ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KAR vs GOA: ಕರ್ನಾಟಕ ಎದುರು ಹಿನ್ನಡೆಯ ಭೀತಿಯಲ್ಲಿರುವ ಗೋವಾಗೆ ಮರಿ ತೆಂಡೂಲ್ಕರ್‌ ಆಸರೆ!

KAR vs GOA Day 3 Highlights: ಕರುಣ್‌ ನಾಯರ್‌ ಬ್ಯಾಟಿಂಗ್‌ ಹಾಗೂ ಅಭಿಲಾಷ್‌ ಶೆಟ್ಟಿ ಅವರ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡ, 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಗೋವಾ ಎದುರು ಮೂರನೇ ದಿನವೂ ಪ್ರಾಬಲ್ಯ ಸಾಧಿಸಿದೆ. 171 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿರುವ ಗೋವಾ ತಂಡಕ್ಕೆ ಅರ್ಜುನ್‌ ತೆಂಡೂಲ್ಕರ್‌ ಆಸರೆಯಾಗಿದ್ದಾರೆ.

ಹಿನ್ನಡೆಯ ಭೀತಿಯಲ್ಲಿರುವ ಗೋವಾಗೆ ಮರಿ ತೆಂಡೂಲ್ಕರ್‌ ಆಸರೆ!

ಕರ್ನಾಟಕ ಎದುರು ಬ್ಯಾಟಿಂಗ್‌ನಲ್ಲಿ ಮಿಂಚಿದ ಅರ್ಜುನ್‌ ತೆಂಡೂಲ್ಕರ್‌. -

Profile Ramesh Kote Oct 27, 2025 9:42 PM

ಶಿವಮೊಗ್ಗ: ಅಭಿಲಾಷ್‌ ಶೆಟ್ಟಿ (63ಕ್ಕೆ 3) ಹಾಗೂ ವಿದ್ವತ್‌ ಕಾವೇರಪ್ಪ (30ಕ್ಕೆ 2) ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಗೋವಾ ತಂಡ, ಕರ್ನಾಟಕ ಎದುರು 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಎಲೈಟ್‌ ಬಿ ಪಂದ್ಯದಲ್ಲಿ (KAR vs GOA) ದೊಡ್ಡ ಹಿನ್ನಡೆಯ ಭೀತಿಗೆ ಒಳಗಾಗಿದೆ. ಆದರೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ (Arjun Tendulkar) ಮೂರನೇ ದಿನ ತಮ್ಮ ಬ್ಯಾಟಿಂಗ್‌ ಮೂಲಕ ಗೋವಾ ತಂಡಕ್ಕೆ ಆಸರೆಯಾಗಿದ್ದಾರೆ. ಅಂದಹಾಗೆ ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ ಮೇಲುಗೈ ಸಾಧಿಸಿದ್ದು, ನಾಲ್ಕನೇ ದಿನವಾದ ಮಂಗಳವಾರ ಈ ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯವಾಗುವ ಸಾಧ್ಯತೆ ಇದೆ.

ಮೂರನೇ ದಿನವಾದ ಸೋಮವಾರ ಬೆಳಿಗ್ಗೆ ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ತೇವವಿದ್ದ ಕಾರಣ ಆಟವನ್ನು ಸ್ವಲ್ಪ ತಡವಾಗಿ ಆರಂಭಿಸಲಾಯಿತು. ಒಂದು ವಿಕೆಟ್‌ ನಷ್ಟಕ್ಕೆ 28 ರನ್‌ಗಳಿಂದ ಮೂರನೇ ದಿನದಾಟವನ್ನು ಆರಂಭಿಸಿ ಗೋವಾ ತಂಡದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಗೋವಾ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 77 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 171 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಕರ್ನಾಟಕದ ಎದುರು ಇನ್ನೂ 200 ರನ್‌ಗಳ ಹಿನ್ನಡೆಯಲ್ಲಿದೆ.

Prithvi Shaw: ರಣಜಿ ಟ್ರೋಫಿ ಟೂರ್ನಿಯ ಮೂರನೇ ವೇಗದ ದ್ವಿಶತಕ ಬಾರಿಸಿದ ಪೃಥ್ವಿ ಶಾ!

ಮೂರನೇ ದಿನ ಬ್ಯಾಟಿಂಗ್‌ ಆರಂಭಿಸಿದ ಗೋವಾ ತಂಡದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ವಿಫಲರಾದರು. ಸುಯೇಶ್‌ ಪ್ರಭುದೇಸಾಯಿ (12), ಅಭಿನವ್‌ ತೇಜ್ರಾಣ (18), ಸ್ನೇಹಲ್‌ ಕೌತಂಕರ್‌ (10) ಅವರು ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಲಲಿತ್‌ ಯಾದವ್‌, 96 ಎಸೆತಗಳಲ್ಲಿ 36 ರನ್‌ ಗಳಿಸಿ ತಾಳ್ಮೆಯ ಆಟಕ್ಕೆ ಕೈ ಹಾಕಿದ್ದರು. ಆದರೆ, ಅವರನ್ನು ಅಭಿಲಾಷ್‌ ಶೆಟ್ಟಿ ಔಟ್‌ ಮಾಡಿದರು. 12 ರನ್‌ ಗಳಿಸಿದ ದರ್ಶನ್‌ ಮಿಸಲ್‌ ಅವರು ಕೂಡ ನಿರಾಶೆ ಮೂಡಿಸಿದರು.

ಗೋವಾ ತಂಡಕ್ಕೆ ಅರ್ಜುನ್‌ ತೆಂಡೂಲ್ಕರ್‌ ಆಸರೆ

ಕೇಳ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅರ್ಜುನ್‌ ತೆಂಡೂಲ್ಕರ್‌ ಅವರು ಗೋವಾ ತಂಡಕ್ಕೆ ಆಸರೆಯನ್ನು ಮೂಡಿಸಿದ್ದಾರೆ. ಮೂರನೇ ದಿನದ ಕೊನೆಯಲ್ಲಿ ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಮರಿ ತೆಂಡೂಲ್ಕರ್‌, ದಿನದಾಟದ ಅಂತ್ಯಕ್ಕೆ 115 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ ಅಜೇಯ 43 ರನ್‌ ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುತ್ತಿದ್ದ ಮೋಹಿತ್‌ ರೆಡ್ಕರ್‌ 54 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ ಅಜೇಯ 24 ರನ್‌ ಗಳಿಸಿದ್ದಾರೆ. ಅರ್ಜುನ್‌ ಹಾಗೂ ರೆಡ್ಕರ್‌ ಅವರು ಮುರಿಯದ ಏಳನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟವನ್ನು ಆಡಿದ್ದಾರೆ.

IND vs AUS: ಜಸ್‌ಪ್ರೀತ್‌ ಬುಮ್ರಾ ಇನ್‌, ಮೊದಲ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಕರುಣ್‌ ನಾಯರ್‌ ಭರ್ಜರಿ ಬ್ಯಾಟಿಂಗ್‌

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ್ದ ಕರ್ನಾಟಕ ತಂಡದ ಪರ ಕರುಣ್‌ ನಾಯರ್‌ ಮಿಂಚಿದ್ದರು. ಶ್ರೇಯಸ್‌ ಗೋಪಾಲ್‌ ಅರ್ಧಶತಕ ಗಳಿಸಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ಕರುಣ್‌ಗೆ ಸಾಥ್‌ ನೀಡಿರಲಿಲ್ಲ. ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಬೇಸರದಲ್ಲಿದ್ದ ಕರುಣ್‌, ಪಂದ್ಯದ ಮೊದಲು ಹಾಗೂ ಎರಡನೇ ದಿನ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು 267 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ ಅಜೇಯ 174 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 371 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.