ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranji Trophy: ದೇವದತ್‌ ಪಡಿಕ್ಕಲ್‌ ದ್ವಿಶತಕ, ಫೈನಲ್‌ಗೆ ಇನ್ನಷ್ಟು ಸನಿಹವಾದ ಕರ್ನಾಟಕ!

KAR vs UTK Ranji Trophy semifinal: ದೇವದತ್‌ ಪಡಿಕ್ಕಲ್‌ ಶತಕ ಹಾಗೂ ಸ್ಮರಣ್‌ ರವಿಚಂದ್ರನ್‌ ಶತಕದ ಬಲದಿಂದ ಕರ್ನಾಟಕ ತಂಡ, 2025-26ರ ಸಾಲಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ ಎದುರು ಮೇಲುಗೂ ಸಾಧಿಸಿದೆ. ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 736 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿ ಉತ್ತರಾಖಂಡ ಮೂರನೇ ದಿನದಾಟದ ಅಂತ್ಯಕ್ಕೆ 149 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಕರ್ನಾಟಕ ತಂಡ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿಮೇಲುಗೈ ಸಾಧಿಸಿದೆ.

ಲಖನೌ: ದೇವದತ್‌ ಪಡಿಕ್ಕಲ್‌ (Devdutt Padikkal) ದ್ವಿಶತಕ ಹಾಗೂ ಸ್ಮರಣ್‌ ರವಿಚಂದ್ರನ್‌ ಶತಕದ ಬಲದಿಂದ ಕರ್ನಾಟಕ ತಂಡ, 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ (KAR vs UTK) ಉತ್ತರಾಖಂಡ ಎದುರು ಪ್ರಾಬಲ್ಯ ಸಾಧಿಸಿದೆ. ಆ ಮೂಲಕ ಫೈನಲ್‌ ಪಂದ್ಯಕ್ಕೆ ಇನ್ನಷ್ಟು ಸನಿಹವಾಗಿದೆ. ವಿಶೇಷವಾಗಿ ಕರ್ನಾಟಕ ನಾಯಕ ದೇವದತ್‌ ಪಡಿಕ್ಕಲ್‌ 232 ರನ್‌ಗಳನ್ನು ಗಳಿಸುವ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಅಂದ ಹಾಗೆ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 194.4 ಓವರ್‌ಗಳಿಗೆ 736 ರನ್‌ಗಳನ್ನು ಕಲೆ ಹಾಕಿದೆ ಹಾಗೂ ಎದುರಾಳಿ ಉತ್ತರಾಖಂಡ ತಂಡಕ್ಕೆ ಪ್ರಬಲ ಸವಾಲನ್ನು ನೀಡಿದೆ.

ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರಂಭಿಕ ಮೂರು ದಿನಗಳಲ್ಲಿ ಬ್ಯಾಟಿಂಗ್‌ನಲ್ಲಿ ದೇವದತ್‌ ಪಡಿಕ್ಕಲ್‌ ಗಮನ ಸೆಳೆದರು. ಅವರು ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿದಿದ್ದ ಅವರು 330 ಎಸೆತಗಳನ್ನು ಆಡಿ ಬರೋಬ್ಬರಿ 29 ಬೌಂಡರಿಗಳು ಹಾಗೂ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನು ಇವರಿಗೆ ಎರಡು ಹಾಗೂ ಮೂರನೇ ದಿನ ಸಾಥ್‌ ನೀಡಿದ್ದ ಸ್ಮರಣ್‌ ರವಿಚಂದ್ರನ್‌ 216 ಎಸೆತಗಳಲ್ಲಿ 135 ರನ್‌ಗಳನ್ನು ಕಲೆ ಹಾಕಿದರು. ಈ ಇಬ್ಬರ ಅಬ್ಬರದ ಬ್ಯಾಟಿಂಗ್‌ ಬಲದಿಂದ ಕರ್ನಾಟಕ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಯಿತು. ಇದಕ್ಕೂ ಮುನ್ನ ಮೊದಲನೇ ದಿನ ಕೆಎಲ್‌ ರಾಹುಲ್‌ ಕೂಡ ಶತಕವನ್ನು ಬಾರಿಸಿದ್ದರು.

Ranji Trophy: ಸೆಮಿಫೈನಲ್‌ನಲ್ಲಿ 8 ವಿಕೆಟ್‌ ಕಿತ್ತು ಬಿಸಿಸಿಐಗೆ ಸಂದೇಶ ರವಾನಿಸಿದ ಮೊಹಮ್ಮದ್‌ ಶಮಿ!

ಪ್ರಸಕ್ತ ಆವೃತ್ತಿಯಲ್ಲಿ ಕರ್ನಾಟಕ ತಂಡದ ನಾಯಕ ಪಡಿಕ್ಕಲ್‌ ಅಸಾಧಾರಣ ಪ್ರದರ್ಶನವನ್ನು ತೋರುತ್ತಿದ್ದಾರೆ. ಈ ಋತುವಿನಲ್ಲಿ ಅವರು ಆಡಿದ ಐದು ಪಂದ್ಯಗಳಿಂದ 66.50 ರ ಸರಾಸರಿಯಲ್ಲಿ 532 ರನ್‌ಗಳನ್ನು ಕಲೆ ಹಾಕಿದ್ದಾರೆ. ರಣಜಿ ಟ್ರೋಫಿ ಮಾತ್ರವಲ್ಲ, ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಿಂದ 725 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು.

ಉತ್ತರಾಖಂಡ ಎದುರು ಕರ್ನಾಟಕ ಪ್ರಾಬಲ್ಯ

ಎರಡನೇ ದಿನಾಟದ ಅಂತ್ಯಕ್ಕೆ ಕರ್ನಾಟಕ ತಂಡ ಆರು ವಿಕೆಟ್‌ಗಳ ನಷ್ಟಕ್ಕೆ 689 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಮೂರನೇ ದಿನ ಮಂಗಳವಾರ ಬೆಳಿಗ್ಗೆ ಆರ್‌ ಸ್ಮರಣ್‌ ಹಾಗೂ ವಿದ್ಯಾದರ್‌ ಪಾಟೀಲ್‌ ಅವರು ಬ್ಯಾಟಿಂಗ್‌ ಮುಂದುವರಿದು 109 ರನ್‌ಗಳ ಜೊತೆಯಾಟವನ್ನು ಆಡಿದರು. ವಿದ್ಯಾದರ್‌ ಪಾಟೀಲ್‌ 54 ರನ್‌ ಗಳಿಸಿದರೆ, ಕೃತಿಕ್‌ ಕೃಷ್ಣ 60 ರನ್‌ ಗಳಿಸಿದರು.

T20 World Cup: ಆಸ್ಟ್ರೇಲಿಯಾ ಕನಸು ಭಗ್ನ, ಸೂಪರ್‌-8ಕ್ಕೆ ಪ್ರವೇಶಿಸಿದ ಜಿಬಾಬ್ವೆ!

ಉತ್ತರಾಖಂಡ 149 ರನ್‌ಗಳಿಗೆ 5

ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಉತ್ತರಾಖಂಡ ತಂಡಕ್ಕೆ ವಿದ್ಯಾದರ್‌ ಪಾಟೀಲ್‌ ಆರಂಭಿಕ ಆಘಾತ ನೀಡಿದರು. ಆರಂಭಿಕರಾದ ಬೂಪೇನ್‌ ಲಾಲ್ವಾನಿ (15) ಹಾಗೂ ಪ್ರಶಾಂತ್‌ ಚೋಪ್ರಾ (5) ಅವರನ್ನು ವಿದ್ಯಾದರ್‌ ಪಾಟೀಲ್‌ ಔಟ್‌ ಮಾಡಿದರು. 25 ರನ್‌ ಗಳಿಸಿ ಉತ್ತಮ ಆರಂಭ ಪಡೆದು ಆಡುತ್ತಿದ್ದ ಅನ್ವೀಶ್‌ ಸುಧಾ ಅವರನ್ನು ವೈಶಾಖ್‌ ವಿಜಯಕುಮಾರ್‌ ಪೆವಿಲಿಯನ್‌ಗೆ ಕಳುಹಿಸಿದರು. ನಾಯಕ ಕುನಾಲ್‌ ಚಾಂದೇಲಾ ಅವರನ್ನು ಶ್ರೇಯಸ್‌ ಗೋಪಾಲ್‌ ಔಟ್‌ ಮಾಡಿದರೆ, 21 ರನ್‌ ಗಳಿಸಿ ಆಡುತ್ತಿದ್ದ ಜಗದೀಶ್‌ ಸುಚಿತ್‌ ಅವರನ್ನು ಪ್ರಸಿಧ್‌ ಕೃಷ್ಣ ಔಟ್‌ ಮಾಡಿದರು.

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಲಕ್ಷ್ಯ ರಾಜೇಶ್‌ ಮೂರನೇ ದಿನದಾಟದ ಅಂತ್ಯದವರೆಗೂ ಆಡಿ 166 ಎಸೆತಗಳಲ್ಲಿ ಅಜೇಯ 52 ರನ್‌‌ ಗಳಿಸಿದ್ದಾರೆ ಹಾಗೂ ಮತ್ತೊಂದು ತುದಿಯಲ್ಲಿ ಸೌರಭ್‌ ರಾವತ್‌ ಇದ್ದಾರೆ. ಆ ಮೂಲಕ ಉತ್ತಾರಖಂಡ ಮೂರನೇ ದಿನದಾಂತ್ಯಕ್ಕೆ 149 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದೆ ಹಾಗೂ ಇನ್ನೂ 587 ರನ್‌ ಹಿನ್ನಡೆಯಲ್ಲಿದೆ.