ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಏಪ್ರಿಲ್ 15 ರಂದು ಬುಧವಾರ ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 23ನೇ ಪಂದ್ಯದಲ್ಲಿ (RCB vs LSG) ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಈಗಾಗಲೇ ತವರು ಅಂಗಣದಲ್ಲಿ ಆರಂಭಿಕ ಎರಡೂ ಪ೦ದ್ಯಗಳನ್ನು ಗೆದ್ದಿದ್ದ ಆರ್‌ಸಿಬಿ, ಇದೀಗ ಅದೇ ಲಯವನ್ನು ಎಲ್‌ಎಸ್‌ಜಿ ವಿರುದ್ಧವೂ ಮುಂದುವರಿಸಲು ಎದುರು ನೋಡುತ್ತಿದೆ. ಈ ಪಂದ್ಯಕ್ಕೆ ಆರ್‌ಸಿಬಿ ತಂಡದ ಪ್ಲೇಯಿಂಗ್ XI (RCB Probable Playing XI) ಹೇಗಿರಲಿದೆ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತನ್ನ ಆರಂಭಿಕ ಎರಡು ಪಂದ್ಯಗಳನ್ನು ಆರ್‌ಸಿಬಿ, ಬೆಂಗಳೂರಿನಲ್ಲಿ ಆಡಿತ್ತು ಹಾಗೂ ಗೆದ್ದುಕೊಂಡಿತ್ತು. ಇದಾದ ಬಳಿಕ ಗುವಾಹಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಸೋಲು ಅನುಭವಿಸಿತ್ತು. ನಂತರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎಚ್ಚೆತ್ತುಕೊಂಡ ಆರ್‌ಸಿಬಿ, ಆತಿಥೇಯ ಮುಂಬೈ ಇಂಡಿಯನ್ಸ್‌ಗೆ 18 ರನ್‌ಗಳ ಸೋಲುಣಿಸಿತ್ತು. ಮೂರನೇ ಗೆಲುವಿನ ಮೂಲಕ ರಾಯಲ್ ಚಾಲೆಂಜರ್ಸ್ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ.
ಆರ್‌ಸಿಬಿ vs ಲಖನೌ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು
ವಿರಾಟ್ ಕೊಹ್ಲಿ ಲಖನೌ ಸೂಪರ್ ಜಯಂಟ್ಸ್ ಎದುರು ಆಡ್ತಾರಾ?
ಮುಂಬೈ ಇಂಡಿಯನ್ಸ್ ಎದುರು ನಿಧಾನಗತಿಯ ಅರ್ಧಶತಕ ಗಳಿಸಿದ್ದ ವಿರಾಟ್ ಕೊಹ್ಲಿ, ಎರಡನೇ ಇನಿಂಗ್ಸ್‌ನಲ್ಲಿ ಕ್ಷೇತ್ರ ರಕ್ಷಣೆಯಲ್ಲಿ ಕಾಣಿಸಿಕೊಂಡಿರಲಿಲ್ಲ ಹಾಗೂ ಅವರು ಬಹುಶಃ ಗಾಯಕ್ಕೆ ತುತ್ತಾಗಿರಬಹುದು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಆದರೆ, ಎಲ್‌ಎಸ್‌ಜಿ ವಿರುದ್ದ ಕೊಹ್ಲಿ ಲಭ್ಯರಾಗಲಿದ್ದಾರಾ? ಅಥವಾ ಇಲ್ಲವಾ? ಎಂಬ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ. ಆದರೆ, ಮುಂಬೈ ಪಂದ್ಯದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಕೃಣಾಲ್ ಪಾಂಡ್ಯ, ವಿರಾಟ್ ಕೊಹ್ಲಿ ಚೆನ್ನಾಗಿದ್ದಾರೆಂದು ತಿಳಿಸಿದ್ದರು. ಒಂದು ವೇಳೆ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದರೆ, ದೇವದತ್ ಪಡಿಕ್ಕಲ್ ಇನಿಂಗ್ಸ್ ಆರಂಭಿಸಿ, ಮೂರನೇ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್ ಆಡಬಹುದು.
ಇದನ್ನು ಹೊರತುಪಡಿಸಿ ಮುಂಬೈ ಇಂಡಿಯನ್ಸ್ ಎದುರು ಆಡಿದ್ದ ಇನ್ನುಳಿದ ಎಲ್ಲಾ ಆಟಗಾರರು ಲಖನೌ ಪಂದ್ಯದಲ್ಲಿಯೂ ಕಣಕ್ಕೆ ಇಳಿಯಬಹುದು. ಇದು ಒಂದೇ ಒಂದು ಬದಲಾವಣೆ ಸಂಭವಿಸಬಹುದು. ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಫಿಟ್ ಇದ್ದರೆ, ಅವರು ಈ ಪಂದ್ಯದಲ್ಲಿಯೂ ಮುಂದುವರಿಯಲಿದ್ದಾರೆ.
RCB vs MI ಅಂಪೈರ್ ಸೂಚನೆಯನ್ನು ಪಾಲಿಸದ ಟಿಮ್ ಡೇವಿಡ್‌ಗೆ ಬಿತ್ತು ಭಾರಿ ದಂಡ!
ಎಲ್‌ಎಸ್‌ಜಿ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ XI
1.ಫಿಲ್ ಸಾಲ್ಟ್ (ಓಪನಿಂಗ್ ಬ್ಯಾಟ್ಸ್‌ಮನ್)
2.ವಿರಾಟ್ ಕೊಹ್ಲಿ (ಓಪನಿಂಗ್ ಬ್ಯಾಟ್ಸ್‌ಮನ್)
3.ದೇವದತ್ ಪಡಿಕ್ಕಲ್ (ಬ್ಯಾಟ್ಸ್‌ಮನ್)
4.ರಜತ್ ಪಾಟಿದಾರ್ (ಬ್ಯಾಟ್ಸ್‌ಮನ್)
5.ಟಿಮ್ ಡೇವಿಡ್ (ಆಲ್‌ರೌಂಡರ್)
6.ಕೃಣಾಲ್ ಪಾಂಡ್ಯ (ಆಲ್‌ರೌಂಡರ್)
7.ಜಿತೇಶ್ ಶರ್ಮಾ (ವಿಕೆಟ್ ಕೀಪರ್)
8.ರೊಮ್ಯಾರಿಯೊ ಶೆಫರ್ಡ್ (ಆಲ್‌ರೌಂಡರ್)
9.ಭುವನೇಶ್ವರ್ ಕುಮಾರ್ (ವೇಗದ ಬೌಲರ್)
10.ರಸಿಖ್ ದಾರ್ ಸಲಾಮ್ (ವೇಗದ ಬೌಲರ್)
11. ಜೇಕಬ್ ಡಫಿ (ವೇಗದ ಬೌಲರ್)
ಇಂಪ್ಯಾಕ್ಟ್ ಪ್ಲೇಯರ್: ಸುಯಾಶ್ ಶರ್ಮಾ
IPL 2026: ಮುಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುತ್ತಾರಾ? ಅಪ್‌ಡೇಟ್ ಕೊಟ್ಟ ಕೃಣಾಲ್ ಪಾಂಡ್ಯ!
ಪಂದ್ಯದ ವಿವರ
ಪಂದ್ಯ: 23
2026ರ ಇಂಡಿಯನ್ ಪ್ರೀಮಿಯರ್ ಲೀಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಖನೌ ಸೂಪರ್ ಜಯಂಟ್ಸ್
ದಿನಾಂಕ: ಏಪ್ರಿಲ್ 15, 2026
ಸಮಯ: ಸಂಜೆ 07: 00ಕ್ಕೆ
ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್