ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಎರಡನೇ ಒಡಿಐ ಸೋಲಿಗೆ ಕಾರಣವೇನೆಂದು ತಿಳಿಸಿದ ಶುಭಮನ್‌ ಗಿಲ್‌!

ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ವಿಕೆಟ್‌ಗಳಿಂದ ಸೋಲು ಒಪ್ಪಿಕೊಂಡಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿದೆ. ಅಂದ ಹಾಗೆ ಪಂದ್ಯದ ಬಳಿಕ ಟೀಮ್‌ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಪ್ರತಿಕ್ರಿಯೆ ನೀಡಿದ್ದಾರೆ.

ಎರಡನೇ ಒಡಿಐ ಸೋಲಿಗೆ ಕಾರಣ ತಿಳಿಸಿದ ಶುಭಮನ್‌ ಗಿಲ್‌!

ಎರಡನೇ ಏಕದಿನ ಪಂದ್ಯದ ಸೋಲಿನ ಬಗ್ಗೆ ಶುಭಮನ್‌ ಗಿಲ್‌ ಹೇಳಿಕೆ. -

Profile Ramesh Kote Oct 23, 2025 9:49 PM

ಅಡಿಲೇಡ್‌: ಆಸ್ಟ್ರೇಲಿಯಾ ವಿರುದ್ದ ಎರಡನೇ ಏಕದಿನ ಪಂದ್ಯದಲ್ಲಿ (IND vs AUS) ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ಭಾರತ ತಂಡ, ಎರಡು ವಿಕೆಟ್‌ ಸೋಲು ಅನುಭವಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 0-2 ಅಂತರದಲ್ಲಿ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಭಾರತ (India) ಏಕದಿನ ತಂಡದ ನಾಯಕನಾಗಿ ಮೊದಲ ಆಸ್ಟ್ರೇಲಿಯಾ ಪ್ರವಾಸದಲ್ಲಿಯೇ ಸೋಲು ಅನುಭವಿಸಿದ್ದರಿಂದ ಶುಭಮನ್‌ ಗಿಲ್‌ಗೆ (Shubman Gill) ಬೇಸರವಾಗಿದೆ. ಆರಂಭಿಕ ಎರಡೂ ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಲು ಕಾರಣವನೇಂದು ಟೀಮ್‌ ಇಂಡಿಯಾ ನಾಯಕ ಹೇಳಿದ್ದಾರೆ.

ಆಸ್ಟ್ರೇಲಿಯಾ ತನ್ನ ಆಲ್‌ರೌಂಡ್ ಪ್ರದರ್ಶನದೊಂದಿಗೆ ಎರಡನೇ ಏಕದಿನ ಪಂದ್ಯವನ್ನು ಎರಡು ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಿತು. ಪರ್ತ್‌ನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಸೋತಿತ್ತು. ಭಾರತ ತಂಡದ ಫೀಲ್ಡರ್‌ಗಳು ಕನಿಷ್ಠ ಮೂರು ಕ್ಯಾಚ್‌ಗಳನ್ನು ಡ್ರಾಪ್‌ ಮಾಡಿದ್ದರು. ಅದರಲ್ಲಿ ಒಂದು ಅವಕಾಶ ಮ್ಯಾಥ್ಯೂ ಶಾರ್ಟ್ ಅವರದ್ದಾಗಿತ್ತು, ಅವರು 78 ಎಸೆತಗಳಲ್ಲಿ 74 ರನ್ ಗಳಿಸಿದರು. ಇದು ಪಂದ್ಯದ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಆಗಿತ್ತು.

IND vs AUS: ಆಸ್ಟ್ರೇಲಿಯಾ ಎದುರು ಎರಡನೇ ಪಂದ್ಯದಲ್ಲಿಯೂ ಸೋತು ಒಡಿಐ ಸರಣಿ ಕಳೆದುಕೊಂಡ ಭಾರತ!

ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶುಭಮನ್‌ ಗಿಲ್‌, "ನಾವು ಕಲೆ ಹಾಕಿದ್ದ ಮೊತ್ತ ಉತ್ತಮವಾಗಿತ್ತು. ಈ ರೀತಿಯ ಮೊತ್ತಕ್ಕೆ ಎದುರಾಳಿ ತಂಡವನ್ನು ಕಟ್ಟಿ ಹಾಕಬೇಕೆಂದರೆ, ಸಿಗುವ ಅವಕಾಶಗಳನ್ನು ಕಳೆದುಕೊಳ್ಳಬಾರದು. ನಮ್ಮವರು ಕೆಲ ಕ್ಯಾಚ್‌ಗಳನ್ನು ಡ್ರಾಪ್‌ ಮಾಡಿದ್ದಾರೆ. ಇನ್ನು ಮೊದಲನೇ ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ ಪಂದ್ಯದ ಟಾಸ್‌ ನಿರ್ಣಾಯಕವಾಗಿತ್ತು. ಆದರೆ ಈ ಪಂದ್ಯದಲ್ಲಿ ಎರಡೂ ತಂಡಗಳು ಬಹುತೇಕ 50 ಓವರ್‌ಗಳ ತನಕ ಬಂದಿವೆ, ಹಾಗಾಗಿ ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆರಂಭದಲ್ಲಿ ಪಿಚ್‌ ಸ್ವಲ್ಪ ಕಠಿಣವಾಗಿತ್ತು, ಆದರೆ ಒಮ್ಮೆ 15-20 ಓವರ್‌ಗಳ ಬಳಿಕ ಇದು ಬ್ಯಾಟಿಂಗ್‌ಗೆ ಹೊಂದಿಕೊಳ್ಳುತ್ತಿತ್ತು ಎಂದು ಭಾವಿಸುತ್ತೇನೆ," ಎಂದು ಹೇಳಿದ್ದಾರೆ.

IND vs AUS: ಭಾರತ ಏಕದಿನ ತಂಡದಲ್ಲಿ ರೋಹಿತ್‌ ಶರ್ಮಾ ಸ್ಥಾನಕ್ಕೆ ಆಪತ್ತು?

ರೋಹಿತ್‌ ಶರ್ಮಾಗೆ ಶುಭಮನ್‌ ಗಿಲ್‌ ಮೆಚ್ಚುಗೆ

26ನೇ ವಯಸ್ಸಿನ ಶುಭಮನ್‌ ಗಿಲ್, ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರ 73 ರನ್‌ಗಳ ಹೋರಾಟದ ಇನಿಂಗ್ಸ್ ಅನ್ನು ಶ್ಲಾಘಿಸಿದ್ದಾರೆ. "ದೀರ್ಘಕಾಲದ ನಂತರ ಮತ್ತೆ ಆಟಕ್ಕೆ ಇಳಿಯುವುದು ಎಂದಿಗೂ ಸುಲಭವಲ್ಲ. ಆರಂಭಿಕ ಹಂತಗಳು ಸ್ವಲ್ಪ ಸವಾಲಿನದ್ದಾಗಿದ್ದವು, ಆದರೆ ಅವರು ಬ್ಯಾಟ್‌ ಮಾಡಿದ ರೀತಿಯಿಂದ ನನಗೆ ತುಂಬಾ ಸಂತೋಷವಾಗಿದೆ. ಅವರು ಚೆನ್ನಾಗಿ ಬ್ಯಾಟ್‌ ಮಾಡಿದ್ದಾರೆ. ಆದರೆ ಅವರು ದೊಡ್ಡ ಇನಿಂಗ್ಸ್‌ ಅನ್ನು ತಪ್ಪಿಸಿಕೊಂಡಿದ್ದಾರೆ ಎಂದು ನಾನು ಹೇಳುತ್ತೇನೆ," ಎಂದಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 264 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 46.2 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 265 ರನ್‌ ಗಳಿಸಿ ಗೆಲುವು ದಾಖಲಿಸಿತು.