ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ʻವೈಭವ್‌ ಸೂರ್ಯವಂಶಿಯನ್ನು ನೋಡಿ ಕಲಿಯರಿʼ-ರಿಷಭ್‌ ಪಂತ್‌ಗೆ ಮೈಕಲ್‌ ವಾನ್‌ ಸಲಹೆ!

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕ ರಿಷಭ್‌ ಪಂತ್‌ಗೆ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ ಮಹತ್ವದ ಸಲಹೆಯನ್ನು ನೀಡಿದ್ದಾರೆ. ವೈಭವ್‌ ಸೂರ್ಯವಂಶಿ ಅವರಿಂದ ಪಂತ್‌ ಕಲಿಯಬೇಕು ಎಂದಿದ್ದಾರೆ.

ರಿಷಭ್‌ ಪಂತ್‌ಗೆ ಮೈಕಲ್‌ ವಾನ್‌ ಸಲಹೆ.

ಲಖನೌ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ರಿಷಭ್‌ ಪಂತ್‌ (Rishabh Pant) ವಿರುದ್ಧ ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ (Michael Vaughan) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿ ಅವರಿಂದ ಸಲಹೆ ಪಡೆದುಕೊಳ್ಳಿ ಎಂದು ಅವರು ಹೇಳಿದ್ದಾರೆ. 27 ಕೋಟಿ ರು. ಮೌಲ್ಯದ ರಿಷಭ್‌ ಪಂತ್‌, ತಮ್ಮ ಮೊದಲನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಇನಿಂಗ್ಸ್‌ ಆರಂಭಿಸಿದ್ದರು ಹಾಗೂ 9 ಎಸೆತಗಳಲ್ಲಿ 7 ರನ್‌ ಗಳಿಸಿದ ಬಳಿಕ ರನ್‌ಔಟ್‌ ಆಗಿದ್ದರು. ಆ ಮೂಲಕ ಈ ಪಂದ್ಯದಲ್ಲಿ ಎಲ್‌ಎಸ್‌ಜಿ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತು.

ಪಂದ್ಯದ ಸೋಲಿನ ಬಳಿಕ ಲಖನೌ ಫ್ರಾಂಚೈಸಿ ಓನರ್‌ ಸಂಜೀವ್ ಗೋಯೆಂಕಾ ಹಾಗೂ ರಿಷಭ್‌ ಪಂತ್‌ ನಡುವೆ ಮಾತುಕತೆ ನಡೆಯುತ್ತಿತ್ತು. ಪಂತ್ ಭಾರತದ ಟಿ20ಐ ಮತ್ತು ಒಡಿಐ ತಂಡಗಳಿಂದ ದೂರವಾಗುತ್ತಿದ್ದಾರೆ ಮತ್ತು ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ನಿಯಮಿತವಾಗಿ ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟ್ ಆಟಗಾರ ಮೈಕಲ್ ವಾನ್, ವೈಭವ್‌ ಸೂರ್ಯವಂಶಿಯ ಆಟವನ್ನು ನೋಡಿ ಕಲಿಯಬೇಕೆಂದು ರಿಷಭ್‌ ಪಂತ್‌ಗೆ ಸಲಹೆಯನ್ನು ನೀಡಿದ್ದಾರೆ.

IPL 2026: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೋಲಿಗೆ ರಿಷಭ್ ಪಂತ್ ಪ್ರತಿಕ್ರಿಯೆ

ಭಾರತದ 15ರ ವಯಸ್ಸಿನ ಈ ಪ್ರತಿಭಾವಂತ ಹುಡುಗ ವೈಭವ್‌ ಸೂರ್ಯವಂಶಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ರಿಷಭ್‌ ಪಂತ್‌ ಕೂಡ ವೈಭವ್‌ ರೀತಿ ಕ್ರೀಸ್‌ನಲ್ಲಿ ಸ್ವತಂತ್ರ, ಮುಕ್ತವಾಗಿ ತಮ್ಮ ಆಕ್ರಮಣಕಾರಿ ಶೈಲಿಯ ಮನೋಭಾವವನ್ನು ಬೆಳೆಸಿಕೊಂಡರೆ ಲಾಭವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಿಷಭ್‌ ಪಂತ್‌ಗೆ ಮೈಕಲ್‌ ವಾನ್‌ ಸಲಹೆ

“ಅವರು ಆಟ ಆಡುತ್ತಿರುವುದು ಭಾರತ ತಂಡಕ್ಕೆ, ಹಾಗಾಗಿ ಇದು ತುಂಬಾ ಆಳವಾಗಿರಬಹುದು. ಅವರು ತಮ್ಮ ಕೌಶಲದ ಆಧಾರದ ಮೇಲೆ ಬೇರೆ ಯಾವುದೇ ರಾಷ್ಟ್ರೀಯ ತಂಡದಲ್ಲಿ ಬೇಕಿದ್ದರೂ ಆಡಬಹುದು. ಅವರು ಚೆನ್ನಾಗಿ ಬ್ಯಾಟ್ ಮಾಡುತ್ತಾರೆ, ಉತ್ತಮ ವಿಕೆಟ್‌ಕೀಪರ್ ಮತ್ತು ಉತ್ತಮವಾಗಿ ಯೋಚಿಸುತ್ತಾರೆ. ಆದರೆ ಭಾರತ ತಂಡದಲ್ಲಿ ಆಟವಾಡಲು, ನಿಮಗೆ ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ ಇದ್ದಾರೆ. ವಿಕೆಟ್‌ಕೀಪರ್ ಬ್ಯಾಟರ್‌ಗಳ ಸ್ಟಾರ್‌ಗಳ ಸೇನೆಯಿದೆ ಮತ್ತು ಪಂತ್‌ಗೆ ಇದು ಸುಲಭವಾಗುವುದಿಲ್ಲ," ಎಂದು ಕ್ರಿಕ್‌ಬಝ್‌ಗೆ ಮೈಕಲ್‌ ವಾನ್‌ ತಿಳಿಸಿದ್ದಾರೆ.

IPL 2026: ಲಖನೌ ಸೂಪರ್‌ ಜಯಂಟ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಧಿಕಾರಯುತ ಜಯ!

"ಅತಿದೊಡ್ಡ ಪ್ರೊಫೈಲ್ ಮತ್ತು ಅತಿದೊಡ್ಡ ವೇದಿಕೆ ಈಗ ಇದೆ. ಅವರು ಮತ್ತೊಂದು ಅದ್ಭುತ ಐಪಿಎಲ್‌ ಟೂರ್ನಿಯನ್ನು ಪ್ರದರ್ಶಿಸಲು-ಚೆನ್ನಾಗಿ ಬ್ಯಾಟ್ ಮಾಡಿ, ಉತ್ತಮ ನಾಯಕತ್ವ ತೋರಿಸಬೇಕು. ನಾನು ಅವರ ಸ್ಥಾನದಲ್ಲಿದ್ದರೆ, ಸುರ್ಯವಂಶಿಯನ್ನು ಗಮನಿಸುತ್ತೇನೆ. ಪಂತ್ ಆಟ ಆಡಿದಾಗ, ನನಗೆ ಅದೃಷ್ಟವಶಾತ್ ಅವರು ತುಂಬಾ ನೆನಪಿಗೆ ಬರುವರು. ಇದು ಸಂಪೂರ್ಣ ಮುಕ್ತ ಮನಸ್ಸಿನ ಆಟ. ಪಂತ್ ನಂಬರ್ 3ರಲ್ಲಿ ಬ್ಯಾಟ್ ಮಾಡಬೇಕು, ಚೆಂಡನ್ನು ಪಾರ್ಕ್‌ಗಿಂತ ಹೊರಗೆ ಹೊಡೆಯಲು ಪ್ರಯತ್ನಿಸಬೇಕು. ಅವರ ಮನೋಭಾವ ‘ನಾನು 48 ಬಾಲ್ಸ್‌ನಲ್ಲಿ ಶತಕ ಹೊಡೆಯಬಹುದು’ ಎಂದು ಇರಬೇಕು,” ಎಂದು ಇಂಗ್ಲೆಂಡ್‌ ಮಾಜಿ ನಾಯಕ ಹೇಳಿದ್ದಾರೆ.

ರಿಷಭ್‌ ಪಂತ್‌ ಬಗ್ಗೆ ಜಹೀರ್‌ ಖಾನ್‌ ಪ್ರತಿಕ್ರಿಯೆ

ಪಂತ್ 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಮತ್ತು ಭಾರತ ತಂಡವು ಅವರು ಟಿ20 ಕ್ರಿಕೆಟ್‌ಗೆ ಸೂಕ್ತ ಆಟಗಾರ ಎಂದು ನಂಬಿತ್ತು. ಆದರೆ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರಭಾವ ಬೀರಿದಷ್ಟು ಏಕದಿನ ಕ್ರಿಕೆಟ್‌ನಲ್ಲಿ ತೋರಿಸಲಿಲ್ಲ.

IPL 2026: ಐಪಿಎಲ್‌ ಇತಿಹಾಸದಲ್ಲಿ ಮುರಿಯಲಾಗದ ಪಂಜಾಬ್‌ ಕಿಂಗ್ಸ್‌ನ 3 ದೊಡ್ಡ ದಾಖಲೆಗಳು!

"ಇದು ಅತ್ಯಂತ ಆಸಕ್ತದಾಯಕ ಸಂಗತಿ. ಏಲೆಂದರೆ ಎಲ್ಲಾ ಸ್ವರೂಪಗಳಲ್ಲಿ ಪ್ರಭಾವ ಬೀರುವ ಆಟಗಾರ ಅವರು. ಈಗಿನ ಸನ್ನಿವೇಶದಲ್ಲಿ ಅವರ ಬಳಿ ತೋರಿಸಲು ಸಂಖ್ಯೆಗಳು ಇಲ್ಲದಿರಬಹುದು, ಆದರೆ ಅದನ್ನು ಹೊರತುಪಡಿಸಿ, ಅವರು ಈ ಸ್ವರೂಪದಲ್ಲೂ ಬಹಳಷ್ಟು ಬಾಕ್ಸ್‌ಗಳಲ್ಲಿ ಟಿಕ್‌ ಮಾಡಿದ್ದಾರೆ. ಸಮಸ್ಯೆ ಏನೆಂದರೆ, ಅವರನ್ನು ಟೆಸ್ಟ್ ಸಂಖ್ಯೆಗಳೊಂದಿಗೆ ಹೋಲಿಸಲಾಗುತ್ತದೆ. ಟೆಸ್ಟ್‌ನಲ್ಲಿ ಅವರ ಅಂಕಿಗಳು ಅತ್ಯಂತ ಉತ್ತಮವಾಗಿದ್ದು, ಪ್ರಭಾವಶಾಲಿಯಾಗಿದೆ, ಇದರಿಂದ ನೀವು ಅದೇ ಮಟ್ಟದ ಫಲಿತಾಂಶವನ್ನು ನಿರೀಕ್ಷಿಸುತ್ತೀರಿ ಅಥವಾ ಅದಕ್ಕೂ ಹೆಚ್ಚು ಸಾಧಿಸುವ ಸಾಧ್ಯತೆಯನ್ನು ಊಹಿಸುತ್ತೀರಿ," ಎಂದು ಜಹೀರ್‌ ಖಾನ್‌ ತಿಳಿಸಿದ್ದಾರೆ.

ಅವರು ಅತ್ಯಂತ ವೇಗವಾಗಿ 3000 ರನ್ ಗಳಿಸಿದ ಆಟಗಾರ; ಈಗ 10 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ತೊಡಗಿದ್ದಾರೆ. ಐಪಿಎಲ್‌ನಲ್ಲಿ ಅವರು ಬಹಳ ಸಾಧನೆ ಮಾಡಿದ್ದಾರೆ. ಟಿ20ಐಗಳಲ್ಲಿ ಅವರು ಬ್ಯಾಟ್ ಮಾಡುವ ಸ್ಥಾನವನ್ನು ಸ್ಥಿರಗೊಳಿಸಬೇಕಾಗಿದೆ. ಅವರು ಯಾವುದೇ ಸ್ಥಾನದಲ್ಲಿ ಬ್ಯಾಟ್ ಮಾಡಬಹುದಾದರೂ, ಇದರಿಂದ ಕೆಲವೊಮ್ಮೆ ಗೊಂದಲ ಉಂಟಾಗುತ್ತದೆ. ಜೊತೆಗೆ, ತಮ್ಮ ಆಟದ ಶೈಲಿಯಲ್ಲಿಯೇ ಸಮತೋಲನ ಕಂಡುಹಿಡಿಯಲು ಅವರು ಸ್ವಲ್ಪ ಕ್ರಮ ತೆಗೆದುಕೊಳ್ಳಬಹುದು,” ಎಂದು ಸೇರಿಸಿದ್ದಾರೆ.