ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್!

Mitchell Starc took 5 Wicket Haul: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ಅವರು 5 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

5 ವಿಕೆಟ್‌ ಕಿತ್ತು ವಿಶೇಷ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್‌.

ವಿಶಾಖಪಟ್ಟಣಂ: ಸನ್‌ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯು 10ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (DC) ತಂಡದ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ 5 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ಪರ ಅತ್ಯಂತ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಮಿಚೆಲ್‌ ಸ್ಟಾರ್ಕ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಎಸ್‌ಆರ್‌ಎಚ್‌ 163 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಗುರಿ ಹಿಂಬಾಲಿಸಿದ ಡೆಲ್ಲಿ ಇನ್ನೂ ನಾಲ್ಕು ಓವರ್‌ಗಳು ಬಾಕಿ ಇರುವಾಗಲೇ 7 ವಿಕೆಟ್‌ ಗೆಲುವನ್ನು ತನ್ನದಾಗಿಸಿಕೊಂಡಿತು.

ಇಲ್ಲಿನ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 250ಕ್ಕೂ ಅಧಿಕ ಮೊತ್ತವನ್ನು ಕಲೆ ಹಾಕಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಇದಕ್ಕೆ ಮಿಚೆಲ್‌ ಸ್ಟಾರ್ಕ್‌ ಅವಕಾಶ ನೀಡಲಿಲ್ಲ. ಇಶಾನ್‌ ಕಿಶನ್‌, ನಿತೀಶ್‌ ರೆಡ್ಡಿ ಹಾಗೂ ಟ್ರಾವಿಸ್‌ ಹೆಡ್‌ ಅವರನ್ನು ಆರಂಭದಲ್ಲಿಯೇ ಔಟ್‌ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೇಲುಗೈ ತಂದುಕೊಟ್ಟಿದ್ದರು. ನಂತರ ವಿಯಾನ್‌ ಮುಲ್ಡರ್‌ ಹಾಗೂ ಹರ್ಷಲ್‌ ಪಟೇಲ್‌ ಅವರನ್ನು ಔಟ್‌ ಮಾಡಿದ್ದರು.

IPL 2025: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 74 ರನ್‌ ಸಿಡಿಸಿದ ಅನಿಕೇತ್‌ ವರ್ಮಾ ಯಾರು?

ಅಂತಿಮವಾಗಿ 3.4 ಓವರ್‌ಗಳಲ್ಲಿ 35 ರನ್‌ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ಚೊಚ್ಚಲ 5 ವಿಕೆಟ್‌ ಸಾಧನೆ ಮಾಡಿದರು. ಭಾರತದ ವಿರುದ್ದ ಸ್ಟಾರ್ಕ್‌ ಏಕದಿನ ಕ್ರಿಕೆಟ್‌ನಲ್ಲಿ ಕೊನೆಯ ಬಾರಿ 5 ವಿಕೆಟ್‌ ಸಾಧನೆ ಮಾಡಿದ್ದು ವಿಶಾಖಪಟ್ದಣಂನಲ್ಲಿ. 2023ರಲ್ಲಿ ಸ್ಟಾರ್ಕ್‌ 5 ವಿಕೆಟ್‌ ಕಿತ್ತಿದ್ದರು. ಇದೀಗ ಐಪಿಎಲ್‌ ಟೂರ್ನಿಯಲ್ಲಿ ಇದೇ ಅಂಗಣದಲ್ಲಿ ಐದು ವಿಕೆಟ್‌ ಸಾಧನೆ ಮಾಡಿದ್ದಾರೆ. ಆ ಮೂಲಕ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.



ವಿಶ್ವದ ಮೊದಲ ಬೌಲರ್‌ ಮಿಚೆಲ್‌ ಸ್ಟಾರ್ಕ್‌

ವಿಶಾಖಪಟ್ಟಣಂನಲ್ಲಿ ಏಕದಿನ ಕ್ರಿಕೆಟ್‌ 5 ವಿಕೆಟ್‌ ಸಾಧನೆ ಹಾಗೂ ಐಪಿಎಲ್‌ ಟೂರ್ನಿಯಲ್ಲಿ 5 ವಿಕೆಟ್‌ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್‌ ಎಂಬ ಅಪರೂಪದ ದಾಖಲೆಯನ್ನು ಮಿಚೆಲ್‌ ಸ್ಟಾರ್ಕ್‌ ಬರೆದಿದ್ದಾರೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್‌ ಪರ 5 ವಿಕೆಟ್‌ ಸಾಧನೆ ಮಾಡಿದ ಮೊದಲ ವಿದೇಶಿ ಬೌಲರ್‌ ಎನಿಸಿಕೊಂಡಿದ್ದಾರೆ. ಅಲ್ಲದೆ ಅಮಿತ್‌ ಮಿಶ್ರಾ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ಪರ 5 ವಿಕೆಟ್‌ ಸಾಧನೆ ಮಾಡಿದ ಎರಡನೇ ಬೌಲರ್‌ ಎಂಬ ಸಾಧನೆಗೆ ಮಿಚೆಲ್‌ ಸ್ಟಾರ್ಕ್‌ ಭಾಜನರಾಗಿದ್ದಾರೆ.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮತ್ತೆ ಎಂಎಸ್‌ ಧೋನಿ ನಾಯಕನಾಗಬೇಕೆಂದ ಸಂಜಯ್‌ ಮಾಂಜ್ರೇಕರ್‌!

ಎಸ್‌ಆರ್‌ಎಚ್‌ ವಿರುದ್ಧ ಡೆಲ್ಲಿಗೆ ಅಧಿಕಾರಯುತ ಗೆಲುವು

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಅನಿಕೇತ್‌ ವರ್ಮಾ ಅರ್ಧಶತಕದ ಬಲದಿಂದ 163 ರನ್‌ಗಳನ್ನು ಗಳಿಸಿದ ಬಳಿಕ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 164 ರನ್‌ಗಳ ಗುರಿಯನ್ನು ನೀಡಿತು. ಅನಿಕೇತ್‌ ವರ್ಮಾ 74 ರನ್‌ಗಳನ್ನು ಕಲೆ ಹಾಕಿದ್ದರು. ಮಿಚೆಲ್‌ ಸ್ಟಾರ್ಕ್‌ 5 ವಿಕೆಟ್‌ ಜತೆಗೆ ಕುಲ್ದೀಪ್‌ ಯಾದವ್‌ ಮೂರು ವಿಕೆಟ್‌ ಪೆಡೆದಿದ್ದರು.

ಬಳಿಕ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಫಾಫ್‌ ಡು ಪ್ಲೆಸಿಸ್‌ ಅರ್ಧಶತಕದ ಬಲದಿಂದ 16 ಓವರ್‌ಗಳಿಗೆ 166 ರನ್‌ ಗಳಿಸಿ 7 ವಿಕೆಟ್‌ಗಳಿಂದ ಗೆದ್ದು ಸಂಭ್ರಮಿಸಿತು. ಆ ಮೂಲಕ ಟೂರ್ನಿಯಲ್ಲಿ ಅಕ್ಷರ್‌ ಪಟೇಲ್‌ ನಾಯಕತ್ವದ ಡಿಸಿ ಎರಡನೇ ಗೆಲುವನ್ನು ತನ್ನದಾಗಿಸಿಕೊಂಡಿತು. ಮಿಚೆಲ್‌ ಸ್ಟಾರ್ಕ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.