ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL Auction 2026 Live: ಕ್ಯಾಮೆರಾನ್‌‌ ಗ್ರೀನ್‌ಗೆ 25.2 ಕೋಟಿ ರು, ಆರ್‌ಸಿಬಿಗೆ ಸೇರಿದ ವೆಂಕಟೇಶ್‌ ಅಯ್ಯರ್‌!

IPL Auction 2026 Live Updates in Kannada: 2026 ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಮಿನಿ ಹರಾಜು ಅಬುಧಾಬಿಯಲ್ಲಿ ಇದೀಗ ನಡೆಯುತ್ತಿದೆ. ಒಟ್ಟು 359 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸ್ಟಾರ್‌ ಆಟಗಾರರು ಅತಿ ಹೆಚ್ಚು ಮೊತ್ತ ಪಡೆಯಬಹುದಾಗಿದೆ. ಅಂದ ಹಾಗೆ ಆಸ್ಟ್ರೇಲಿಯಾ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಅವರು 25.2 ಕೋಟಿ ರು. ಗಳಿಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

IPL Auction 2026 Live: ಕ್ಯಾಮೆರಾನ್‌‌ ಗ್ರೀನ್‌ ಅತ್ಯಂತ ದುಬಾರಿ ಆಟಗಾರ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮಿನಿ ಹರಾಜಿನ ಲೈವ್‌ ಅಪ್‌ಡೇಟ್ಸ್‌! -

Profile
Ramesh Kote Dec 16, 2025 3:37 PM

ಅಬುಧಾಬಿ: 2026 ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಮಿನಿ ಹರಾಜು ಅಬುಧಾಬಿಯಲ್ಲಿ ಇದೀಗ ನಡೆಯುತ್ತಿದೆ. ಒಟ್ಟು 359 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸ್ಟಾರ್‌ ಆಟಗಾರರು ಅತಿ ಹೆಚ್ಚು ಮೊತ್ತ ಪಡೆಯಬಹುದಾಗಿದೆ. ಅಂದ ಹಾಗೆ ಆಸ್ಟ್ರೇಲಿಯಾ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಅವರು 25.2 ಕೋಟಿ ರು. ಗಳಿಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ ಅವರು 7 ಕೋಟಿ ರು. ಗಳಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬಂದಿದ್ದಾರೆ.

Live News
Dec. 16, 2025, 7:07 p.m.

ಸಾತ್ವಿಕ್‌ ದೇಸ್ವಾಲ್‌ ಖರೀದಿಸಿದ ಆರ್‌ಸಿಬಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೂಲ ಬೆಲೆ 30 ಲಕ್ಷ ರು. ಗಳಿಗೆ ಸಾತ್ವಿಕ್‌ ದೇಸ್ವಾಲ್‌ ಅವರನ್ನು ಖರೀದಿಸಿದೆ.

Dec. 16, 2025, 7:05 p.m.

ಡೆಲ್ಲಿ ಸೇರಿದ ನಿಸ್ಸಾಂಕ

ಶ್ರೀಲಂಕಾದ ಸ್ಟಾರ್‌ ಬ್ಯಾಟರ್‌ ಪಾತುಮ್‌ ನಿಸ್ಸಂಕಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ 4 ಕೋಟಿ ರು. ಗಳಿಗೆ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ನಿಸ್ಸಂಕಾ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ.

Dec. 16, 2025, 7:02 p.m.

ಗುಜರಾತ್‌ ಟೈಟಾನ್ಸ್‌ ತಂಡ ಸೇರಿದ ಜೇಸನ್‌ ಹೋಲ್ಡರ್

ವೆಸ್ಟ್‌ ಇಂಡೀಸ್‌ ತಂಡದ ಆಟಗಾರ ಜೇಸನ್‌ ಹೋಲ್ಡರ್‌ 7 ಕೋಟಿ ರು.ಗಳಿಗೆ ಗುಜರಾತ್‌ ಟೈಟಾನ್ಸ್‌ ತಂಡ ಸೇರಿಕೊಂಡಿದ್ದಾರೆ.

Dec. 16, 2025, 7 p.m.

ರಾಜಸ್ಥಾನ್‌ ರಾಯಲ್ಸ್‌ ತಂಡ ಸೇರಿದ ವಿಘ್ನೇಶ್‌

ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದ ಸ್ಪಿನ್ನರ್‌ ವಿಘ್ನೇಶ್‌ ಪುತ್ತೂರ್‌ ಅವರು ಮೂಲ ಬೆಲೆ 30 ಲಕ್ಷ ರು.ಗಳಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡದ ಪಾಲಾಗಿದ್ದಾರೆ.

Dec. 16, 2025, 5:41 p.m.

ಲಖನೌಗೆ ಸೇರಿದ ನಮನ್‌ ತಿವಾರಿ

ನಮನ್‌ ತಿವಾರಿ ಅವರು ಒಂದು ಕೋಟಿ ರು. ಗಳಿಗೆ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Dec. 16, 2025, 5:41 p.m.

ರಾಜಸ್ಥಾನ್‌ ರಾಯಲ್ಸ್‌ಗೆ ಸುಶಾಂತ್‌ ಮಿಶ್ರಾ

90 ಲಕ್ಷ ರು. ಪಡೆಯುವ ಮೂಲಕ ಸುಶಾಂತ್‌ ಮಿಶ್ರಾ ರಾಜಸ್ಥಾನ್‌ ರಾಯಲ್ಸ್‌ಗೆ ಸೇರ್ಪಡೆಯಾಗಿದ್ದಾರೆ.

Dec. 16, 2025, 5:41 p.m.

ಆರ್‌ಆರ್‌ಗೆ ಯಶ್‌ ರಾಜ್‌ ಪೂನಿಯಾ

30 ಲಕ್ಷ ರು ಪಡೆಯುವ ಮೂಲಕ ಯಶ್‌ ರಾಜ್‌ ಪೂನಿಯಾ ಅವರು ರಾಜಸ್ಥಾನ್‌ ರಾಯಲ್ಸ್‌ ಸೇರಿದ್ದಾರೆ.

Dec. 16, 2025, 5:41 p.m.

ಕೆಕೆಆರ್‌ಗೆ ಪ್ರಶಾಂತ್‌ ಸೋಲಂಕಿ

ಪ್ರಶಾಂತ್‌ ಸೋಲಂಕಿ ಅವರು 30 ಲಕ್ಷ ರು ಪಡೆಯುವ ಮೂಲಕ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಬಂದಿದ್ದಾರೆ.

Dec. 16, 2025, 5:41 p.m.

ಆರ್‌ಆರ್‌ಗೆ ವಿಘ್ನೇಶ್‌ ಪುತ್ತೂರು

ಮೂಲ ಬೆಲೆ 30 ಲಕ್ಷ ರು. ಗಳಿಗೆ ವಿಘ್ನೇಶ್‌ ಪುತ್ತೂರು ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Dec. 16, 2025, 5:35 p.m.

90 ಲಕ್ಷ ರು ಗುಜರಾತ್‌ ಸೇರಿದ ಅಶೋಕ್‌ ಶರ್ಮಾ

2026ರ ಐಪಿಎಲ್‌ ಮಿನಿ ಹರಾಜಿನಲ್ಲಿ ಅಶೋಕ್‌ ಶರ್ಮಾ ಅವರನ್ನು ಗುಜರಾತ್‌ ಟೈಟನ್ಸ್‌ ತಂಡ 90 ಲಕ್ಷ ರು.ಗಳಿಗೆ ಖರೀದಿಸಿದೆ.

Dec. 16, 2025, 5:35 p.m.

ಕೆಕೆಆರ್‌ಗೆ ಕಾರ್ತಿಕ್‌ ತ್ಯಾಗಿ

ಯುವ ವೇಗದ ಬೌಲರ್‌ ಕಾರ್ತಿಕ್‌ ತ್ಯಾಗಿ ಅವರು 30 ಲಕ್ಷ ರು. ಗಳಿಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರಿದ್ದಾರೆ.

Dec. 16, 2025, 5:24 p.m.

ಲಖನೌಗೆ ಸೇರಿದ ಮುಕುಲ್‌ ಚೌಧರಿ

ಮುಕುಲ್‌ ಚೌಧರಿ ಅವರು 2.60 ಕೋಟಿ ರು. ಗಳಿಗೆ ಲಖನೌ ಸೂಪರ್‌ ಜಯಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Dec. 16, 2025, 5:24 p.m.

ಕೆಕೆಆರ್‌ಗೆ ಸೇರಿದ ತೇಜಸ್ವಿ ಸಿಂಗ್‌

ತೇಜಸ್ವಿ ಸಿಂಗ್‌ ಅವರು ಮಿನಿ ಹರಾಜಿನಲ್ಲಿ 3 ಕೋಟಿ ರು. ಗಳನ್ನು ಪಡೆಯುವ ಮೂಲಕ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರಿದ್ದಾರೆ.

Dec. 16, 2025, 5:22 p.m.

ಎಸ್‌ಆರ್‌ಎಚ್‌ ಸೇರಿದ ಶಿವಾಂಗ್‌ ಕುಮಾರ್‌

30 ಲಕ್ಷ ರು. ಪಡೆಯುವ ಮೂಲಕ ಶಿವಾಂಗ್‌ ಕುಮಾರ್‌ ಅವರು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Dec. 16, 2025, 5:22 p.m.

14.20 ಕೋಟಿ ರು ಪಡೆದ ಕಾರ್ತಿಕ್‌ ಶರ್ಮಾ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಅನ್‌ಕ್ಯಾಪ್ಡ್‌ ಆಟಗಾರ ಕಾರ್ತಿಕ್‌ ಶರ್ಮಾ ಅವರನ್ನು 14.20 ಕೋಟಿ ರು. ಗಳಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

Dec. 16, 2025, 5:01 p.m.

ದಾಖಲೆಯ ಮೊತ್ತಕ್ಕೆ ಸಿಎಸ್‌ಕೆಗೆ ಸೇರಿದ ಪ್ರಶಾಂತ್‌ ವೀರ್‌

ದೇಶಿ ಕ್ರಿಕೆಟ್‌ನ ಅಪ್ಪಟ ಪ್ರತಿಭೆ ಪ್ರಶಾಂತ್‌ ವೀರ್‌ ಅವರು, 2026ರ ಐಪಿಎಲ್‌ ಮಿನಿ ಹರಾಜಿನಲ್ಲಿ 14.20 ಕೋಟಿ ರು. ಗಳಿಗೆ ಚೆನ್ನೂ ಸೂಪರ್‌ ಕಿಂಗ್ಸ್‌ಗೆ ಸೇರಿದ್ದಾರೆ. ಪ್ರಸಕ್ತ ಆವೃತ್ತಿಯ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಅನ್‌ಸೋಲ್ಡ್‌ ಆಟಗಾರ ಎಂಬ ದಾಖಲೆಯನ್ನು ಪ್ರಶಾಂತ್‌ ವೀರ್‌ ಬರೆದಿದ್ದಾರೆ.

Dec. 16, 2025, 4:59 p.m.

ಡೆಲ್ಲಿಗೆ ಆಕಿಬ್‌ ದಾರ್‌

ದೇಶಿ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ ಆಗಿ ಗಮನ ಸೆಳೆದಿದ್ದ ಆಕಿಬ್‌ ದಾರ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ 8.4 ಕೋಟಿ ರು ಗಳಿಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.

Dec. 16, 2025, 4:56 p.m.

ವಿಜಯ್‌ ಶಂಕರ್‌ ಅನ್‌ಸೋಲ್ಡ್

ಕಳೆದ ಸೀಸನ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡಿದ್ದ ವಿಜಯ್‌ ಶಂಕರ್‌, ಆರ್‌ಎಸ್‌ ಹಂಗರ್ಗೇಕರ್, ಮಹಿಪಾಲ್‌ ಲೊಮ್ರೊರ್‌ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಲಿಲ್ಲ.

Dec. 16, 2025, 4:53 p.m.

ಇಲ್ಲಿಯವರೆಗೆ ದುಬಾರಿ ಮೊತ್ತಕ್ಕೆ ಮಾರಾಟವಾದ ಆಟಗಾರರು

ಕ್ಯಾಮೆರಾನ್ ಗ್ರೀನ್ – 25.20 ಕೋಟಿ ರು, ಕೆಕೆಆರ್

ಮತೀಶ ಪತಿರಣ – 18 ಕೋಟಿ ರು, ಕೆಕೆಆರ್

ರವಿ ಬಿಷ್ಣೋಯ್ – 7.20 ಕೋಟಿ ರು, ರಾಜಸ್ಥಾನ್ ರಾಯಲ್ಸ್

ವೆಂಕಟೇಶ್ ಅಯ್ಯರ್ – 7 ಕೋಟಿ ರು, ಆರ್‌ಸಿಬಿ

Dec. 16, 2025, 4:49 p.m.

ಸಿಎಸ್‌ಕೆ ತೆಕ್ಕೆಗೆ ಅಕೀಲ್‌ ಹೊಸೇನ್‌

ಬಾಂಗ್ಲಾದೇಶ ತಂಡದ ಆಟಗಾರ ಅಕೀಲ್‌ ಹೊಸೇನ್‌ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 2 ಕೋಟಿ ರು. ಗಳಿಗೆ ಖರೀದಿಸಿದೆ.

Dec. 16, 2025, 4:16 p.m.

ಲಖನೌ ಸೇರಿದ ಎನ್ರಿಕ್‌ ನೊರ್ಕಿಯಾ

ದಕ್ಷಿಣ ಆಫ್ರಿಕಾ ವೇಗಿ ಎನ್ರಿಕ್‌ ನೊರ್ಕಿಯಾ ಅವರನ್ನು ಮೂಲ ಬೆಲೆ 2 ಕೋಟಿ ರು. ಗಳಿಗೆ ಲಖನೌ ಸೂಪರ್‌ ಜಯಂಟ್ಸ್‌ ತಂಡ ಖರೀದಿಸಿದೆ.

Dec. 16, 2025, 4:15 p.m.

ರಾಜಸ್ಥಾನ್‌ ರಾಯಲ್ಸ್‌‌ ತಂಡದ ಪಾಲಾದ ರವಿ ಬಿಷ್ಣೋಯ್

ಮೂಲ ಬೆಲೆ 2 ಕೋಟಿ ರು. ಗಳಿಗೆ ಮಿನಿ ಹರಾಜಿಗೆ ಪ್ರವೇಶಿಸಿದ್ದ ಸ್ಪಿನ್ನರ್‌ ರವಿ ಬಿಷ್ಣೋಯ್‌ ಅವರು 7.70 ಕೋಟಿ ರು. ಗಳಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡದ ಪಾಲಾಗಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರಾಜಸ್ಥಾನ್‌ ನಡುವೆ ತೀವ್ರ ಬಿಡ್ಡಿಂಗ್‌ ಪೈಪೋಟಿ ನಡೆಯಿತು. ಅಂತಿಮವಾಗಿ ಆರ್‌ಆರ್‌ ಲೆಗ್‌ ಸ್ಪಿನ್ನರ್‌ ಅನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.

Dec. 16, 2025, 4:03 p.m.

ಕೆಕೆಆರ್‌ಗೆ ಸೇರಿದ ಮತೀಶ ಪತಿರಣ

ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ವೇಗಿ ಹಾಗೂ ಶ್ರೀಲಂಕಾ ತಂಡದ ಯಾರ್ಕರ್‌ ಕಿಂಗ್‌ ಮತೀಶ್‌ ಪತಿರಣ ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಅವರನ್ನು 18 ಕೋಟಿ ರು.ಗಳಿಗೆ ಕೆಕೆಆರ್‌ ಖರೀದಿಸಿದೆ.

Dec. 16, 2025, 4:02 p.m.

ಆರ್‌ಸಿಬಿಗೆ ಸೇರಿದ ಜಾಕೋಬ್‌ ಡಫಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೂಲ ಬೆಲೆ ಎರಡು ಕೋಟಿ ರು. ಗಳಿಗೆ ಜಾಕೋವ್‌ ಡಫಿ ಅವರನ್ನು ಖರೀದಿಸಿದೆ.

Dec. 16, 2025, 3:57 p.m.

ಕೆಕೆಆರ್‌ಗೆ ಸೇರಿದ ಫಿನ್‌ ಆಲೆನ್‌

ನ್ಯೂಜಿಲೆಂಡ್‌ ತಂಡದ ಆಟಗಾರ ಫಿನ್‌ ಆಲೆನ್‌ ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡ 2 ಕೋಟಿ ರು. ಗಳಿಗೆ ಖರೀದಿಸುವಲ್ಲಿ ಸಫಲವಾಗಿದೆ.

Dec. 16, 2025, 3:56 p.m.

ಮುಂಬೈ ಇಂಡಿಯನ್ಸ್‌ ತೆಕ್ಕೆಗೆ ಕ್ವಿಂಟನ್‌ ಡಿ ಕಾಕ್‌

ದಕ್ಷಿಣ ಆಫ್ರಿಕಾ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಅವರನ್ನು ಮೂಲ ಬೆಲೆ ಒಂದು ಕೋಟಿ ರು. ಗಳಿಗೆ ಖರೀದಿಸುವಲ್ಲಿ ಮುಂಬೈ ಇಂಡಿಯನ್ಸ್‌ ಯಶಸ್ವಿಯಾಯಿತು.

Dec. 16, 2025, 3:56 p.m.

ಬೆನ್‌ ಡಕೆಟ್‌ಗೆ 2 ಕೋಟಿ ರು

ಇಂಗ್ಲೆಂಡ್‌ ತಂಡದ ಸ್ಟಾರ್‌ ಆಟಗಾರ ಬೆನ್‌ ಡಕೆಟ್‌ ಅವರು ಎರಡು ಕೋಟಿ ರು. ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Dec. 16, 2025, 3:52 p.m. Profile Ramesh Kote

ಲಖನೌಗೆ ಸೇರಿದ ವಾನಿಂದು ಹಸರಂಗ

ಶ್ರೀಲಂಕಾ ತಂಡದ ಸ್ಪಿನ್‌ ಆಲ್‌ರೌಂಡರ್‌ ವಾನಿಂದು ಹಸರಂಗ ಅವರನ್ನು ಮೂಲ ಬೆಲೆ 2 ಕೋಟಿ ರು. ಗಳಿಗೆ ಲಖನೌ ಸೂಪರ್‌ ಜಯಟ್ಸ್‌ ತಂಡ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಸೀಸನ್‌ನಲ್ಲಿ ಹಸರಂಗ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಆಡಿದ್ದರು.

Dec. 16, 2025, 3:49 p.m.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ ಡೇವಿಡ್‌ ಮಿಲ್ಲರ್‌

ದಕ್ಷಿಣ ಆಫ್ರಿಕಾ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಹಾಗೂ ಮ್ಯಾಚ್‌ ಫಿನಿಷರ್‌ ಆಗಿರುವ ಡೇವಿಡ್‌ ಮಿಲ್ಲರ್‌ ಅವರು ಮೂಲ ಬೆಲೆ 2 ಕೋಟಿ ರು. ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

Dec. 16, 2025, 3:46 p.m.

ಡೆವೋನ್‌ ಕಾನ್ವೇ ಅನ್‌ ಸೋಲ್ಡ್‌

ಕಳೆದ ಸೀಸನ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡಿದ್ದ ನ್ಯೂಜಿಲೆಂಡ್‌ ತಂಡದ ಆರಂಭಿಕ ಡೆವೋನ್ ಕಾನ್ವೇ ಅವರು ಮೊದಲ ಸುತ್ತಿನಲ್ಲಿ ಅನ್‌ಸೋಲ್ಡ್‌ ಆಗಿದ್ದಾರೆ. 2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಿದ್ದ ಕಾನ್ವೇ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದಾಗಿಲ್ಲ.

Dec. 16, 2025, 3:43 p.m.

ಆರ್‌ಸಿಬಿ ತೆಕ್ಕೆಗೆ ವೆಂಕಟೇಶ್‌ ಅಯ್ಯರ್‌

ಕಳೆದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪರ ಆಡಿದ್ದ ವೆಂಕಟೇಶ್‌ ಅಯ್ಯರ್‌ ಅವರನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಂದಿದ್ದಾರೆ. ಬೆಂಗಳೂರು ಫ್ರಾಂಚೈಸಿ 7 ಕೋಟಿ ರು. ಗಳಿಗೆ ಖರೀದಿಸುವಲ್ಲಿ ಸಫಲವಾಗಿದೆ.

Dec. 16, 2025, 3:37 p.m.

25.2 ಕೋಟಿ ರು. ಗಳಿಗೆ ಕೆಕೆಆರ್‌ ಸೇರಿದ ಕ್ಯಾಮೆರಾನ್‌‌ ಗ್ರೀನ್‌

ಆಸ್ಟ್ರೇಲಿಯಾ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಬರೋಬ್ಬರಿ 25.20 ಕೋಟಿ ರುಗಳಿಗೆ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಸೇರಿಕೊಂಡಿದ್ದಾರೆ. ಆರಂಭದಿಂದಲೂ ರಾಜಸ್ಥಾನ್‌ ರಾಯಲ್ಸ್‌ ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್‌ ನಡುವೆ ಬಿಡ್ಡಿಂಗ್‌ ಪೈಪೋಟಿ ನಡೆಯಿತು. ಕೊನೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹಾಗೂ ಕೆಕೆಆರ್‌ ನಡವೆ ತೀವ್ರ ಬಿಡ್ಡಿಂಗ್‌ ನಡೆದು ಅಂತಿಮವಾಗಿ ಗ್ರೀನ್‌ ಅವರನ್ನು ಕೊಂಡುಕೊಳ್ಳುವಲ್ಲಿ ಕೆಕೆಆರ್‌ ತಂಡ ಯಶಸ್ವಿಯಾಯಿತು.