಟೂರ್ನಿಯ ಲೀಗ್‌ ಹಂತದ ಎ ಗಂಪಿನಲ್ಲಿ ಸ್ಥಾನ ಪಡೆದಿವೆ. ಅದರಂತೆ ಫೆಬ್ರವರಿ 15 ರಂದು ಈ ಎರಡೂ ತಂಡಗಳು ಲೀಗ್‌ ಹಂತದಲ್ಲಿ ಕಾದಾಟ ನಡೆಸಲಿವೆ. ಈ ಮಹತ್ವದ ಕಾದಾಟ ಕೊಲಂಬೊದಲ್ಲಿ ನಡೆಯಲಿದೆ. ಕಳೆದ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ಈ ವೇಳೆ ಭಾರತದ ಎದುರು ಪಾಕ್‌ ಸೋಲು ಅನುಭವಿಸಿತ್ತು. ನಂತರ ಎರಡನೇ ಸುತ್ತಿಗೆ ಪಾಕ್‌ ಅರ್ಹತೆ ಪಡೆದಿರಲಿಲ್ಲ. ಆದರೆ, ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ಚಾಂಪಿಯನ್‌ ಆಗಿತ್ತು.

ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಫೆಬ್ರವರಿ 7 ರಂದು ಆರಂಭವಾಗಿ, ಮಾರ್ಚ್‌ 8 ರಂದು ಭಾನುವಾರ ಫೈನಲ್‌ ಪಂದ್ಯದ ಮೂಲಕ ಅಂತ್ಯವಾಗಲಿದೆ. ಸೂರ್ಯಕುಮಾರ್‌ ನಾಯಕತ್ವದ ಭಾರತ ತಂಡ ಫೆಬ್ರವರಿ 7 ರಂದು ಮುಂಬೈನಲ್ಲಿ ಯುಎಸ್‌ಎ ವಿರುದ್ಧ ಕಾದಾಟ ನಡೆಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದೇ ದಿನ ಟೂರ್ನಿಯ ಮೊದಲನೇ ಪಂದ್ಯದಲ್ಲಿ ನೆದರ್ಲೆಂಡ್‌ ವಿರುದ್ಧ ಪಾಕಿಸ್ತಾನ ಪೈಪೋಟಿ ನಡೆಸಲಿದೆ. ಭಾರತ ತಂಡ, ಪಾಕಿಸ್ತಾನ, ಯುಎಸ್‌ಎ, ನೆದರ್ಲೆಂಡ್ಸ್‌ ಹಾಗೂ ನಮೀಬಿಯಾ ತಂಡಗಳ ಜೊತೆಗೆ ಎ ಗಂಪಿನಲ್ಲಿ ಸ್ಥಾನ ಪಡೆದಿದೆ.

IND vs SA: ʻನೆಪ ಹೇಳಬೇಡಿ, ಉತ್ತರ ಕೊಡಿʼ-ಗೌತಮ್‌ ಗಂಭೀರ್‌ ವಿರುದ್ಧ ಕ್ರಿಸ್‌ ಶ್ರೀಕಾಂತ್‌ ಕಿಡಿ!

ಆತಿಥೇಯ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ, ಜಿಂಬಾಬ್ವೆ, ಐರ್ಲೆಂಡ್ ಮತ್ತುಒಮನ್ ಜೊತೆಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ ಒಂದು ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ. 2021ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ನೇಪಾಳ ಮತ್ತು ಇಟಲಿ ಗ್ರೂಪ್ ಸಿ ಯಲ್ಲಿರುವ ಐದು ತಂಡಗಳಾಗಿವೆ. ಮುಂಬರುವ ಟೂರ್ನಿಯಲ್ಲಿ ಇಟಲಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಲಿದೆ.



ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಶ್ರೀಲಂಕಾ, ಕೆನಡಾ ಮತ್ತು ಯುಎಇ ಗ್ರೂಪ್ ಡಿ ಯಲ್ಲಿರುವ ಐದು ತಂಡಗಳು. ಶ್ರೀಲಂಕಾ 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಮೊದಲ ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಪಂದ್ಯವನ್ನು ಆಯೋಜಿಸಲಾಗಿದೆ. ಎರಡು ಸೆಮಿಫೈನಲ್‌ ಪಂದ್ಯಗಳು ಮುಂಬೈನ ವಾಂಖೆಡೆ ಕ್ರೀಡಾಂಗಣ ಮತ್ತು ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಒಂದು ವೇಳೆ ಪಾಕಿಸ್ತಾನ ತಂಡ ಸೆಮಿಫೈನಲ್ಸ್‌ ಹಾಗೂ ಫೈನಲ್‌ಗೆ ಅರ್ಹತೆ ಪಡೆದರೆ, ಆಗ ನಾಕ್‌ಔಟ್‌ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗುತ್ತದೆ. ಹಾಲಿ ಚಾಂಪಿಯನ್‌ ಆಗಿ ಭಾರತ ತಂಡ, ಟಿ20 ವಿಶ್ವಕಪ್‌ ಟೂರ್ನಿಗೆ ಪ್ರವೇಶ ಮಾಡಲಿದೆ.



ಭಾರತ ತಂಡದ 2026ರ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ

07 ಫೆಬ್ರವರಿ 2026 – ಭಾರತ vs ಯುಎಸ್ಎ, ಮುಂಬೈ

12 ಫೆಬ್ರವರಿ 2026 – ಭಾರತ vs ನಮೀಬಿಯಾ, ನವದೆಹಲಿ

15 ಫೆಬ್ರವರಿ 6 – ಭಾರತ vs ಪಾಕಿಸ್ತಾನ, ಆರ್ ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ

18 ಫೆಬ್ರವರಿ 2026 – ಭಾರತ vs ನೆದರ್ಲೆಂಡ್ಸ್‌, ಅಹಮದಾಬಾದ್

2025ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ

ಫೆಬ್ರವರಿ 07, 2026 –ಶನಿವಾರ

ಬೆಳಿಗ್ಗೆ 11:00 – ಪಾಕಿಸ್ತಾನ vs ನೆದರ್‌ರ್ಲೆಂಡ್ಸ್ – ಎಸ್‌ಎಸ್‌ಸಿ, ಕೊಲಂಬೊ

ಮಧ್ಯಾಹ್ನ 3:00 – ವೆಸ್ಟ್ ಇಂಡೀಸ್ vs ಬಾಂಗ್ಲಾದೇಶ – ಕೋಲ್ಕತಾ

ಸಂಜೆ 7:00 – ಭಾರತ vs ಯುಎಸ್‌ಎ – ಮುಂಬೈ

ಫೆಬ್ರವರಿ 08, 2026 – ಭಾನುವಾರ

ಬೆಳಿಗ್ಗೆ 11:00 – ನ್ಯೂಜಿಲೆಂಡ್ vs ಅಫ್ಘಾನಿಸ್ತಾನ – ಚೆನ್ನೈ

ಮಧ್ಯಾಹ್ನ 3:00 – ಇಂಗ್ಲೆಂಡ್ vs ನೇಪಾಳ – ಮುಂಬೈ

ಸಂಜೆ 7:00 – ಶ್ರೀಲಂಕಾ vs ಐರ್ಲೆಂಡ್ – ಪ್ರೇಮದಾಸ, ಕೊಲಂಬೊ

ಫೆಬ್ರವರಿ 09, 2026 – ಸೋಮವಾರ

ಬೆಳಿಗ್ಗೆ 11:00 – ಬಾಂಗ್ಲಾದೇಶ vs ಇಟಲಿ – ಕೋಲ್ಕತ್ತಾ

ಮಧ್ಯಾಹ್ನ 3:00 – ಜಿಂಬಾಬ್ವೆ vs ಓಮನ್ – ಎಸ್‌ಎಸ್‌ಸಿ, ಕೊಲಂಬೊ

ಸಂಜೆ 7:00 – ದಕ್ಷಿಣ ಆಫ್ರಿಕಾ vs ಕೆನಡಾ – ಅಹಮದಾಬಾದ್



ಫೆಬ್ರವರಿ 10, 2026 – ಮಂಗಳವಾರ

ಬೆಳಿಗ್ಗೆ 11:00 – ನೆದರ್‌ರ್ಲೆಂಡ್ಸ್ vs ನಮೀಬಿಯಾ – ದೆಹಲಿ

ಮಧ್ಯಾಹ್ನ 3:00 – ನ್ಯೂಜಿಲೆಂಡ್ vs ಯುಎಇ – ಚೆನ್ನೈ

ಸಂಜೆ 7:00 – ಪಾಕಿಸ್ತಾನ vs ಯುಎಸ್‌ಎ– ಎಸ್‌ಎಸ್‌ಸಿ, ಕೊಲಂಬೊ

ಫೆಬ್ರವರಿ 11, 2026 – ಬುಧವಾರ

ಬೆಳಿಗ್ಗೆ 11:00 – ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ – ಅಹಮದಾಬಾದ್

ಮಧ್ಯಾಹ್ನ 3:00 – ಆಸ್ಟ್ರೇಲಿಯಾ vs ಐರ್ಲೆಂಡ್ – ಪ್ರೇಮದಾಸ, ಕೊಲಂಬೊ

ಸಂಜೆ 7:00 – ಇಂಗ್ಲೆಂಡ್ vs ವೆಸ್ಟ್ ಇಂಡೀಸ್ – ಮುಂಬೈ

ಫೆಬ್ರವರಿ 12, 2026 – ಗುರುವಾರ

ಬೆಳಿಗ್ಗೆ 11:00 – ಶ್ರೀಲಂಕಾ vs ಓಮನ್ – ಕ್ಯಾಂಡಿ

ಮಧ್ಯಾಹ್ನ 3:00 – ನೇಪಾಳ vs ಇಟಲಿ – ಮುಂಬೈ

ಸಂಜೆ 7:00 – ಭಾರತ vs ನಮೀಬಿಯಾ – ದೆಹಲಿ

ಫೆಬ್ರವರಿ 13, 2026 – ಶುಕ್ರವಾರ

ಬೆಳಿಗ್ಗೆ 11:00 – ಆಸ್ಟ್ರೇಲಿಯಾ vs ಜಿಂಬಾಬ್ವೆ – ಪ್ರೇಮದಾಸ, ಕೊಲಂಬೊ

ಮಧ್ಯಾಹ್ನ 3:00 – ಕೆನಡಾ vs ಯುಎಇ – ದೆಹಲಿ

ಸಂಜೆ 7:00 – ಯುಎಸ್ಎ vs ನೆದರ್ಲೆಂಡ್ಸ್ – ಚೆನ್ನೈ



ಫೆಬ್ರವರಿ 14, 2026 – ಶನಿವಾರ

ಬೆಳಿಗ್ಗೆ 11:00 – ಐರ್ಲೆಂಡ್ vs ಓಮನ್ – ಎಸ್‌ಎಸ್‌ಸಿ, ಕೊಲಂಬೊ

ಮಧ್ಯಾಹ್ನ 3:00 – ಇಂಗ್ಲೆಂಡ್ vs ಬಾಂಗ್ಲಾದೇಶ – ಕೋಲ್ಕತಾ

ಸಂಜೆ 7:00 – ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ – ಅಹಮದಾಬಾದ್

ಫೆಬ್ರವರಿ 15, 2026 – ಭಾನುವಾರ

ಬೆಳಿಗ್ಗೆ 11:00 – ವೆಸ್ಟ್ ಇಂಡೀಸ್ vs ನೇಪಾಳ – ಮುಂಬೈ

ಮಧ್ಯಾಹ್ನ 3:00 – ಯುಎಸ್ಎ vs ನಮೀಬಿಯಾ – ಚೆನ್ನೈ

ಸಂಜೆ 7:00 – ಭಾರತ vs ಪಾಕಿಸ್ತಾನ – ಪ್ರೇಮದಾಸ, ಕೊಲಂಬೊ

ಫೆಬ್ರವರಿ 16, 2026 – ಸೋಮವಾರ

ಬೆಳಿಗ್ಗೆ 11:00 – ಅಫ್ಘಾನಿಸ್ತಾನ vs ಯುಎಇ – ದೆಹಲಿ

ಮಧ್ಯಾಹ್ನ 3:00 – ಇಂಗ್ಲೆಂಡ್ vs ಇಟಲಿ – ಕೋಲ್ಕತ್ತಾ

ಸಂಜೆ 7:00 – ಆಸ್ಟ್ರೇಲಿಯಾ vs ಶ್ರೀಲಂಕಾ – ಕ್ಯಾಂಡಿ

ಸೂಪರ್ 8 ಹಂತ

ಫೆಬ್ರವರಿ 26, 2026 – ಗುರುವಾರ

ಮಧ್ಯಾಹ್ನ 3:00 – ಎಕ್ಸ್ 3 vs ಎಕ್ಸ್ 4 – ಅಹಮದಾಬಾದ್

ಸಂಜೆ 7:00 – ಎಕ್ಸ್‌1 vs ಎಕ್ಸ್‌2 – ಚೆನ್ನೈ

27 ಫೆಬ್ರವರಿ 2026 –ಶುಕ್ರವಾರ

7:00 – ವೈ1 vs ವೈ2 – ಪ್ರೇಮದಾಸ, ಕೊಲಂಬೊ

28 ಫೆಬ್ರವರಿ 2026 – ಶನಿವಾರ

7:00 PM – ವೈ3 vs ವೈ4 – ಕ್ಯಾಂಡಿ

01 ಮಾರ್ಚ್ 2026 – ಭಾನುವಾರ

ಮಧ್ಯಾಹ್ನ 3:00 – ಎಕ್ಸ್‌2 vs ಎಕ್ಸ್‌4 – ದೆಹಲಿ

ಸಂಜೆ 7:00 – ಎಕ್ಸ್1 vs ಎಕ್ಸ್‌ 3 – ಕೋಲ್ಕತ್ತಾ

ನಾಕೌಟ್‌ಗಳು

04 ಮಾರ್ಚ್ 2026 – ಬುಧವಾರ

7:00 – ಸೆಮಿಫೈನಲ್ 1 – ಕೋಲ್ಕತ್ತಾ / ಪ್ರೇಮದಾಸ, ಕೊಲಂಬೊ

05 ಮಾರ್ಚ್ 2026 – ಗುರುವಾರ

7:00 – ಸೆಮಿಫೈನಲ್ 2 – ಮುಂಬೈ

08 ಮಾರ್ಚ್ 202 6 – ಭಾನುವಾರ

7:00– ಫೈನಲ್ – ಪ್ರೇಮದಾಸ, ಕೊಲಂಬೊ / ಅಹಮದಾಬಾದ್