ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

14.20 ಕೋಟಿ ರು ಪಡೆಯುವ ಮೂಲಕ ವಿಶೇಷ ದಾಖಲೆ ಬರೆದ ಪ್ರಶಾಂತ್‌ ವೀರ್‌, ಕಾರ್ತಿಕ್‌ ಶರ್ಮಾ!

ಹತ್ತೊಬ್ಬತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಅನ್‌ಕ್ಯಾಪ್ಡ್‌ ಆಟಗಾರರು ದಾಖಲೆಯ ಮೊತ್ತಕ್ಕೆ ಸೋಲ್ಡ್‌ ಆಗಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೇರಿದ ಪ್ರಶಾಂತ್ ವೀರ್‌ ಮತ್ತು ಕಾರ್ತಿಕ್ ಶರ್ಮಾ ವಿಶೇಷ ದಾಖಲೆ ಬರೆದಿದ್ದಾರೆ. ಉಭಯ ಆಟಗಾರರು ತಲಾ 14.20 ಕೋಟಿ ರು.ಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ.

ಅತಿ ಹೆಚ್ಚು ಮೊತ್ತ ಜೇಬಿಗಿಳಿಸಿಕೊಂಡ ಅನ್‌ಕ್ಯಾಪ್ಡ್‌ ಆಟಗಾರರು.

ಅಬುಧಾಬಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026 Mini Auction) ಸೀಸನ್‌-19ರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಅನ್‌ಕ್ಯಾಪ್ಡ್‌ ಆಟಗಾರರಾದ ಪ್ರಶಾಂತ್ ವೀರ್‌ (Prashanth Veer) ಮತ್ತು ಕಾರ್ತಿಕ್ ಶರ್ಮಾ (Kartik Sharma) ದೊಡ್ಡ ಮೊತ್ತಕ್ಕೆ ಮಾರಾಟವಾಗುವ ಮೂಲಕ ಐಪಿಎಲ್‌ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಈ ಇಬ್ಬರೂ ಆಟಗಾರರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿದಂತೆ ಹಲವು ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಎರಡನೇ ಅತಿ ಹೆಚ್ಚು ಮೊತ್ತದೊಂದಿಗೆ ಹರಾಜು ಪ್ರವೇಶಿಸಿದ್ದ ಸಿಎಸ್‌ಕೆ, ಸ್ಪರ್ಧೆಯ ನಡುವೆ ಈ ಇಬ್ಬರೂ ಆಟಗಾರರನ್ನು 14.20 ಕೋಟಿ ರು.ಗಳಿಗೆ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ರಶಾಂತ್‌ ವೀರ್‌ ಮತ್ತು ಕಾರ್ತಿಕ್‌ ಶರ್ಮಾ 30 ಲಕ್ಷ ಮೂಲ ಬೆಲೆ ಹೊಂದಿದ್ದು, ಐಪಿಎಲ್‌ ಇತಿಹಾಸದಲ್ಲಿ 10 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾದ ಮೊದಲ ಅನ್‌ಕ್ಯಾಪ್ಡ್‌ ಆಟಗಾರರು ಎಂದೆನಿಸಿಕೊಂಡಿದ್ದಾರೆ. ಈ ಹಿಂದೆ ಆವೇಶ್‌ ಖಾನ್‌ ಅವರು 2022ರ ಟೂರ್ನಿಯ ಹರಾಜಿನಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪರ 10 ಕೋಟಿ ರು.ಗಳಿಗೆ ಮಾರಾಟವಾಗಿದ್ದರು. ಇದೀಗ ಈ ದಾಖಲೆಯನ್ನು ಈ ಇಬ್ಬರೂ ಆಟಗಾರರು ಹಿಂದಿಕ್ಕಿದ್ದಾರೆ.

IPL Auction 2026 Live: ಕ್ಯಾಮೆರಾನ್‌‌ ಗ್ರೀನ್‌ಗೆ 25.2 ಕೋಟಿ ರು, ಆರ್‌ಸಿಬಿಗೆ ಸೇರಿದ ವೆಂಕಟೇಶ್‌ ಅಯ್ಯರ್‌!

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಅನ್‌ಕ್ಯಾಪ್ಡ್‌ ಆಟಗಾರರು

ಪ್ರಶಾಂತ್ ವೀರ್: 14 ಕೋಟಿ ರು-ಸಿಎಸ್‌ಕೆ, 2026

ಕಾರ್ತಿಕ್ ಶರ್ಮಾ:14 ಕೋಟಿ ರು-ಸಿಎಸ್‌ಕೆ, 2026

ಆವೇಶ್ ಖಾನ್:10 ಕೋಟಿ ರು-ಎಲ್‌ಎಸ್‌ಜಿ, 2022

ಕೆ ಗೌತಮ್: 9.25 ಕೋಟಿ ರು. ಸಿಎಸ್‌ಕೆ, 2021

ಶಾರುಖ್ ಖಾನ್:9 ಕೋಟಿ ರು.-ಜಿಟಿ, 2022

ರಾಹುಲ್ ತೆವಾಟಿಯಾ: 9 ಕೋಟಿ ರು-ಜಿಟಿ, 2022

ಕೃಣಾಲ್ ಪಾಂಡ್ಯ: 8.8 ಕೋಟಿ ರು.-ಎಂಐ, 2018

ಔಕಿಬ್ ನಯಬ್: 8.4 ಕೋಟಿ ರು-ಕೆಕೆಆರ್, 2026

ವರುಣ್ ಚಕ್ರವರ್ತಿ: 8.4 ಕೋಟಿ ರು-ಪಿಬಿಕೆಎಸ್, 2018



ಯುವರಾಜ್‌ ಸಿಂಗ್‌ಗೆ ಅಗ್ರ ಸ್ಥಾನ

ಐಪಿಎಲ್ ಮಿನಿ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಆಟಗಾರರಲ್ಲಿ ಪ್ರಶಾಂತ್ ಮತ್ತು ಕಾರ್ತಿಕ್ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲನೇ ಸ್ಥಾನದಲ್ಲಿ 2015ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 16 ಕೋಟಿ ರು.ಗೆ ಮಾರಾಟವಾಗಿದ್ದ ಯುವರಾಜ್‌ ಸಿಂಗ್‌ ಮೊದಲ ಸ್ಥಾನದಲ್ಲಿದ್ದಾರೆ. ಇದರ ನಡುವೆ ಪ್ರಶಾಂತ್‌ ಕಿಶೋರ್‌ ಮತ್ತು ಕಾರ್ತಿಕ್‌ ಶರ್ಮಾ ಸಿಎಸ್‌ಕೆ ಇತಿಹಾಸದಲ್ಲಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ದುಬಾರಿ ಆಟಗಾರರಾಗಿದ್ದಾರೆ.

Auqib Nabi Dar: ತಮ್ಮ ಮೂಲ ಬೆಲೆಯ 28 ಪಟ್ಟು ಜಾಸ್ತಿ ಮೊತ್ತ ಜೇಬಿಗಿಳಿಸಿಕೊಂಡ ಜಮ್ಮು-ಕಾಶ್ಮೀರ ವೇಗಿ!

ಪ್ರಶಾಂತ್‌ ವೀರ್‌ ಯಾರು?

30 ಲಕ್ಷ ಮೂಲ ಬೆಲೆ ಹೊಂದಿದ್ದ 20 ವರ್ಷದ ಅನ್‌ಕ್ಯಾಪ್ಡ್‌ ಪ್ಲೇಯರ್‌ ಪ್ರಶಾಂತ್‌ ವೀರ್‌ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಆರಂಭದಿಂದಲೂ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಡುವೆ ತೀವ್ರ ಬಿಡ್ಡಿಂಗ್‌ ಪೈಪೋಟಿ ನಡೆಯಿತು. ಎಸ್‌ಆರ್‌ಎಚ್‌ 14 ಕೋಟಿ ರು. ಗಳ ತನಕ ಬಿಡ್‌ ಮಾಡಿತು. ಆದರೆ ಅಂತಿಮವಾಗಿ 14.20 ಕೋಟಿ ರು.ಗಳಿಗೆ ಪ್ರಶಾಂತ್‌ ವೀರ್‌ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು. ಉತ್ತರ ಪ್ರದೇಶ ಮೂಲದ ಪ್ರಶಾಂತ್‌ ವೀರ್‌ ಟಿ20 ಕ್ರಿಕೆಟ್‌ಗೆ 2023ರ ಅಕ್ಟೋಬರ್‌ನಲ್ಲಿ ತಮಿಳುನಾಡು ವಿರುದ್ಧ ಪದಾರ್ಪಣೆ ಮಾಡಿದ್ದರು. ಅವರು ಈವರೆಗೆ ಟಿ20 ಕ್ರಿಕೆಟ್‌ನಲ್ಲಿ 400 ರನ್‌ ಬಾರಿಸಿದ್ದಾರೆ.