ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಶ್ರೇಯಸ್‌ ಅಯ್ಯರ್‌ಗೆ 3ನೇ ಕ್ರಮಾಂಕ, ಪಂಜಾಬ್‌ ಕಿಂಗ್ಸ್‌ ಸಂಭಾವ್ಯ ಪ್ಲೇಯಿಂಗ್‌ XI

PBKS Probable Playing XI: ಮುಂಬರುವ 2025ರ ಇಂಡಿಯನ್ಸ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಗೆ ಎಲ್ಲಾ ತಂಡಗಳು ಸಜ್ಜಾಗುತ್ತಿವೆ. ಅದರಂತೆ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ತಂಡ ಕಠಿಣ ತಾಲೀಮು ನಡೆಸುತ್ತಿದೆ. ಚೊಚ್ಚಲ ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಪಂಜಾಬ್‌ ಕಿಂಗ್ಸ್‌ ತಂಡದ ಪ್ಲೇಯಿಂಗ್‌ XI ಬಗ್ಗೆ ಇಲ್ಲಿ ವಿವರಿಸಲಾಗಿದೆ.

IPL 2025: ಪಂಜಾಬ್‌ ಕಿಂಗ್ಸ್‌ ಸಂಭಾವ್ಯ ಪ್ಲೇಯಿಂಗ್‌ XI

ಪಂಜಾಬ್‌ ಕಿಂಗ್ಸ್‌ ತಂಡದ ಸಂಭಾವ್ಯ ಪ್ಲೇಯಿಂಗ್‌ XI

Profile Ramesh Kote Mar 19, 2025 5:41 PM

ನವದೆಹಲಿ: ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಆರಂಭಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್‌ 22 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಮೊದಲನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ (KKR) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಮೂಲಕ ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಅಧಿಕೃತವಾಗಿ ಆರಂಭವಾಗಲಿದೆ. ಈ ಟೂರ್ನಿಯ ನಿಮಿತ್ತ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ತಂಡ ಕೂಡ ತಯಾರಿ ನಡೆಸುತ್ತಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ರೀತಿಯಲ್ಲಿಯೇ ಪಂಜಾಬ್‌ ಕಿಂಗ್ಸ್‌ ತಂಡ ಕೂಡ ಇಲ್ಲಿಯವರೆಗೂ ಒಂದೇ ಒಂದು ಬಾರಿಯೂ ಐಪಿಎಲ್‌ ಗೆದ್ದಿಲ್ಲ. ಆದರೆ, ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಟಿಂಗ್‌ ಅವರ ಮಾರ್ಗದರ್ಶನದಲ್ಲಿ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಪ್ರಶಸ್ತಿ ತಂದುಕೊಟ್ಟ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಈ ಬಾರಿ ಐಪಿಎಲ್‌ ಕಣಕ್ಕೆ ಇಳಿಯಲಿದೆ. ಈ ಇಬ್ಬರ ಕಾಂಬಿನೇಷನ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ, ಚೊಚ್ಚಲ ಕಪ್‌ ಗೆಲ್ಲಲು ಎದುರು ನೋಡುತ್ತಿದೆ.

IPL 2025: ಸಿಎಸ್‌ಕೆ ಎದುರು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೂರ್ಯಕುಮಾರ್‌ ಯಾದವ್‌ ನಾಯಕ!

ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಸ್ಪೆಷಲಿಸ್ಟ್‌ ಓಪನರ್‌ಗಳ ಕೊರತೆ ಇದೆ. ಆದರೆ, ಜಾಶ್‌ ಇಂಗ್ಲಿಸ್‌ ಹಾಗೂ ಪ್ರಭ ಸಿಮ್ರಾನ್‌ ಸಿಂಗ್‌ ಅವರು ಪಂಜಾಬ್‌ ಕಿಂಗ್ಸ್‌ ಪರ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಮೂರನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ ಆಡುವುದು ಬಹುತೇಕ ಖಚಿತವಾಗಿದೆ. ಶ್ರೇಯಸ್‌ ಅಯ್ಯರ್‌ ಅವರು ಆಂಕರ್‌ ಪಾತ್ರವನ್ನು ನಿರ್ವಹಿಸಿದರೆ, ಇನ್ನುಳಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸ್ಪೋಟಕ ಬ್ಯಾಟ್‌ ಮಾಡಬಹುದು.

ಸ್ಪೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಝಮತ್‌ವುಲ್ಲಾ ಒಮರ್ಜಾಯ್‌ ಹಾಗೂ ಶಶಾಂಕ್‌ ಸಿಂಗ್‌ ಅವರು ಕ್ರಮವಾಗಿ 4,5, ಹಾಗೂ 6ನೇ ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡಬಹುದು. ಇತ್ತೀಚೆಗೆ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಆಸ್ಟ್ರೇಲಿಯಾ ಮತ್ತೊಬ್ಬ ಆಲ್‌ರೌಂಡರ್‌ ಮಾರ್ಕರ್‌ ಸ್ಪೋಯ್ನಿಸ್‌ ಅವರು ಪ್ಲೇಯಿಂಗ್‌ xiನಿಂದ ಹೊರಗೆ ಉಳಿಯಲಿದ್ದಾರೆ. ಅಫ್ಘಾನಿಸ್ತಾನ ತಂಡದ ಒಮರ್ಜಾಯ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇನ್ನು ಏಳನೇ ಕ್ರಮಾಂಕಕ್ಕೆ ನೆಹಾಲ್‌ ವದೇರಾ ಆಡಲಿದ್ದು, ಅಬ್ಬರಿಸಲಿದ್ದಾರೆ.

IPL 2025: ʻಸ್ಟ್ರೈಕ್‌ ರೇಟ್‌ ಕಡೆಗೆ ಗಮನ ಕೊಡಬೇಡಿʼ-ಕುಚುಕು ಗೆಳೆಯ ವಿರಾಟ್‌ ಕೊಹ್ಲಿಗೆ ಎಬಿಡಿ ಮಹತ್ವದ ಸಲಹೆ!

ವಿದೇಶಿ ಫಾಸ್ಟ್‌ ಬೌಲರ್‌ ಆಗಿ ಮಾರ್ಕೊ ಯೆನ್ಸನ್‌ ಅವರು ಆಡಲಿದ್ದಾರೆ. ತಮ್ಮ ಅದ್ಭುತ ಫಾರ್ಮ್‌ ಮೂಲಕ ಯೆನ್ಸನ್‌ ಅವರು 2025ರ ಐಪಿಎಲ್‌ ಟೂರ್ನಿಗೆ ಬಂದಿದ್ದಾರೆ. ಅವರು ಫಾಸ್ಟ್‌ ಬೌಲಿಂಗ್‌ ಜೊತೆಗೆ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ತಂಡಕ್ಕೆ ನೆರವು ನೀಡಲಿದ್ದಾರೆ. ಅರ್ಷದೀಪ್‌ ಸಿಂಗ್‌ ಅವರು ಕೂಡ ಪಂಜಾಬ್‌ ಕಿಂಗ್ಸ್‌ಗೆ ಕೀ ವೇಗಿಯಾಗಿದ್ದಾರೆ. ಇನ್ನು 18 ಕೋಟಿ ರೂ. ಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ಪಡೆದು ಪಂಜಾಬ್‌ ಕಿಂಗ್ಸ್‌ಗೆ ಬಂದಿರುವ ಯುಜ್ವೇಂದ್ರ ಚಹಲ್‌ ಸ್ಪಿನ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ವೈಶಾಖ್‌ ವಿಜಯ್‌ಕುಮಾರ್‌ ಆಡಬಹುದು.



2025ರ ಐಪಿಎಲ್‌ಗೆ ಪಂಜಾಬ್‌ ಕಿಂಗ್ಸ್‌ ಸಂಭಾವ್ಯ ಪ್ಲೇಯಿಂಗ್‌ XI

ಜಾಶ್‌ ಇಂಗ್ಲಿಸ್‌ (ವಿ.ಕೀ), ಪ್ರಭಾ ಸಿಮ್ರಾನ್‌, ಶ್ರೇಯಸ್‌ ಅಯ್ಯರ್‌ (ನಾಯಕ), ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಝಮತ್‌ವುಲ್ಲಾ ಒಮರ್ಜಾಯ್‌, ಶಶಾಂಕ್‌ ಸಿಂಗ್‌, ನೆಹಾಲ್‌ ವಧೇರಾ, ಮಾರ್ಕೊ ಯೆನ್ಸನ್‌, ಹರಪ್ರೀತ್‌ ಬ್ರಾರ್‌, ಅರ್ಷದೀಪ್‌ ಸಿಂಗ್‌, ಯುಜ್ವೇಂದ್ರ ಚಹಲ್‌

ಇಂಪ್ಯಾಕ್ಸ್‌ ಪ್ಲೇಯರ್‌: ವೈಶಾಖ್‌ ವಿಜಯ್‌ಕುಮಾರ್‌