Mohit Sharma: ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ಟಿ20 ಸ್ಪೆಷಲಿಸ್ಟ್ ಮೋಹಿತ್ ಶರ್ಮಾ ಗುಡ್‌ಬೈ!
Mohit Sharma's Retirement: ಭಾರತ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ಐಪಿಎಲ್ ಸೀಸನ್‌ನಲ್ಲಿ ಅವರು ಡೆಲ್ಲಿ ಪರ ಆಡಿದ್ದರು. ಅವರು ಭಾರತ ತಂಡದ ಪರ 26 ಒಡಿಐ ಹಾಗೂ 8 ಟಿ20ಐ ಪಂದ್ಯಗಳನ್ನು ಆಡಿದ್ದಾರೆ.
ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ ಮೋಹಿತ್ ಶರ್ಮಾ. -
ನವದೆಹಲಿ: ಭಾರತೀಯ ಕ್ರಿಕೆಟ್‌ನ ವೇಗದ ಬೌಲರ್ ಮೋಹಿತ್ ಶರ್ಮಾ (Mohit Sharma)ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಬುಧವಾರ (ಡಿಸೆಂಬರ್ 3) ವಿದಾಯ ಹೇಳಿದ್ದಾರೆ. 37ರ ಪ್ರಾಯದ ಬೌಲರ್ ಕೊನೆಯ ಬಾರಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಇವರು ಭಾರತ ತಂಡದ (Indian Cricket Team) ಪರ 2023 ರಿಂದ 2015ರ ಅವಧಿಯಲ್ಲಿ 26 ಒಡಿಐ ಪಂದ್ಯಗಳು ಹಾಗೂ 8 ಟಿ20ಐ ಪಂದ್ಯಗಳನ್ನು ಆಡಿದ್ದರು. ಅವರು ತಮ್ಮ ವೃತ್ತಿ ಜೀವನದಲ್ಲಿ ಡೆತ್ ಓವರ್‌ಗಳ ಸ್ಪೆಷಲಿಸ್ಟ್ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.
"ಇಂದು ತುಂಬು ಹೃದಯದಿಂದ ನಾನು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ," ಎಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. "ಹರಿಯಾಣ ತಂಡವನ್ನು ಪ್ರತಿನಿಧಿಸುವುದರಿಂದ ಭಾರತ ತಂಡದ ಜೆರ್ಸಿ ಧರಿಸುವಿಕೆ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವವರೆಗೆ ಈ ಪ್ರಯಾಣವು ಒಂದು ಆರ್ಶಿವಾದವಾಗಿದೆ," ಎಂದು ಬರೆದಿದ್ದಾರೆ.
195 ರನ್‌ಗಳ ಜೊತೆಯಾಟದಿಂದ ಸಚಿನ್-ಕಾರ್ತಿಕ್ ದಾಖಲೆ ಮುರಿದ ಕೊಹ್ಲಿ-ಗಾಯಕ್ವಾಡ್ ಜೋಡಿ!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಮಿನಿ ಹರಾಜಿನ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೋಹಿತ್ ಶರ್ಮಾ ಅವರನ್ನು ಬಿಡುಗಡೆ ಮಾಡಿದೆ. ಮಿನಿ ಹರಾಜು ಡಿಸೆಂಬರ್ 15 ರಂದು ಅಬು ದಾಬಿಯಲ್ಲಿ ನಡೆಯಲಿದೆ. ಕಳೆದ ಐಪಿಎಲ್ ಟೂರ್ನಿಯಲ್ಲಿ ಮೋಹಿತ್ ಶರ್ಮಾ ಆಡಿದ ಎಂಟು ಪಂದ್ಯಗಳಿಂದ 10.28ರ ಎಕಾನಮಿ ರೇಟ್‌ನಲ್ಲಿ ರನ್ ಬಿಟ್ಟು ಕೊಟ್ಟು ಎರಡು ವಿಕೆಟ್ ಕಬಳಿಸಿದ್ದರು. ಅವರು ಟಿ20 ಸ್ಪೆಷಲಿಸ್ಟ್ ಆಗಿ ಚುಟುಕು ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
2022ರ ಐಪಿಎಲ್ ಟೂರ್ನಿಯ ಹೊರಗುಳಿದ ಮೋಹಿತ್ ಶರ್ಮಾ ಅವರನ್ನು 2023ರಲ್ಲಿ ಗುಜರಾತ್ ಟೈಟನ್ಸ್ ತಂಡ ಖರೀದಿಸಿತ್ತು. ಅದರಂತೆ ಅವರು ಅವರು ಡೆತ್ ಓವರ್‌ಗಳಲ್ಲಿ ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. 37ನೇ ವಯಸ್ಸಿನ ಅವರು ಆ ಸೀಸನ್‌ನಲ್ಲಿ 27 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಒಂದೇ ಒಂದು ವಿಕೆಟ್‌ನಿಂದಾಗಿ ಪರ್ಪಲ್ ಕ್ಯಾಪ್ ವಂಚಿತರಾಗಿದ್ದರು. ಆದರೂ ಅವರು ಮುಂದಿನ ಸೀಸನ್‌ನಲ್ಲಿ ಮಿಂಚಿನ ಪ್ರದರ್ಶನವನ್ನು ತೋರಿದ್ದರು. 2024 ರಲ್ಲಿ ಗುಜರಾತ್ ಟೈಟನ್ದಸ್ ಪರ 12 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದರು.
ಡೆತ್ ಓವರ್ ಸ್ಪೆಷಲಿಸ್ಟ್
ಮೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್ ಡೆತ್ ಓವರ್‌ಗಳಲ್ಲಿ ಅದ್ಭುತ ಬೌಲಿಂಗ್ ಕೌಶಲವನ್ನು ಹೊಂದಿದ್ದಾರೆ. ನಿಧಾನಗತಿಯ ಎಸೆತಗಳು, ಕಟರ್ಸ್ ಹಾಗೂ ವೇಗವನ್ನು ಬದಲಿಸುವ ಸೇರಿದಂತೆ ಬ್ಯಾಟ್ಸ್‌ಮನ್‌ಗಳಿಗೆ 16 ರಿಂದ 20 ಓವರ್‌ಗಳಲ್ಲಿ ಸಿಂಹ ಸ್ವಪ್ನರಾಗಿದ್ದರು. ಅವರು ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ 9.80ರ ಎಕಾನಮಿ ರೇಟ್‌ನಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ.