ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರು ಫ್ರಾಂಚೈಸಿ ವಿಜಯ್‌ ಮಲ್ಯಗೆ ಮೊದಲ ಆಯ್ಕೆಯಾಗಿರಲಿಲ್ಲ: ಲಲಿತ್‌ ಮೋದಿ!

Lalit Modi on Bengaluru franchise: 2008ರಲ್ಲಿ ಆರಂಭವಾಗಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬೆಂಗಳೂರು ಫ್ರಾಂಚೈಸಿ ವಿಜಯ್‌ ಮಲ್ಯಗೆ ಮೊದಲ ಆಯ್ಕೆಯಾಗಿರಲಿಲ್ಲ. ಅವರು ಮುಂಬೈ ಫ್ರಾಂಚೈಸಿಯನ್ನು ಖರೀದಿಸಲು ಬಯಸಿದ್ದರು. ಆದರೆ, ಅದು ಸಿಗದ ಕಾರಣ ಬೆಂಗಳೂರು ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದರು ಎಂದು ಐಪಿಎಲ್‌ ಸಂಸ್ಥಾಪಕ ಲಲಿತ್‌ ಮೋದಿ ತಿಳಿಸಿದ್ದಾರೆ.

ವಿಜಯ್‌ ಮಲ್ಯಗೆ ಆರ್‌ಸಿಬಿ ಮೊದಲ ಆಯ್ಕೆಯಾಗಿರಲಿಲ್ಲ: ಲಲಿತ್‌ ಮೋದಿ

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ 18 ವರ್ಷಗಳ ಬಳಿಕ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚೊಚ್ಚಲ ಕಪ್‌ ಗೆದ್ದ ಬಳಿಕ ಬೆಂಗಳೂರು ಫ್ರಾಂಚೈಸಿಯ ಮೊದಲ ಮಾಲೀಕ ವಿಜಯ್‌ ಮಲ್ಯಗೆ (Vijay Mallya) ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪಾಟ್‌ಕಾಸ್ಟ್‌ವೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಮದ್ಯದ ದೊರೆ ವಿಜಯ್‌ ಮಲ್ಯ, ಆರ್‌ಸಿಬಿ ತಂಡವನ್ನು ಖರೀದಿಸಿದ್ದು ಹೇಗೆ? ವಿರಾಟ್‌ ಕೊಹ್ಲಿಯನ್ನು ಖರೀದಿಸಿದ ಸೇರಿದಂತೆ ಪ್ರಮುಖ ಸಂಗತಿಗಳ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಐಪಿಎಲ್‌ ಸಂಸ್ಥಾಪಕ ಲಿಲಿತ್‌ ಮೋದಿ (Lalit Modi) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸುವುದು ವಿಜಯ್‌ ಮಲ್ಯರ ಮೊದಲ ಆಯ್ಕೆಯಾಗಿರಲಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸುವುದು ವಿಜಯ್‌ ಮಲ್ಯ ಅವರ ಮೊದಲ ಆಯ್ಕೆ ಯಾಗಿರಲಿಲ್ಲ. ಅವರು ಮುಂಬೈ ಫ್ರಾಂಚೈಸಿಯನ್ನು ಖರೀದಿಸಲು ಬಯಸಿದ್ದರು ಹಾಗೂ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅಂಬಾನಿ ಬಳಗ ಮುಂಬೈ ಫ್ರಾಂಚೃಸಿಯನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಅವರು ತಾವು ಹುಟ್ಟಿ ಬೆಳೆದ ಬೆಂಗಳೂರು ಹೆಸರಿನ ಫ್ರಾಂಚೈಸಿಯನ್ನು ಖರೀದಿಸಿದ್ದರು. ಐಪಿಎಲ್‌ ಟೂರ್ನಿಯಲ್ಲಿ ತಂಡವನ್ನು ಖರೀದಿಸಲು ಮೊದಲು ಆಸಕ್ತಿ ತೋರಿಸಿದ್ದು ವಿಜಯ್‌ ಮಲ್ಯ ಎಂದು ಲಲಿತ್‌ ಮೋದಿ ಹೇಳಿಕೊಂಡಿದ್ದಾರೆ.

IPL 2025: ಈ ಒಂದೇ ಒಂದು ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ ಎಂದ ಮಿಚೆಲ್‌ ಸ್ಟಾರ್ಕ್‌!

"ನನ್ನ ಒಳ್ಳೆಯ ಸ್ನೇಹಿತ ವಿಜಯ್‌ ಮಲ್ಯ ಬಗ್ಗೆ ಸಾಕಷ್ಟು ವಿವಾದಗಳು ಇವೆ. ಐಪಿಎಲ್‌ ಮಂಡಳಿಗೆ ಪ್ರವೇಶ ಮಾಡಿದ ಮೊದಲ ವ್ಯಕ್ತಿ ಹಾಗೂ ಯಾವುದೇ ವ್ಯವಹಾರ ಮಾದರಿಯನ್ನು ನೋಡದೆ ಬೇರೆಯವರಿಗಿಂತ ಮೊದಲು ಅನಮೋದನೆಯನ್ನು ನೀಡಿದವರು ವಿಜಯ್‌ ಮಲ್ಯ. ಅವರು ಮೊದಲ ಆಯ್ಕೆ ಮುಂಬೈ ಹಾಗೂ ಮೆಗಾ ಆಕ್ಷನ್‌ನಲ್ಲಿ ಇದನ್ನು ಅವರು 200,000 ಲಕ್ಷ ಯುಎಸ್‌ ಡಾಲರ್‌ನಿಂದ ಕಳೆದುಕೊಂಡಿದ್ದರು. ನಂತರ ಅವರು ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದ್ದರು. ಏಕೆಂದರೆ ಅವರು ಹುಟ್ಟಿದ ಸ್ಥಳ ಇದಾಗಿದೆ,"ಎಂದು ಲಲಿತ್‌ ಮೋದಿ ತಿಳಿಸಿದ್ದಾರೆ.

IPL 2025: ʻಫೈನಲ್‌ನಲ್ಲಿ ಅಪರಾಧವೆಸಗಿದ ಶ್ರೇಯಸ್‌ ಅಯ್ಯರ್‌ʼ-ಯೋಗರಾಜ್‌ ಸಿಂಗ್‌ ಆರೋಪ!

ಬೇರೆ ಯಾರಾದರೂ ಖರೀದಿಸಿದ್ದರೆ ಆರ್‌ಸಿಬಿ ಆಗುತ್ತಿರಲಿಲ್ಲ

"ಮುಂಬೈ ಬಳಿಕ ವಿಜಯ್‌ ಮಲ್ಯದ ಅವರ ಎರಡನೇ ಆಯ್ಕೆ ಬೆಂಗಳೂರು ಆಗಿತ್ತು. ಇದು ಅವರಿಗೆ ಅತ್ಯುತ್ತಮ ಆಯ್ಕೆಯಾಗಿತ್ತು. ಬೇರೆ ಯಾರಾದರೂ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿದ್ದರೆ, ಖಂಡಿತವಾಗಿಯೂ ಆರ್‌ಸಿಬಿ ಆಗುತ್ತಿರಲಿಲ್ಲ ಮತ್ತು ಅದು ಸಂಪೂರ್ಣವಾಗಿ ವಿಭಿನ್ನವಾಗಿರುತ್ತಿತ್ತು. ಆದರೆ, ಅಂದು ವಿಜಯ್‌ ಮಲ್ಯ ಅವರು ಬೆಂಗಳೂರು ತಂಡವನ್ನು ಖರೀದಿಸಿ ಆರ್‌ಸಿಬಿ ಎಂದು ಹೆಸರು ಕೊಟ್ಟಿದ್ದರು. ಇದೀಗ ಅದೇ ತಂಡ ಅಗ್ರ ಸ್ಥಾನದಲ್ಲಿದೆ," ಎಂದು ಕ್ರಿಕ್‌ಬಜ್‌ಗೆ ಲಲಿತ್‌ ಮೋದಿ ಹೇಳಿದ್ದಾರೆ.

ವಿರಾಟ್‌ ಕೊಹ್ಲಿಯನ್ನು ಖರೀದಿಸಿದ್ದ ಬಗ್ಗೆ ಮೋದಿ ಮಾತು

"ವಿರಾಟ್‌ ಕೊಹ್ಲಿಯನ್ನು ಖರೀದಿಸಲು ಡೆಲ್ಲಿಗೆ ಮೊದಲು ಅವಕಾಶವಿತ್ತು, ಆದರೆ ಅವರು ಖರೀದಿಸಲು ಆಸಕ್ತಿ ತೋರಿರಲಿಲ್ಲ. ವಿಜಯ್‌ ಮಲ್ಯ ಕೂಡ ಕೊಹ್ಲಿಯನ್ನು ಮೊದಲ ಸುತ್ತಿನಲ್ಲಿ ಕೈ ಬಿಡಬಹುದಿತ್ತು, ಆದರೆ ಒಳ್ಳೆಯ ದೂರ ದೃಷ್ಠಿಯಿಂದ ಅವರನ್ನು ಖರೀದಿಸಿದ್ದರು. ಆ ದಿನಗಳಲ್ಲಿ ವಿರಾಟ್‌ ಕೊಹ್ಲಿ ಯುವ ಕ್ರಿಕೆಟಿಗರಾಗಿದ್ದರು ಹಾಗೂ ಅವರ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಅನ್‌ಕ್ಯಾಪ್ಡ್‌ ಆಟಗಾರರಿಗೆ ಬಿಡ್‌ ಆರಂಭವಾದಾಗ ವಿರಾಟ್‌ ಕೊಹ್ಲಿ ಹೆಸರು ಬಂತು. ಈ ವೇಳೆ ಡೆಲ್ಲಿ ಅವರನ್ನು ಖರೀದಿಸಿರಲಿಲ್ಲ. ಅನ್‌ಕ್ಯಾಪ್ಡ್‌ ಆಟಗಾರರಿಗೆ 10000 ಯುಎಸ್‌ ಡಾಲರ್‌ ಮೊತ್ತವನ್ನು ನಿಗದಿಪಡಿಸಲಾಗಿತ್ತು. ನಂತರ ವಿಜಯ್‌ ಮಲ್ಯ ಕೂಡ ಕೊಹ್ಲಿ ಕಡೆಗಣಿಸಬಹುದಿತ್ತು. ಆದರೆ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೊಹ್ಲಿಯನ್ನು ಖರೀದಿಸಿದ್ದರು. ಮೂಲ ಬೆಲೆಗೆ ಕೊಹ್ಲಿ ಆರ್‌ಸಿಬಿ ಸೇರಿದ್ದರು. 18 ವರ್ಷಗಳ ಬಳಿಕ ವಿರಾಟ್‌ ಕೊಹ್ಲಿಯ ಆರ್‌ಸಿಬಿ ತಂಡ ಕಪ್‌ ಗೆದ್ದಿದೆ,"ಎಂದು ಲಲಿತ್‌ ಮೋದಿ ತಿಳಿಸಿದ್ದಾರೆ.