IPL 2025: ಪಂಜಾಬ್‌ಗೆ ಸೋಲು; ಆರ್‌ಸಿಬಿಗೆ 2ನೇ ಸ್ಥಾನಕ್ಕೇರುವ ಅವಕಾಶ
ಪ್ಲೇ-ಆಫ್ ಹಂತದಲ್ಲಿ ಅಗ್ರ ಎರಡು ತಂಡಗಳಿಗೆ ಫೈನಲ್‌ಗೆ ಪ್ರವೇಶಿಸಲು ಎರಡು ಅವಕಾಶಗಳು ಸಿಗಲಿವೆ. ಮೊದಲ ಕ್ವಾಲಿಫೈಯರ್ ಮೇ 29ರಂದು ಚಂಡೀಗಡದಲ್ಲಿ ನಡೆಯಲಿದೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಟಿಕೆಟ್ ಪಡೆಯಲಿದೆ. ಮತ್ತೊಂದೆಡೆ ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಸಿಗಲಿದೆ.


ಬೆಂಗಳೂರು: ಪಂಜಾಬ್ ಕಿಂಗ್ಸ್(punjab kings) ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡ ಕಾರಣ ಆರ್‌ಸಿಬಿಗೆ(RCB) ಅಗ್ರ ಎರಡು ಸ್ಥಾನಗಳ ಪೈಕಿ ಸ್ಥಾನ ಪಡೆಯಲು(IPL 2025) ಅವಕಾಶವೊಂದು ಲಭಿಸಿದೆ. ಸೋಲಿನ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಸದ್ಯ ಎರಡನೇ ಸ್ಥಾನ ಕಾಯ್ದುಕೊಂಡಿದೆ. 13 ಪಂದ್ಯಗಳಲ್ಲಿ ಎಂಟು ಗೆಲುವಿನೊಂದಿಗೆ 17 ಅಂಕಗಳನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಷ್ಟೇ ಅಂಕಗಳನ್ನು ಹೊಂದಿದ್ದರೂ ಉತ್ತಮ ರನ್ ರೇಟ್ ಆಧಾರದಲ್ಲಿ ಪಂಜಾಬ್ ಎರಡನೇ ಸ್ಥಾನ ಕಾಯ್ದುಕೊಂಡಿದೆ.
ಪಂಜಾಬ್ +0.327 ಹಾಗೂ ಆರ್‌ಸಿಬಿ +0.255 ರನ್ ರೇಟ್ ಕಾಯ್ದುಕೊಂಡಿದೆ. ಹಾಗಾಗಿ ಅಗ್ರ ಎರಡು ಸ್ಥಾನಗಳಲ್ಲಿ ಗುರುತಿಸುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಕೊನೆಯ ಪಂದ್ಯಗಳು ನಿರ್ಣಾಯಕವೆನಿಸಿವೆ. ಆರ್‌ಸಿಬಿ ಲಕ್ನೋ ವಿರುದ್ಧ ಕಣಕ್ಕಿಳಿದರೆ, ಪಂಜಾಬ್ ಮುಂಬೈ ವಿರುದ್ಧ ಆಡಲಿಳಿದ. ಈ ಪೈಕಿ ಪಂಜಾಬ್ ಸೋತು, ಆರ್‌ಸಿಬಿ ಗೆದ್ದರೆ ಆರ್‌ಸಿಬಿಗೆ ಅಗ್ರ ಎರಡಕ್ಕೇರುವಲ್ಲಿ ಯಶಸ್ವಿಯಾಗುತ್ತದೆ. ಒಟ್ಟಾರೆ ಆರ್‌ಸಿಬಿ ತಂಡ ಪಂಜಾಬ್ ಸೋಲನ್ನು ಬಯಸಬೇಕಿದೆ.
ಅಗ್ರ ಎರಡರಲ್ಲಿ ಸ್ಥಾನ ಸಿಕ್ಕರೆ ಮತ್ತೊಂದು ಅವಕಾಶ
ಪ್ಲೇ-ಆಫ್ ಹಂತದಲ್ಲಿ ಅಗ್ರ ಎರಡು ತಂಡಗಳಿಗೆ ಫೈನಲ್‌ಗೆ ಪ್ರವೇಶಿಸಲು ಎರಡು ಅವಕಾಶಗಳು ಸಿಗಲಿವೆ. ಮೊದಲ ಕ್ವಾಲಿಫೈಯರ್ ಮೇ 29ರಂದು ಚಂಡೀಗಡದಲ್ಲಿ ನಡೆಯಲಿದೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್‌ಗೆ ಟಿಕೆಟ್ ಪಡೆಯಲಿದೆ. ಮತ್ತೊಂದೆಡೆ ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್‌ನಲ್ಲಿ ಆಡುವ ಅವಕಾಶ ಸಿಗಲಿದೆ.
ಇದನ್ನೂ ಓದಿ IPL 2025: ಆರ್‌ಸಿಬಿ ಎದುರು ಅಜೇಯ 94 ರನ್ ಸಿಡಿಸಿ ಫಾರ್ಮ್‌ಗೆ ಮರಳಿದ ಇಶಾನ್ ಕಿಶನ್!
ಅಂಕಪಟ್ಟಿಯಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಗಳು ಜೂನ್ 30ರಂದು ನಡೆಯಲಿರುವ ಎಲಿಮೇಟರ್‌ನಲ್ಲಿ ಆಡಲಿವೆ. ಇಲ್ಲಿ ಗೆದ್ದ ತಂಡವು ಎರಡನೇ ಕ್ವಾಲಿಫೈಯರ್‌ಗೆ ತೇರ್ಗಡೆ ಹೊಂದಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯವು ಜೂನ್ 1ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.