ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs LSG: ಲಖನೌ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ನಲ್ಲಿ 2 ಬದಲಾವಣೆ ಸಾಧ್ಯತೆ!

RCB vs LSG Match Preview: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಅಂಕಪಟ್ಟಿಯ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಂಗಳವಾದ ರಿಷಭ್‌ ಪಂತ್‌ ನಾಯಕತ್ವದ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಣ ಈ ಹೈವೋಲ್ಟೇಜ್‌ ಪಂದ್ಯಕ್ಕೆ ಲಖನೌದ ಏಕನಾ ಕ್ರೀಡಾಂಗಣ ಸಜ್ಜಾಗಿದೆ.

ಲಖನೌ ಕದನಕ್ಕೆ ಆರ್‌ಸಿಬಿ ಪ್ಲೇಯಿಂಗ್‌ನಲ್ಲಿ 2 ಬದಲಾವಣೆ ಸಾಧ್ಯತೆ!

ಆರ್‌ಸಿಬಿ vs ಎಲ್‌ಎಸ್‌ಜಿ ಮುಖಾಮುಖಿ.

Profile Ramesh Kote May 26, 2025 2:57 PM

ಲಖನೌ: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಮಂಗಳವಾರ ರಿಷಭ್‌ ಪಂತ್‌ ನಾಯಕತ್ವದ ಲಖನೌ ಸೂಪರ್‌ ಜಯಂಟ್ಸ್‌ (LSG) ವಿರುದ್ದ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನ ಅಲಂಕರಿಸಿ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯವ ಸಲುವಾಗಿ ಆರ್‌ಸಿಬಿಗೆ ಲಖನೌ ಎದುರಿನ ಪಂದ್ಯ ಅತ್ಯಂತ ಮುಖ್ಯವಾಗಿದೆ. ಈ ಪಂದ್ಯವನ್ನು ಗೆದ್ದರೆ ಆರ್‌ಸಿಬಿ ತಂಡ 2016ರ ಬಳಿಕ ಇದೇ ಮೊದಲು ಕ್ವಾಲಿಫೈಯರ್‌ 1 ಆಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ, ಎಲ್‌ಎಸ್‌ಜಿ ತಂಡವನ್ನು ಅವರದೇ ನೆಲದಲ್ಲಿ ಮಣಿಸಲು ಹೊಸ ಯೋಜನೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಆಸಿಬಿ ತಂಡ ತನ್ನ ಕೊನೆಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದಾರಾಬಾದ್‌ ವಿರುದ್ಧ ಸೋಲು ಅನುಭವಿಸಿತ್ತು ಹಾಗೂ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಆದರೆ, ಗುಜರಾತ್‌ ಟೈಟನ್ಸ್‌ (18 ಅಂಕ) ತಂಡ ತನ್ನ ಕೊನೆಯ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದು ಆರ್‌ಸಿಬಿ ಪಾಲಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಅಂದ ಹಾಗೆ ಇಲ್ಲಿಯವರೆಗೂ ಆಡಿದ 13 ಪಂದ್ಯಗಳಲ್ಲಿ ಬೆಂಗಳೂರು ತಂಡ 8ರಲ್ಲಿ ಗೆಲುವು ಪಡೆದಿದ್ದು, ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ಇದರೊಂದಿಗೆ 17 ಅಂಕಗಳನ್ನು ಹೊಂದಿರುವ ಆರ್‌ಸಿಬಿ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ (+0.32) ಕೂಡ 17 ಅಂಕಗಳನ್ನು ಹೊಂದಿದೆ. ರನ್‌ರೇಟ್‌ ಉತ್ತಮವಾಗಿರುವ ಕಾರಣ ಆರ್‌ಸಿಬಿಯನ್ನು (+0.255) ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದೆ.

IPL 2025: ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ವೈಫಲ್ಯಕ್ಕೆ ಕಾರಣ ತಿಳಿಸಿದ ಅಜಿಂಕ್ಯ ರಹಾನೆ!

ಈಗಾಗಲೇ ಟೂರ್ನಿಯ ಪ್ಲೇಆಫ್ಸ್‌ ರೇಸ್‌ನಿಂದ ಹೊರ ನಡೆದಿರುವ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಆರ್‌ಸಿಬಿ ಎದುರು ಯಾವುದೇ ಒತ್ತಡ ಇಲ್ಲ. ಆದರೆ, ತನ್ನ ಕೊನೆಯ ಲೀಗ್‌ ಪಂದ್ಯವನ್ನು ಗೆದ್ದು 2025ರ ಐಪಿಎಲ್‌ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಲು ರಿಷಭ್‌ ಪಂತ್‌ ಪಡೆ ಎದುರು ನೋಡುತ್ತಿದೆ. ಲೀಗ್‌ ಹಂತದಲ್ಲಿ ಎರಡು ಬಾರಿ ಗುಜರಾತ್‌ ಟೈಟನ್ಸ್‌ ತಂಡವನ್ನು ಮಣಿಸಿದ ಮೊದಲ ತಂಡ ಎಂಬ ದಾಖಲೆಯನ್ನು ಲಖನೌ ತಂಡ ಬರೆದಿದೆ. ಇದೀಗ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ ತಂಡದ ಆಸೆಯನ್ನು ಲಖನೌ ಭಗ್ನಗೊಳಿಸಬಹುದು. ಹಾಗಾಗಿ ಆರ್‌ಸಿಬಿ ತಂಡ ಬಹಳ ಎಚ್ಚರಿಕೆಯಿಂದ ಆಡಬೇಕಾಗಿದೆ.

ಆರ್‌ಸಿಬಿಗೆ ಮರಳಿದ ಜಾಶ ಹೇಝಲ್‌ವುಡ್‌

ಆಸ್ಟ್ರೇಲಿಯಾದಿಂದ ಜಾಶ ಹೇಝಲ್‌ವುಡ್‌ ಅವರು ಭಾರತಕ್ಕೆ ಮರಳಿದ್ದು, ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯದ ನಿಮಿತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಆರ್‌ಸಿಬಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಆದರೆ, ಗುಜರಾತ್‌ ಟೈಟನ್ಸ್‌ ವಿರುದ್ದ ಕಳೆದ ಪಂದ್ಯದಲ್ಲಿ ಗೆದ್ದಿದ್ದ ಲಖನೌ ಪರ ಮಿಚೆಲ್‌ ಮಾರ್ಷ್‌ ಶತಕವನ್ನು ಬಾರಿಸಿದ್ದರು ಹಾಗೂ ನಿಕೋಲಸ್‌ ಪೂರನ್‌ ಅರ್ಧಶತಕ ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಾಶ್‌ ಹೇಝಲ್‌ವುಡ್‌ ಆರ್‌ಸಿಬಿಗೆ ಕೀ ಬೌಲರ್‌ ಆಗಬಹುದು.

IPL 2025: ಮೂರನೇ ಅತ್ಯಂತ ವೇಗದ ಐಪಿಎಲ್‌ ಶತಕ ಸಿಡಿಸಿದ ಹೆನ್ರಿಚ್‌ ಕ್ಲಾಸೆನ್‌!

ಪಂದ್ಯದ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು VS ಲಖನೌ ಸೂಪರ್‌ ಜಯಂಟ್ಸ್‌

2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌, 70ನೇ ಪಂದ್ಯ

ದಿನಾಂಕ: ಮೇ 27, 2025

ಸಮಯ: ಸಂಜೆ 07:30 ಕ್ಕೆ

ಸ್ಥಳ: ಏಕನಾ ಕ್ರೀಡಾಂಗಣ, ಲಖನೌ

ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌

ಲೈವ್‌ ಸ್ಟ್ರೀಮಿಂಗ್‌: ‌ಡಿಸ್ನಿ ಹಾಟ್‌ಸ್ಟಾರ್‌, ಜಿಯೊ ಸಿನಿಮಾ

ಪಿಚ್‌ ರಿಪೋರ್ಟ್‌

ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ನಡುವಣ ಪಂದ್ಯ ನಡೆಯುವ ಲಖನೌ ಏಕನಾ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. 2023 ಮತ್ತು 2024ರ ಟೂರ್ನಿಗಳಲ್ಲಿ ಈ ಪಿಚ್‌ ನಿಧಾನಗತಿಯಿಂದ ಕೂಡಿತ್ತು. ಆದರೆ, ಈ ಬಾರಿ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಈ ಸಲ ಹಲವು ತಂಡಗಳು 200ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿರುವುದು ಇದಕ್ಕೆ ಸಾಕ್ಷಿ. ಈ ಪಂದ್ಯದಲ್ಲಿಯೂ ಕೂಡ ರನ್‌ ಹೊಳೆ ಹರಿಯುವ ಸಾಧ್ಯತೆ ಇದೆ.

IPL 2025: ಪಂಜಾಬ್‌ಗೆ ಸೋಲು; ಆರ್‌ಸಿಬಿಗೆ 2ನೇ ಸ್ಥಾನಕ್ಕೇರುವ ಅವಕಾಶ

ಮುಖಾಮುಖಿ ದಾಖಲೆ

ಒಟ್ಟು ಆಡಿರುವ ಪಂದ್ಯಗಳು: 05

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೆಲುವು: 03

ಲಖನೌ ಸೂಪರ್‌ ಜಯಂಟ್ಸ್‌ ಗೆಲುವು: 02

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ XI

ಲಖನೌ ಸೂಪರ್‌ ಜಯಂಟ್ಸ್‌: ಮಿಚೆಲ್‌ ಮಾರ್ಷ್‌, ಏಡೆನ್‌ ಮಾರ್ಕ್ರಮ್‌, ನಿಕೋಲಸ್‌ ಪೂರನ್‌, ರಿಷಭ್‌ ಪಂತ್‌ (ನಾಯಕ, ವಿ. ಕೀ), ಆಯುಷ್‌ ಬದೋನಿ, ಅಬ್ದುಲ್‌ ಸಮದ್‌, ಶಹಬಾಝ್‌ ಅಹ್ಮದ್‌, ವಿಲ್‌ ರೌರ್ಕಿ, ಆಕಾಶ ಸಿಂಗ್‌, ದಿಗ್ವೇಶ್‌ ಸಿಂಗ್‌, ಆವೇಶ್‌ ಖಾನ್‌

ಇಂಪ್ಯಾಕ್ಟ್‌ ಪ್ಲೇಯರ್‌: ಆಕಾಶ್‌ ದೀಪ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ), ಮನೋಜ್ ಭಾಂಡಗೆ, ರೊಮಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಶ್ ಹೇಝಲ್‌ವುಡ್, ಯಶ್ ದಯಾಳ್

ಇಂಪ್ಯಾಕ್ಟ್‌ ಪ್ಲೇಯರ್‌: ಸುಯೇಶ್‌ ಶರ್ಮಾ