ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwary) ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅನುಭವಿಸಿದ್ದ ಕಠಿಣ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ ಹಾಗೂ ಎಂಎಸ್ ಧೋನಿ (MS Dhoni) ನಾಯಕನಾಗಿದ್ದ ವೇಳೆ ನನ್ನನ್ನು ಬೆಂಬಲಿಸಿರಲಿಲ್ಲ ಎಂದು ದೂರಿದ್ದಾರೆ. 2015ರಲ್ಲಿ ಮನೋಜ್ ತಿವಾರಿ ಜಿಂಬಾಬ್ವೆ ವಿರುದ್ಧ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಎಂಎಸ್ ಧೋನಿ ತನ್ನ ನೆಚ್ಚಿನ ಆಟಗಾರರಿಗೆ ಮಾತ್ರ ಹೆಚ್ಚಿನ ಬೆಂಬಲವನ್ನು ನೀಡಿದ್ದರು. ಆದರೆ, ನನಗೆ ನೀಡಿತಲಿಲ್ಲ ಎಂದು ಹೇಳಿದ್ದಾರೆ. ಎಂಎಸ್ ಧೋನಿ ಹಾಗೂ ಮನೋಜ್ ತಿವಾರಿ ಇಬ್ಬರೂ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಎಂಎಸ್ ಧೋನಿ ಇನ್ನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಸಕ್ರಿಯರಾಗಿದ್ದಾರೆ.
2011ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್‌ಗೆ ಪ್ರವಾಸ ಮಾಡಿದ್ದ ವೇಳೆ ಮನೋಜ್ ತಿವಾರಿ ಐದನೇ ಏಕದಿನ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದರು. ಇವರ ಶತಕದ ಬಲದಿಂದ ಭಾರಯ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿತ್ತು. ನಂತರ ತಮ್ಮು ಮುಂದಿನ ಏಕದಿನ ಪಂದ್ಯವನ್ನು 2012ರ ಜುಲೈನಲ್ಲಿ ಆಡಿದ್ದರು. ಈ ವೇಳೆ ಶ್ರೀಲಂಕಾ ತಂಡದ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು, ಆ ಮೂಲಕ ಭಾರತ ತಂಡದ 6 ವಿಕೆಟ್ ಗೆಲುವಿಗೆ ನೆರವು ನೀಡಿದ್ದರು. ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದರ ಹೊರತಾಗಿಯೂ ಎಂಎಸ್ ಧೋನಿ ತಮ್ಮ ನಾಯಕತ್ವದಲ್ಲಿ ನನ್ನನ್ನು ಬೆಂಬಲಿಸಿರಲಿಲ್ಲ ಎಂದು ಮನೋಜ್ ತಿವಾರಿ ಆತರೋಪ ಮಾಡಿದ್ದಾರೆ.
ʻದಿ ವೈಟ್ ವಾಕರ್ʼ: ಚೇತೇಶ್ವರ್ ಪೂಜಾರ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಆರ್ ಅಶ್ವಿನ್!
ಕ್ರಿಕ್‌ಟ್ರ್ಯಾಕರ್ ಜೊತೆ ಮಾತನಾಡಿದ ಮನೋಜ್ ತಿವಾರಿ, "ಎಲ್ಲರೂ ಎಂಎಸ್ ಧೋನಿ ಅವರನ್ನು ಇಷ್ಟಪಡುತ್ತಾರೆ ಮತ್ತು ಸ್ಪಷ್ಟವಾಗಿ, ಅವರು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ನಿರ್ದಿಷ್ಟ ಅವಧಿಯಲ್ಲಿ ಸಾಬೀತುಪಡಿಸಿದ್ದಾರೆ, ಅವರ ನಾಯಕತ್ವದ ಗುಣಗಳು ತುಂಬಾ ಉತ್ತಮವಾಗಿವೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಆದರೆ ಹೇಗೋ, ನನ್ನ ವಿಷಯದಲ್ಲಿ ಸಂಗತಿಗಳು ಸರಿಯಾಗಿ ನಡೆದಿಲ್ಲ, ಇದರ ಬಗ್ಗೆ ನನಗೆ ಗೊತ್ತಿಲ್ಲ. ನಿಮ್ಮ ಪ್ರಶ್ನೆಗೆ ಉತ್ತರಿಸಬಲ್ಲ ಏಕೈಕ ವ್ಯಕ್ತಿ ಅವರು. ಆದರೆ ಅವರು ನಿಜವಾಗಿಯೂ ಇಷ್ಟಪಟ್ಟ ಮತ್ತು ಆ ಸಮಯದಲ್ಲಿ ಪೂರ್ಣ ಬೆಂಬಲ ನೀಡಿದ ಒಂದೆರಡು ವ್ಯಕ್ತಿಗಳಿದ್ದರು ಎಂದು ನಾನು ಭಾವಿಸುತ್ತೇನೆ. ಬಹಳಷ್ಟು ಜನರಿಗೆ ತಿಳಿದಿದೆ, ಆದರೆ ಎಲ್ಲರೂ ಮುಂದೆ ಬಂದು ಅದರ ಬಗ್ಗೆ ಮಾತನಾಡುವುದಿಲ್ಲ. ಆದ್ದರಿಂದ ಕ್ರಿಕೆಟ್‌ನಲ್ಲಿ ಎಲ್ಲೆಡೆ ನಡೆಯುವ ಬಲವಾದ ಇಷ್ಟ ಮತ್ತು ಇಷ್ಟವಿಲ್ಲದಿರುವಿಕೆ ಇರುತ್ತದೆ. ಆದ್ದರಿಂದ ಇಷ್ಟಪಡದವರಲ್ಲಿ ನಾನು ಇದ್ದೇನೆ ಎಂದು ನಾನು ಭಾವಿಸುತ್ತೇನೆ. ಬಹುಶಃ ಅವರು ನನ್ನನ್ನು ಇಷ್ಟಪಡಲಿಲ್ಲ, ” ಎಂದು ಹೇಳಿದ್ದಾರೆ.
ತಮ್ಮ ದಾಖಲೆಯನ್ನು ಮುರಿಯುವ ಹಾದಿಯಲ್ಲಿರುವ ಜೋ ರೂಟ್ ಬಗ್ಗೆ ಸಚಿನ್ ಹೇಳಿದ್ದಿದು!
ಎಂಎಸ್ ಧೋನಿಯ ನಿರ್ಧಾರದಿಂದ ತಿವಾರಿ ತುಂಬಾ ಕಷ್ಟಪಟ್ಟರು ಮತ್ತು ಅವರ ಪ್ರದರ್ಶನದ ಹೊರತಾಗಿಯೂ, ಅವರ ಕೆಲವು ಸಮಕಾಲೀನರಂತೆ ಅದೇ ಮಟ್ಟದ ಬೆಂಬಲ ಮತ್ತು ಅವಕಾಶಗಳು ಸಿಗಲಿಲ್ಲ ಎಂದು ಅವರು ಭಾವಿಸಿದ್ದಾರೆ.
"ಎಂಎಸ್ ಧೋನಿ, ಡಂಕನ್ ಫ್ಲೆಚರ್ ಮತ್ತು ಆಯ್ಕೆದಾರರು ಇದಕ್ಕೆ ಉತ್ತರಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಇಲ್ಲಿಯವರೆಗೆ ನನಗೆ ಯಾವುದೇ ಉತ್ತರ ಸಿಕ್ಕಿಲ್ಲ. ಇದಲ್ಲದೆ, ಆ ಸಮಯದಲ್ಲಿ ಕೋಚ್ ಅಥವಾ ಆಯ್ಕೆದಾರರು ಅಥವಾ ನಾಯಕನಿಗೆ ಕರೆ ಮಾಡಿ ಇದಕ್ಕೆ ಉತ್ತರ ನೀಡಿ ಎಂದು ಹೇಳುವ ವ್ಯಕ್ತಿ ನಾನಲ್ಲ. ಆದರೆ ನಾನು ಎಂಎಸ್ ಧೋನಿ ಅವರನ್ನು ಭೇಟಿಯಾದಾಗಲೆಲ್ಲಾ, 100 ರನ್ ಗಳಿಸಿದ ನಂತರ ನನಗೆ ಅವಕಾಶ ನೀಡದಿರಲು ಮುಖ್ಯ ಕಾರಣಗಳೇನು ಎಂದು ನಾನು ಖಂಡಿತವಾಗಿಯೂ ಕೇಳುತ್ತೇನೆ," ಎಂದು ಅವರು ತಿಳಿಸಿದ್ದಾರೆ.
ಗೌತಮ್ ಗಂಭೀರ್ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಸೌರವ್ ಗಂಗೂಲಿ ಮುಂದಿನ ಹೆಡ್ ಕೋಚ್?
"ಎಂಎಸ್ ಧೋನಿ ತಮ್ಮ ಆಟಗಾರರನ್ನು ಹೇಗೆ ಬೆಂಬಲಿಸುತ್ತಿದ್ದರು ಎಂಬುದರ ವಿಭಿನ್ನ ಆವೃತ್ತಿಯನ್ನು ಹೊಂದಿರುವ ಅನೇಕ ಆಟಗಾರರಿದ್ದಾರೆ. ನನ್ನ ಅನುಭವದಲ್ಲಿ, ನನಗೆ ಏನಾಯಿತು ಎಂಬುದರ ಬಗ್ಗೆ ನನ್ನ ಅನುಭವವನ್ನು ಮಾತ್ರ ನಾನು ಹಂಚಿಕೊಳ್ಳಬಲ್ಲೆ. ಅವರು ನಿಜವಾಗಿಯೂ ತಮ್ಮ ಆಟಗಾರರನ್ನು ಬೆಂಬಲಿಸಿದ್ದರೆ, ಆ ನಿರ್ದಿಷ್ಟ ಪಂದ್ಯದಲ್ಲಿ ಮತ್ತು ಒಂದು ನಿರ್ದಿಷ್ಟ ಅವಧಿಯಲ್ಲಿ ನಾನು ಪ್ರದರ್ಶನ ನೀಡಿದ್ದರಿಂದ ಅವರು ಖಂಡಿತವಾಗಿಯೂ ನನ್ನನ್ನು ಬೆಂಬಲಿಸುತ್ತಿದ್ದರು," ಎಂದು ತಿವಾರಿ ಹೇಳಿದ್ದಾರೆ.