ʻಕ್ರಿಕೆಟ್ ಪ್ರತಿಯೊಬ್ಬರ ಆಟʼ: ವಿಶ್ವಕಪ್ ಗೆದ್ದ ಬಳಿಕ ಶಕ್ತಿಯುತ ಸಂದೇಶ ರವಾನಿಸಿದ ಹರ್ಮನ್‌ಪ್ರೀತ್ ಕೌರ್!
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ 2025ರ ಐಸಿಸಿ ಮಹಿಳಾ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದೀಗ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ಶಕ್ತಿಯುತ ಸಂದೇಶವನ್ನು ರವಾನಿಸಿದ್ದಾರೆ.
ಮಹಿಳಾ ವಿಶ್ವಕಪ್ ಜೊತೆಗೆ ಶಕ್ತಿಶಾಲಿ ಸಂದೇಶ ರವಾನಿಸಿದ ಹರ್ಮನ್‌ಪ್ರೀತ್ ಕೌರ್. -
ಮುಂಬೈ: ವಿಶ್ವಕಪ್ ಟ್ರೋಫಿಯೊಂದಿಗೆ (women World Cup) ಮುಂಜಾನೆ ಎಚ್ಚರಗೊಂಡು ಅದರೊಂದಿಗೆ ಫೋಟೋ ಹಂಚಿಕೊಳ್ಳುವುದು ವಿಶ್ವ ಚಾಂಪಿಯನ್ಸ್ ಪಾಲಿಸಬೇಕಾದ ಸಂಪ್ರದಾಯವಾಗಿದೆ. ಸೋಮವಾರ ಈ ಸಂಪ್ರದಾಯಕ್ಕೆ ಭಾರತ ಮಹಿಳಾ ತಂಡದ (Indian women team) ನಾಯಕಿ ಹರ್ಮನ್‌ಪ್ರೀತ್ ಕೌರ್ Harmanpreet kaur) ಸೇಪಡೆಯಾಗಿದ್ದಾರೆ. ಮುಂಜಾನೆ ಎದ್ದೇಳುತ್ತಿರುವ ಫೋಟೋವನ್ನು ಕೌರ್ ಹಂಚಿಕೊಂಡಿದ್ದಾರೆ. ಆದರೆ, ಅವರ ಧರಿಸಿದ್ದ ಟೀ ಶರ್ಟ್‌ನಲ್ಲಿ ಸಾಲುಗಳು ಎಲ್ಲರನ್ನು ಆಕರ್ಷಿಸಿವೆ. ಇದರ ಜೊತೆಗೆ ಅವರು ಬಲವಾದ ಸಂದೇಶವನ್ನು ಸಾರಿಸಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ತಾನು ಧರಿಸಿರುವ ಟೀ ಶರ್ಟ್ ಮೇಲೆ ಶಕ್ತಿಶಾಲಿ ಸಂದೇಶವನ್ನು ರವಾನಿಸಿದ್ದಾರೆ. "ಕ್ರಿಕೆಟ್ ಪ್ರತಿಯೊಬ್ಬರ ಆಟವಾಗಿದೆ," ಎಂಬ ಸಂದೇಶವನ್ನು ಸಾರಿಸಿದ್ದಾರೆ. ಈ ಟೀ ಶರ್ಟ್ ಮೇಲೆ ಜಂಟ್ಲಮ್ಯಾನ್ ಎಂಬ ಪದವನ್ನು ಅಳಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಗೆದ್ದು ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡ ಒಂದು ದಿನದ ಬಳಿಕ ಅವರು ಈ ರೀತಿಯ ಪೋಸ್ಟ್ ಅನ್ನು ಹಾಕಿದ್ದಾರೆ. ಕೌರ್ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಕ್ರಿಕೆಟ್ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಶಫಾಲಿ ವರ್ಮಾ ಆಲ್‌ರೌಂಡರ್ ಆಟ; ಭಾರತ ವನಿತೆಯರಿಗೆ ಚೊಚ್ಚಲ ವಿಶ್ವಕಪ್ ಕಿರೀಟ!
ಹಲವರಿಗೆ ಆ ಛಾಯಾಚಿತ್ರವು ಕೇವಲ ಆಚರಣೆಗಿಂತ ಹೆಚ್ಚಿನದನ್ನು ಸಂಕೇತಿಸಿತು. ಇದು ಕ್ರೀಡೆಯಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಪೂರ್ವಾಗ್ರಹ, ಸೀಮಿತ ಅವಕಾಶಗಳು ಮತ್ತು ಸಾಮಾಜಿಕ ಕಳಂಕದ ವಿರುದ್ಧ ಹೋರಾಡಿದ ಭಾರತೀಯ ಮಹಿಳಾ ಕ್ರಿಕೆಟಿಗರ ದೀರ್ಘ ಪ್ರಯಾಣವನ್ನು ಪ್ರತಿನಿಧಿಸುತ್ತದೆ.
ಪಂಜಾಬ್‌ನ ಮೋಗಾದಲ್ಲಿ ಕ್ರಿಕೆಟ್ ಆಡುವುದು ಹುಡುಗರಿಗೆ ಮಾತ್ರ ಕ್ರಿಕೆಟ್ ಸೀಮಿತವಾಗಿದ್ದ ಸ್ಥಳದಲ್ಲಿ ಹರ್ಮನ್‌ಪ್ರೀತ್ ಕೌರ್ ಸ್ವತಃ ಸವಾಲುಗಳನ್ನು ಎದುರಿಸುತ್ತಾ ಬೆಳೆದರು. ಆ ಕಿರಿದಾದ ಹಾದಿಗಳಿಂದ ನಾಯಕಿಯಾಗಿ ವಿಶ್ವಕಪ್ ಎತ್ತುವವರೆಗಿನ ಅವರ ಏರಿಕೆ ಅವರ ಶರ್ಟ್‌ನಲ್ಲಿ ಮುದ್ರಿತವಾದ ಸಂದೇಶದ ಆತ್ಮವನ್ನು ಸಾಕಾರಗೊಳಿಸುತ್ತದೆ.
ಚೊಚ್ಚಲ ಮಹಿಳಾ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ಕ ನಗದು ಬಹುಮಾನದ ವಿವರ!
ಚೊಚ್ಚಲ ಮಹಿಳಾ ವಿಶ್ವಕಪ್ ಗೆದ್ದ ಭಾರತ
ಮುಂಬೈನ ದಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ ತಂಡದ 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಆ ಮೂಲಕ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಹರ್ಮನ್‌ಪ್ರೀತ್ ಕೌರ್ ಪಡೆ ಇತಿಹಾಸವನ್ನು ಸೃಷ್ಟಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ಮಹಿಳಾ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 298 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 299 ರನ್‌ಗಳ ಗುರಿಯನ್ನು ನೀಡಿತು. ಭಾರತದ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಶಫಾಲಿ ವರ್ಮಾ 87 ರನ್ ಹಾಗೂ ದೀಪ್ತಿ ಶರ್ಮಾ 58 ರನ್‌ಗಳನ್ನು ಕಲೆ ಹಾಕಿದ್ದರು. ಬಳಿಕ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, 45.3 ಓವರ್‌ಗಳಿಗೆ 246 ರನ್‌ಗಳಿಗೆ ಆಲ್‌ಔಟ್ ಆಯಿತು. ಹರಿಣ ಪಡೆಯ ಪರ ಕಠಿಣ ಹೋರಾಟ ನಡೆಸಿದ ಲಾರಾ ವಾಲ್ವಾರ್ಡ್ಟ್ ಅವರು ಶತಕ ಬಾರಿಸಿದ್ದು ಬಿಟ್ಟರೆ ಇನ್ನುಳಿದ ಆಟಗಾರ್ತಿಯರಿಂದ ದೀರ್ಘಾವಧಿ ಇನಿಂಗ್ಸ್ ಮೂಡಿ ಬರಲಿಲ್ಲ. ಭಾರತದ ಪರ ಶಫಾಲಿ ವರ್ಮಾ ಎರಡು ವಿಕೆಟ್ ಕಿತ್ತರೆ, ದೀಪ್ತಿ ಶರ್ಮಾ ಐದು ವಿಕೆಟ್ ಸಾಧನೆ ಮಾಡಿದರು.