ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! 2025ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದ ಜಾಕೋಬ್ ಡಫಿ!
ನ್ಯೂಜಿಲೆಂಡ್ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಮೂಲಕ ಜಾಕೋಬ್ ಡಫಿ ಇತಿಹಾಸ ನಿರ್ಮಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕಿವೀಸ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, 40 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಆರ್‌ಸಿಬಿ ಫ್ಯಾನ್ಸ್‌ಗೆ ಭರವಸೆ ಮೂಡಿಸಿದ ಜಾಕೋಬ್ ಡಫಿ. -
ನವದೆಹಲಿ: ವೇಗದ ಬೌಲರ್ ಜಾಕೋಬ್ ಡಫಿ (Jacob Duffy) 2025ರ ಕ್ಯಾಲೆಂಡರ್ ವರ್ಷದಲ್ಲಿ ನ್ಯೂಜಿಲೆಂಡ್ (New Zealand) ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ವರ್ಷ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 81 ವಿಕೆಟ್‌ಗಳನ್ನು ಕಬಳಿಸುವ ಮೂಲಕ ರಿಚರ್ಡ್ ಹ್ಯಾಡ್ಲಿ ಅವರ 40 ವರ್ಷದ ಹಳೆಯ ದಾಖಲೆಯನ್ನು ಮುರಿದಿದ್ದಾರೆ. 1985ರಲ್ಲಿ ನ್ಯೂಜಿಲೆಂಡ್ ಪರ ರಿಚರ್ಡ್ ಹ್ಯಾಡ್ಲಿ ಒಟ್ಟು 79 ವಿಕೆಟ್‌ಗಳನ್ನು ಕಬಳಿಸಿದರೆ, 2008 ರಲ್ಲಿ ಡೇನಿಯಲ್ ವೆಟ್ಟೋರಿ (Daniel Vettori) 76 ವಿಕೆಟ್‌ಗಳನ್ನು ಕಬಳಿಸಿದರು. ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಡಫಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಯನ್ನು ಪಡೆಯುವ ಮೂಲಕ ರಿಚರ್ಡ್ ಹ್ಯಾಡ್ಲಿ ಮತ್ತು ಡೇನಿಯಲ್ ವೆಟ್ಟೋರಿ ಅವರ ದಾಖಲೆಗಳನ್ನು ಮುರಿದಿದ್ದಾರೆ.
31ರ ವಯಸ್ಸಿನ ಜಾಕೋಬ್ ಡಫಿ ಬೇ ಓವಲ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಮೊದಲ ಇನಿಂಗ್ಸ್‌ನಲ್ಲಿ 35 ಓವರ್‌ಗಳನ್ನು ಬೌಲ್ ಮಾಡಿ 86 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ಎರಡನೇ ಇನಿಂಗ್ಸ್‌ನಲ್ಲಿ ಅವರು 42 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು. ನ್ಯೂಜಿಲೆಂಡ್ ಈ ಪಂದ್ಯವನ್ನು 323 ರನ್‌ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಜಾಕೋಬ್ ಡಫಿ ಒಟ್ಟು 23 ವಿಕೆಟ್‌ಗಳನ್ನು ಕಬಳಿಸಿದರು. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದದ್ದ ಸರಣಿಯ ಮೊದಲ ಪಂದ್ಯದಲ್ಲಿ ಅವರು ಒಟ್ಟು 8 ವಿಕೆಟ್‌ಗಳನ್ನು ಕಿತ್ತಿದ್ದರು. ನಂತರ ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಅವರು ಒಟ್ಟು 6 ವಿಕೆಟ್‌ಗಳನ್ನು ಪಡೆದಿದ್ದರು.
IPL 2026 Auction: ಡಬಲ್ ಸೆಂಚುರಿ ಬಾರಿಸಿ ಸಿಎಸ್‌ಕೆಗೆ ತಿರುಗೇಟು ನೀಡಿದ ಡೆವೋನ್ ಕಾನ್ವೆ!
ಆರ್‌ಸಿಬಿ ಪರ ಐಪಿಎಲ್ ಆಡುತ್ತೇನೆ
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಾಕೋಬ್ ಡಫಿಯನ್ನು 2 ಕೋಟಿ ರುಪಾಯಿಗಳಿಗೆ ಖರೀದಿಸಿತು. ಬೇರೆ ಯಾವುದೇ ತಂಡವು ಅವರಿಗಾಗಿ ಬಿಡ್ ಮಾಡಲಿಲ್ಲ, ಅದಕ್ಕಾಗಿಯೇ ಆರ್‌ಸಿಬಿ ಅವರನ್ನು ಮೂಲ ಬೆಲೆಗೆ ಖರೀದಿಸಿತು. 31 ವರ್ಷದ ಡಫಿ ಅಪಾರ ದೇಶಿ ಕ್ರಿಕೆಟ್ ಆಡಿದ ಅನುಭವವನ್ನು ಹೊಂದಿದ್ದಾರೆ. ಅವರು 2012 ರಲ್ಲಿ ನ್ಯೂಜಿಲೆಂಡ್ ಪರ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
IPL 2026: ಮಿನಿ ಹರಾಜಿನಲ್ಲಿ ಕೋಟಿ-ಕೋಟಿ ಜೇಬಿಗಿಳಿಸಿಕೊಂಡ ಅನ್‌ಕ್ಯಾಪ್ಡ್ ಆಟಗಾರರು!
ಜಾಕೋಬ್ ಡಫಿ ಪ್ರದರ್ಶನವನ್ನು ಶ್ಲಾಘಿಸಿದ ಆರ್ ಅಶ್ವಿನ್
ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನ್ಯೂಜಿಲೆಂಡ್ ವೇಗದ ಬೌಲರ್ ಜಾಕೋಬ್ ಡಫಿ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.
"ಜಾಕೋಬ್ ಡಫಿ ಅದ್ಭುತ ಕ್ರಿಕೆಟಿಗನಾಗಿ ಬೆಳೆಯುತ್ತಿದ್ದಾರೆ. 2025 ಅವರಿಗೆ ಮಹತ್ವದ ವರ್ಷವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು 15.43ರ ಸರಾಸರಿಯಲ್ಲಿ 23 ವಿಕೆಟ್‌ಗಳು ಹಾಗೂ 40.3 ಸ್ಟ್ರೈಕ್ ರೇಟ್‌ನೊಂದಿಗೆ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರು ಪ್ರಸ್ತುತ ಎರಡನೇ ಟಿ20 ಬೌಲರ್ ಆಗಿದ್ದಾರೆ, ಈ ವರ್ಷ ಟಿ20 ಸ್ವರೂಪದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ, 18.9ರ ಸರಾಸರಿಯಲ್ಲಿ 57 ವಿಕೆಟ್‌ಗಳು, 7.89 ಎಕಾನಮಿ ಮತ್ತು 53.1 ಪ್ರತಿಶತದಷ್ಟು ಡಾಟ್ ಬಾಲ್ ರೇಟ್ ಹೊಂದಿದ್ದಾರೆ," ಎಂದು ರವಿಚಂದ್ರನ್ ಅಶ್ವಿನ್ ಹೊಗಳಿದ್ದಾರೆ.