IPL 2025: ಈ ಒಂದೇ ಒಂದು ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ ಎಂದ ಮಿಚೆಲ್ ಸ್ಟಾರ್ಕ್!
ಇತ್ತೀಚೆಗೆ ಮುಕ್ತಾಯಗೊಂಡಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯಗಳನ್ನು ಆಡಲು ಭಾರತಕ್ಕೆ ಮರಳದೇ ಇರಲು ಕಾರಣವೇನೆಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಬಹಿರಂಗಪಡಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷದ ಕಾರಣ ಒಂದು ವಾರದವರೆಗೂ ಪಂದ್ಯಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಆಸ್ಟ್ರೇಲಿಯಾಗೆ ತೆರಳಿದ್ದ ಮಿಚೆಲ್ ಸ್ಟಾರ್ಕ್ ಮತ್ತೆ ಭಾರತಕ್ಕೆ ಮರಳಲಿಲ್ಲ.

ಐಪಿಎಲ್‌ನ ಕೊನೆಯ ಪಂದ್ಯಗಳನ್ನು ಭಾರತಕ್ಕೆ ಮರಳದೇ ಇರಲು ಕಾರಣ ತಿಳಿಸಿದ ಮಿಚೆಲ್ ಸ್ಟಾರ್ಕ್.

ನವದೆಹಲಿ: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಕೊನೆಯ ಹಂತದ ಲೀಗ್ ಪಂದ್ಯಗಳನ್ನು ಆಡಲು ಭಾರತಕ್ಕೆ ಮರಳದೇ ಇರಲು ಕಾರಣವೇನೆಂದು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಬಹಿರಂಗಪಡಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದ ಕಾರಣ ನಡೆಯುತ್ತಿದ್ದ 2025ರ ಐಪಿಎಲ್ ಟೂರ್ನಿಯನ್ನು ಒಂದು ವಾರದ ಮಟ್ಟಿಗೆ ನಿಲ್ಲಿಸಲಾಗಿತ್ತು. ಈ ಕಾರಣದಿಂದ ವಿದೇಶಿ ಆಟಗಾರರು ತಮ್ಮ-ತಮ್ಮ ದೇಶಗಳಿಗೆ ತೆರಳಿದ್ದರು. ನಂತರ ಮೇ 17 ರಂದು ಟೂರ್ನಿಯನ್ನು ಪುನರಾರಂಭಿಸಲಾಗಿತ್ತು. ಈ ವೇಳೆ ಹಲವು ವಿದೇಶಿ ಆಟಗಾರರು ಭಾರತಕ್ಕೆ ಮರಳಿದ್ದರೆ, ಇನ್ನು ಕೆಲವರು ಬಂದಿರಲಿಲ್ಲ. ಅದರಂತೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರು ಕೂಡ ಭಾರತಕ್ಕೆ ಮರಳಿರಲಿಲ್ಲ. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ನಷ್ಟ ಉಂಟಾಗಿತ್ತು. ಇದರ ಪರಿಣಾಮವಾಗಿ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ 10 ಪಂದ್ಯಗಳಿಂದ 26.14ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಡೆಲ್ಲಿ ತಂಡವನ್ನು ಟೂರ್ನಿಯ ಬಹುತೇಕ ಅವಧಿಯಲ್ಲಿ ಅಗ್ರ ನಾಲ್ಕರಲ್ಲಿ ಉಳಿಯಲು ನೆರವು ನೀಡಿದ್ದರು. ಆದರೆ, ಮೇ 8 ರಂದು ಟೂರ್ನಿಯ ಪಂದ್ಯಗಳನ್ನು ನಿಲ್ಲಿಸಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅದೃಷ್ಟ ಕೈ ಕೊಟ್ಟಿತ್ತು. ಒಂದು ಕಡೆ ಮಿಚೆಲ್ ಸ್ಟಾರ್ಕ್ ಕೂಡ ಭಾರತಕ್ಕೆ ಮರಳಲಿಲ್ಲ. ಅವರು ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ನಿಮಿತ್ತ ಸ್ಟಾರ್ಕ್ ತಯಾರಿಯನ್ನು ಶುರು ಮಾಡಿದ್ದರು. ಈ ಕಾರಣದಿಂದ ಅವರು ಭಾರತಕ್ಕೆ ಮರಳಲಿಲ್ಲ. ಈ ವಿಷಯವನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ.
IPL 2025: ʻಫೈನಲ್‌ನಲ್ಲಿ ಅಪರಾಧವೆಸಗಿದ ಶ್ರೇಯಸ್ ಅಯ್ಯರ್ʼ-ಯೋಗರಾಜ್ ಸಿಂಗ್ ಆರೋಪ!
ನನ್ನ ನಿರ್ಧಾರಕ್ಕೆ ಬದ್ದವಾಗಿದ್ದೇನೆ
"ನನ್ನ ನಿರ್ಧಾರದ ಬಗ್ಗೆ ನಾನು ಅರಾಮದಾಯಕವಾಗಿದ್ದೇನೆ ಹಾಗೂ ಅಲ್ಲಿನ ಒಟ್ಟಾರೆ ಸನ್ನಿವೇಶವ ಹಾಗೂ ಹೇಗೆ ಅದನ್ನು ನಿಭಾಯಿಸಲಾಗಿದೆ ಎಂಬುದನ್ನು ನಾನು ಅನುಭವಿಸಿದ್ದೇನೆ. ಈ ಕಾರಣದಿಂದಲೇ ನಾನು ನನ್ನ ಗಮನವನ್ನು ರೆಡ್ ಬಾಲ್ ಕ್ರಿಕೆಟ್‌ಗೆ ಬದಲಾಯಿಸಿದೆ. ಹಿಂತಿರುಗಿ ಬಾರದ ಹುಡುಗರ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಅದು ಹೇಗೆ ಕಾಣುತ್ತದೆ ಎಂಬುದನ್ನು ಕಾಲವೇ ಹೇಳುತ್ತದೆ. ಆದರೆ, ನನಗೆ ಪ್ರಶ್ನೆಗಳು ಮತ್ತು ಕಳವಳಗಳು ಇದ್ದವು ಮತ್ತು ಸ್ಪಷ್ಟವಾಗಿ, ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ. ಅದು ನನ್ನ ನಿರ್ಧಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ," ಎಂದು ಮಿಚೆಲ್ ಸ್ಟಾರ್ಕ್ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.
RCB vs PBKS: ಸತತ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ!
ಬೇರೆಯವರ ರೀತಿ ನಾನಲ್ಲ: ಸ್ಟಾರ್ಕ್
"ಈಗಲೂ ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪೂರ್ಣ ಪ್ರಮಾಣದಲ್ಲಿ ಬದ್ದನಾಗಿದ್ದೇನೆ ಹಾಗೂ ಹರಾಜಿನಲ್ಲಿ ನನ್ನನ್ನು ಖರೀದಿಸಿದ ಬಳಿಕ ಟೂರ್ನಿಯಿಂದ ಹೊರ ನಡೆಯುವ ಅಥವಾ ಬೇರೆ ಇನ್ನೇನೋ ಕಾರಣ ನೀಡಿ ಹೊರಗುಳಿಯುವ ಮನಸ್ಥಿತಿ ನನ್ನದಲ್ಲ. ಇವೆಲ್ಲವೂ ವಿಭಿನ್ನ ಸಂದರ್ಭಗಳಾಗಿವೆ," ಎಂದು ಆಸೀಸ್ ವೇಗಿ ಹೇಳಿದ್ದಾರೆ.