ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಪಂಜಾಬ್‌ ಪಂದ್ಯಕ್ಕೆ ಆರ್‌ಸಿಬಿ ಲಿಯಾಮ್‌ ಲಿವಿಂಗ್‌ಸ್ಟೋನ್‌ರನ್ನು ಕೈ ಬಿಡಲು ಕಾರಣವೇನು?

Why Liam Livingstone out for PBKS Match? ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪ್ಲೇಯಿಂಗ್‌ XIನಿಂದ ಲಿಯಾಮ್‌ ಲಿವಿಂಗ್‌ಸ್ಟೋನ್‌ ಅವರನ್ನು ಕೈ ಬಿಡಲಾಗಿದೆ. ಇದಕ್ಕೆ ಕಾರಣವನ್ನು ಇಲ್ಲಿ ವಿವರಿಸಲಾಗಿದೆ.

ಪಂಜಾಬ್‌ ಪಂದ್ಯಕ್ಕೆ ಲಿಯಾಮ್‌ ಲಿವಿಂಗ್‌ಸ್ಟೋನ್‌ ಕೈ ಬಿಡಲು ಕಾರಣವೇನು?

ಲಿಯಾಮ್‌ ಲಿವಿಂಗ್‌ಸ್ಟೋನ್‌-ರೊಮ್ಯಾರಿಯೊ ಶೆಫರ್ಡ್

Profile Ramesh Kote Apr 20, 2025 5:06 PM

ಚಂಡೀಗಢ: ಇಲ್ಲಿನ ಮಾಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾನಷಲ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ (IPL 2025) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ಪ್ಲೇಯೀಂಗ್‌ XIನಿಂದ ಆಲ್‌ರೌಂಡರ್‌ ಲಿಯಾಮ್‌ ಲಿವಿಂಗ್‌ಸ್ಟೋನ್‌ ( Liam Livingstone) ಅವರನ್ನು ಕೈ ಬಿಡಲಾಗಿದ್ದು, ಇವರ ಸ್ಥಾನಕ್ಕೆ ವೆಸ್ಟ್‌ ಇಂಡೀಸ್‌ ದೈತ್ಯ ಆಲ್‌ರೌಂಡರ್‌ ರೊಮ್ಯಾರಿಯೊ ಶೆಫರ್ಡ್‌ಗೆ (Romario Shepherd) ಅವಕಾಶವನ್ನು ನೀಡಲಾಗಿದೆ. ಈ ಸೀಸನ್‌ನ ಮೊದಲ ಅವಧಿಯಲ್ಲಿ ಆರ್‌ಸಿಬಿ ಪರ ಲಿಯಾಮ್‌ ಲಿವಿಂಗ್‌ಸ್ಟೋನ್‌ ಎಲ್ಲಾ 7 ಪಂದ್ಯಗಳನ್ನು ಆಡಿದ್ದಾರೆ.

ಇಂಗ್ಲೆಂಡ್‌ ತಂಡದ ಪರ ಕೀ ಆಲ್‌ರೌಂಡರ್‌ ಆಗಿರುವ ಲಿಯಾಮ್‌ ಲಿವಿಂಗ್‌ಸ್ಟೋನ್‌ ಸ್ಪೋಟಕ ಬ್ಯಾಟಿಂಗ್‌ ಹಾಗೂ ಉಪಯುಕ್ತ ಸ್ಪಿನ್ನರ್‌ ಆಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶವನ್ನು ಅವರು ತೋರಿದ್ದಾರೆ. ಇದರ ಆಧಾರದ ಮೇಲೆ ಇಂಗ್ಲೆಂಡ್‌ ಆಲ್‌ರೌಂಡರ್‌ ಅನ್ನು 2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ. ಗಳಿಗೆ ಬೆಂಗಳೂರು ಫ್ರಾಂಚೈಸಿ ಖರೀದಿಸಿತ್ತು. ಆ ಮೂಲಕ ತನ್ನ ತಂಡದ ಮಧ್ಯಮ ಕ್ರಮಾಂಕವನ್ನು ಬಲಿಷ್ಠಪಡಿಸಿಕೊಂಡಿತ್ತು.

RCB vs PBKS: ಪಂಜಾಬ್‌ ಎದುರು ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ!

ಅದರಂತೆ ಟೂರ್ನಿಯ ಮೊದಲ ಅವಧಿಯಲ್ಲಿ ಎಲ್ಲಾ ಏಳು ಪಂದ್ಯಗಳಲ್ಲಿ ಲಿಯಾಮ್‌ ಲಿವಿಂಗ್‌ಸ್ಟೋನ್‌ಗೆ ಅವಕಾಶವನ್ನು ನೀಡಲಾಗಿತ್ತು. ಆದರೆ, ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯದಲ್ಲಿ 40 ಎಸೆತಗಳಲ್ಲಿ 54 ರನ್‌ಗಳನ್ನು ಕಲೆ ಹಾಕಿದ್ದರು. ಇದು ಬಿಟ್ಟರೆ ಇನ್ನುಳಿದ ಪಂದ್ಯಗಳಲ್ಲಿ ಅವರು ವಿಫಲರಾಗಿದ್ದಾರೆ. ಅವರು ಈ ಸೀಸನ್‌ನಲ್ಲಿ ಆಡಿದ 7 ಪಂದ್ಯಗಳಿಂದ 17.40ರ ಸರಾಸರಿಯಲ್ಲಿ ಕೇವಲ 87 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಟೀಮ್‌ ಮ್ಯಾನೇಜ್‌ಮೆಂಟ್‌ ಇಟ್ಟಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಇನ್ನು ಬೌಲಿಂಗ್‌ ಪ್ರದರ್ಶನವನ್ನು ನೋಡುವುದಾದರೆ ಅವರು ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ.



ಈ ಹಿನ್ನೆಲೆಯಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಸತತ ಎರಡನೇ ಪಂದ್ಯಕ್ಕೆ ಆರ್‌ಸಿಬಿ ಟೀಮ್‌ ಮ್ಯಾನೇಜ್‌ಮೆಂಟ್‌ ಬದಲಾವಣೆಯನ್ನು ಬಯಸಿದೆ. ಮೊದಲ ಲೆಗ್‌ ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದ ವಸ್ಟ್‌ ಇಂಡೀಸ್‌ ದೈತ್ಯ ಆಲ್‌ರೌಂಡರ್‌ಗೆ ಅವಕಾಶವನ್ನು ನೀಡಲಾಗಿದೆ. ಅದರಂತೆ ಆರ್‌ಸಿಬಿ ಪರ ಈ ಸೀಸನ್‌ನಲ್ಲಿ ಆಡಿದ ಮೊದಲನೇ ಪಂದ್ಯದಲ್ಲಿ ಶೆಫರ್ಡ್‌ ಬೌಲಿಂಗ್‌ನಲ್ಲಿ ಪರಿಣಾಮ ಬೀರಿದ್ದಾರೆ. ತಾವು ಬೌಲ್‌ ಮಾಡಿದ ಮೊದಲನೇ ಓವರ್‌ನಲ್ಲಿಯೇ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಔಟ್‌ ಮಾಡಿದ್ದಾರೆ.

ಪಂಜಾಬ್‌ ಕಿಂಗ್ಸ್‌ ಎದುರು ಸೋತಿದ್ದ ಆರ್‌ಸಿಬಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್‌ 18 ರಂದು ನಡೆದಿದ್ದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಪಂದ್ಯವನ್ನು 14 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಆರ್‌ಸಿಬಿ ಟಿಮ್‌ ಡೇವಿಡ್‌ ಅರ್ಧಶತಕದ ಬಲದಿಂದ 95 ರನ್‌ಗಳನ್ನು ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಪಂಜಾಬ್‌ ಕಿಂಗ್ಸ್‌ ಗೆದ್ದು ಬೀಗಿತ್ತು.

IPL 2025: ಗೆಲುವಿನ ಸಂತಸದಲ್ಲಿದ್ದ ನಾಯಕ ಗಿಲ್‌ಗೆ 12 ಲಕ್ಷ ದಂಡದ ಬರೆ

ಪಂಜಾಬ್‌ ಕಿಂಗ್ಸ್‌ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XI

ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌ (ನಾಯಕ), ಜಿತೇಶ್‌ ಶರ್ಮಾ (ವಿ.ಕೀ), ಟಿಮ್‌ ಡೇವಿಡ್‌, ಕೃಣಾಲ್‌ ಪಾಂಡ್ಯ, ರೊಮ್ಯಾರಿಯೊ ಶೆಫರ್ಡ್‌, ಭುವನೇಶ್ವರ್‌ ಕುಮಾರ್‌, ಸುಯಶ್‌ ಶರ್ಮಾ, ಜಾಶ್‌ ಹೇಝಲ್‌ವುಡ್‌, ಯಶ್‌ ದಯಾಳ್‌