ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸೂಪರ್ 8 ಹಂತಕ್ಕೆ ಈಗಾಗಲೇ ಏಳು ತಂಡಗಳು ಅರ್ಹತೆ ಪಡೆದಿವೆ. ಸೂಪರ್ 8ರಲ್ಲಿ ತಲಾ ನಾಲ್ಕು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ (India) ತಂಡದ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಜಿಂಬಾಬ್ವೆ ಇವೆ. ಆಸ್ಟ್ರೇಲಿಯಾ (Australia) ತಂಡ ಸೂಪರ್-8ಕ್ಕೆ ಅರ್ಹತೆ ಪಡೆಯುವ ನೆಚ್ಚಿನ ತಂಡವಾಗಿತ್ತು. ಆದರೆ,ಲೀಗ್ ಹಂತದಲ್ಲಿ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದರ ಪರಿಣಾಮ ಸೂಪರ್-8ರಿಂದ ಹೊರ ಬಿದ್ದಿದೆ. ಒಟ್ಟು 5 ಅಂಕಗಳನ್ನು ಪಡೆದ ಜಿಂಬಾಬ್ವೆ ಬಿ ಗುಂಪಿನಲ್ಲಿ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಅರ್ಹತೆ ಪಡೆದಿದೆ.
2026ರ ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ಎಲ್ಲಾ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿವೆ. ಭಾರತ ಫೆಬ್ರವರಿ 22 ರಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ನಂತರ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ, ಫೆಬ್ರವರಿ 26 ರಂದು ಚೆನ್ನೈನ ಚೆಪಾಕ್‌ನಲ್ಲಿ ಜಿಂಬಾಬ್ವೆಯನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಸೂಪರ್ 8 ಹಂತ ತಲುಪಿದ್ದರೆ, ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸುತ್ತಿತ್ತು. ಭಾರತ ತನ್ನ ಅಂತಿಮ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಎದುರಿಸಲಿದೆ. ಈ ಪಂದ್ಯ ಮಾರ್ಚ್ ಒಂದರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.
T20 World Cup: ಆಸ್ಟ್ರೇಲಿಯಾ ಕನಸು ಭಗ್ನ, ಸೂಪರ್-8ಕ್ಕೆ ಪ್ರವೇಶಿಸಿದ ಜಿಬಾಬ್ವೆ!
ಭಾರತ ತಂಡದ ಸೂಪರ್ 8 ಪಂದ್ಯಗಳು
ಭಾರತ vs ದಕ್ಷಿಣ ಆಫ್ರಿಕಾ, ಫೆಬ್ರವರಿ 22, ನರೇಂದ್ರ ಮೋದಿ ಕ್ರೀಡಾಂಗಣ-ಅಹಮದಾಬಾದ್, ಸಂಜೆ 7:00 ಗಂಟೆಗೆ
ಭಾರತ vs ಜಿಂಬಾಬ್ವೆ, ಫೆಬ್ರವರಿ 26, ಎಂಎ ಚಿದಂಬರಂ ಕ್ರೀಡಾಂಗಣ-ಚೆನ್ನೈ, ಸಂಜೆ 7:00 ಗಂಟೆಗೆ
ಭಾರತ vs ವೆಸ್ಟ್ ಇಂಡೀಸ್, ಮಾರ್ಚ್ 1, ಈಡನ್ ಗಾರ್ಡನ್ಸ್ ಕ್ರೀಡಾಂಗಣ- ಕೋಲ್ಕತ್ತಾ, ಸಂಜೆ 7:00 ಗಂಟೆಗೆ
ಸೆಮಿಫೈನಲ್ಸ್ ಹಾದಿ ಹೇಗಿರಲಿದೆ?
ಸೂಪರ್ 8ರ ಎರಡೂ ಗುಂಪಿಗಳ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸುವ ಎರಡು ತಂಡಗಳು ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯಲಿವೆ. ಮೊದಲನೇ ಸೆಮಿಫೈನಲ್ ಪಂದ್ಯ ಮಾರ್ಚ್ 4 ರಂದು ಮತ್ತು ಎರಡನೇ ಸೆಮಿಫೈನಲ್ ಪಂದ್ಯ ಮಾರ್ಚ್ 5 ರಂದು ನಡೆಯಲಿದೆ. ಎರಡನೇ ಸೆಮಿಫೈನಲ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಮೊದಲ ಸೆಮಿಫೈನಲ್ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
T20 World Cup: ಅಫ್ಘಾನಿಸ್ತಾನ ಔಟ್, ಕೆನಡಾ ವಿರುದ್ಧ ಗೆದ್ದು ಸೂಪರ್-8ಕ್ಕೆ ಪ್ರವೇಶಿಸಿದ ನ್ಯೂಜಿಲೆಂಡ್!
ಒಂದು ವೇಳೆ ಪಾಕ್ ಸೆಮಿಫೈನಲ್‌ಗೆ ಅರ್ಹತೆ ಪಡೆಯದಿದ್ದರೆ, ಆ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯಕ್ಕೂ ಕೂಡ ಇದೇ ನಿಯಮ ಅನ್ವಯವಾಗಲಿದೆ. ಪಾಕಿಸ್ತಾನ ಫೈನಲ್‌ಗೆ ಅರ್ಹತೆ ಪಡೆದರೆ, ಆಗ ಆ ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲಾಗುವುದು. ಒಂದು ವೇಳೆ ಅರ್ಹತೆ ಪಡೆದಿಲ್ಲವಾದರೆ ಆ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ. ಅಂದ ಹಾಗೆ ಇನ್ನೂ ಪಾಕಿಸ್ತಾನ ತಂಡ ಇನ್ನೂ ಸೂಪರ್-8ಕ್ಕೆ ಅರ್ಹತೆ ಪಡೆದಿಲ್ಲ. ಅವರು ಫೆಬ್ರವರಿ 18 ರಂದು ನಮೀಬಿಯಾ ವಿರುದ್ಧ ಆಡಲಿದ್ದಾರೆ ಮತ್ತು ಆ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮಾತ್ರ ಸೂಪರ್ 8ಕ್ಕೆ ಪಾಕ್ ಅರ್ಹತೆ ಪಡೆಯಲಿದೆ.