ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ತಾನು ಎದುರಿಸಿದ ಅತ್ಯಂತ ಕಠಿಣ ವೇಗಿಯನ್ನು ಹೆಸರಿಸಿದ ವಿರಾಟ್‌ ಕೊಹ್ಲಿ!

Virat Kohli Praised Jasprit Bumrah: ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಎದುರಿಸಿದ ಅತ್ಯಂತ ಕಠಿಣ ವೇಗಿಯನ್ನು ಹೆಸರಿಸಿದ್ದಾರೆ. ಮಿಚೆಲ್‌ ಸ್ಟಾರ್ಕ್‌, ಜೇಮ್ಸ್‌ ಆಂಡರ್ಸನ್‌ ಅವರಂಥ ವೇಗಿಗಳನ್ನು ಕಡೆಗಣಿಸಿದ ವಿರಾಟ್‌ ಕೊಹ್ಲಿ, ಭಾರತ ತಂಡದ ತಮ್ಮ ಸಹ ಆಟಗಾರ ಜಸ್‌ಪ್ರೀತ್‌ ಬುಮ್ರಾ ಅವರನ್ನು ಆಯ್ಕೆ ಮಾಡಿದ್ದಾರೆ.

ಜಸ್‌ಪ್ರೀತ್‌ ಬುಮ್ರಾಗೆ ವಿರಾಟ್‌ ಕೊಹ್ಲಿ ಶ್ಲಾಘನೆ.

ನವದೆಹಲಿ: ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್‌ ಕೊಹ್ಲಿ(Virat Kohli) ಒಬ್ಬರು. ತಮ್ಮ ಒಂದೂವರೆ ದಶಕದ ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ವಿರಾಟ್‌ ಕೊಹ್ಲಿ ವಿಶ್ವದ ಸಾಕಷ್ಟು ಬೌಲರ್‌ಗಳನ್ನು ಎದುರಿಸಿದ್ದಾರೆ. ವಿಶ್ವದ ಘಟಾನುಘಟಿ ಬೌಲರ್‌ಗಳನ್ನೇ ಅವರು ಲೀಲಾ ಜಾಲವಾಗಿ ಬ್ಯಾಟ್‌ ಬೀಸಿ ರನ್‌ ಹೊಳೆಯನ್ನೇ ಹರಿಸಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಗೆ ಸಜ್ಜಾಗುತ್ತಿರುವ ವಿರಾಟ್‌ ಕೊಹ್ಲಿ ಇತ್ತೀಚೆಗೆ ಮಾತನಾಡಿದ್ದು, ತಮ್ಮ ವೃತ್ತಿ ಜೀವನದಲ್ಲಿ ತಾವು ಎದುರಿಸಿದ ಅತ್ಯಂತ ಕಠಿಣ ವೇಗಿಯನ್ನು ಆರಿಸಿದ್ದಾರೆ. ವಿದೇಶ ಸ್ಟಾರ್‌ ವೇಗಿಗಳನ್ನು ಕೈ ಬಿಟ್ಟ ವಿರಾಟ್‌ ಕೊಹ್ಲಿ, ಟೀಮ್‌ ಇಂಡಿಯಾದ ತಮ್ಮ ಸಹ ಆಟಗಾರನನ್ನು ಆರಿಸಿದ್ದಾರೆ.

ಮುಂಬೈ ಇಂಡಿಯನ್ಸ್‌ನ ಜಸ್‌ಪ್ರೀತ್‌ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ ಎಂದು ವಿರಾಟ್‌ ಕೊಹ್ಲಿ ಗುಣಗಾಣ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡದಲ್ಲಿ ಆಡುವ ವಿರಾಟ್‌ ಕೊಹ್ಲಿ ಹಾಗೂ ಜಸ್‌ಪ್ರೀತ್‌ ಬುಮ್ರಾ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪರಸ್ಪರ ವಿರುದ್ದವಾಗಿ ಆಡುತ್ತಾರೆ. ಅಲ್ಲದೆ ಐಪಿಎಲ್‌ ಟೂರ್ನಿಯಲ್ಲಿ ಇವರಿಬ್ಬರ ನಡುವೆ ಅತ್ಯುತ್ತಮ ಹೆಡ್‌ ಟು ಹೆಡ್‌ ರೆಕಾರ್ಡ್‌ ಹೊಂದಿದ್ದಾರೆ. ವಿರಾಟ್‌ ಕೊಹ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡಿದರೆ, ಜಸ್‌ಪ್ರೀತ್‌ ಬುಮ್ರಾ ಮುಂಬೈ ಇಂಡಿಯನ್ಸ್‌ ಪರ ಆಡುತ್ತಾರೆ.

IPL 2025: ಐಪಿಎಲ್‌ ಮೂಲಕ ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಬಲ್ಲ ಟಾಪ್‌ 5 ಆಟಗಾರರು!

"ಮೂರೂ ಸ್ವರೂಪಗಳಲ್ಲಿ ಜಸ್‌ಪ್ರೀತ್‌ ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್‌ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅವರು ನನ್ನನ್ನು ಹಲವು ಬಾರಿ ಔಟ್‌ ಮಾಡಿದ್ದಾರೆ. ಹಾಗೆಯೇ ಐಪಿಎಲ್‌ ಟೂರ್ನಿಯಲ್ಲಿ ಅವರ ಎದುರು ನಾನು ಸಕ್ಸಸ್‌ ಕೂಡ ಕಂಡಿದ್ದೇನೆ. ಅವರನ್ನು ಯಾವುದೇ ಪಂದ್ಯದಲ್ಲಿ ಎದುರಿಸಿದರೂ ಅವರ ಎದುರು ಮೋಜಿನಿಂದ ಕೂಡಿರುತ್ತದೆ ಎಂಬು ಭಾವಿಸುತ್ತೇನೆ. ಏಕೆಂದರೆ ನಾವು ಅವರನ್ನು ನೆಟ್ಸ್‌ನಲ್ಲಿ ಹೆಚ್ಚಾಗಿ ಎದುರಿಸುವುದಿಲ್ಲ," ಎಂದು ಆರ್‌ಸಿಬಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

"ನೆಟ್ಸ್‌ನಲ್ಲಿ ನಾನು ಮತ್ತು ಅವರು ಪಂದ್ಯದ ರೀತಿಯಲ್ಲಿ ಪರಸ್ಪರ ಪೈಪೋಟಿ ನಡೆಸುತ್ತೇವೆ. ನೆಟ್ಸ್‌ನಲ್ಲಿಯೂ ನಾವು ಐಪಿಎಲ್‌ ಆಡುತ್ತಿದ್ದೇವೆಂಬ ಉದ್ದೇಶವನ್ನು ಹೊಂದಿರುತ್ತೇವೆ. ಅಂದರೆ, ಚೆಂಡು ಬರುತ್ತಿದೆ, ಅವರಿಗೆ ನಾನು ಹೊಡೆದು ರನ್‌ ಗಳಿಸಬೇಕು, ಅವರಿಗೆ ನನ್ನನ್ನು ಔಟ್‌ ಮಾಡಬೇಕು, ಅವರಿಗೆ ನಾನು ಔಟ್‌ ಆಗಬಾರದು ಈ ರೀತಿ ಪಂದ್ಯದ ಸನ್ನಿವೇಶವನ್ನು ನೀವಿಲ್ಲಿ ನೋಡಬಹುದು. ಹಾಗಾಗಿ ಇಂದು ನಾನು ನಿಯಮಿತವಾಗಿ ಅವರ ವಿರುದ್ಧ ನೆಟ್ಸ್‌ನಲ್ಲಿ ಆಡುವಾಗ ಅವರು ನನ್ನ ಮನಸ್ಸಿನಲ್ಲಿಟ್ಟುಕೊಳ್ಳುವ ಗುರುತು; ಅದು ಅತ್ಯಂತ ಆನಂದದಾಯಕ ಮತ್ತು ಕಠಿಣ ಸವಾಲು ಎಂದು ನಾನು ಹೇಳುತ್ತೇನೆ," ಎಂದು ಕೊಹ್ಲಿ ಹೇಳಿದ್ದಾರೆ.

IPL 2025: ಎಂಎಸ್‌ ಧೋನಿ ಅಲ್ಲ! ತಮ್ಮ ನೆಚ್ಚಿನ ನಾಯಕನನ್ನು ಹೆಸರಿಸಿದ ಶಶಾಂಕ್‌ ಸಿಂಗ್‌!

2013ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಸ್‌ಪ್ರೀತ್‌ ಬುಮ್ರಾ ಮೊಟ್ಟ ಮೊದಲ ಬಾರಿ ವಿರಾಟ್‌ ಕೊಹ್ಲಿಯನ್ನು ಔಟ್‌ ಮಾಡಿದ್ದರು. ಐಪಿಎಲ್‌ ಇತಿಹಾಸದಲ್ಲಿ ಜಸ್‌ಪ್ರೀತ್‌ ಬುಮ್ರಾ, ವಿರಾಟ್‌ ಕೊಹ್ಲಿಯನ್ನು ಐದು ಬಾರಿ ಔಟ್‌ ಮಾಡಿದ್ದಾರೆ. ಆಶಿಶ್‌ ನೆಹ್ರಾ (6), ಸಂದೀಪ್‌ ಶರ್ಮಾ (7) ಅವರು ವಿರಾಟ್‌ ಕೊಹ್ಲಿಯನ್ನು ಹೆಚ್ಚು ಬಾರಿ ಐಪಿಎಲ್‌ ಟೂರ್ನಿಯಲ್ಲಿ ವಿಕೆಟ್‌ ಕಿತ್ತಿದ್ದಾರೆ. ಇನ್ನು ಐಪಿಎಲ್‌ ಇತಿಹಾಸದಲ್ಲಿ ಕೊಹ್ಲಿ ಹಾಗೂ ಬುಮ್ರಾ ಒಟ್ಟು 16 ಬಾರಿ ಮುಖಾಮುಖಿಯಾಗಿದ್ದರು. ಅವರು ವಿರುದ್ದ ಆರ್‌ಸಿಬಿ ಮಾಜಿ ನಾಯಕ 140 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 147ರ ಸ್ಟ್ರೈಕ್‌ ರೇಟ್‌ನಲ್ಲಿ 15 ಬೌಂಡರಿಗಳು ಹಾಗೂ 5 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಜಾಶ್‌ ಹೇಝಲ್‌ವುಡದ, ಆದಿಲ್‌ ರಶೀದ್‌ ಹಾಗೂ ಟಿಮ್‌ ಡೇವಿಡ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿಯನ್ನು ಅತಿ ಹೆಚ್ಚು ಬಾರಿ ಔಟ್‌ ಮಾಡಿದ್ದಾರೆ. ಈ ಬೌಲರ್‌ಗಳು ವಿರಾಟ್‌ ಕೊಹ್ಲಿಯನ್ನು 11 ಬಾರಿ ಔಟ್‌ ಮಾಡಿದ್ದಾರೆ. ಮೊಯೀನ್‌ ಅಲಿ ಮತ್ತು ಜೇಮ್ಸ್‌ ಆಂಡರ್ಸನ್‌ ಅವರು 10 ಬಾರಿ ಔಟ್‌ ಮಾಡಿದ್ದಾರೆ.