ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿರಾಟ್‌ ಕೊಹ್ಲಿ ಅಲ್ಲವೇ ಅಲ್ಲ! 2025ರಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಲ್ಪಟ್ಟ ಭಾರತದ ಸ್ಟಾರ್‌ ಯಾರು ಗೊತ್ತೆ?

2025ರಲ್ಲಿ ಪಾಕಿಸ್ತಾನದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಪಟ್ಟ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತದ ಸ್ಟಾರ್‌ ಆಟಗಾರ ಅಗ್ರ ಸ್ಥಾನದಲ್ಲಿದ್ದಾರೆ. ಆದರೆ, ಇದೇ ಆಟಗಾರ ಭಾರತದಲ್ಲಿ ಹೆಚ್ಚು ಸರ್ಚ್‌ಗೆ ಒಳಪಟ್ಟ ಆಟಗಾರರ ಪೈಕಿ ಐದನೇ ಸ್ಥಾನದಲ್ಲಿದ್ದಾರೆ. ಅವರು ಯಾರು ಗೊತ್ತೆ? ಹಾಗಾದರೆ, ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಪಾಕ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಲ್ಪಟ್ಟ ಭಾರತೀಯ ಸ್ಟಾರ್‌ ಇವರು!

ಪಾಕಿಸ್ತಾನದ ಗೂಗಲ್‌ ಸರ್ಚ್‌ನಲ್ಲಿ ಅಭುಷೇಕ್‌ ಶರ್ಮಾಗೆ ಅಗ್ರ ಸ್ಥಾನ. -

Profile
Ramesh Kote Dec 8, 2025 7:37 PM

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ತಂಡಗಳು (IND vs PAK) ರಾಜಕೀಯ ಕಾರಣಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ್ವಿಪಕ್ಷೀಯ ಸರಣಿಗಳನ್ನು ಆಡುತ್ತಿಲ್ಲ. ಆದರೆ, ಐಸಿಸಿ ಹಾಗೂ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ (ACC) ಆಯೋಜನೆಯ ಟೂರ್ನಿಗಳಲ್ಲಿ ಮಾತ್ರ ಈ ಎರಡು ತಂಡಗಳು ಕಾದಾಟ ನಡೆಸಲಿವೆ. ಮತ್ತೊಂದು ಕಡೆ ಭಾರತದಲ್ಲಿ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿಯೂ (IPL 2025) ಪಾಕ್‌ ಆಟಗಾರರಿಗೆ ಆಡಲು ಅವಕಾಶ ನೀಡಲಾಗುವುದಿಲ್ಲ. ಅಂದ ಹಾಗೆ ವಿರಾಟ್‌ ಕೊಹ್ಲಿಗೆ ಪಾಕಿಸ್ತಾನದಲ್ಲಿಯೂ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ. ಆದರೆ, ಕೊಹ್ಲಿಯನ್ನು ಬಿಟ್ಟು 2025ರಲ್ಲಿ ಭಾರತದ ಒಬ್ಬ ಯುವ ಆಟಗಾರನನ್ನು ಪಾಕಿಸ್ತಾನದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಾಟವನ್ನು ನಡೆಸಲಾಗಿದೆ. ಈ ಆಟಗಾರನ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ

ಕಳೆದ ಎರಡು ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಹಲವು ಬಾರಿ ಮುಖಾಮುಖಿಯಾಗಿವೆ. ಕಳೆದ ವರ್ಷ ನಡೆದಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹಾಗೂ ಈ ವರ್ಷ ನಡೆದಿದ್ದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಈ ಎರಡೂ ತಂಡಗಳು ಕಾದಾಟ ನಡೆಸಿದ್ದವು. ಆದರೆ, ಈ ಎರಡೂ ಟೂರ್ನಿಗಳಲ್ಲಿ ಭಾರತ ತಂಡ, ಪಾಕ್‌ ಎದುರು ಪ್ರಾಬಲ್ಯ ಸಾಧಿಸಿತ್ತು ಹಾಗೂ ಟೀಮ್‌ ಇಂಡಿಯಾ ಚಾಂಪಿಯನ್ಸ್‌ ಆಗಿತ್ತು.

IND vs SA 1st T20I: ಕಟಕ್‌ ಟಿ20 ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಇಲ್ಲಿದೆ

ಕಳೆದ ಏಷ್ಯಾ ಕಪ್‌ ಟೂರ್ನಿಯಲ್ಲಿ ಅಭಿಷೇಕ್‌ ಶರ್ಮಾ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಅವರು ಈ ಟೂರ್ನಿಯಲ್ಲಿ 44.85ರ ಸರಾಸರಿ ಮತ್ತು 200ರ ಸ್ಟ್ರೈಕ್‌ ರೇಟ್‌ನಲ್ಲಿ 314 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಅದರಲ್ಲಿಯೂ ವಿಶೇಷವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲಿ 13 ಎಸೆತಗಳಲ್ಲಿ 31 ರನ್‌ಗಳನ್ನು ಸಿಡಿಸಿದ್ದರು. ನಂತರ ಫೈನಲ್‌ನಲ್ಲಿ ಕೇವಲ 39 ಎಸೆತಗಳಲ್ಲಿ 74 ರನ್‌ಗಳನ್ನು ಬಾರಿಸಿದ್ದರು. ಇದಾದ ಬಳಿಕ ಪಾಕಿಸ್ತಾನದಲ್ಲಿ ಅಭಿಷೇಕ್‌ ಶರ್ಮಾ ಅವರ ಬಗ್ಗೆ ಗೂಗಲ್‌ ಸರ್ಚ್‌ನಲ್ಲಿ ಸಾಕಷ್ಟು ಹುಡುಕಾಟ ನಡೆಸಲ್ಪಟ್ಟ ವಿಶ್ವದ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

IND vs SA: ಚೊಚ್ಚಲ ಒಡಿಐ ಶತಕ ಬಾರಿಸಿದ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌!

2025ರಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗೂಗಲ್‌ ಸರ್ಚ್‌ಗೆ ಒಳಪಟ್ಟ ಕ್ರೀಡಾಪಟುಗಳ ವಿವರ

ಅಭಿಷೇಕ್‌ ಶರ್ಮಾ - ಭಾರತೀಯ ಕ್ರಿಕೆಟಿಗ

ಹಸನ್‌ ನವಾಜ್‌ - ಪಾಕಿಸ್ತಾನ ಕ್ರಿಕೆಟಿಗ

ಇರ್ಫಾನ್‌ ಖಾನ್‌ ನಿಯಾಝ್‌ - ಪಾಕಿಸ್ತಾನ ಕ್ರಿಕೆಟಿಗ

ಸಹಿಬ್ದಾಝಾ ಫರ್ಹಾನ್‌ - ಪಾಕಿಸ್ತಾನ ಕ್ರಿಕೆಟಿಗ

ಮುಹಮ್ಮದ್‌ ಅಬ್ಬಾಸ್‌ - ಪಾಕಿಸ್ತಾನ ಕ್ರಿಕೆಟಿಗ

ಭಾರತದಲ್ಲಿ ಅಗ್ರ ಸ್ಥಾನ ಯಾರಿಗೆ?

ಭಾರತಕ್ಕೆ ಸಂಬಂಧಿಸಿದಂತೆ ಗೂಗಲ್‌ ಬಿಡುಗಡೆ ಮಾಡಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಭಿಷೇಕ್‌ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ, 14ರ ವಯಸ್ಸಿನ ವೈಭವ್‌ ಸೂರ್ಯವಂಶಿ ಅವರು ಈ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌, ಭಾರತ ಅಂಡರ್‌-19 ತಂಡ ಹಾಗೂ ಭಾರತ ಎ ತಂಡಗಳ ಪರ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಬಳಿಕ ಅವರು ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಲ್ಪಟ್ಟ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಈ ಪಟ್ಟಿಯ ಅಗ್ರ 10ರಲ್ಲಿ ಜೆಮಿಮಾ ರೊಡ್ರಿಗಸ್‌ ಕೂಡ ಸ್ಥಾನ ಪಡೆದಿದ್ದಾರೆ

IND vs SA: ಏಕದಿನ ಸರಣಿ ಗೆದ್ದರೂ ಭಾರತಕ್ಕೆ ಬಿತ್ತು ದಂಡದ ಬರೆ

ಭಾರತದಲ್ಲಿ (2025) ಅತಿ ಹೆಚ್ಚು ಗೂಗಲ್‌ ಸರ್ಚ್‌ಗೆ ಒಳಪಡಲ್ಪಟ್ಟ ಕ್ರೀಡಾಪಟುಗಳು

ವೈಭವ್ ಸೂರ್ಯವಂಶಿ

ಪ್ರಿಯಾಂಶ್ ಆರ್ಯ

ಅಭಿಷೇಕ್ ಶರ್ಮಾ

ಶೇಕ್ ರಶೀದ್

ಜೆಮಿಮಾ ರೊಡ್ರಿಗಸ್

ಆಯುಷ್ ಮ್ಹಾತ್ರೆ

ಸ್ಮೃತಿ ಮಂಧಾನ

ಕರುಣ್ ನಾಯರ್

ಊರ್ವಿಲ್ ಪಟೇಲ್

ವಿಘ್ನೇಶ್ ಪುತ್ತೂರು