ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಡಕ್‌ಔಟ್‌ ಆದ ಬಳಿಕ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಕರುಣ್‌ ನಾಯರ್‌ ಆಕ್ರೋಶ!

ಕರುಣ್ ನಾಯರ್ 2023 ಮತ್ತು 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗಳಲ್ಲಿ ಆಡಿರಲಿಲ್ಲ. ಆದರೆ, 2025ರ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ89 ರನ್ ಸಿಡಿಸಿ 7 ವರ್ಷಗಳ ಬಳಿಕ ಐಪಿಎಲ್‌ ಅರ್ಧಶತಕ ಸಿಡಿಸಿದ್ದ ಕರುಣ್‌ ನಾಯರ್‌, ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಮೂರು ಎಸೆತಗಳಲ್ಲಿ ರನ್‌ಔಟ್‌ ಆದರು. ಡ್ರೆಸ್ಸಿಂಗ್ ಕೊಠಡಿಗೆ ಮರಳಿದ ಬಳಿಕ ಅವರು ಡಕ್‌ಔಟ್‌ ಆದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ರಾಜಸ್ಥಾನ್‌ ಎದುರು 3 ಎಸೆತಗಳಲ್ಲಿ ಡಕ್‌ಔಟ್‌ ಆದ ಕರುಣ್‌ ನಾಯರ್‌!

ಕರುಣ್‌ ನಾಯರ್‌

Profile Ramesh Kote Apr 16, 2025 10:02 PM

ನವದೆಹಲಿ: ಮುಂಬೈ ಇಂಡಿಯನ್ಸ್ ವಿರುದ್ದದ ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಕಮ್‌ಬ್ಯಾಕ್‌ ಮಾಡಿದ್ದ 89 ರನ್‌ ಸಿಡಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌(Karun Nair), ರಾಜಸ್ಥಾನ್‌ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಡಕ್‌ಔಟ್‌ ಆದರು. ಮೂರು ಎಸೆತಗಳನ್ನು ಆಡಿದರೂ ರನ್‌ಔಟ್‌ ಆಗಿ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಡ್ರೆಸ್ಸಿಂಗ್‌ ಕೊಠಡಿಗೆ ತೆರಳಿದ ಬಳಿಕ ಕನ್ನಡಿಗ ಕರುಣ್‌ ನಾಯರ್‌ ಆಕ್ರೋಶ ವ್ಯಕ್ತಪಡಿಸಿದರು. ಈ ವಿಡಿಯೊ ಹಾಗೂ ಫೋಟೋಗಳು ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಿಗೆ 188 ರನ್‌ಗಳನ್ನು ಕಲೆ ಹಾಕಿತು.

ಕರುಣ್ ನಾಯರ್ 2023 ಮತ್ತು 2024ರ ಐಪಿಎಲ್ ಟೂರ್ನಿಗಳಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿರಲಿಲ್ಲ. ಆದರೆ, 2025ರ ಐಪಿಎಲ್‌ ಟೂರ್ನಿಯ ಆರಂಭದಲ್ಲಿಯೂ ಅವರು ಬೆಂಚ್‌ ಕಾದಿದ್ದರು. ನಂತರ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ನೀಡಿತ್ತು. ಇಂಪ್ಯಾಕ್ಸ್‌ ಪ್ಲೇಯರ್‌ ಆಗಿ ಬಂದಿದ್ದ ಅವರು ಸ್ಪೋಟಕ ಬ್ಯಾಟ್‌ ಮಾಡಿದರು. ಮಾರಕ ವೇಗಿ ಜಸ್‌ಪ್ರೀತ್‌ ಬುಮ್ರಾಗೆ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಆ ಮೂಲಕ ತಮ್ಮ ಕಮ್‌ಬ್ಯಾಕ್‌ ಪಂದ್ಯದಲ್ಲಿ 40 ಎಸೆತಗಳಲ್ಲಿ 89 ರನ್ ಸಿಡಿಸಿ ಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿದ್ದರು.

IPL 2025: ಕರುಣ್‌ ನಾಯರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ವಿರಾಟ್‌ ಕೊಹ್ಲಿಯನ್ನು ಟೀಕಿಸಿದ ಇರ್ಫಾನ್‌ ಪಠಾಣ್‌!

ಏಪ್ರಿಲ್‌ 16 ರಂದು ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿಯೂ ಕರುಣ್ ನಾಯರ್ ಅವಕಾಶ ಪಡೆದಿದ್ದರು. ಆದರೆ, ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದರು. ಅವರನ್ನು ಯಾವುದೇ ಬೌಲರ್ ಔಟ್ ಮಾಡಲು ಸಾಧ್ಯವಾಗಲಿಲ್ಲ. ಅವರು ಮೂರನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದರು. ನಾಲ್ಕನೇ ಓವರ್‌ನಲ್ಲಿ ಅವರು ಅಭಿಷೇಕ್ ಪೊರೆಲ್ ಜೊತೆ ಹೊಂದಾಣಿಕೆ ಕಳೆದುಕೊಂಡು ರನ್ ಔಟ್ ಆದರು. ಪೊರೆಲ್ ಚೆಂಡನ್ನು ಪಾಯಿಂಟ್ ಕಡೆಗೆ ಹೊಡೆದರು. ಮೊದಲು ಅವರು ತೆಗೆದುಕೊಳ್ಳಲು ಕೇಳಿದರು. ಆದರೆ ನಂತರ ನಿರಾಕರಿಸಿದರು. ಅಷ್ಟೊತ್ತಿಗಾಗಲೇ ನಾಯರ್ ಬಹಳ ದೂರ ಓಡಿದ್ದರು. ಅವರು ಹಿಂತಿರುಗುವ ಮುನ್ನವೇ, ವಾನಿಂದು ಹಸರಂಗ ಅವರ ಎಸೆದ ಚೆಂಡನ್ನು ಹಿಡದು ಬೌಲರ್ ಸಂದೀಪ್ ಶರ್ಮಾ ವಿಕೆಟ್‌ಗೆ ತಗುಲಿಸಿದರು. ಆ ಮೂಲಕ ಕರುಣ್ ನಾಯರ್‌ ಕೂದಲೆಳೆಯ ಅಂತರದಲ್ಲಿ ರನ್‌ಔಟ್ ಆದರು.



ಡ್ರೆಸ್ಸಿಂಗ್ ಕೋಣೆಯಲ್ಲಿ ಕರುಣ್‌ ಆಕ್ರೋಶ

ಕರುಣ್ ನಾಯರ್ ರನ್ ಔಟ್ ಆದ ನಂತರ ತುಂಬಾ ನಿರಾಶೆಗೊಂಡರು. ಅವರು ಡ್ರೆಸ್ಸಿಂಗ್ ಕೊಠಡಿಯನ್ನು ತಲುಪಿದಾಗ ಅವರ ಕೋಪವು ಉಕ್ಕಿ ಹರಿಯಿತು. ಅವರು ಕೋಪದಿಂದ ಏನನ್ನೋ ಹೊಡೆಯುತ್ತಿದ್ದರು. ಈ ಸೀಸನ್ ನಾಯರ್‌ಗೆ ತುಂಬಾ ಮುಖ್ಯ. ಅವರು ದೇಶಿ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್‌ಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರಿಂದ ಅವರು ಭಾರತ ತಂಡಕ್ಕೆ ಮರಳಲು ಸಹಾಯವಾಗುತ್ತದೆ. ವಿಜಯ್ ಹಝಾರೆ ಟ್ರೋಫಿಯಲ್ಲಿ ನಾಯರ್ 8 ಇನ್ನಿಂಗ್ಸ್‌ಗಳಲ್ಲಿ 389ರ ಸರಾಸರಿ ಮತ್ತು 124 ಸ್ಟ್ರೈಕ್ ರೇಟ್‌ನೊಂದಿಗೆ 779 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಸೇರಿವೆ.



ಭಾರತ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿ ಕರುಣ್‌

ಐಪಿಎಲ್ ನಂತರ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಎರಡೂ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆ ತಂಡದಲ್ಲಿ ಕರುಣ್ ನಾಯರ್ ಸ್ಥಾನ ಪಡೆಯಬಹುದು. 33ರ ವರ್ಷದ ನಾಯರ್ 2016 ರಲ್ಲಿ ಭಾರತ ಪರ ಪದಾರ್ಪಣೆ ಮಾಡಿದರು. ಅವರು ತಮ್ಮ ಮೊದಲ ಟೆಸ್ಟ್ ಸರಣಿಯಲ್ಲಿಯೇ ತ್ರಿಶತಕ ಸಿಡಿಸಿದ್ದರು. ಆದಾಗ್ಯೂ, ಇದಾದ ನಂತರ ಮುಂದಿನ ಪಂದ್ಯದಲ್ಲಿ ಅವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಲಿಲ್ಲ. ನಾಯರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ ಕೇವಲ 6 ಪಂದ್ಯಗಳನ್ನು ಆಡಿದ್ದಾರೆ. ಅವರಿಗೆ ಎರಡು ಏಕದಿನ ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿತು.