IPL 2026: ಲಖನೌ ಸೂಪರ್ ಜಯಂಟ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಧಿಕಾರಯುತ ಜಯ!
DC vs LSG Match Highlights: ಟಿ ನಟರಾಜನ್ ಮಾರಕ ದಾಳಿ ಹಾಗೂ ಸಮೀರ್ ರಿಝ್ವಿ ಅವರ ಸ್ಪೋಟಕ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಲಖನೌ ಸೂಪರ್ ಜಯಂಟ್ಸ್ ಎದುರು 6 ವಿಕೆಟ್ ಗೆಲುವು ಸಾಧಿಸಿತು. ಆ ಮೂಲಕ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಕಂಡಿತು.
ಲಖನೌ ಸೂಪರ್ ಜಯಂಟ್ಸ್‌ಗೆ ಪಾಠ ಕಲಿಸಿದ ಡೆಲ್ಲಿ ಕ್ಯಾಪಿಟಲ್ಸ್. -
ಲಖನೌ: ಟಿ ನಟರಾಜನ್ ಮಾರಕ ಬೌಲಿಂಗ್ ಹಾಗೂ ಸಮೀರ್ ರಿಝ್ವಿ(Sameer Rizve) ಅವರ ಸ್ಪೋಟಕ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಎದುರಾಳಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಅಕ್ಷರ್ ಪಟೇಲ್ ನಾಯಕತ್ವದ ಡಿಸಿ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಚೇಸಿಂಗ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಸಮೀರ್ ನಿರ್ಣಾಯಕ 70 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬುಧವಾರ ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ ಐದನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ನೀಡಿದ್ದ 142 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಆರಂಭಿಕ ಆಘಾತ ಅನುಭವಿಸಿದರೂ ಸಮೀರ್ ರಿಝ್ವಿ ಅವರ ಅರ್ಧಶತಕದ ಬಲದಿಂದ 17.1 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 145 ರನ್ ಗಳಿಸಿ 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಆರಂಭಿಕ ನಾಲ್ಕು ವಿಕೆಟ್‌ಗಳನ್ನು ಬಹುಬೇಗ ಕಬಳಿಸಿದರೂ ಲಖನೌ ಸೂಪರ್ ಜಯಂಟ್ಸ್ ತಂಡ, ಮಧ್ಯಮ ಕ್ರಮಾಂಕದಲ್ಲಿ ಸಮೀರ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರನ್ನು ಕಟ್ಟಿ ಹಾಕುವಲ್ಲಿ ವಿಫಲವಾಗಿ ಅಂತಿಮವಾಗಿ ಸೋಲು ಒಪ್ಪಿಕೊಂಡಿತು.
IPL 2026: ಪಂಜಾಬ್ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಜಿ.ಟಿ ಕೋಚ್ ಪಾರ್ಥಿವ್ ಪಟೇಲ್!
ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭಿಕ ಆಘಾತ
142 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸುಲಭವಾಗಿ ಜಯ ದಾಖಲಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಮೊಹಮ್ಮದ್ ಶಮಿ ಮೊಟ್ಟ ಮೊದಲ ಎಸೆತದಲ್ಲಿ ಕೀ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಿತೀಶ್ ರಾಣಾ ಅವರು 15 ರನ್ ಗಳಿಸಿದ ಬಳಿಕ ಮೊಹ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಪಥುಮ್ ನಿಸಾಂಕ ಹಾಗೂ ನಾಯಕ ಅಕ್ಷರ್ ಪಟೇಲ್ ಅವರನ್ನು ಪ್ರಿನ್ಸ್ ಯಾದವ್ ಔಟ್ ಮಾಡಿದರು. ಆ ಮೂಲಕ ಡೆಲ್ಲಿ ಕೇವಲ 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.
A SIX TO SEAL IT! 🙌
— IndianPremierLeague (@IPL) April 1, 2026
Sameer Rizvi does it in style 🥳@DelhiCapitals kick off their #TATAIPL 2026 campaign with a 6️⃣-wicket victory 👏👏
Scorecard ▶️ https://t.co/lfP7dRNKfg#KhelBindaas | #LSGvDC pic.twitter.com/vVPkz5kqzd
ಸಮೀರ್-ಟ್ರಿಸ್ಟನ್ ಸ್ಟಬ್ಸ್ ಜುಗಲ್‌ಬಂದಿ
ಬಹುಬೇಗ 4 ವಿಕೆಟ್ ಕಳೆದುಕೊಂಡ ಡೆಲ್ಲಿ ಸೋಲುವುದು ಬುಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸಮೀರ್ ರಿಝ್ವಿ ಒತ್ತಡವನ್ನು ಮೆಟ್ಟಿ ನಿಂತರು. ಅವರು ಕೊನೆಯವರೆಗೂ ಬ್ಯಾಟ್ ಮಾಡಿ 47 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 70 ರನ್ ಸಿಡಿಸಿದರು ಹಾಗೂ ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್ ನೀಡಿದ್ದ ಟ್ರಿಸ್ಟನ್ ಅವರ ಜೊತೆ 119 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಟ್ರಸ್ಟಿನ್ ಸ್ಟಬ್ಸ್ ಕೂಡ ಸಮಯಕ್ಕೆ ತಕ್ಕಂತೆ ಬ್ಯಾಟ್ ಮಾಡಿದರು. ಅವರು ಆಡಿದ 32 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು. ಇನ್ನು ಈ ಜೋಡಿಯಲ್ಲಿ ಮುರಿಯಲು ಎಲ್‌ಎಸ್‌ಜಿ ಬೌಲರ್‌ಗಳು ಎಷ್ಟೇ ಪ್ರಯತ್ನ ನಡೆಸಿದರೂ ಸಮೀರ್-ಸ್ಟಬ್ಸ್ ಇದಕ್ಕೆ ಅವಕಾಶ ನೀಡಲಿಲ್ಲ.
Personal best in #TATAIPL ✅
— IndianPremierLeague (@IPL) April 1, 2026
Match-winning knock ✅
Player of the match ✅
WHAT A NIGHT FOR SAMEER RIZVI! 🤩
Scorecard ▶️ https://t.co/lfP7dRNKfg#KhelBindaas | #LSGvDC | @delhicapitals pic.twitter.com/LZjWWRRS81
ಈ ವೇಳೆ ಅಬ್ದುಲ್ ಸಮದ್ ಆರನೇ ವಿಕೆಟ್‌ಗೆ ಮುಕುಲ್ ಚೌಧರಿ ಅವರೊಂದಿಗೆ 34 ರನ್‌ಗಳ ಪಾಲುದಾರಿಕೆಯನ್ನು ಆಡಿದರು. ನಂತರ ಶಹಬಾಜ್ ಅಹ್ಮದ್ ಅವರೊಂದಿಗೆ ಏಳನೇ ವಿಕೆಟ್‌ಗೆ 33 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ಸಮದ್ 25 ಎಸೆತಗಳಲ್ಲಿ 36 ರನ್ ಗಳಿಸಿದ ನಂತರ ಪೆವಿಲಿಯನ್‌ಗೆ ಮರಳಿದರು. ಶಹಬಾಜ್ ಅಹ್ಮದ್ 15 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಲುಂಗಿ ಎನ್‌ಗಿಡಿ ಮತ್ತು ಟಿ. ನಟರಾಜನ್ ತಲಾ ಮೂರು ವಿಕೆಟ್ ಪಡೆದರು. ಕುಲ್‌ದೀಪ್ ಯಾದವ್ ಎರಡು ವಿಕೆಟ್ ಪಡೆದರೆ, ನಾಯಕ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು.