ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

GT vs CSK: ಚೆನ್ನೈ ವಿರುದ್ಧ ಗೆಲುವಿನ ಹೊರತಾಗಿಯೂ ತಂಡದ ಪ್ರದರ್ಶನಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶುಭಮನ್‌ ಗಿಲ್‌

IPL 2026: ಪಂದ್ಯದ ಬಳಿಕ ಮಾತನಾಡಿದ ಗಿಲ್‌ "ಭಾರತದ ಈ ಭಾಗದಲ್ಲಿ ಇಂತಹ ಗೆಲುವು ಸಾಧಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕೊನೆಯ ನಾಲ್ಕು ಅಥವಾ ಐದು ಓವರ್‌ಗಳನ್ನು ಹೊರತುಪಡಿಸಿ, ಇದು ಸಂಪೂರ್ಣ ಪ್ರದರ್ಶನವಾಗಿತ್ತು" ಎಂದು ಶುಭಮನ್‌ ಗಿಲ್‌ ಹೇಳಿದರು.

shubman gill post match

ಚೆನ್ನೈ, ಎ.27: ಎಪ್ರಿಲ್ 26 ರ ಭಾನುವಾರದಂದು ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧ ಗುಜರಾತ್ ಟೈಟಾನ್ಸ್(Gujarat Titans) ತಂಡ ದೊಡ್ಡ ಗೆಲುವು ಸಾಧಿಸಿದ್ದರೂ, ತಂಡದ ನಾಯಕ ಶುಭಮನ್ ಗಿಲ್(Shubman Gill) ತಮ್ಮ ತಂಡವನ್ನು ಟೀಕಿಸಿದರು. ತಂಡವು ಪಂದ್ಯಗಳನ್ನು ಉತ್ತಮವಾಗಿ ಮುಗಿಸುವ ಅಗತ್ಯವಿದೆ ಎಂದು ಹೇಳಿದರು.

ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 158 ರನ್‌ ಸಾಧಾರಣ ಮೊತ್ತ ಗಳಿಸಿತು. ಕಗಿಸೊ (25ಕ್ಕೆ3) ಮತ್ತು ಅರ್ಷದ್ ಖಾನ್ (43ಕ್ಕೆ2) ಅಮೋಘ ಬೌಲಿಂಗ್ ಮಾಡಿದರು. ಸಾಧಾರಣ ಗುರಿ ಬೆನ್ನಟ್ಟಿದ ಗುಜರಾತ್ ತಂಡವು 16.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 162 ರನ್ ಗಳಿಸಿತು.

ಚೇಸಿಂಗ್‌ ವೇಳೆ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ (87) ಹಾಗೂ ಶುಭಮನ್ ಗಿಲ್ (33) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 58 ರನ್ ಸೇರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಸಾಯಿ ಮತ್ತು ಜೋಸ್ ಬಟ್ಲರ್ 97 ರನ್‌ ಗಳಿಸಿ ತಂಡದ ಜಯ ವನ್ನು ಸುಲಭಗೊಳಿಸಿದರು.

ಪಂದ್ಯದ ಬಳಿಕ ಮಾತನಾಡಿದ ಗಿಲ್‌ "ಭಾರತದ ಈ ಭಾಗದಲ್ಲಿ ಇಂತಹ ಗೆಲುವು ಸಾಧಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಕೊನೆಯ ನಾಲ್ಕು ಅಥವಾ ಐದು ಓವರ್‌ಗಳನ್ನು ಹೊರತುಪಡಿಸಿ, ಇದು ಸಂಪೂರ್ಣ ಪ್ರದರ್ಶನವಾಗಿತ್ತು" ಎಂದು ಗಿಲ್‌ ಹೇಳಿದರು.

"ನಾವು ನಿರ್ಣಾಯಕವಾಗಿರಬೇಕಾದರೆ, ಇನ್ನಿಂಗ್ಸ್ ಮುಗಿಸುವುದು ಒಂದು ಸಮಸ್ಯೆಯಾಗಿದೆ. ನಾವು ಅದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ" ಎಂದು ಹೇಳುವ ಮೂಲಕ ತಂಡದ ಫಿನಿಶಿಂಗ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಗೆಲುವಿನೊಂದಿಗೆ, ಜಿಟಿ ತಮ್ಮ ಎರಡು ಪಂದ್ಯಗಳ ಸೋಲಿನ ಸರಣಿಯನ್ನು ಕೊನೆಗೊಳಿಸಿತು. ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.

ಸೂಪರ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲೆದ್ದ ಕೆಕೆಆರ್‌

ಸಂಕ್ಷಿಪ್ತ ಸ್ಕೋರು

ಚೆನ್ನೈ ಸೂಪರ್‌ಕಿಂಗ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 158 (ಋತುರಾಜ್ ಗಾಯಕವಾಡ ಔಟಾಗದೇ 74, ಶಿವಂ ದುಬೆ 22, ಜೆಮಿ ಒವರ್ಟನ್ 18, ಕಗಿಸೊ ರಬಾಡ 25ಕ್ಕೆ3, ಅರ್ಷದ್ ಖಾನ್ 43ಕ್ಕೆ2). ಗುಜರಾತ್ ಟೈಟನ್ಸ್: 16.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 162 (ಸಾಯಿ ಸುದರ್ಶನ್ 87, ಶುಭಮನ್ ಗಿಲ್ 33, ಜೋಸ್ ಬಟ್ಲರ್ ಔಟಾಗದೇ 39, ಅಕೀಲ್ ಹುಸೇನ್ 46ಕ್ಕೆ1, ನೂರ್ ಅಹಮದ್ 29ಕ್ಕೆ1.