ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2206: ಔಟ್‌ ಆಫ್‌ ಫಾರ್ಮ್‌ ವರುಣ್ ಚಕ್ರವರ್ತಿಗೆ ಅಜಿಂಕ್ಯ ರಹಾನೆ ಮಹತ್ವದ ಸಲಹೆ!

ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಸ್ಟಾರ್‌ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರ ಕಳಪೆ ಫಾರ್ಮ್‌ ಬಗ್ಗೆ ಕ್ಯಾಪ್ಟನ್‌ ಅಜಿಂಕ್ಯ ರಹಾನೆ ಮಾತನಾಡಿದ್ದಾರೆ. ಇತ್ತೀಚೆಗೆ ಅತ್ಯಗೊಂಡ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ವಿಕೆಟ್‌ ಟೇಕರ್‌ ಎನಿಸಿದರೂ, ಹೆಚ್ಚು ರನ್‌ ಕೊಟ್ಟ ವರುಣ್‌ ಇದೀಗ ಐಪಿಎಲಗ್ಗ 2026 ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು ಹೊಡೆಸಿಕೊಂಡು ಕಂಗಾಲಾಗಿದ್ದಾರೆ. ಈ ಬಗ್ಗೆ ಕೆಕೆಆರ್‌ ಕ್ಯಾಪ್ಟನ್‌ ಅಜಿಂಕ್ಯ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವರುಣ್‌ ಚಕ್ರವರ್ತಿಗೆ ಅಜಿಂಕ್ಯ ರಹಾನೆ ಸಲಹೆ.

ಮುಂಬೈ: ಐಪಿಎಲ್ 2026 (IPL 2026) ಟೂರ್ನಿ ಆರಂಭವಾಗುತ್ತಿದ್ದಂತೆಯೇ ಮಿಸ್ಟರಿ ಸ್ಪಿನ್ನರ್‌ ವರುಣ್‌ ಚಕ್ರವರ್ತಿ (Varun Chakravarthy) ಮೇಲಿನ ನಿರೀಕ್ಷೆಯ ಭಾರ ಕೂಡ ಹೆಚ್ಚಾಗಿದೆ. ಐಸಿಸಿ ಟಿ20 ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಸದ್ಯ 2ನೇ ಸ್ಥಾನದಲ್ಲಿರುವ ವರುಣ್‌, ಭಾರತದ ಟಿ20 ವಿಶ್ವಕಪ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟಾರೆ 14 ವಿಕೆಟ್‌ ಪಡೆದು ವರುಣ್‌ ಗಮನ ಸೆಳೆದರಾದರೂ ಅವರ ಎಕಾನಮಿ ತೀರಾ ಹದಗೆಟ್ಟಿತ್ತು. ಪಂದ್ಯದಿಂದ ಪಂದ್ಯಕ್ಕೆ ಹೆಚ್ಚು ರನ್‌ ಹೊಡೆಸಿಕೊಳ್ಳುತ್ತಿರುವ ಅವರು, ಭಾನುವಾರ ನಡೆದ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲೂ ವಿಕೆಟ್‌ ಪಡೆಯಲಾಗದೆ ಹೆಚ್ಚು ರನ್‌ ಕೊಟ್ಟು ಕಂಗಾಲಾದರು. ಹೀಗಾಗಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಅವರ ಕಳಪೆ ಫಾರ್ಮ್‌ ಬಗ್ಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಫ್ಯಾನ್ಸ್ ತಲೆ ಕಡೆಸಿಕೊಳ್ಳುವಂತ್ತಾಗಿದೆ.

IPL 2026: ಪಂಜಾಬ್‌ ಕಿಂಗ್ಸ್‌ vs ಗುಜರಾತ್‌ ಟೈಟನ್ಸ್‌ ನಡುವೆ ಗೆಲ್ಲುವ ನೆಚ್ಚಿನ ತಂಡ ಯಾವುದು?

ವರುನ್‌ ಅವರ ಕಳಪೆ ಫಾರ್ಮ್‌ನ ಲಕ್ಷಣಗಳು ವಿಶ್ವಕಪ್‌ನ ಕೊನೆಯ ಹಂತದಲ್ಲೇ ಕಾಣಿಸಿಕೊಂಡಿದ್ದು, ಇದೀಗ ಐಪಿಎಲ್‌ನಲ್ಲೂ ಮುಂದುವರಿದಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ Kolkata Knight Riders ಪರ ಆಡಿದ ವರುಣ್, Mumbai Indians ತಂಡದ ಓಪನರ್‌ಗಳಾದ ರೋಹಿತ್‌ ಶರ್ಮಾ ಮತ್ತು ರಯಾನ್‌ ರಿಕಲ್ಟನ್‌ ಎದುರು ಹೆಚ್ಚು ರನ್ ಬಿಟ್ಟುಕೊಟ್ಟು ಕಂಗಾಲಾಗಿದ್ದರು. ಪಂದ್ಯದಲ್ಲಿ 4 ಓವರ್‌ ಬೌಲ್‌ ಮಾಡಿ ವಿಕೆಟ್‌ ಪಡೆಯಲಾಗದೆ 48 ರನ್‌ ಹೊಡೆಸಿಕೊಂಡು ಬಸವಳಿದರು.

ಕೆಕೆಆರ್ ತಂಡದ ವೇಗದ ಬೌಲಿಂಗ್ ವಿಭಾಗ ಈಗಾಗಲೇ ದುರ್ಬಲವಾಗಿರುವ ಹಿನ್ನೆಲೆಯಲ್ಲಿ, ವರುಣ್‌ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಆದರೆ ಲೈನ್‌-ಲೆಂತ್‌ನಲ್ಲಿ ಮಾಡಿದ ತಪ್ಪುಗಳು ಮತ್ತು ಕೆಲವು ಕೆಟ್ಟ ಎಸೆತಗಳು ಎದುರಾಳಿಗಳಿಗೆ ಸುಲಭವಾಗಿ ರನ್ ಗಳಿಸಲು ಅವಕಾಶ ನೀಡಿದವು. ಪರಿಣಾಮವಾಗಿ, 221 ರನ್‌ಗಳ ಬೃಹತ್‌ ಗುರಿಯನ್ನು ಮುಂಬೈ ಇಂಡಿಯನ್ಸ್ ಸುಲಭವಾಗಿ ಮೆಟ್ಟಿನಿಂತಿತು.

IPL 2026: ಆರ್‌ಸಿಬಿಯನ್ನು ಗೆಲ್ಲಿಸಿ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟ ವಿರಾಟ್‌ ಕೊಹ್ಲಿ!

ಕಳಪೆ ಪ್ರದರ್ಶನದ ಹೊರತಾಗಿಯೂ ಕೆಕೆಆರ್‌ ತಂಡದ ನಾಯಕ ಅಜಿಂಕ್ಯ ರಹಾನೆ ತಮ್ಮ ಸ್ಟಾರ್‌ ಸ್ಪಿನ್ನರ್‌ ವರುಣ್‌ ಪರ ನಿಂತಿದ್ದಾರೆ. ಹೆಚ್ಚಿನ ಪೈಪೋಟಿಯಿಂದ ಕೂಡಿದ್ದ ವಿಶ್ವಕಪ್‌ ಟೂರ್ನಿಯ ನಂತರ ಮಾನಸಿಕವಾಗಿ ಒತ್ತಡ ಉಂಟಾಗಿರುವುದೇ, ಆಟಗಾರರ ಲಯದಲ್ಲಿ ಈ ಕುಸಿತಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

"ಪ್ರತಿ ಆಟಗಾರನಿಗೂ ಇಂತಹ ಹಂತ ಬರುತ್ತದೆ. ವರುಣ್‌ ಕಠಿಣ ಪರಿಶ್ರಮ ಹಾಕುತ್ತಿದ್ದಾರೆ. ಅವರ ಮನೋಭಾವ ಸರಿಯಾಗಿಯೇ ಇದೆ. ಹೀಗಾಗಿ ಆದುದ್ದರ ಬಗ್ಗೆ ಹೆಚ್ಚು ಯೋಚನೆ ಮಾಡದೇ, ತಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಂಡರೆ ಅವರು ಮತ್ತೆ ಉತ್ತಮ ಪ್ರದರ್ಶನ ನೀಡುತ್ತಾರೆ," ಎಂದು ಕೆಕೆಆರ್‌ ಕ್ಯಾಪ್ಟನ್‌ ಅಜಿಂಕ್ಯ ರಹಾನೆ ಹೇಳಿದ್ದಾರೆ.

IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ʼಫ್ರೀ ರೈಡ್‌ʼ ಆಫರ್‌ ನೀಡಿ ಅಭಿಮಾನ ಮೆರೆದ ಬೆಂಗಳೂರಿನ ಆಟೋ ಚಾಲಕ!

ಇತ್ತೀಚಿನ ಅಂಕಿಅಂಶಗಳು ವರುಣ್‌ ಫಾರ್ಮ್ ಕುಸಿತವನ್ನು ತೋರಿಸುತ್ತಿವೆ. ಟಿ20 ವಿಶ್ವಕಪ್‌ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಅವರು 178 ರನ್ ನೀಡಿ ಕೇವಲ 4 ವಿಕೆಟ್ ಪಡೆದಿದ್ದರು. ಜೊತೆಗೆ ಐಪಿಎಲ್ ಮೊದಲ ಪಂದ್ಯದಲ್ಲೂ ಹೆಚ್ಚು ರನ್ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ವರುಣ್‌ ತಮ್ಮ ಹಳೆಯ ಫಾರ್ಮ್‌ಗೆ ಮರಳುತ್ತಾರೆಯೇ ಎಂಬುದು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪ್ರದರ್ಶನದ ಭಾರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.