Dharwad News: ಕೃಷಿ ಮೇಳದಲ್ಲಿ ಟ್ರ್ಯಾಕ್ಟರ್ ಮೈಮೇಲೆ ಬಿದ್ದು ಮೃತಪಟ್ಟಿದ್ದ ಕಾರ್ಮಿಕನ ಕುಟುಂಬಕ್ಕೆ 5 ಲಕ್ಷ ಪರಿಹಾರ
Dharwad News: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಮೇಳದ ಹಿನ್ನೆಲೆಯಲ್ಲಿ ತಂದಿದ್ದ ಟ್ರ್ಯಾಕ್ಟರ್ ಅನ್ನು ಲಾರಿಯಿಂದ ಇಳಿಸುವಾಗ ಮೈಮೇಲೆ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ. ತುಮಕೂರು ಮೂಲದ ಪರಶುರಾಮ (58) ಮೃತವ್ಯಕ್ತಿ. ಘಟನೆಯ ಸುದ್ದಿ ತಿಳಿದು ಸಮತಾ ಸೇನೆ ಧಾರವಾಡ ಜಿಲ್ಲಾ ಘಟಕದಿಂದ ವ್ಯಕ್ತಿಯ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು.

-

ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಮೇಳಕ್ಕೆ ತಂದಿದ್ದ ಟ್ರ್ಯಾಕ್ಟರ್ ಅನ್ನು ಲಾರಿಯಿಂದ ಇಳಿಸುವಾಗ ಮೈಮೇಲೆ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾರೆ. ತುಮಕೂರು ಮೂಲದ ಪರಶುರಾಮ (58) ಮೃತವ್ಯಕ್ತಿ. ಘಟನೆಯ ಸುದ್ದಿ ತಿಳಿದು ಸಮತಾ ಸೇನೆ ಧಾರವಾಡ ಜಿಲ್ಲಾ ಘಟಕದಿಂದ (Dharwad News) ವ್ಯಕ್ತಿಯ ಶವವಿಟ್ಟು ಪ್ರತಿಭಟನೆ ನಡೆಸಿ, ಮೃತವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ ಮೃತನ ಮನೆಯವರಿಗೆ ನೌಕರಿ ನೀಡುವಂತೆ ಆಗ್ರಹಿಸಲಾಯಿತು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಕೃಷಿ ಮೇಳ ನಡೆಯಲಿದೆ. ಮೊದಲ ದಿನವಾದ ಶನಿವಾರ ಬೆಳಗ್ಗೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಕಂಪನಿಯ ಸ್ಟಾಲ್‌ನಲ್ಲಿ ಟ್ರ್ಯಾಕ್ಟರ್ ಪ್ರದರ್ಶನಕ್ಕೆ ಇದ್ದ ವ್ಯಕ್ತಿ, ಲಾರಿಯಿಂದ ಟ್ರ್ಯಾಕ್ಟರ್ ಇಳಿಸುವಾಗ ಮೈಮೇಲೆ ಟ್ರ್ಯಾಕ್ಟರ್ ಬಿದ್ದಿದ್ದರಿಂದ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕಮಿಷನರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ಮೃತವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ ಮೃತನ ಮನೆಯವರಿಗೆ ನೌಕರಿ ನೀಡುವಂತೆ ಸಮತಾ ಸೇನೆಯ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆ ಕಾವು ಜೋರಾಗುತ್ತಿದ್ದಂತೆ, ಕೃಷಿ ವಿವಿಯ ಕುಲಪತಿ ಪಾಟೀಲ್ ಅವರು ಸ್ಥಳಕ್ಕೆ ಆಗಮಿಸಿ, 5 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಣೆ ಮಾಡಿ, ಚೆಕ್ ವಿತರಣೆ ಮಾಡಿದರು.
ಈ ಸುದ್ದಿಯನ್ನೂ ಓದಿ | canter accident: ಬೆಂಗಳೂರಿನಲ್ಲಿ ಮತ್ತೊಂದು ಕ್ಯಾಂಟರ್ ದುರಂತ, ಆಟೋದಲ್ಲಿದ್ದ ಇಬ್ಬರು ಸಾವು