ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಸತತ 6 ಪಂದ್ಯಗಳನ್ನು ಸೋತಿರುವ ಎಲ್‌ಎಸ್‌ಜಿ ಎದುರು ಆರ್‌ಸಿಬಿಯ ರಣತಂತ್ರವೇನು?

RCB vs LSG: ಮೇ 7 ರಂದು ಗುರುವಾರ ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 50ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡವಾದರೂ ಈ ಪಂದ್ಯ ಎಲ್‌ಎಸ್‌ಜಿ ತವರು ಅಂಗಣದಲ್ಲಿ ನಡೆಯುತ್ತಿರುವ ಕಾರಣ ರಜತ್‌ ಹುಡಗರು ಬಹಳ ಎಚ್ಚರಿಕೆಯಿಂದ ಆಡಬೇಕಾಗುತ್ತದೆ.

RCB vs LSG: ಲಖನೌವನ್ನು ಮಣಿಸಲು ಆರ್‌ಸಿಬಿಯ ರಣತಂತ್ರವೇನು?

ಆರ್‌ಸಿಬಿ vs ಎಲ್‌ಎಸ್‌ಜಿ ಕಾದಾಟ. -

Profile
Ramesh Kote May 6, 2026 8:43 PM

ಲಖನೌ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್‌ ಜಯಂಟ್ಸ್‌ (RCB vs LSG) ತಂಡಗಳು ಮೇ 7 ರಂದು ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆಯುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 50ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಗುಜರಾತ್‌ ಟೈಟನ್ಸ್‌ ಎದುರು ಕಳೆದ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ ಇದೀಗ, ಎಲ್‌ಎಸ್‌ಜಿ ಎದುರು ಅವರ ತವರು ಅಂಗಣದಲ್ಲಿ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಇನ್ನು ಸತತ ಆರು ಪಂದ್ಯಗಳಲ್ಲಿ ಸೋತು ಒತ್ತಡಕ್ಕೆ ಸಿಲುಕಿರುವ ರಿಷಭ್‌ ಪಂತ್‌ (Rishabh Pant) ನಾಯಕತ್ವದ ಲಖನೌ ತಂಡ, ಪ್ಲೇಆಫ್ಸ್‌ ರೇಸ್‌ನಲ್ಲಿ ಉಳಿಯಲು ಬೆಂಗಳೂರು ವಿರುದ್ಧ ಗೆಲುವು ಸಾಧಿಸಲು ಪ್ರಯತ್ನ ನಡೆಸಲಿದೆ.

ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಇಲ್ಲಿಯವರೆಗೂ ಆಡಿದ 9 ಪಂದ್ಯಗಳಿಂದ 6ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಮೂರು ಪಂದ್ಯಗಳಲ್ಲಿ ಅನುಭವಿಸಿದೆ. ಒಟ್ಟು 12 ಅಂಕಗಳನ್ನು ಕಲೆ ಹಾಕಿರುವ ಆರ್‌ಸಿಬಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಅಂದಹಾಗೆ ಇನ್ನುಳಿದ ಐದು ಪಂದ್ಯಗಳಲ್ಲಿ ಕನಿಷ್ಠ 4ರಲ್ಲಿ ಗೆದ್ದು ಅಂಕಪಟ್ಟಿಯ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಮೂಲಕ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯುವುದು ಆರ್‌ಸಿಬಿಯ ಪ್ಲ್ಯಾನ್‌. ಹಾಗಾಗಿ ಕೊನೆಯ ಎಲ್ಲಾ ಪಂದ್ಯಗಳನ್ನು ಗೆಲ್ಲಲು ಬೆಂಗಳೂರು ತಂಡ ಪ್ರಯತ್ನಿಸಲಿದೆ.

RCB vs LSG ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಹೆಡ್‌ ಟು ಹೆಡ್‌ ದಾಖಲೆ!

ಏಪ್ರಿಲ್‌ 15 ರಂದು ಆರ್‌ಸಿಬಿ ತಂಡದ ತವರು ಅಂಗಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಎರಡೂ ತಂಡಗಳು ಮೊದಲ ಬಾರಿ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿಗೆ ಗೆದ್ದು ಬೀಗಿತ್ತು. ಇದೀಗ ಲಖನೌ ತಂಡದ ತವರು ಅಂಗಣದಲ್ಲಿ ಆರ್‌ಸಿಬಿಗೆ ಕಠಿಣ ಸವಾಲು ಎದುರಾಗಲಿದೆ. ಏಕೆಂದರೆ ಏಕನಾ ಕ್ರೀಡಾಂಗಣದ ಪಿಚ್‌ ನಿಧಾನಗತಿಯಿಂದ ಕೂಡಿದ್ದು, ಬೌಲರ್‌ಗಳು ವಿಶೇಷವಾಗಿ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಬಹುದು. ಹಾಗಾಗಿ ಆರ್‌ಸಿಬಿ ತಂಡ, ಎಲ್‌ಎಸ್‌ಜಿ ಕಳೆದ 6 ರಲ್ಲಿ ಸೋಲು ಅನುಭವಿಸಿ ವಿಶ್ವಾಸ ಕಳೆದುಕೊಂಡಿದ್ದರೂ ಉತ್ತಮ ಯೋಜನೆ ಹಾಗೂ ರಣತಂತ್ರವನ್ನು ಮಾಡಿಕೊಂಡು ಕಣಕ್ಕೆ ಇಳಿಯಬೇಕಾಗುತ್ತದೆ.

ಮಿಚೆಲ್‌ ಮಾರ್ಷ್‌, ನಿಕೋಲಸ್‌ ಪೂರನ್‌ ಟಾರ್ಗೆಟ್‌

ಲಖನೌ ಪರ ಈ ಟೂರ್ನಿಯಲ್ಲಿ ಮಿಚೆಲ್‌ ಮಾರ್ಷ್‌ ಯೋಗ್ಯ ಪ್ರದರ್ಶನವನ್ನು ತೋರುತ್ತಾ ಬಂದಿದ್ದಾರೆ. ಹಾಗಾಗಿ ಅವರು ಎಲ್‌ಎಸ್‌ಜಿ ತಂಡಕ್ಕೆ ಕೀ ಬ್ಯಾಟರ್‌ ಆಗಬಹುದು. ಅವರನ್ನು ಪವರ್‌ಪ್ಲೇನಲ್ಲಿಯೇ ಕಟ್ಟಿ ಹಾಕಲು ಆರ್‌ಸಿಬಿ ಬೌಲರ್‌ಗಳು ಪ್ರಯತ್ನಿಸಬೇಕು. ಇನ್ನು ಕಳೆದ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಿದ ಜಾಶ್‌ ಇಂಗ್ಲಿಸ್‌ ಇನ್ನು ಎಲ್‌ಎಸ್‌ಜಿಗೆ ವಾತಾವರಣಕ್ಕೆ ಹೊಂದಿಕೊಂಡಿಲ್ಲ. ಆದರೆ, ಮುಂಬೈ ಇಂಡಿಯನ್ಸ್‌ ಎದುರು ಕಳೆದ ಪಂದ್ಯದಲ್ಲಿ 21 ಎಸೆತಗಳಲ್ಲಿ 63 ರನ್‌ ಚಚ್ಚಿ ಫಾರ್ಮ್‌ ಮರಳಿದ್ದ ನಿಕೋಲಸ್‌ ಪೂರನ್‌ ಅವರು ಆರ್‌ಸಿಬಿಗೆ ಆತಂಕ ಮೂಡಿಸಬಹುದು. ಹಾಗಾಗಿ ಇವರಿಗೆ ಸ್ಪಿನ್‌ ಮೂಲಕ ಉತ್ತಮ ರಣತಂತ್ರವನ್ನು ಆರ್‌ಸಿಬಿ ರೂಪಿಸಬೇಕಾಗುತ್ತದೆ. ಇನ್ನು ರಿಷಭ್‌ ಪಂತ್‌ ಹಾಗೂ ಏಡೆನ್‌ ಮಾರ್ಕ್ರಮ್‌ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ಹೊತ್ತು ಉಳಿಯಲು ಆರ್‌ಸಿಬಿ ಬೌಲರ್‌ಗಳು ಬಿಡಬಾರದು.

IPL 2026 Playoffs Scenario: ಆರ್‌ಸಿಬಿ ಸೇರಿದಂತೆ ಎಲ್ಲಾ 10 ತಂಡಗಳ ಪ್ಲೇಆಫ್ಸ್‌ ಲೆಕ್ಕಾಚಾರ!

ಲಖನೌ ಬೌಲಿಂಗ್‌ ಬಲಿಷ್ಠವಾಗಿದೆ

ಲಖನೌ ಸೂಪರ್‌ ಜಯಂಟ್ಸ್‌ ತಂಡ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನವನ್ನು ತೋರುವಲ್ಲಿ ವಿಫಲವಾದರೂ ಅವರ ಬೌಲಿಂಗ್‌ ಲೈನ್‌ ಅಪ್‌ ಬಲಿಷ್ಠವಾಗಿದೆ. ಮೊಹಮ್ಮದ್‌ ಶಮಿ ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಬೌಲ್‌ ಮಾಡುತ್ತಾರೆ. ಇನ್ನು ಮೊಹ್ಸಿನ ಖಾನ್‌ ಕೂಡ ಉತ್ತಮ ಲೈನ್‌ ಅಂಡ್‌ ಲೆನ್ತ್‌ನಲ್ಲಿ ಬೌಲ್‌ ಮಾಡಬಲ್ಲರು. ಇನ್ನು ವಾಂಖೆಡೆ ಬ್ಯಾಟಿಂಗ್‌ ಪಿಚ್‌ನಲ್ಲಿಯೂ ತಮ್ಮ ಸ್ಪಿನ್‌ ಮೋಡಿ ಮೂಲಕ ರೋಹಿತ್‌ ಶರ್ಮಾ ಹಾಗೂ ತಿಲಕ್‌ ವರ್ಮಾ ಅವರನ್ನು ಔಟ್‌ ಮಾಡಿದ್ದ ಮಣಿಮಾರನ್‌ ಸಿದ್ದಾರ್ಥ್‌ ಲಖನೌದ ಸ್ಲೋ ಪಿಚ್‌ನಲ್ಲಿ ಪರಿಣಾಮಕಾರಿಯಾಗಬಹುದು. ಹಾಗಾಗಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಇವರಿಗೆ ಸೂಕ್ತ ರಣತಂತ್ರವನ್ನು ರೂಪಿಸಬೇಕಾಗುತ್ತದೆ.

ಟಾಸ್‌ ಗೆದ್ದರೆ ಚೇಸಿಂಗ್‌ ಆಯ್ಕೆ ಮಾಡಿಕೊಳ್ಳಬೇಕು

ಈ ಪಂದ್ಯದಲ್ಲಿ ಟಾಸ್‌ ಗೆದ್ದರೆ ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಆರಿಸಿಕೊಂಡು, ಎದುರಾಳಿ ಲಖನೌ ತಂಡವನ್ನು 140ಕ್ಕೂ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಬೇಕು. ಆ ಮೂಲಕ ಎರಡನೇ ಇನಿಂಗ್ಸ್‌ನಲ್ಲಿ ಸುಲಭವಾಗಿ ಚೇಸ್‌ ಮಾಡಬಹುದು. ಆದರೆ, ಪಂದ್ಯದ ದಿನ ಕಂಡೀಷನ್ಸ್‌ ನೋಡಿಕೊಂಡು ಆರ್‌ಸಿಬಿ ಟೀಮ್‌ ಮ್ಯಾನೇಜ್‌ಮೆಂಟ್‌ ಹೆಚ್ಚುವರಿ ಸ್ಪಿನ್ನರ್‌ ಆಡಿಸಬೇಕಾ? ಎಂಬುದರ ಬಗ್ಗೆ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.

ಐಪಿಎಲ್ 2026 ಫೈನಲ್ ಸ್ಥಳಾಂತರ: ಶಾಸಕರ ಟಿಕೆಟ್‌ ಲಾಬಿ, ಬೆಂಗಳೂರು ಕೈ ತಪ್ಪಿದ ಆತಿಥ್ಯ!

ವಿರಾಟ್‌ ಕೊಹ್ಲಿ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಬೇಕು

ಇನ್ನು ವಿರಾಟ್‌ ಕೊಹ್ಲಿ ಲಖನೌದ ಸ್ಲೋ ವಿಕೆಟ್‌ನಲ್ಲಿ ಆಕ್ರಮಣಕಾರಿಯಾಗಿ ಆಡುವ ಬದಲು ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್‌ ಮಾಡಬೇಕಾಗುತ್ತದೆ. ಅವರು 20 ಓವರ್‌ಗಳನ್ನು ಮುಗಿಸುವ ಯೋಜನೆಯೊಂದಿಗೆ ಆಡಬೇಕು. ಏಕೆಂದರೆ ಕೊಹ್ಲಿ ಈ ಹಿಂದೆ ಲಖನೌ ಕಂಡೀಷನ್ಸ್‌ನಲ್ಲಿ ಆಡಿದ ಅಪಾರ ಅನುಭವವನ್ನು ಹೊಂದಿದ್ದಾರೆ. ಅವರು ಚೇಸಿಂಗ್‌ನಲ್ಲಿ ಮಾಸ್ಟರ್‌ ಆಗಿದ್ದು, ಯಾವುದೇ ಸನ್ನಿವೇಶ ಎದುರಾದರೂ ಅದನ್ನು ಅವರು ಮೆಟ್ಟಿ ನಿಲ್ಲುತ್ತಾರೆ.