Women's Asia Cup: ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ದೀಪ್ತಿ ಶರ್ಮಾ!
ಮಹಿಳಾ ಟಿ0ಐ ಕ್ರಿಕೆಟ್‌ನಲ್ಲಿ ಭಾರತ ತಂಡದ ಸ್ಪಿನ್ ಆಲ್‌ರೌಂಡರ್ ದೀಪ್ತಿ ಶರ್ಮಾ ನೂತನ ದಾಖಲೆಯನ್ನು ಬರೆದಿದ್ದಾರೆ. ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ದೀಪ್ತಿ ಶರ್ಮಾ, ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ದೀಪ್ತಿ ಶರ್ಮಾ. -
ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ ಆಲ್‌ರೌಂಡರ್ ದೀಪ್ತಿ ಶರ್ಮಾ (Deepti Sharma) ಥಾಯ್ಲೆಂಡ್ ವಿರುದ್ಧದ ಏಷ್ಯಾ ಕಪ್ (Women's Asia Cup 2026) ಟೂರ್ನಿಯ ತನ್ನ ಆರಂಭಿಕ ಪಂದ್ಯದಲಿ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ದೀಪ್ತಿ ಶರ್ಮಾ ಟಿ20ಐ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಬೌಲರ್ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ. ಇವರ ಸ್ಪಿನ್ ಮೋಡಿಯ ಸಹಾಯದಿಂದ ಭಾರತ ತಂಡ, ಥಾಯ್ಲೆಂಡ್ ಎದುರು 94 ರನ್‌ಗಳ ಭರ್ಜರಿ ಗೆಲುವು ಪಡೆದು ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಥಾಯ್ಲೆಂಡ್ ತಂಡವನ್ನು ದೀಪ್ತಿ ಶರ್ಮಾ ತಮ್ಮ ಸ್ಪಿನ್ ಮೋಡಿಯ ಮೂಲಕ ಕಾಡಿದರು. ಅವರು ಬೌಲ್ ಮಾಡಿದ 1.1 ಓವರ್‌ಗಳಲ್ಲಿ ರನ್ ನೀಡದೆ ಮೂರು ವಿಕೆಟ್‌ಗಳನ್ನು ಕಬಳಿಸಿದರು.
92 ರನ್‌ಗೆ ವಿಕೆಟ್ ಒಪ್ಪಿಸಿದರೂ 57 ವರ್ಷಗಳ ಹಳೆಯ ದಾಖಲೆ ಮುರಿದ ವೈಭವ್ ಸೂರ್ಯವಂಶಿ!
ಥಾಯ್ಲೆಂಡ್ ಎದುರು ಮೂರು ವಿಕೆಟ್‌ಗಳ ಮೂಲಕ ದೀಪ್ತಿ ಶರ್ಮಾ ಅವರು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ 171 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.
ಈ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ದೀಪ್ತಿ ಶರ್ಮಾ, “ಹೌದು, ಖಂಡಿತವಾಗಿಯೂ. ಮುಂದಿನ ಪಂದ್ಯದಲ್ಲಿ ಯಾರು ಆಡಲಿದ್ದಾರೆ ಎಂಬ ಬಗ್ಗೆ ನಾನು ಯೋಚಿಸುವುದಿಲ್ಲ. ನನ್ನ ಮೇಲೆ ಯಾವಾಗಲೂ ನಂಬಿಕೆ ಇಟ್ಟುಕೊಂಡು, ಪ್ರತಿದಿನವೂ ನನ್ನ ಆಟವನ್ನು ಹೇಗೆ ಉತ್ತಮಪಡಿಸಿಕೊಳ್ಳಬಹುದು ಮತ್ತು ತಂಡಕ್ಕೆ, ವಿಶೇಷವಾಗಿ ಬೌಲರ್‌ಗಳಿಗೆ ಹೇಗೆ ನೆರವಾಗಬಹುದು ಎಂಬುದರತ್ತ ಗಮನ ಹರಿಸುತ್ತೇನೆ. ನಾನು ಯಾವಾಗಲೂ ಇದೇ ರೀತಿಯಲ್ಲಿ ಆಡುತ್ತೇನೆ," ಎಂದು ಹೇಳಿದ್ದಾರೆ.
ENG vs PAK: ಲಾರ್ಡ್ಸ್ ಟೆಸ್ಟ್‌ನಲ್ಲಿಯೂ ಪಾಕ್‌ಗೆ ಮುಖಭಂಗ, ಟೆಸ್ಟ್ ಸರಣಿ ವಶಪಡಿಸಿಕೊಂಡ ಇಂಗ್ಲೆಂಡ್!
"ತಂಡವಾಗಿ ನೋಡಿದರೆ, ಟೂರ್ನಿಗೆ ಇದು ಉತ್ತಮ ಆರಂಭವಾಗಿದೆ. ಇನ್ನೂ ಹಲವು ಪಂದ್ಯಗಳು ಬಾಕಿ ಇವೆ. ಆದರೆ ಮೊದಲ ಪಂದ್ಯವನ್ನು ಗೆದ್ದಾಗ ಮುಂದಿನ ಪಂದ್ಯಗಳಿಗೂ ಇದೇ ಗೆಲುವಿನ ಲಯವನ್ನು ಮುಂದುವರಿಸುವುದು ಬಹಳ ಮುಖ್ಯ,” ಎಂದು ಪಂದ್ಯ ಮುಗಿದ ಬಳಿಕ ಪ್ರಸಾರಕರೊಂದಿಗೆ ಮಾತನಾಡಿದ ದೀಪ್ತಿ ಶರ್ಮಾ ತಿಳಿಸಿದ್ದಾರೆ.
1⃣7⃣1⃣* and counting!
— BCCI Women (@BCCIWomen) August 30, 2026
An incredible feat in her 150th T20I 🫡
Congratulations, Deepti Sharma 👏👏
Scorecard ▶️ https://t.co/Tgf2CJnHta#TeamIndia | #WomensAsiaCup | #INDvTHAI pic.twitter.com/8B8BCvkHww
7 ಎಸೆತಗಳಲ್ಲಿಯೇ 3 ವಿಕೆಟ್ ಕಿತ್ತ ದೀಪ್ತಿ ಶರ್ಮಾ
ಥಾಯ್ಲೆಂಡ್ ತಂಡದ ಚೇಸಿಂಗ್‌ನಲ್ಲಿ ದೀಪ್ತಿ ಶರ್ಮಾ ಅವರು 9ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದರು ಹಾಗೂ ತಕ್ಷಣ ತಮ್ಮ ಪ್ರಭಾವವನ್ನು ಬೀರಿದರು. ನವೋಮಿ ಹ್ಯಾಮಿಲ್ಟನ್, ನನ್ನಾಫಟ್ ಚೈಹಾನ್ ಹಾಗೂ ನನ್ನಪತ್ ಕೊಂಚರೋಯೆಂಕಾಯ್ ಅವರನ್ನು ಔಟ್ ಮಾಡಿದರು. ಅವರು ತಮ್ಮ 7 ಎಸೆತಗಳಲ್ಲಿ ಒಂದೇ ಒಂದು ರನ್ ನೀಡದೆ 3 ವಿಕೆಟ್ ಕಿತ್ತಿದ್ದು ವಿಶೇಷ.
ಅಂತಿಮವಾಗಿ ಥಾಯ್ಲೆಂಡ್ ತಂಡ 16.1 ಓವರ್‌ಗಳಿಗೆ ಕೇವಲ 65 ರನ್‌ಗಳಿಗೆ ಆಲ್‌ಔಟ್ ಆಯಿತು. ತಮ್ಮ ಬೌಲಿಂಗ್ ಸ್ಪೆಲ್ ಮೂಲಕ ದೀಪ್ತಿ ಶರ್ಮಾ ಅವರು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.