IND vs SA: ರಾಂಚಿಯಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ ಕೊಹ್ಲಿ, ರೋಹಿತ್
ಭಾರತ 2027 ರ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆ ನಡೆಸುತ್ತಿದೆ, ಮತ್ತು ರೋಹಿತ್ ಮತ್ತು ವಿರಾಟ್ ಪ್ರತಿ ಬಾರಿ ಏಕದಿನ ಸರಣಿಯನ್ನು ಆಡುವಾಗಲೂ ಅವರು ತಂಡದಲ್ಲಿ ತಮ್ಮ ಸ್ಥಾನಕ್ಕಾಗಿ ಇನ್ನೂ ಹೋರಾಡುತ್ತಿದ್ದಾರೆ ಎಂಬುದನ್ನು ನೆನಪಿಸುತ್ತದೆ. ಸರಣಿಯ ಮೂರು ಪಂದ್ಯಗಳಲ್ಲಿ ಮೊದಲನೆಯದನ್ನು ರಾಂಚಿ ಆಯೋಜಿಸಲಿದೆ.
ಅಭ್ಯಾಸ ನಿರತ ಕೊಹ್ಲಿ-ರೋಹಿತ್ -
ರಾಂಚಿ, ನ.28: ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೂ ಮುನ್ನ ಭಾರತೀಯ ಕ್ರಿಕೆಟ್ ತಂಡವು ತಮ್ಮ ಮೊದಲ ಅಭ್ಯಾಸ ಅವಧಿಯನ್ನು ನಡೆಸಿತು. ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮಾ(Rohit Sharma) ಅವರು ಗುರುವಾರ ರಾಂಚಿಯ JSCA ಅಂತರರಾಷ್ಟ್ರೀಯ ಕ್ರೀಡಾಂಗಣ ಸಂಕೀರ್ಣದಲ್ಲಿ ಅಭ್ಯಾಸ ಅವಧಿಯನ್ನು ಮುನ್ನಡೆಸಿದರು. ಉಭಯ ಆಟಗಾರರು ನೆಟ್‌ನಲ್ಲಿ ಬ್ಯಾಟಿಂಗ್ ನಡೆಸಿದ ದೃಶ್ಯಗಳನ್ನು ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಪೋಸ್ಟ್ ಮಾಡಿತ್ತು.
ಟೆಸ್ಟ್ ನಿವೃತ್ತಿ ಬಳಿಕ ರೋಹಿತ್ ಮತ್ತು ವಿರಾಟ್ ತವರಿನಲ್ಲಿ ಆಡುತ್ತಿರುವ ಮೊದಲ ಅಂತರರಾಷ್ಟ್ರೀಯ ಸರಣಿ ಇದಾಗಿದೆ. ಹೀಗಾಗಿ ಪಂದ್ಯಕ್ಕೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರುವುದು ಖಚಿತ. ಈ ಜೋಡಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಆಡಿತ್ತು. ರೋಹಿತ್ ಶತಕ ಬಾರಿಸಿದ್ದರು. ಕೊಹ್ಲಿ ಅಂತಿಮ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದರು. ಇದೀಗ ತವರಿನಲ್ಲಿ ಶತಕ ಬಾರಿಸಿವ ಇರಾದೆಯಲ್ಲಿದ್ದಾರೆ.
ಕೊಹ್ಲಿ-ರೋಹಿತ್ ಅಭ್ಯಾಸದ ವಿಡಿಯೊ ಇಲ್ಲಿದೆ
ಭಾರತ 2027 ರ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆ ನಡೆಸುತ್ತಿದೆ, ಮತ್ತು ರೋಹಿತ್ ಮತ್ತು ವಿರಾಟ್ ಪ್ರತಿ ಬಾರಿ ಏಕದಿನ ಸರಣಿಯನ್ನು ಆಡುವಾಗಲೂ ಅವರು ತಂಡದಲ್ಲಿ ತಮ್ಮ ಸ್ಥಾನಕ್ಕಾಗಿ ಇನ್ನೂ ಹೋರಾಡುತ್ತಿದ್ದಾರೆ ಎಂಬುದನ್ನು ನೆನಪಿಸುತ್ತದೆ. ಸರಣಿಯ ಮೂರು ಪಂದ್ಯಗಳಲ್ಲಿ ಮೊದಲನೆಯದನ್ನು ರಾಂಚಿ ಆಯೋಜಿಸಲಿದೆ. ಮುಂದಿನ ಎರಡು ಪಂದ್ಯಗಳು ಡಿಸೆಂಬರ್ 3 ಮತ್ತು 6 ರಂದು ಕ್ರಮವಾಗಿ ರಾಯ್‌ಪುರ ಮತ್ತು ವೈಜಾಗ್‌ನಲ್ಲಿ ನಡೆಯಲಿವೆ.
ಇದನ್ನೂ ಓದಿ MS Dhoni: ರಾಂಚಿಯಲ್ಲಿ ಧೋನಿ-ಕೊಹ್ಲಿ ಕಾರ್ ರೈಡ್; ವಿಡಿಯೊ ವೈರಲ್
ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಹಿರಿಯ ಬ್ಯಾಟರ್, ಕರ್ನಾಟಕದ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ 8 ತಿಂಗಳ ಬಳಿಕ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ಮಾರ್ಚ್‌ನಲ್ಲಿ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಅವರು ಕೊನೆ ಬಾರಿಗೆ ಭಾರತ ಪರ ಏಕದಿನ ಪಂದ್ಯವನ್ನಾಡಿದ್ದರು.
ಭಾರತ ತಂಡ
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆ.ಎಲ್.ರಾಹುಲ್ (ನಾಯಕ), ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ರೆಡ್ಡಿ, ಹರ್ಷಿತ್ ರಾಣಾ, ಋತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್, ಧೃವ್ ಜುರೆಲ್.
ವೇಳಾಪಟ್ಟಿ
ಮೊದಲನೇ ಏಕದಿನ: ಭಾನುವಾರ, ನವೆಂಬರ್ 30, 2025 (ರಾಂಚಿ)
ಎರಡನೇ ಏಕದಿನ: ಬುಧವಾರ, ಡಿಸೆಂಬರ್ 3, 2025 (ರಾಯಪುರ)
ಮೂರನೇ ಏಕದಿನ: ಶನಿವಾರ, ಡಿಸೆಂಬರ್ 6, 2025 (ವಿಶಾಖಪಟ್ಟಣ)