ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ENG vs PAK: ಲಾರ್ಡ್ಸ್‌ ಟೆಸ್ಟ್‌ನಲ್ಲಿಯೂ ಪಾಕ್‌ಗೆ ಮುಖಭಂಗ, ಟೆಸ್ಟ್‌ ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್‌!

ENG vs PAK 2nd Test Highlights: ಓಲ್ಲಿ ರಾಬಿನ್ಸನ್‌ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಇಂಗ್ಲೆಂಡ್‌ ತಂಡ, ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಇಂಗ್ಲೆಂಡ್‌ ತಂಡ, ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಆಂಗ್ಲರು ವಶಪಡಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ಎದುರು ಲಾರ್ಡ್ಸ್‌ ಟೆಸ್ಟ್‌ನಲ್ಲಿ ಪಾಕಿಸ್ತಾನಕ್ಕೆ ಮುಖಭಂಗ!

ಇಂಗ್ಲೆಂಡ್‌ ವಿರುದ್ಧ ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲು. -

Profile
Ramesh Kote Aug 31, 2026 2:38 PM

ಲಂಡನ್‌: ಓಲ್ಲಿ ರಾಬಿನ್ಸನ್‌ (Ollie Robinson) ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಇಂಗ್ಲೆಂಡ್‌ ತಂಡ, ಪಾಕಿಸ್ತಾನ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ (ENG vs PAK) 194 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಜೋ ರೂಟ್‌ ನಾಯಕತ್ವದ ಇಂಗ್ಲೆಂಡ್‌ ತಂಡ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಬಾಬರ್‌ ಆಝಮ್‌ ತಂಡಕ್ಕೆ ಮರಳಿದ ಹೊರತಾಗಿಯೂ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಪಾಕಿಸ್ತಾನ ತಂಡ ಮತ್ತೊಮ್ಮೆ ಇಂಗ್ಲೆಂಡ್‌ ಬೌಲರ್‌ಗಳ ಎದುರು ಮಕಾಡೆ ಮಲಗಿದರು. ಇದರ ಪರಿಣಾಮ ಪಾಕ್‌ ಟೆಸ್ಟ್‌ ಸರಣಿಯನ್ನು ಕಳೆದುಕೊಳ್ಳಬೇಕಾಯಿತು.

ಕ್ರಿಕೆಟ್‌ ಕಾಶಿ ಲಾರ್ಡ್ಸ್‌ ಅಂಗಣದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ 389 ರನ್‌ಗಳ ಬೃಹತ್‌ ಮೊತ್ತವನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ, ದ್ವಿತೀಯ ಇನಿಂಗ್ಸ್‌ನಲ್ಲಿಯೂ ಮಕಾಡೆ ಮಲಗಿತು. ಓಲ್ಲಿ ರಾಬಿನ್ಸನ್‌ ಹಾಗೂ ಜಾಶ್‌ ಟಂಗ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ಪಾಕಿಸ್ತಾನ ತಂಡ, 50.5 ಓವರ್‌ಗಳಿಗೆ 194 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 194 ರನ್‌ಳಿಂದ ಸೋತು ಟೆಸ್ಟ್‌ ಸರಣಿಯನ್ನು ಕಳೆದುಕೊಂಡಿತು.

92 ರನ್‌ಗೆ ವಿಕೆಟ್‌ ಒಪ್ಪಿಸಿದರೂ 57 ವರ್ಷಗಳ ಹಳೆಯ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

ಪಾಕ್‌ ಪರ ಸೌದ್‌ ಶಕೀಲ್‌ 97 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ಇಂಗ್ಲೆಂಡ್‌ ಬೌಲರ್‌ಗಳ ಎದುರು ಪುಟಿದೇಳುವಲ್ಲಿ ವಿಫಲರಾದರು. ಶಾನ್‌ ಮಸೂದ್‌ 26 ರನ್‌ ಗಳಿಸಿದರು. ಇಂಗ್ಲೆಂಡ್‌ ಪರ ಓಲ್ಲಿ ರಾಬಿನ್ಸನ್‌ ಅವರು 4 ವಿಕೆಟ್‌ ಕಿತ್ತರೆ, ಜಾಶ್‌ ಟಂಗ್‌ 3 ವಿಕೆಟ್‌ ಕಬಳಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿ ಪ್ರಥಮ ಇನಿಂಗ್ಸ್‌ನಲ್ಲಿ 290 ರನ್‌ಗಳನ್ನು ಕಲೆ ಹಾಕಿದ್ದ ಇಂಗ್ಲೆಂಡ್‌ ತಂಡ, ಎದುರಾಳಿ ಪಾಕಿಸ್ತಾನ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 110 ರನ್‌ಗಳಿಗೆ ಆಲ್‌ಔಟ್‌ ಮಾಡಿತು. ಈ ಇನಿಂಗ್ಸ್‌ನಲ್ಲಿಯೂ ಓಲ್ಲಿ ರಾಬಿನ್ಸನ್‌ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಕೇವಲ 11 ರನ್‌ 4 ವಿಕೆಟ್‌ ಕಿತ್ತಿದ್ದರು. ಇದರ ಫಲವಾಗಿ ಇಂಗ್ಲೆಂಡ್‌ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 190 ರನ್‌ಗಳ ದೊಡ್ಡ ಮುನ್ನಡೆ ಪಡೆದಿದ್ದು ಆತಿಥೇಯರಿಗೆ ಲಾಭವಾಯಿತು.

ಇಮ್ರಾನ್‌ ಖಾನ್‌ರ ಜೈಲು ಶಿಕ್ಷೆ ಬಗ್ಗೆ ಮಾತನಾಡಿದರೆ ಹುಷಾರ್‌! ಪಾಕ್‌ ಆಟಗಾರರಿಗೆ ಪಿಸಿಬಿ ವಾರ್ನಿಂಗ್‌!

ಬಳಿಕ ದ್ವಿತೀಯ ಇನಿಂಗ್ಸ್‌ ಮಾಡಿದ್ದ ಇಂಗ್ಲೆಂಡ್‌ ತಂಡ, ಮೊಹಮ್ಮದ್‌ ಅಬ್ಬಾಸ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 208 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆಯ ಸಹಾಯದಿಂದ ಎದುರಾಳಿ ಪಾಕಿಸ್ತಾನ ತಂಡಕ್ಕೆ 389 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ, ಪಂದ್ಯದ ನಾಲ್ಕನೇ ದಿನವೇ ಪಾಕಿಸ್ತಾನ ತಂಡ ಕೇವಲ 194 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಓಲ್ಲಿ ರಾಬಿನ್ಸನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದ ಓಲ್ಲಿ ರಾಬಿನ್ಸನ್‌ ಅವರು ಎರಡು ಇನಿಂಗ್ಸ್‌ಗಳಿಂದ 27 ಓವರ್‌ಗಳನ್ನು ಬೌಲ್‌ ಮಾಡಿ ಕೇವಲ 35 ರನ್‌ಗಳನ್ನು ನೀಡಿ 8 ವಿಕೆಟ್‌ಗಳನ್ನು ಕಬಳಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿರಾಟ್‌ ಕೊಹ್ಲಿ ಅಲ್ಲವೇ ಅಲ್ಲ! ಭಾರತ ತಂಡದಲ್ಲಿ ಸ್ಲೆಡ್ಜಿಂಗ್‌ ಶುರು ಮಾಡಿದ್ದು ಯಾರೆಂದು ತಿಳಿಸಿದ ದೀಪ್‌ ದಾಸ್‌ಗುಪ್ತಾ!

ಪಾಕಿಸ್ತಾನಕ್ಕೆ 154 ಟೆಸ್ಟ್‌ ಪಂದ್ಯಗಳ ಸೋಲು

ಪಾಕಿಸ್ತಾನ ಕ್ರಿಕೆಟ್ ತಂಡ ಇಲ್ಲಿಯವರೆಗೆ 473 ಟೆಸ್ಟ್ ಪಂದ್ಯಗಳನ್ನು ಆಡಿದೆ. ತಂಡ 153 ಗೆಲುವುಗಳು ಮತ್ತು 154 ಸೋಲುಗಳನ್ನು ದಾಖಲಿಸಿದೆ, ಆದರೆ 166 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. 1987 ರ ನಂತರ ಪಾಕಿಸ್ತಾನ ಗೆಲುವುಗಳಿಗಿಂತ ಹೆಚ್ಚು ಟೆಸ್ಟ್ ಸೋಲುಗಳನ್ನು ಕಂಡಿರುವುದು ಇದೇ ಮೊದಲು. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಪ್ರದರ್ಶನವು ಗಮನಾರ್ಹ ಕುಸಿತವನ್ನು ಕಂಡಿದೆ; ತಂಡವು ತನ್ನ ಕೊನೆಯ 11 ವಿದೇಶ ಟೆಸ್ಟ್ ಪಂದ್ಯಗಳಲ್ಲಿ 10 ಸೋಲುಗಳನ್ನು ಅನುಭವಿಸಿದೆ.