ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐಪಿಎಲ್ ಮಿನಿ ಹರಾಜಿಗೆ ಹೆಸರು ನೋಂದಾಯಿಸಿದ ಮುಸ್ತಫಿಜುರ್ ರೆಹಮಾನ್

Mustafizur Rahman: ಹರಾಜಿನಲ್ಲಿ ಭಾಗವಹಿಸುವ ಇಚ್ಛೆಯನ್ನು ಮುಸ್ತಫಿಜುರ್ ವ್ಯಕ್ತಪಡಿಸಿದ ನಂತರ, ಬಿಸಿಬಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ನಹಿದ್ ರಾಣಾ, ರಿಶಾದ್ ಹೊಸೈನ್, ಹಸನ್ ಮಹ್ಮೂದ್, ತೌಹಿದ್ ಹೃದೋಯ್, ಟಸ್ಕಿನ್ ಅಹ್ಮದ್ ಮತ್ತು ಶೋರಿಫುಲ್ ಇಸ್ಲಾಂ ಸೇರಿದಂತೆ ಬಾಂಗ್ಲಾದೇಶದ ಇನ್ನೂ ಹಲವು ಕ್ರಿಕೆಟಿಗರು ಕೂಡ ಹರಾಜಿಗಾಗಿ ನೋಂದಾಯಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ಬಿಸಿಬಿ ಮೂಲಗಳು ಖಚಿತಪಡಿಸಿವೆ.

ಐಪಿಎಲ್ ಮಿನಿ ಹರಾಜಿಗೆ ಹೆಸರು ನೋಂದಾಯಿಸಿದ ಬಾಂಗ್ಲಾ ವೇಗಿ

Mustafizur Rahman -

Abhilash BC
Abhilash BC Nov 12, 2026 8:39 AM

ಢಾಕಾ, ನ.12: ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಅವರು ಐಪಿಎಲ್ 2027ರ ಮಿನಿ ಹರಾಜಿಗೆ ನೋಂದಾಯಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಈ ಬಗ್ಗೆ 'ಇಂಡಿಯಾ ಟುಡೇ'ಗೆ ಮಾಹಿತಿ ನೀಡಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮೂಲವೊಂದು ಈ ವಿಷಯವನ್ನು ಖಚಿತಪಡಿಸಿದೆ. ಕಳೆದ ಋತುವಿನ ಆರಂಭದಲ್ಲಿ ವಿವಾದವೊಂದರ ನಡುವೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈಬಿಡಲ್ಪಟ್ಟಿದ್ದ ಈ ಎಡಗೈ ವೇಗಿ, ಇದೀಗ ಮತ್ತೊಂದು ಫ್ರಾಂಚೈಸಿ ಒಪ್ಪಂದವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಹರಾಜಿನಲ್ಲಿ ಭಾಗವಹಿಸುವ ಇಚ್ಛೆಯನ್ನು ಮುಸ್ತಫಿಜುರ್ ವ್ಯಕ್ತಪಡಿಸಿದ ನಂತರ, ಬಿಸಿಬಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿದೆ. ನಹಿದ್ ರಾಣಾ, ರಿಶಾದ್ ಹೊಸೈನ್, ಹಸನ್ ಮಹ್ಮೂದ್, ತೌಹಿದ್ ಹೃದೋಯ್, ಟಸ್ಕಿನ್ ಅಹ್ಮದ್ ಮತ್ತು ಶೋರಿಫುಲ್ ಇಸ್ಲಾಂ ಸೇರಿದಂತೆ ಬಾಂಗ್ಲಾದೇಶದ ಇನ್ನೂ ಹಲವು ಕ್ರಿಕೆಟಿಗರು ಕೂಡ ಹರಾಜಿಗಾಗಿ ನೋಂದಾಯಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ಬಿಸಿಬಿ ಮೂಲಗಳು ಖಚಿತಪಡಿಸಿವೆ.

“ಇದು ಐಪಿಎಲ್ ಮಿನಿ-ಹರಾಜಿನ ಸಾಮಾನ್ಯ ಪ್ರಕ್ರಿಯೆಯಾಗಿದೆ. ಬಿಸಿಸಿಐ ಪ್ರತಿಯೊಂದು ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿ, ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಆಟಗಾರರ ಹೆಸರುಗಳನ್ನು ನೋಂದಾಯಿಸುವಂತೆ ಕೋರಿದೆ. ಮುಸ್ತಫಿಜುರ್ ಮಿನಿ-ಹರಾಜಿಗಾಗಿ ನೋಂದಾಯಿಸಿಕೊಳ್ಳುತ್ತಿದ್ದಾರೆ,” ಎಂದು ಮೂಲವೊಂದು ‘ಇಂಡಿಯಾ ಟುಡೇ’ಗೆ ತಿಳಿಸಿದೆ.

IPL 2027: ಮುಂಬೈ ಇಂಡಿಯನ್ಸ್‌ ನಾಯಕತ್ವದ ರೇಸ್‌ನಲ್ಲಿ ಮೂವರು ಆಟಗಾರರು! ಸ್ಪಷ್ಟನೆ ನೀಡಿದ ಫ್ರಾಂಚೈಸಿ

"ಮುಸ್ತಫಿಜುರ್ ಜತೆಗೆ ನಹಿದ್ ರಾಣಾ, ರಿಶಾದ್ ಹೊಸೈನ್, ಹಸನ್ ಮಹಮೂದ್, ತೌಹಿದ್ ಹೃದಯೋಯ್, ತಸ್ಕಿನ್ ಅಹ್ಮದ್ ಮತ್ತು ಶೋರಿಫುಲ್ ಇಸ್ಲಾಂ ಕೂಡ ನೋಂದಾಯಿಸಿಕೊಂಡಿದ್ದಾರೆ" ಎಂದು ಬಿಸಿಬಿ ಮೂಲಗಳು ತಿಳಿಸಿವೆ.

ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡುವ ಕೆಕೆಆರ್ ನಿರ್ಧಾರವು ವ್ಯಾಪಕ ಪರಿಣಾಮಗಳನ್ನು ಬೀರಿತ್ತು. ಇದು ಬಿಸಿಬಿ ಮತ್ತು ಬಿಸಿಸಿಐ ನಡುವೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಐಪಿಎಲ್ 2026 ರ ಹರಾಜಿನಲ್ಲಿ ಬಾಂಗ್ಲಾದೇಶದ ವೇಗಿಗಳನ್ನು 9.20 ಕೋಟಿ ರೂ.ಗಳಿಗೆ ಖರೀದಿಸಲಾಗಿತ್ತು. ಆದರೆ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಅನೇಕರು ಬಾಂಗ್ಲಾ ಆಟಗಾರರನ್ನು ಐಪಿಎಲ್‌ ತಂಡದಿಂದ ಕೈಬಿಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಕೆಕೆಆರ್‌ ಫ್ರಾಂಚೈಸಿ ಮುಸ್ತಾಫಿಜುರ್ ಅವರನ್ನು ತಂಡದಿಂದ ಕೈಬಿಟ್ಟಿತ್ತು.

ಈ ನಿರ್ಧಾರವು 2026 ರ ಟಿ 20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಭಾಗವಹಿಸುವಿಕೆಯ ಬಗ್ಗೆ ಒಂದು ಬಿಕ್ಕಟ್ಟನ್ನು ಹುಟ್ಟುಹಾಕಿತ. ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ, ಬಿಸಿಬಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಾಕರಿಸಿತು ಮತ್ತು ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ವಿನಂತಿಸಿತ್ತು. ಆದರೆ ಐಸಿಸಿ, ಬಾಂಗ್ಲಾದೇಶದ ಮನವಿಯನ್ನು ತಿರಸ್ಕರಿಸಿತ್ತು. ತರುವಾಯ, ಈ ಟೂರ್ನಿಯಲ್ಲಿ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ತಂಡವನ್ನು ಸೇರಿಸಿಕೊಳ್ಳಲಾಯಿತು.