ಆರ್‌ಸಿಬಿ vs ಲಖನೌ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೀಗಿದೆ
RCB vs LSG: ಏಪ್ರಿಲ್ 15 ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಿನ ಐಪಿಎಲ್ 2026 ಪಂದ್ಯಕ್ಕೆ ಮಳೆಯ ಸಾಧ್ಯತೆ ಇಲ್ಲ ಎಂದು ನಿರೀಕ್ಷಿಸಲಾಗಿದೆ. ಪಂದ್ಯದ ವೇಳೆ ತಾಪಮಾನ 28 ರಿಂದ 30 ಡಿಗ್ರಿವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ರಾತ್ರಿಯ ವೇಳೆ ಕೊಂಚ ಇಬ್ಬನಿಯ ಸಮಸ್ಯೆಯೂ ಇರಬಹುದು.
m chinnaswamy pitch report -
ಬೆಂಗಳೂರು, ಎ.14: ತವರಿನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಆರ್‌ಸಿಬಿ(M. Chinnaswamy Stadium) ಇದೀಗ ಮೂರನೇ ಪಂದ್ಯವನ್ನಾಡಲು ಸಜ್ಜಾಗಿದೆ. ಗುರುವಾರ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದ ಪಿಚ್, ಸಂಭಾವ್ಯ ತಂಡ ಮತ್ತು ಹವಾಮಾನ ವರದಿ ಇಲ್ಲಿದೆ.
ಪಿಚ್ ರಿಪೋರ್ಟ್
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ, ಇದರಿಂದಾಗಿ ಬ್ಯಾಟರ್‌ಗಳು ಮೊದಲ ಎಸೆತದಿಂದಲೇ ಮುಕ್ತವಾಗಿ ಆಡಲು ಅವಕಾಶ ಸಿಗುತ್ತದೆ. ಜತೆಗೆ ಇಲ್ಲಿನ ಬೌಂಡರಿಗಳು ಸಣ್ಣದಾಗಿರುವ ಕಾರಣ ಸ್ಕೋರಿಂಗ್ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬೌಲರ್‌ಗಳಿಗೆ ಈ ಪಿಚ್ ಸವಾಲಿನಿಂದ ಕೂಡಿರಲಿದೆ. ಇಲ್ಲಿ ಮೊತ್ತವನ್ನು ರಕ್ಷಿಸುವುದು ಕಷ್ಟಕರವಾಗಿದೆ ಮತ್ತು ರನ್‌ಗಳ ಹರಿವನ್ನು ನಿಯಂತ್ರಿಸಲು ಅವರು ಶಿಸ್ತುಬದ್ಧ ಲೈನ್ ಮತ್ತು ಲೆಂತ್ ಜೊತೆಗೆ ಸ್ಮಾರ್ಟ್ ಬೌಲಿಂಗ್ ನಡೆಸಬೇಕಿದೆ.
ಹವಾಮಾನ
ಏಪ್ರಿಲ್ 15 ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಿನ ಐಪಿಎಲ್ 2026 ಪಂದ್ಯಕ್ಕೆ ಮಳೆಯ ಸಾಧ್ಯತೆ ಇಲ್ಲ ಎಂದು ನಿರೀಕ್ಷಿಸಲಾಗಿದೆ. ಪಂದ್ಯದ ವೇಳೆ ತಾಪಮಾನ 28 ರಿಂದ 30 ಡಿಗ್ರಿವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ರಾತ್ರಿಯ ವೇಳೆ ಕೊಂಚ ಇಬ್ಬನಿಯ ಸಮಸ್ಯೆಯೂ ಇರಬಹುದು.
ಮುಖಾಮುಖಿ
ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ ಆರು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆರ್‌ಸಿಬಿ 4 ಪಂದ್ಯಗಳನ್ನು ಗೆದ್ದಿದೆ. ಲಕ್ನೋ ಎರಡು ಪಂದ್ಯ ಮಾತ್ರ ಜಯಿಸಿದೆ.
ಸಂಭಾವ್ಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಮಂಗೇಶ್ ಯಾದವ್. ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಸುಯಶ್ ಶರ್ಮಾ.
ಇಂಪ್ಯಾಕ್ಟ್ ಪ್ಲೇಯರ್: ದೇವದತ್ ಪಡಿಕ್ಕಲ್
ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಸಂಚಲನ ಮೂಡಿಸಿದ 21 ವರ್ಷದ ಸಕಿಬ್ ಹುಸೇನ್ ಯಾರು?
ಲಖನೌ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಬ್ ಪಂತ್ (ನಾಯಕ), ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಜಾರ್ಜ್ ಲಿಂಡೆ, ಮೊಹಮ್ಮದ್ ಶಮಿ, ಅವೇಶ್ ಖಾನ್, ದಿಗ್ವೇಶ್ ಸಿಂಗ್ ರಾಠಿ, ಪ್ರಿನ್ಸ್ ಯಾದವ್.
ಇಂಪ್ಯಾಕ್ಟ್ ಆಟಗಾರ: ಆಯುಷ್ ಬಡೋನಿ