SRH vs CSK: ಸನ್‌ರೈಸರ್ಸ್ ಹೈದರಾಬಾದ್ ಗೆಲುವಿಗೆ ಟರ್ನಿಂಗ್ ಪಾಯಿಂಟ್ ತಿಳಿಸಿದ ಡೇನಿಯಲ್ ವೆಟೋರಿ!
Daniel Vettori on Gamechanger in CSK vs SRH: ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್‌ಗಳ ಗೆಲುವು ಪಡೆಯುವ ಮೂಲಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಪಂದ್ಯದ ಬಳಿಕ ಎಸ್‌ಆರ್‌ಎಚ್ ಕೋಚ್ ಡೇನಿಯಲ್ ವೆಟೋರಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಸಿಎಸ್‌ಕೆ ವಿರುದ್ಧ ಎಸ್‌ಆರ್‌ಎಚ್‌ಗೆ ಸಿಕ್ಕ ಟರ್ನಿಂಗ್ ಪಾಯಿಂಟ್ ತಿಳಿಸಿದ ಡೇನಿಯಲ್ ವೆಟೋರಿ.

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ (CSK vs SRH) ಡೆವಾಲ್ಡ್ ಬ್ರೆವಿಸ್ (Dewald Brevis) ಅವರ ಕ್ಯಾಚ್ ಅನ್ನು ಕಮಿಂದು ಮೆಂಡಿಸ್ ಪಡೆದಿದ್ದು ಸನ್‌ರೈಸರ್ಸ್ ಹೈದರಾಬಾದ್ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಯಿತು ಎಂದು ಎಸ್‌ಆರ್‌ಎಚ್ ಹೆಡ್ ಕೋಚ್ ಡೇನಿಯಲ್ ವೆಟೋರಿ (Daniel Vettori) ಬಹಿರಂಗಪಡಿಸಿದ್ದಾರೆ. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯ ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ 2025ರ ಐಪಿಎಲ್ ಟೂರ್ನಿಯ 43ರ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬಂದಿದ್ದ ಡೆವಾಲ್ಡ್ ಬ್ರೆವಿಸ್ ಸ್ಪೋಟಕ ಬ್ಯಾಟ್ ಮಾಡಿದ್ದರು. ರಚಿನ್ ರವೀಂದ್ರ ಬದಲು ಆಡಿದ್ದ ಡೆವಾಲ್ಡ್, 25 ಎಸೆತಗಳಲ್ಲಿ 42 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಸಿಎಸ್‌ಕೆಗೆ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡುವ ಹಾದಿಯಲ್ಲಿದ್ದರು.
IPL 2025: ಕೆಕೆಆರ್ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡ ಸೇರಿದ ಉಡುಪಿ ಮೂಲದ ತನುಷ್ ಕೋಟ್ಯಾನ್
ಸ್ಪೋಟಕ ಬ್ಯಾಟ್ ಮಾಡುತ್ತಿದ್ದ ಡೆವಾಲ್ಡ್ ಬ್ರೆವಿಸ್, ಹರ್ಷಲ್ ಪಟೇಲ್‌ಗೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ, ಬೌಂಡರಿ ಲೈನ್‌ನಲ್ಲಿ ಓಡಿ ಬಂದ ಕಮಿಂದು ಮೆಂಡಿಸ್ ಜಿಂಕೆಯಂತೆ ಹಾರಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಡೆವಾಲ್ಡ್ ಬ್ರೆವಿಸ್ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಮರಳಿದರು. ಪಂದ್ಯದ ಬಳಿಕ ಮಾತನಾಡಿದ ಡೇನಿಯಲ್ ವೆಟೋರಿ, ಡೆವಾಲ್ಡ್ ಬ್ರೆವಿಸ್ ಕ್ರೀಸ್‌ನಲ್ಲಿ ಇನ್ನೂ ಸ್ವಲ್ಪ ಸಮಯ ಇದ್ದಿದ್ದರೆ, ಸಿಎಸ್‌ಕೆ ಇನ್ನೂ ಹೆಚ್ಚಿನ ಮೊತ್ತದ ಗುರಿಯನ್ನು ನಮಗೆ ನೀಡುತ್ತಿತ್ತು ಎಂದು ಹೇಳಿದ್ದಾರೆ.
"ಅದು ಕೇವಲ ಸಹಜ ಪ್ರವೃತ್ತಿ ಅಂತ ನನಗನ್ನಿಸುತ್ತದೆ. ಮುಂದೆ ಚಲಿಸಿ, ಚೆಂಡನ್ನು ನೋಡಿ ಯಾವ ಸಮಯದಲ್ಲಿ ಡೈವ್ ಹೊಡೆಯಬೇಕೆಂಬುದು ಸಹಜ ಸಾಮರ್ಥ್ಯವಾಗಿದೆ," ಎಂದು ಪೋಸ್ಟ್ ಮ್ಯಾಚ್ ಪತ್ರಿಕಾಗೋಷ್ಠಿಯಲ್ಲಿ ಡೇನಿಯಲ್ ವೆಟೋರಿ ತಿಳಿಸಿದ್ದಾರೆ.
CSK vs SRH: ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋಲಿನ ಬರೆ ಎಳೆದ ಸನ್‌ರೈಸರ್ಸ್ ಹೈದರಾಬಾದ್!
ಕಮಿಂದು ಮೆಂಡಿಸ್ ಕ್ಯಾಚ್ ಟರ್ನಿಂಗ್ ಪಾಯಿಂಟ್
"ತಮ್ಮ ವೃತ್ತಿ ಜೀವನದಲ್ಲಿ ಒಬ್ಬ ಆಟಗಾರನ ಒಂದು ಅಥವಾ ಎರಡು ಅತ್ಯಂತ ಶ್ರೇಷ್ಠ ಕ್ಯಾಚ್‌ಗಳಲ್ಲಿ ಇದು ಕೂಡ ಒಂದಾಗಿದೆ. ಆ ಕ್ಯಾಚ್ ನಮಗೆ ವಿಶೇಷ ಕ್ಷಣವಾಗಿದೆ ಆದರೆ, ಇದು ಪಂದ್ಯದಲ್ಲಿ ನಮಗೆ ಅತ್ಯಂತ ಮುಖ್ಯವಾಗಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ, ಡೆವಾಲ್ಡ್ ಬ್ರೆವಿಸ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ನಮ್ಮ ಮೇಲೆ ಒತ್ತಡವನ್ನು ಹಾಕುತ್ತಿದ್ದರು. ಒಂದು ವೇಳೆ ಅವರು ಇನ್ನೂ ಹೆಚ್ಚಿನ ಸಮಯ ಕ್ರೀಸ್‌ನಲ್ಲಿ ಉಳಿದಿದ್ದರೆ, ಸಿಎಸ್‌ಕೆ ಇನ್ನಷ್ಟು ಹೆಚ್ಚಿನ ಮೊತ್ತವನ್ನು ಕಲೆ ಹಾಕುತ್ತಿತ್ತು ಹಾಗೂ ನಮಗೆ ಚೇಸ್ ಮಾಡಲು ಕಷ್ಟವಾಗುತ್ತಿತ್ತು," ಎಂದು ಡೇನಿಯಲ್ ವೆಟೋರಿ ಹೇಳಿದ್ದಾರೆ.
IPL Points Table 2025: ಚೆನ್ನೈ ಮಣಿಸಿ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಸನ್‌ರೈಸರ್ಸ್
ಸನ್‌ರೈಸರ್ಸ್ ಹೈದರಾಬಾದ್‌ಗೆ 5 ವಿಕೆಟ್ ಜಯ
ಡೆವಾಲ್ಡ್ ಬ್ರೆವಿಸ್ ವಿಕೆಟ್ ಒಪ್ಪಿಸಿದ ಬಳಿಕ ಸಿಎಸ್‌ಕೆ ತಂಡ 43 ಎಸೆತಗಳಲ್ಲಿ 40 ರನ್‌ಗಳನ್ನು ಮಾತ್ರ ಕಲೆ ಹಾಕಲು ಸಾಧ್ಯವಾಗಿತ್ತು. ಆ ಮೂಲಕ 19.5ಓವರ್‌ಗಳಿಗೆ 154 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ನಂತರ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗಿತ್ತು. ಮೇ 2 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಎಸ್‌ಆರ್‌ಎಚ್ ತನ್ನ ಮುಂದಿನ ಪಂದ್ಯವನ್ನು ಆಡಲಿದೆ