IPL 2025: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 74 ರನ್ ಸಿಡಿಸಿದ ಅನಿಕೇತ್ ವರ್ಮಾ ಯಾರು?
Who is Aniket Verma? ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಅನಿಕೇತ್ ವರ್ಮ ಅವರು 41 ಎಸೆತಗಳಲ್ಲಿ 74 ರನ್‌ಗಳನ್ನು ಸಿಡಿಸಿ ಗಮನ ಸಳೆದಿದ್ದಾರೆ. ಆ ಮೂಲಕ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಗುತ್ತಿದ್ದ ಹೈದರಾಬಾದ್ ತಂಡವನ್ನು ಮೇಲೆತ್ತಿದರು.

ಅನಿಕೇತ್ ವರ್ಮಾ

ವಿಶಾಖಪಟ್ಟಣಂ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್(IPL 2025) ಟೂರ್ನಿಯಲ್ಲಿ ದಿನದಿಂದ ದಿನಕ್ಕೆ ಪ್ರತಿಭಾವಂತ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ಅದರಂತೆ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದಲ್ಲಿಯೂ ಒಬ್ಬ ಯುವ ಬ್ಯಾಟ್ಸ್‌ಮನ್ ಎಲ್ಲರ ಗಮನವನ್ನು ಸೆಳೆದದ್ದಾರ. ಮಾರ್ಚ್ 30 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅನಿಕೇತ್ ವರ್ಮಾ (Aniket Verma) 74 ರನ್‌ಗಳನ್ನು ಸಿಡಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆ ಮೂಲಕ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಗುವ ಹಾದಿಯಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕಾಪಾಡಿದ್ದಾರೆ. ಇವರ ಸ್ಪೋಟಕ ಅರ್ಧಶತಕದ ಬಲದಿಂದ ಎಸ್‌ಆರ್‌ಎಚ್ ತಂಡ, 160ಕ್ಕೂ ಅಧಿಕ ರನ್ ಗಳಿಸಲು ಸಾಧ್ಯವಾಯಿತು.
ಇಲ್ಲಿನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವಂತಾದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿಗೆ ನಲುಗಿದರೂ ಅನಿಕೇತ್ ವರ್ಮಾ ಅರ್ಧಶತಕದ ಬಲದಿಂದ 18.4 ಓವರ್‌ಗಳಿಗೆ 163 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 164 ರನ್‌ಗಳ ಗುರಿಯನ್ನು ನೀಡಿತ್ತು. ಮೊದಲು ಬ್ಯಾಟ್ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮಿಚೆಲ್ ಸ್ಟಾರ್ಕ್ ಆರಂಭಿಕ ಆಘಾತ ನೀಡಿದ್ದರು.
IPL 2025: ಫಾರ್ಮ್ ಕಂಡುಕೊಳ್ಳಲು ರೋಹಿತ್ ಶರ್ಮಾಗೆ ಸಂಜಯ್ ಮಾಂಜ್ರೇಕರ್ ಉಪಯುಕ್ತ ಸಲಹೆ!
ಇದರ ಪರಿಣಾಮವಾಗಿ ಅಭಿಷೇಕ್ ಶರ್ಮಾ ರನ್‌ಔಟ್, ಟ್ರಾವಿಸ್ ಹೆಡ್ (22), ಇಶಾನ್ ಕಿಶನ್(2) ಹಾಗೂ ನಿತೀಶ್ ರೆಡ್ಡಿ ಡಕ್‌ಔಟ್ ಆದರು. ಕೇವಲ 37 ರನ್‌ಗಳಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಅನಿಕೇತ್ ವರ್ಮಾ41 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 74 ರನ್‌ಗಳನ್ನು ಸಿಡಿಸಿದ್ದರು. ಅಲ್ಲದೆ ಹೆನ್ರಿಚ್ ಕ್ಲಾಸೆನ್ (32) ಅವರ ಜೊತೆ 77 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ 100ರ ಒಳಗೆ ಆಲ್‌ಔಟ್ ಆಗುತ್ತಿದ್ದ ಎಸ್‌ಆರ್‌ಎಚ್ ತಂಡವನ್ನು ಕಾಪಾಡಿದರು.
🆒 Under Pressure 🧊
— IndianPremierLeague (@IPL) March 30, 2025
Aniket Verma is dealing in just sixes and is closing on his half-century 💪
Updates ▶️ https://t.co/L4vEDKzthJ#TATAIPL | #DCvSRH | @SunRisers pic.twitter.com/8KYjx2O14x
ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿಯೂ ಅನಿಕೇತ್ ವರ್ಮಾ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದರು. ಅವರು ಈ ಪಂದ್ಯದಲ್ಲಿ 13 ಎಸೆತಗಳಲ್ಲಿ 36 ರನ್‌ಗಳನ್ನು ಸಿಡಿಸಿದ್ದರು. ಇದೀಗ ಅದೇ ಲಯವನ್ನು ಮುಂದುವರಿಸಿದ ಅನಿಕೇತ್ ಚೊಚ್ಚಲ ಅರ್ಧಶತಕವನ್ನು ಸಿಡಿಸಿದ್ದಾರೆ.
IPL 2025 Points Table: ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ
ಅನಿಕೇತ್ ವರ್ಮಾ ಯಾರು?
ಉತ್ತರ ಪ್ರದೇಶದ ಜಾನ್ಸಿ ಮೂಲದ ಅನಿಕೇತ್ ವರ್ಮಾ ಅವರು 2025ರ ಐಪಿಎಲ್ ಟೂರ್ನಿಯಲ್ಲಿ ಸದ್ಯ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಐಪಿಎಲ್ ಟೂರ್ನಿಗೆ ಪ್ರವೇಶ ಮಾಡುವುದಕ್ಕೂ ಮುನ್ನ ಮಧ್ಯ ಪ್ರದೇಶ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರು. ಈ ಟೂರ್ನಿಯಲ್ಲಿ ಆಡಿದ್ದ ಐದು ಇನಿಂಗ್ಸ್‌ಗಳಿಂದ 205ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 244 ರನ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಅವರು 32 ಎಸೆತಗಳಲ್ಲಿ ಶತಕವನ್ನು ಕೂಡ ಸಿಡಿಸಿದ್ದರು. ಈ ಇನಿಂಗ್ಸ್‌ನಲ್ಲಿ ಅವರು 25 ಸಿಕ್ಸರ್‌ಗಳನ್ನು ಬಾರಿಸಿದ್ದರು. ಮೆಗಾ ಆಕ್ಷನ್‌ನಲ್ಲಿ ಅವರನ್ನು ಖರೀದಿಸಲು ಸಾಕಷ್ಟು ಫ್ರಾಂಚೈಸಿಗಳು ಆಸಕ್ತಿಯನ್ನು ತೋರಿದ್ದವು. ಆದರೆ, ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತ್ತು.
ಎಸ್‌ಆರ್‌ಎಚ್ ಅಭ್ಯಾಸ ಪಂದ್ಯಗಳಲ್ಲಿ ಅನಿಕೇತ್ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಅವರು ಎರಡು ಅಭ್ಯಾಸ ಪಂದ್ಯಗಳಲ್ಲಿ ಕ್ರಮವಾಗಿ 72 ರನ್ ಹಾಗೂ 64 ರನ್‌ಗಳನ್ನು ಗಳಿಸಿದ್ದರು. ಕಮಿಂದು ಮೆಂಡಿಸ್ ಹಾಗೂ ಹರ್ಷಲ್ ಪಟೇಲ್ ಅವರಿಗೆ ದೊಡ್ಡ ದೊಡ್ಡ ಹೊಡೆತಗಳನ್ನು ಬಾರಿಸಿದ್ದರು. ಮಧ್ಯ ಪ್ರದೇಶ ಪರ ದೇಶಿ ಕ್ರಿಕೆಟ್ ಆಡುವ ಅನಿಕೇತ್, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಕೌಶಲವನ್ನು ಹೊಂದಿದ್ದಾರೆ.