ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರ ಐಪಿಎಲ್‌ ಟೂರ್ನಿಗೆ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ರದ್ದು? ಆ 31 ಕೊನೆಯ ದಿನಾಂಕ!

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವಿವಾದಿತ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಬಿಸಿಸಿಐ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಿಂದ ಅಧಿಕೃತವಾಗಿ ಅಭಿಪ್ರಾಯ ಹಾಗೂ ಪ್ರತಿಕ್ರಿಯೆಗಳನ್ನು ಕೇಳಿದೆ. ತಂಡಗಳ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಬಿಸಿಸಿಐ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

2027ರ ಐಪಿಎಲ್‌ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಬಗ್ಗೆ ಬಿಸಿಸಿಐ ಪರಿಷ್ಕರಣೆ.

ನವದೆಹಲಿ: ಮುಂದಿನ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ನಿಮಿತ್ತ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ. ಈ ನಿಯಮದ ಕುರಿತು ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಿಂದ ಬಿಸಿಸಿಐ ಹೊಸದಾಗಿ ಅಭಿಪ್ರಾಯಗಳನ್ನು ಕೇಳಿದೆ. 2026ರ ಐಪಿಎಲ್‌ ಮುಗಿದ ಬಳಿಕ ವಿವಾದಾತ್ಮಕವಾಗಿರುವ ಈ ನಿಯಮವನ್ನು ಪರಿಶೀಲಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ ಕೆಲ ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಕ್ರಿಕೆಟ್‌ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಅಭಿಪ್ರಾಯ ಸಂಗ್ರಹಿಸುವ ಭಾಗವಾಗಿ, ಫ್ರಾಂಚೈಸಿಗಳು ಆಗಸ್ಟ್ 31 ಸೋಮವಾರದೊಳಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಕ್ರಿಕ್‌ಬಝ್‌ ವರದಿ ಮಾಡಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಜತೆಗೆ ಪಿಎಂಒಎ, ಅಂಪೈರಿಂಗ್, ಅಭ್ಯಾಸ ಅವಧಿಗಳು ಹಾಗೂ ಆಟದ ಪರಿಸ್ಥಿತಿಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಬಿಸಿಸಿಐ, ತಂಡಗಳಿಂದ ಸಲಹೆಗಳನ್ನು ಕೇಳಿದೆ. ಆದರೆ ಈ ಎಲ್ಲದರ ಪೈಕಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವೇ ಪ್ರಮುಖ ಚರ್ಚೆಯ ವಿಷಯವಾಗಿ ಉಳಿದಿದೆ.

ಇತ್ತೀಚಿನ ಐಪಿಎಲ್‌ ಋತುಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಪ್ರಮುಖ ಚರ್ಚೆಯ ವಿಷಯವಾಗಿದೆ. ವಿಶೇಷವಾಗಿ 2026ರ ಐಪಿಎಲ್‌ ಟೂರ್ನಿಯಲ್ಲಿ 200ಕ್ಕೂ ಹೆಚ್ಚಿನ ರನ್‌ಗಳ ಪಂದ್ಯಗಳು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ, ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನದ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

ENG vs PAK: ಲಾರ್ಡ್ಸ್‌ ಟೆಸ್ಟ್‌ನಲ್ಲಿಯೂ ಪಾಕ್‌ಗೆ ಮುಖಭಂಗ, ಟೆಸ್ಟ್‌ ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್‌!

ಈ ಕುರಿತು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ, “2026ರ ಐಪಿಎಲ್‌ ನಾಯಕರುಗಳ ಸಭೆಯಲ್ಲಿ ಚರ್ಚಿಸಿದಂತೆ, ಟೂರ್ನಿ ಮುಕ್ತಾಯದ ಬಳಿಕ ಪ್ರಮುಖ ಕ್ರಿಕೆಟ್ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಎಲ್ಲಾ ಫ್ರಾಂಚೈಸಿಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ಒಪ್ಪಿಗೆ ನೀಡಲಾಗಿತ್ತು” ಎಂದು ತಿಳಿಸಿದೆ.

ಹಿಂದಿನ ಸಭೆಯಲ್ಲಿ ಹಲವು ತಂಡಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದರೂ, ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮತ್ತೊಂದು ಋತುವಿನವರೆಗೆ ಮುಂದುವರಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಈ ಹಿಂದೆ ಸೂಚಿಸಿತ್ತು.

ಭಾರತದ ಪ್ರಮುಖ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಈ ನಿಯಮದಿಂದ ಬೌಲರ್‌ಗಳ ಪಾತ್ರ ಹಾಗೂ ಟಿ20 ಕ್ರಿಕೆಟ್‌ನ ಸಮತೋಲನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಪ್ರಶ್ನಿಸಿದ್ದರು. ಆದರೆ ಮೇ ತಿಂಗಳಲ್ಲಿ ಸೈಕಿಯಾ ಈ ನಿಯಮವನ್ನು ಸಮರ್ಥಿಸಿಕೊಂಡಿದ್ದರು. ಟೂರ್ನಿಯಲ್ಲಿ ವಿವಿಧ ರೀತಿಯ ಫಲಿತಾಂಶಗಳು ಕಂಡುಬಂದಿರುವುದನ್ನು ಅವರು ಉಲ್ಲೇಖಿಸಿದ್ದರು.

Women's Asia Cup: ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ದೀಪ್ತಿ ಶರ್ಮಾ!

“ಕೆಲವು ಕಡಿಮೆ ಮೊತ್ತದ ಪಂದ್ಯಗಳೂ ನಡೆದಿವೆ. ಎಲ್ಲಾ ಅಭಿಮಾನಿಗಳು ಪಂದ್ಯಗಳನ್ನು ಆನಂದಿಸುತ್ತಿದ್ದಾರೆ. ಬೌಲರ್‌ಗಳಿಗೂ ಉತ್ತಮ ವಿಕೆಟ್‌ಗಳು ಸಿಗುತ್ತಿವೆ. ಎಲ್ಲವೂ ನಡೆಯುತ್ತಿದೆ; ಒಂದೇ ಪ್ಯಾಕೇಜ್‌ನಲ್ಲಿ ಸಂಪೂರ್ಣ ವೈವಿಧ್ಯವಿದೆ,” ಎಂದು ಅವರು ಹೇಳಿದ್ದರು.

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಚರ್ಚೆ ಮತ್ತಷ್ಟು ತೀವ್ರ

ಇದೀಗ ಮತ್ತೊಂದು ಪೂರ್ಣ ಋತುವಿನಲ್ಲಿ ನಿಯಮ ಜಾರಿಯಾದ ಬಳಿಕ ಫ್ರಾಂಚೈಸಿಗಳು ಇದರ ಬಗ್ಗೆ ಏನು ಯೋಚಿಸುತ್ತಿವೆ ಎಂಬುದರ ಕುರಿತು ಬಿಸಿಸಿಐಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ. ಪಟ್ಟಿಯಲ್ಲಿರುವ ವಿಷಯಗಳನ್ನು ತಮ್ಮ ಕ್ರಿಕೆಟ್ ಕಾರ್ಯಾಚರಣೆ ವಿಭಾಗಗಳೊಂದಿಗೆ ಚರ್ಚಿಸಿ, ಆಗಸ್ಟ್ 31ರೊಳಗೆ ತಮ್ಮ-ತಮ್ಮ ಅಭಿಪ್ರಾಯವನ್ನು ಸಲ್ಲಿಸುವಂತೆ ಬಿಸಿಸಿಐ. ಎಲ್ಲಾ ಫ್ರಾಂಚೈಸಿಗಳಿಗೆ ಸೂಚಿಸಿದೆ. ಈ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ ಬಳಿಕ, 2027ಕ್ಕೂ ಮುನ್ನ ನಿಯಮದಲ್ಲಿ ಯಾವುದೇ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ಬಿಸಿಸಿಐ ನಿರ್ಧರಿಸಲಿದೆ.