IPL 2025: ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೆ ಎಂಎಸ್ ಧೋನಿ ನಾಯಕನಾಗಬೇಕೆಂದ ಸಂಜಯ್ ಮಾಂಜ್ರೇಕರ್!
Sanjay Manjrekar backs MS Dhoni for CKS Captaincy: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 50 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂಎಸ್ ಧೋನಿ ಮತ್ತೊಮ್ಮೆ ನಾಯಕನಾಗಬೇಕೆಂದು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ನಿರೂಪಕ ಸಂಜಯ್ ಮಾಂಜ್ರೇಕರ್ ಸಲಹೆ ನೀಡಿದ್ದಾರೆ.

ಸಿಎಸ್‌ಕೆಗೆ ಎಂಎಸ್ ಧೋನಿ ಮತ್ತೊಮ್ಮೆ ನಾಯಕನಾಗಬೇಕೆಂದ ಸಂಜಯ್ ಮಾಂಜ್ರೇಕರ್.

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ವಿರುದ್ದ 50 ರನ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಮತ್ತೊಮ್ಮೆ ಎಂಎಸ್ ಧೋನಿ (MS Dhoni) ನಾಯಕನಾಗಬೇಕೆಂದು ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಾಜ್ರೇಕರ್ ಸಲಹೆ ನೀಡಿದ್ದಾರೆ. ಕಳೆದ ವರ್ಷ ಋತುರಾಜ್ ಗಾಯಕ್ವಾಡ್ ಅವರನ್ನು ಸಿಎಸ್‌ಕೆ ತಂಡಕ್ಕೆ ನಾಯಕನಾಗಿ ನೇಮಿಸಲಾಗಿತ್ತು. ಇದೀಗ 2025ರ ಐಪಿಎಲ್ ಟೂರ್ನಿಯಲ್ಲಿಯೂ ಅವರನ್ನು ನಾಯಕನನ್ನಾಗಿ ಮುಂದುವರಿಸಲಾಗಿದೆ. ಇದರ ನಡುವೆ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅವರು, ಎರಡು ಪಂದ್ಯಗಳ ಸಿಎಸ್‌ಕೆಯ ನಾಯಕತ್ವವನ್ನು ಬದಲಿಸಬೇಕೆಂದು ಆಗ್ರಹಿಸಿದ್ದಾರೆ.
ಮಾರ್ಚ್ 28 ರಂದು ಆರ್‌ಸಿಬಿ ಎದುರಿನ 197 ರನ್‌ಗಳ ಚೇಸಿಂಗ್ ವೇಳೆ ಎಂಎಸ್ ಧೋನಿಯನ್ನು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದ ಬಳಿಕ ಸಂಜಯ್ ಮಾಂಜ್ರೇಕರ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿಎಸ್‌ಕೆ 80 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ವೇಳೆ ಎಂಎಸ್ ಧೋನಿ ಬದಲಿಗೆ ಆರ್ ಅಶ್ವಿನ್ ಕ್ರೀಸ್‌ಗೆ ಬಂದಿದ್ದರು. ನಂತರ ಕ್ರೀಸ್‌ಗೆ ಬಂದಿದ್ದ ಎಂಎಸ್ ಧೋನಿ 16 ಎಸೆತಗಳಲ್ಲಿ ಅಜೇಯ 30 ರನ್‌ಗಳನ್ನು ಬಾರಿಸಿದ್ದರು. ಆದರೂ ಸಿಎಸ್‌ಕೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
IPL 2025: ಆರ್‌ಸಿಬಿ ತಂಡ ಹಳೆಯ ಆವೃತ್ತಿಗಳಿಗಿಂತ 10 ಪಟ್ಟು ಉತ್ತಮವಾಗಿದೆ ಎಂದ ಎಬಿ ಡಿ ವಿಲಿಯರ್ಸ್!
ಈ ವೇಳೆ ಜಿಯೊ ಸ್ಟಾರ್ ಸಂಭಾಷಣೆಯಲ್ಲಿ ಸಂಜಯ್ ಮಾಂಜ್ರೇಕರ್‌ಗೆ, ಎಂಎಸ್ ಧೋನಿ ಮೇಲಿನ ಕ್ರಮಾಂಕದಲ್ಲಿ ಆಡಬೇಕಿತ್ತಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾಂಜ್ರೇಕರ್,"ನಾನು ಇಲ್ಲಿ ದೊಡ್ಡ ಚಿತ್ರಣವನ್ನು ನೋಡಲು ಬಯಸುತ್ತೇನೆ," ಎಂದು ಹೇಳಿದ್ದಾರೆ.
"ನೀವು ಈ ವರ್ಷ ಅಥವಾ ಕಳೆದ ವರ್ಷವನ್ನು ನೋಡಬಹುದು, ಎಂಎಸ್ ಧೋನಿ ಒಬ್ಬ ಆಟಗಾರನಿಗಿಂತ ಒಂದು ದೊಡ್ಡ ಬ್ರ್ಯಾಂಡ್ ಆಗಿ ಆಡುತ್ತಿದ್ದಾರೆ. ಸಿಎಸ್‌ಕೆ ತಂಡದ ಪ್ಲೇಯಿಂಗ್ XI ಅನ್ನು ಆಯ್ಕೆ ಮಾಡಿದಾಗ, ಅವರು ಹೆಚ್ಚುವರಿ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡುವುದಿಲ್ಲ ಏಕೆಂದರೆ, ಎಂಎಸ್ ಧೋನಿ ಇದ್ದಾರೆ. ಎಂಎಸ್ ಧೋನಿ ಅವರಿಗೆ ಬೋನಸ್ ಇದ್ದಂತೆ. ಅವರ ಪಾತ್ರ ವಿಭಿನ್ನವಾಗಿದೆ," ಎಂದು ಸಂಜಯ್ ಮಾಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
RCB vs CSK: 17 ವರ್ಷಗಳ ಬಳಿಕ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಗೆದ್ದು ಇತಿಹಾಸ ಬರೆದ ಆರ್‌ಸಿಬಿ!
"ಈ ಒಂದು ಕಾರಣದಿಂದಲೇ ಎಂಎಸ್ ಧೋನಿ ತಡವಾಗಿ ಬ್ಯಾಟ್ ಮಾಡುತ್ತಿದ್ದಾರೆ, ಅವರೇ ತಂಡಕ್ಕೆ ನಾಯಕರಾಗಬೇಕು. ವಿಕೆಟ್ ಕೀಪರ್ ಆಗಿ ಅವರು ಶ್ರೇಷ್ಠ ಪ್ರದರ್ಶನವನ್ನು ತೋರುತ್ತಿದ್ದಾರೆ. ಆದರೆರ, ನಾಯಕನಾಗಿಯೂ ಅವರು ಇನ್ನೂ ಹೆಚ್ಚುವರಿ ಕೊಡಿಗೆಯನ್ನು ನೀಡಬಲ್ಲರು. ಸದ್ಯ ಅವರನ್ನು ತಂಡದಲ್ಲಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿಲ್ಲ," ಎಂದು ಅವರು ಹೇಳಿದ್ದಾರೆ.
ಕಳೆದ ಆವೃತ್ತಿಯಲ್ಲಿಯೂ ಎಂಎಸ್ ಧೋನಿ ಬ್ಯಾಟಿಂಗ್‌ನಲ್ಲಿ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಅಲ್ಲದೆ ವಿಕೆಟ್ ಕೀಪಿಂಗ್‌ನಲ್ಲಿಯೂ ತಂಡಕ್ಕೆ ಉಪಯುಕ್ತ ಕಾಣಿಕೆಯನ್ನು ನೀಡುತ್ತಿದ್ದಾರೆ. ಕಳೆದ ವರ್ಷ ಅವರು ಬ್ಯಾಟಿಂಗ್‌ನಲ್ಲಿ 200ರ ಸ್ಟ್ರೈಕ್ ರೇಟ್ ಅನ್ನು ಉಳಿಸಿಕೊಂಡಿದ್ದರು. ಈ ಸೀಸನ್‌ನಲ್ಲಿಯೂ ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಒಂದು ವೇಳೆ ಅವರು ಸ್ವಲ್ಪ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ತಂಡಕ್ಕೆ ಇನ್ನಷ್ಟು ಉಪಯುಕ್ತವಾಗಬಹುದು.