World Cup 2025: ಕ್ರಾಂತಿ ಗೌಡ್, ರೇಣುಕಾ ಸಿಂಗ್‌ಗೆ ಒಂದು ಕೋಟಿ ರು. ನಗದು ಬಹುಮಾನ!
ಭಾರತ ತಂಡ ಭಾನುವಾರ 2025ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಮಣಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಆಡಿದ್ದ ಕ್ರಾಂತಿ ಗೌಡ್ ಹಾಗೂ ರೇಣುಕಾ ಸಿಂಗ್ ಅವರು ಆಯಾ ರಾಜ್ಯ ಸರ್ಕಾರಗಳಿಂದ ಒಂದು ಕೋಟಿ ರೂ. ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ.
ಕ್ರಾಂತಿ ಗೌಡ್, ರೇಣುಕಾ ಸಿಂಗ್‌ಗೆ ಒಂದು ಕೋಟಿ ರು. ನಗದು ಬಹುಮಾನ. -
ನವದೆಹಲಿ: ಭಾನುವಾರ ನವ ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Women's World Cup 2025) ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಮಣಿಸಿದ ಭಾರತ ತಂಡ (India women Team) ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿಶ್ವಕಪ್ ವಿಜೇತ ಭಾರತ ತಂಡದ ಪರ ಆಡಿದ್ದ ಹಿಮಾಚಲ ಪ್ರದೇಶದ ವೇಗಿ ರೇಣುಕಾ ಸಿಂಗ್ (Renuka Singh) ಹಾಗೂ ಮಧ್ಯ ಪ್ರದೇಶ ರಾಜ್ಯದ ಬ್ಯಾಟರ್ ಕ್ರಾಂತಿ ಗೌಡ್ (Kranti Gaud) ಅವರು ತಮ್ಮ-ತಮ್ಮ ರಾಜ್ಯ ಸರ್ಕಾರಗಳ ಕಡೆಯಿಂದ ತಲಾ ಒಂದೊಂದು ಕೋಟಿ ರು. ನಗದು ಬಹುಮಾನವನ್ನು ಸ್ವೀಕರಿಸಿದ್ದಾರೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸೋಮವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ. ರೇಣುಕಾ ಸಿಂಗ್ ಭಾರತ ತಂಡದ ವಿಶ್ವಕಪ್ ಗೆಲುವಿಗೆ ಕೊಡುಗೆ ಪರಿಗಣಿಸಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಶಿಮ್ಲಾದ ರೊಹ್ರು ಮೂಲದ ರೇಣುಕಾ ಸಿಂಗ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಕೀ ಬೌಲರ್ ಆಗಿ ಪಾತ್ರ ನಿರ್ವಹಿಸಿದ್ದಾರೆ.
ವಿಶ್ವಕಪ್ ಗೆಲುವಿನ ಬಳಿಕ ಹಿಮಾಚಲ ಪ್ರದೇಶ ತಂಡದ ಮುಖ್ಯಮಂತ್ರಿ ಖುದ್ದಾಗಿ ರೇಣುಕಾ ಸಿಂಗ್‌ಗೆ ಕರೆ ಮಾಡಿ ಅಭಿನಂದನೆಯನ್ನು ಸಲ್ಲಿಸಿದ್ದರು. "ನೀವು ಅದ್ಭುತವಾದ ಪ್ರದರ್ಶನವನ್ನು ತೋರಿದ್ದೀರಿ ಹಾಗೂ ನೀವು ಹಿಮಾಚಲ ಪ್ರದೇಶ ರಾಜ್ಯಕ್ಕೆ ಹೆಮ್ಮೆಯನ್ನು ತಂದಿದ್ದೀರಿ," ಎಂದು ಹೇಳುವ ಮೂಲಕ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ಕೂಡ ನೀಡಿದ್ದಾರೆ.
ʻಕ್ರಿಕೆಟ್ ಪ್ರತಿಯೊಬ್ಬರ ಆಟʼ: ವಿಶ್ವಕಪ್ ಗೆದ್ದ ಬಳಿಕ ಶಕ್ತಿಯುತ ಸಂದೇಶ ರವಾನಿಸಿದ ಹರ್ಮನ್‌ಪ್ರೀತ್ ಕೌರ್!
ಕ್ರಾಂತಿ ಗೌಡ್‌ಗೆ ಒಂದು ಕೋಟಿ ರು ನಗದು
ಇನ್ನು ಮಧ್ಯ ಪ್ರದೇಶ ತಂಡದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕೂಡ ಕ್ರಾಂತಿ ಗೌಡ್ ಅವರಿಗೆ ಒಂದು ಕೋಟಿ ರು. ನಗದು ಬಹುಮಾನವನ್ನು ಘೋಷಿಸಿದ್ದಾರೆ. "ನಮ್ಮ ರಾಜ್ಯದ ಸುಪುತ್ರಿ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ," ಎಂದು ಅವರು ಶ್ಲಾಘಿಸಿದ್ದಾರೆ.
ಕ್ರಾಂತಿ ಗೌಡ್ ಅವರು ಭಾರತ ತಂಡದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಆಟಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಅವರು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ. ಅವರು ಆಡಿದ ಎಂಟು ಪಂದ್ಯಗಳಿಂದ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ಅವರು 20 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ʻಕ್ರಿಕೆಟ್ ಪ್ರತಿಯೊಬ್ಬರ ಆಟʼ: ವಿಶ್ವಕಪ್ ಗೆದ್ದ ಬಳಿಕ ಶಕ್ತಿಯುತ ಸಂದೇಶ ರವಾನಿಸಿದ ಹರ್ಮನ್‌ಪ್ರೀತ್ ಕೌರ್!
ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯವೊಂದರಲ್ಲಿ 6 ವಿಕೆಟ್ ಸಾಧನೆ ಮಾಡಿದ್ದರು. ಆ ಮೂಲಕ ಈ ಸಾಧನೆ ಮಾಡಿದ್ದ ಭಾರತದ ಎರಡನೇ ಬೌಲರ್ ಎಂಬ ಸಾಧನೆಗೆ ಅವರು ಭಾಜನರಾಗಿದ್ದರು. ಇನ್ನು ಇವರ ಸಹ ಆಟಗಾರ್ತಿ ರೇಣುಕಾ ಸಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಇವರು ತಮ್ಮ ಆಕ್ರಮಣಶೀಲ ಬೌಲಿಂಗ್‌ನಿಂದ ಎದುರಾಳಿ ತಂಡದ ಬ್ಯಾಟರ್‌ಗಳ ಮೇಲೆ ಸತತವಾಗಿ ಒತ್ತಡ ಹೇರಿದ್ದರು.