ನವದಹೆಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ (IND vs SA) ಸರಣಿಯಲ್ಲಿ ಸತತ ಬ್ಯಾಟಿಂಟ್ ವೈಫಲ್ಯ ಅನುಭವಿಸಿದ ಹಿರಿಯ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್‌ಗೆ (KL Rahul) ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ (Robin Uthappa) ಎಚ್ಚರಿಕೆ ನೀಡಿದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್, ನಾಲ್ಕು ಇನಿಂಗ್ಸ್‌ಗಳಿಂದ 17ರ ಸರಾಸರಿಯಲ್ಲಿ 68 ರನ್‌ಗಳನ್ನು ಗಳಿಸಿದ್ದಾರೆ. 39 ರನ್‌ಗಳು ಇವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಹಾಗಾಗಿ ಇವರ ಸ್ಥಾನ ಕೂಡ ಇದೀಗ ಅಪಾಯದಲ್ಲಿದೆ. ನಾಯಕ ಶುಭಮನ್ ಗಿಲ್ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರ ನಡೆದ ಬಳಿಕ ಕೆಎಲ್ ರಾಹುಲ್ ಮೇಲೆ ಸಾಕಷ್ಟು ಜವಾಬ್ದಾರಿ ಇತ್ತು. ಆದರೆ, ಅವರು ಟೀಮ್ ಮ್ಯಾನೇಜ್‌ಮೆಂಟ್ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡಿದ್ದರು.
ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಮಾತ್ರ ಅರ್ಧಶತಕಗಳನ್ನು ಬಾರಿಸಿದ್ದು, ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಅಂತಿಮವಾಗಿ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯದಿಂದಾಗಿ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತ್ತು. ಇದಕ್ಕೂ ಮುನ್ನ ಕೆಎಲ್ ರಾಹುಲ್, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿಯೂ ಉತ್ತಮ ಫಾರ್ಮ್‌ನಲ್ಲಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದೇ ಲಯವನ್ನು ಮುಂದುವರಿಸುವಲ್ಲಿ ವಿಫಲರಾಗಿದ್ದಾರೆ. ಈ ಸರಣಿಯಲ್ಲಿನ ವೈಫಲ್ಯವನ್ನು ಆಧರಿಸಿದ ರಾಬಿನ್, ತಮ್ಮ ಕರ್ನಾಟ ತಂಡದ ಮಾಜಿ ಆಟಗಾರನಿಗೆ ಎಚ್ಚರಿಕೆ ನೀಡಿದ್ದಾರೆ.
IND vs SA: ʻಭಾರತ ತಂಡದಲ್ಲಿ ಉತ್ತಮ ಬ್ಯಾಟರ್‌ಗಳಿದ್ದಾರೆ, ಚಿಂತಿಸುವ ಅಗತ್ಯವಿಲ್ಲʼ-ಎಬಿ ಡಿವಿಲಿಯರ್ಸ್!
"ಒಬ್ಬ ಹಿರಿಯ ವೃತ್ತಿಪರನಾಗಿದ್ದರೂ ಸಹ, ಅದು ಅವರನ್ನು ದೌರ್ಬಲ್ಯದ ಸ್ಥಾನಕ್ಕೆ ತಳ್ಳುತ್ತದೆ ಮತ್ತು ಅದಕ್ಕಾಗಿಯೇ ಅವರು ಹಿರಿಯ ವೃತ್ತಿಪರ ಆಟಗಾರನಾಗಿದ್ದರೂ ತಮ್ಮದೇ ಆದ ಸ್ಥಾನಕ್ಕಾಗಿ ಪ್ರದರ್ಶನ ನೀಡುವುದು ಅವರ ಸ್ವಂತ ಕ್ರಿಕೆಟ್‌ಗೆ ಮುಖ್ಯವಾಗಿದೆ. ನಾನು ನಿಮಗೆ ಹೇಳುವುದೇನೆಂದರೆ, ಈ ಸರಣಿಯಂತೆಯೇ ಮುಂದಿನ ಸರಣಿಯಲ್ಲಿಯೂ ಅವರು ವಿಫಲರಾದರೆ, ಟೀಮ್ ಮ್ಯಾನೇಜ್‌ಮೆಂಟ್ ಬಲಗೈ ಬ್ಯಾಟ್ಸ್‌ಮನ್ ಜೊತೆಗೆ ತಾಳ್ಮೆಯನ್ನು ಕಳೆದುಕೊಳ್ಳಲಿದೆ," ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಹುಲ್ ವೈಫಲ್ಯಕ್ಕೆ ಕಾರಣ ತಿಳಿಸಿದ ಉತ್ತಪ್ಪ
"ಕೆಲ ಕಾರಣಗಳಿಂದಾಗಿ ಕೆಎಲ್ ರಾಹುಲ್ ಈ ಟೆಸ್ಟ್ ತಂಡದಲ್ಲಿ ತನ್ನ ಅಸಂಗತತೆ ಮತ್ತು ಸ್ಥಿರವಿಲ್ಲದ ಬ್ಯಾಟಿಂಗ್ ಕ್ರಮಾಂಕಗಳ ಮೇಲೆ ಕೆಲಸ ಮಾಡಬೇಕಾಯಿತು. ನನಗೆ, ಅವರು ಎಷ್ಟೇ ಬದಲಾಗಿದ್ದರೂ (ನಂತರ) ಅಷ್ಟೊಂದು ಬ್ಯಾಟಿಂಗ್ ಕ್ರಮಾಂಕಗಳನ್ನು ಸಂಗ್ರಹಿಸಿದ್ದಾರೆ ಎಂಬುದು ಅದ್ಭುತವಾಗಿದೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಬಹಳಷ್ಟು ಸಹಿಸಿಕೊಳ್ಳಬೇಕಾಯಿತು," ಎಂದು ಅವರು ಶ್ಲಾಘಿಸಿದ್ದಾರೆ.
IND vs SA: ರಾಂಚಿಯಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಕೊಹ್ಲಿ, ರೋಹಿತ್
67 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರೂ ಕೆಎಲ್ ರಾಹುಲ್ ಅವರ ಸರಾಸರಿ 35 ಕ್ಕಿಂತ ಸ್ವಲ್ಪ ಹೆಚ್ಚೇ ಇದೆ. ಆದರೆ, ಅನುಭವ ಮತ್ತು ಪ್ರತಿಭೆಗೆ ತಕ್ಕಂತೆ ಅವರ ಅಂಕಿಅಂಶಗಳು ಕಡಿಮೆ ಎಂದು ಹಲವರು ಪರಿಗಣಿಸುತ್ತಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಸರಣಿಯು ಅವರ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿನ ಅಸಮರ್ಥತೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ಇದು ಅವರ ದೀರ್ಘಕಾಲೀನ ನಿರೀಕ್ಷೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೆಎಲ್ ರಾಹುಲ್ ಅವರ ಕಳಪೆ ಪ್ರದರ್ಶನ ಮತ್ತು ಕಳೆದ 12 ತಿಂಗಳಲ್ಲಿ ಭಾರತ ತಂಡ ತವರಿನಲ್ಲಿ ಎರಡನೇ ಸರಣಿ ಸೋಲಿನಿಂದ ಆಯ್ಕೆದಾರರು ರಾಹುಲ್ ಮೇಲಿನ ನಂಬಿಕೆಯನ್ನು ಪರೀಕ್ಷಿಸಲಾಗಿದೆ. ಶುಭಮನ್ ಗಿಲ್ ನೇತೃತ್ವದಲ್ಲಿ ಭಾರತದ ಟೆಸ್ಟ್ ನಾಯಕತ್ವ ಪರಿವರ್ತನೆಯಾಗುತ್ತಿರುವುದರಿಂದ, ತಂಡವು ಮುಂದುವರಿಯುತ್ತಿದ್ದಂತೆ ಆಯ್ಕೆದಾರರು ಸ್ಥಾಪಿತ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚಿನ ಸ್ಥಿರತೆಯನ್ನು ಕೋರುವ ನಿರೀಕ್ಷೆಯಿದೆ.