ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಮಯಾಂಕ್‌ ಅಗರ್ವಾಲ್‌ ಔಟ್‌! ಆರ್‌ಸಿಬಿ ರಿಲೀಸ್‌, ರಿಟೈನ್‌ ಆಟಗಾರರ ಪಟ್ಟಿ ಇಲ್ಲಿದೆ!

RCB's Players List: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜಿನ ನಿಮಿತ್ತ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಉಳಿಸಿಕೊಂಡ, ಬಿಡುಗಡೆ ಮಾಡಿದ ಹಾಗೂ ಟ್ರೇಡ್‌ ಡೀಲ್‌ ಮಾಡಿಕೊಂಡ ಆಟಗಾರರ ಪಟ್ಟಿಯಲ್ಲಿ ಪ್ರಕಟಿಸಿದೆ. ಈ ಎಲ್ಲಾ ಆಟಗಾರರ ವಿವರವನ್ನು ಇಲ್ಲಿ ತಿಳಿಸಲಾಗಿದೆ.

IPL 2026: ಆರ್‌ಸಿಬಿ ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರರ ವಿವರ!

ಆರ್‌ಸಿಬಿ ಉಳಿಸಿಕೊಂಡ, ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿ ವಿವರ. -

Profile
Ramesh Kote Nov 15, 2025 7:01 PM

ನವದೆಹಲಿ: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಮಿನಿ ಹರಾಜಿನ ನಿಮಿತ್ತ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ಉಳಿಸಿಕೊಂಡ, ಬಿಡುಗಡೆ ಮಾಡಿದ ಹಾಗೂ ಟ್ರೇಡ್‌ ಡೀಲ್‌ ಮಾಡಿಕೊಂಡ ಆಟಗಾರರ ಪಟ್ಟಿಯನ್ನು ನವೆಂಬರ್‌ 15 ರಂದು ಶನಿವಾರ ಪ್ರಕಟಿಸಿದೆ. ಇದರಲ್ಲಿ ಎಂಟು ಮಂದಿ ಆಟಗಾರರನ್ನು ಬಿಡುಗಡೆ ಮಾಡಿದ್ದು, ಒಟ್ಟು 17 ಮಂದಿ ಆಟಗಾರರನ್ನು ಮುಂದಿನ ಸೀಸನ್‌ಗೆ ಉಳಿಸಿಕೊಂಡಿದೆ. ಕಳೆದ ಟೂರ್ನಿಯ ಪ್ಲೇಆಫ್ಸ್‌ ಹಂತದಲ್ಲಿ ಆರ್‌ಸಿಬಿಗೆ ಬಂದಿದ್ದ ಕನ್ನಡಿಗ ಮಯಾಂಕ್‌ ಅಗರ್ವಾಲ್‌ (Mayank Agarwal) ಅವರನ್ನು ಬೆಂಗಳೂರು ಫ್ರಾಂಚೈಸಿ ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

2026ರ ಐಪಿಎಲ್‌ ಟೂರ್ನಿ ಮಿನಿ ಹರಾಜು ಡಿಸೆಂಬರ್‌ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಹಾಗಾಗಿ ಎಲ್ಲಾ ಫಾಂಚೈಸಿಗಳು ತಾವು ಉಳಿಸಿಕೊಳ್ಳಬಲ್ಲ ಹಾಗೂ ಬಿಡುಗಡೆಗೊಳಿಸಬಲ್ಲ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲು ಐಪಿಎಲ್‌ ಆಡಳಿತ ಮಂಡಳಿ ನವೆಂಬರ್‌ 15ಕ್ಕೆ ಕೊನೆಯ ದಿನಾಂಕವನ್ನು ನೀಡಲಾಗಿತ್ತು. ಇದರಲ್ಲಿ ಆರ್‌ಸಿಬಿ ತಂಡ ಇಬ್ಬರು ಕನ್ನಡಿಗ ಆಟಗಾರರನ್ನು ರಿಲೀಸ್‌ ಮಾಡಿದೆ. ಮಯಾಂಕ್‌ ಅಗರ್ವಾಲ್‌ ಹಾಗೂ ಒಂದೂ ಪಂದ್ಯದಲ್ಲಿ ಅವಕಾಶ ನೀಡದ ಮನೋಜ್‌ ಬಾಂಡಗೆ ಅವರನ್ನು ರಿಲೀಸ್‌ ಮಾಡಿದೆ.

IPL 2026 retention: ಚೆನ್ನೈ ಸೇರಿದ ಸಂಜು ಸ್ಯಾಮ್ಸನ್‌, ರಾಜಸ್ಥಾನ್‌ಗೆ ರವೀಂದ್ರ ಜಡೇಜಾ

ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರು

ಸ್ವಸ್ತಿಕ್‌ ಚಿಕಾರ, ಮಯಾಂಕ್‌ ಅಗರ್ವಾಲ್‌, ಟಿಮ್‌ ಸೀಫರ್ಟ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಮನೋಜ್‌ ಭಾಂಡಗೆ, ಲುಂಗಿ ಎನ್ಗಿಡಿ, ಬ್ಲೆಸಿಂಗ್‌ ಮುಝರಬಾನಿ, ಮೋಹಿತ್‌ ರಾಥೆ



ಆರ್‌ಸಿಬಿ ಉಳಿಸಿಕೊಂಡ ಆಟಗಾರರು

ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜಾಶ್ ಹೇಝಲ್‌ವುಡ್, ಯಶ್ ದಯಾಳ್‌, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ದಾರ್‌ ಸಿಂಗ್, ಅಭಿನಂದನ್ ಸಿಂಗ್‌, ಸುಯಾಶ್‌ ಶರ್ಮಾ.

ಆರ್‌ಸಿಬಿ ಖಾತೆಯಲ್ಲಿ ಉಳಿದಿರುವ ಒಟ್ಟು ಮೊತ್ತ: 16.40 ಕೋಟಿ ರು



ಆರ್‌ಸಿಬಿ ಉಳಿಸಿಕೊಂಡ ಆಟಗಾರರ ಬಗ್ಗೆ ಹೆಡ್‌ ಕೋಚ್‌ ಆಂಡಿ ಫ್ಲವರ್‌ ಪ್ರತಿಕ್ರಿಯೆ

"ನಾವು ನಿಜವಾಗಿಯೂ ಬಲಿಷ್ಠ ತಂಡವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಇತ್ತೀಚೆಗೆ ಪ್ರಶಸ್ತಿ ಗೆದ್ದ ಮತ್ತು ಅತ್ಯುತ್ತಮ ಕ್ರಿಕೆಟ್ ಆಡಿದ ಉತ್ತಮ ಇತಿಹಾಸವನ್ನು ನಾವು ಹೊಂದಿದ್ದೇವೆ. ಬಿಡುಗಡೆ ಮಾಡಿದ ಆಟಗಾರರ ಬಗ್ಗೆ ನನಗೆ ನಿಒಕ್ಕೂ ಸಹಾನಭೂತಿ ಇದೆ, ಏಕೆಂದರೆ ಕಳೆದ ವರ್ಷ ನನಗಾದ ಅದ್ಭುತ ಅನುಭವ ಅವರಿಗೂ ಕೂಡ ಆಡಿದೆ ಎಂದು ಭಾವಿಸುತ್ತೇನೆ. ಖಂಡಿತ, ನಾವು ನಮ್ಮ ತಂಡವನ್ನು ಬಲಪಡಿಸಲು ಎದುರು ನೋಡುತ್ತೇವೆ. ಆದರೆ ಹಾಗೆ ಹೇಳುವಾಗ ನಾವು ಉಳಿಸಿಕೊಂಡ ಆಟಗಾರರ ಬಗ್ಗೆ ಆರಾಮದಾಯಕವಾಗಿರಬೇಕಾಗುತ್ತದೆ," ಎಂದು ಹೇಳಿದ್ದಾರೆ.



"ಈಗ ಮತ್ತು ಹರಾಜಿನ ನಡುವೆ ಸಾಕಷ್ಟು ಕ್ರಿಕೆಟ್ ಇದೆ. ಹರಾಜು ನಡೆಯುವ ಹೊತ್ತಿಗೆ ಬಹುತೇಕ ಪೂರ್ಣಗೊಳ್ಳಲಿರುವ SMAT ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಇದೆ, ಮತ್ತು ಮುಂದಿನ ಐಪಿಎಲ್‌ಗೂ ಮುನ್ನ ಸಾಕಷ್ಟು ಕ್ರಿಕೆಟ್ ಇದೆ. ನಾವು ತೀವ್ರವಾಗಿ ಗಮನಿಸುತ್ತೇವೆ ಮತ್ತು ನಾವು ನಿಜವಾಗಿಯೂ ನಿಕಟವಾಗಿ ಕೆಲಸ ಮಾಡುವ ಆಟಗಾರರ ಬಗ್ಗೆ ನಮ್ಮ ತಿಳುವಳಿಕೆಯನ್ನು ಬೆಳೆಸಿಕೊಳ್ಳುತ್ತೇವೆ," ಎಂದು ಹೆಡ್‌ ಕೋಚ್‌ ಆಂಡಿ ಫ್ಲವರ್‌ ತಿಳಿಸಿದ್ದಾರೆ.