ಅಭಿ-ಸಂಜು ಓಪನರ್ಸ್? ಟಿ20 ವಿಶ್ವಕಪ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ಆರಿಸಿದ ಸುನೀಲ್ ಗವಾಸ್ಕರ್!
Sunil Gavaskar picks India's Probable Playing XI: ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ಅನ್ನು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಆಯ್ಕೆ ಮಾಡಿದ್ದಾರೆ. ಅವರು ಇನಿಂಗ್ಸ್ ಆರಂಭಿಸಲು ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿದ್ದಾರೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI ಆರಿಸಿದ ಸುನೀಲ್ ಗವಾಸ್ಕರ್. -
ನವದೆಹಲಿ: ಮುಂದಿನ ವರ್ಷ ನಡೆಯುವ 2026ರ ಐಸಿಸಿ ಪರುಷರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಗೆ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿತ್ತು. ಔಟ್ ಆಫ್ ಫಾರ್ಮ್ ಶುಭಮನ್ ಗಿಲ್ (Shubman Gill) ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರನ್ನು ಕೈ ಬಿಟ್ಟಿತ್ತು. ಆ ಮೂಲಕ ಇಶಾನ್ ಕಿಶನ್ ಹಾಗೂ ರಿಂಕು ಸಿಂಗ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಟಿ20 ವಿಶ್ವಕಪ್ ಭಾರತ ತಂಡದ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಇದೀಗ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್, ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI (India's Probable Playing XI) ಅನ್ನು ಆಯ್ಕೆ ಮಾಡಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಂದು ಆರಂಭವಾಗಿ ಮಾರ್ಚ್ 8 ರಂದು ಫೈನಲ್ ಪಂದ್ಯದ ಮೂಲಕ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳು ಮೊದಲೇ ಬಿಸಿಸಿಐ ಆಯ್ಕೆ ಸಮಿತಿಯು ಭಾರತ ತಂಡವನ್ನು ಪ್ರಕಟಿಸಿದೆ. ಹಾಗಾಗಿ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಅವರು ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ಅನ್ನು ಆಯ್ಕೆ ಮಾಡಿದ್ದಾರೆ. ತಮ್ಮ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ನಿರೀಕ್ಷೆಯಂತೆ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿದ್ದಾರೆ.
India squad for T20 World Cup: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ!
ಅಭಿಷೇಕ್ ಶರ್ಮಾ-ಸಂಜು ಸ್ಯಾಮ್ಸನ್ ಓಪನರ್ಸ್
ಮೂರನೇ ಕ್ರಮಾಂಕಕ್ಕೆ ತಿಲಕ್ ವರ್ಮಾ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಆರಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಕಳೆದ ಏಷ್ಯಾ ಕಪ್ ಟೂರ್ನಿಯಿಂದ ಇಲ್ಲಿಯವರೆಗೂ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ, ಅವರು ನಾಯಕನಾಗಿರುವ ಕಾರಣ ಅವರನ್ನು ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಶುಭಮನ್ ಗಿಲ್ ಅವರು ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅಭಿಷೇಕ್ ಜತೆ ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ.
ಆಲ್‌ರೌಂಡರ್‌ಗಳು
ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XIನಲ್ಲಿ ಸುನೀಲ್ ಗವಾಸ್ಕರ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನವನ್ನು ತೋರಿದ್ದರು. ಇವರು ತಂಡಕ್ಕೆ ಕೀ ಆಟಗಾರ. ಇನ್ನು ಶಿವಂ ದುಬೆ ಅವರಿಂದ ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ. ಅಕ್ಷರ್ ಪಟೇಲ್ ಅವರು ಸ್ಪಿನ್ ಜೊತೆಗೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಡೆಪ್ತ್ ತಂದುಕೊಡಲಿದ್ದಾರೆ.
Former Indian legend Sunil Gavaskar picks India's probable XI for thebICC T20 World Cup 2026.
— CricTracker (@Cricketracker) December 20, 2025
How do you see this XI?
📸: Jio Star | #T20WorldCup2026 pic.twitter.com/MnX1yMJg8A
ಬೌಲರ್‌ಗಳು
ಇನ್ನು ವೇಗದ ಬೌಲಿಂಗ್ ವಿಭಾಗಕ್ಕೆ ಜಸ್‌ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಸುನೀಲ್ ಗವಾಸ್ಕರ್ ಆಯ್ಕೆ ಮಾಡಿದರೆ, ಸ್ಪಿನ್ ವಿಭಾಗಕ್ಕೆ ವರುಣ್ ಚಕ್ರವರ್ತಿ ಮತ್ತು ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ. ವೇಗದ ಬೌಲಿಂಗ್ ವಿಭಾಗಕ್ಕೆ ಹಾರ್ದಿಕ್ ಹಾಗೂ ಶಿವಂ ದುಬೆ ಸಾಥ್ ನೀಡಿದರೆ, ಸ್ಪಿನ್ ವಿಭಾಗಕ್ಕೆ ಅಕ್ಷರ್ ಸಾಥ್ ನೀಡಲಿದ್ದಾರೆ. ತಿಲಕ್ ವರ್ಮಾ ಪಾರ್ಟ್ ಟೈಮ್ ಸ್ಪಿನ್ನರ್ ಆಗಿದ್ದು, ಅಗತ್ಯ ಬಿದ್ದರೆ ತಂಡಕ್ಕೆ ಆಸರೆಯಾಗಬಲ್ಲರು.
ಟಿ20 ವಿಶ್ವಕಪ್ ಟೂರ್ನಿಯಿಂದ ಶುಭಮನ್ ಗಿಲ್‌ರನ್ನು ತೆಗೆಯಲು ಕಾರಣ ತಿಳಿಸಿದ ಅಜಿತ್ ಅಗರ್ಕರ್!
ಸುನೀಲ್ ಗವಾಸ್ಕರ್ ಆಯ್ಕೆಯ 2026ರ ಟಿ20 ವಿಶ್ವಕಪ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
1.ಸಂಜು ಸ್ಯಾಮ್ಸನ್ (ಓಪನರ್/ವಿಕೆಟ್ ಕೀಪರ್)
2.ಅಭಿಷೇಕ್ ಶರ್ಮಾ (ಓಪನರ್)
3.ತಿಲಕ್ ವರ್ಮಾ (ಬ್ಯಾಟ್ಸ್‌ಮನ್)
4.ಸೂರ್ಯಕುಮಾರ್ ಯಾದವ್(ನಾಯಕ, ಬ್ಯಾಟ್ಸ್‌ಮನ್)
5.ಹಾರ್ದಿಕ್ ಪಾಂಡ್ಯ(ಆಲ್‌ರೌಂಡರ್)
6.ಅಕ್ಷರ್ ಪಟೇಲ್ (ಸ್ಪಿನ್ ಆಲ್‌ರೌಂಡರ್)
7.ಶಿವಂ ದುಬೆ (ಬ್ಯಾಟಿಂಗ್ ಆಲ್‌ರೌಂಡರ್)
8.ಜಸ್‌ಪ್ರೀತ್ ಬುಮ್ರಾ (ವೇಗದ ಬೌಲರ್)
9.ಕುಲ್ದೀಪ್ ಯಾದವ್ (ಸ್ಪಿನ್ನರ್)
10.ವರುಣ್ ಚಕ್ರವರ್ತಿ (ಸ್ಪಿನ್ನರ್)
11.ಅರ್ಷದೀಪ್ ಸಿಂಗ್ (ವೇಗದ ಬೌಲರ್)