ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಜು ಇನ್‌, ದುಬೇ ಔಟ್‌; ಭಾರತ ತಂಡಕ್ಕೆ ಒಂದು ಬದಲಾವಣೆ ಸೂಚಿಸಿದ ಪಾರ್ಥಿವ್‌ ಪಟೇಲ್‌!

ಇಂಗ್ಲೆಂಡ್‌ ವಿರುದ್ದದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತ ತಂಡಕ್ಕೆ ಒಂದು ಬದಲಾವಣೆಯನ್ನು ಮಾಜಿ ಕ್ರಿಕೆಟಿಗ ಪಾರ್ಥಿವ್‌ ಪಟೇಲ್‌ ಸೂಚಿಸಿದ್ದಾರೆ. ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಿ, ಶಿವಂ ದುಬೇಯನ್ನು ಕೈ ಬಿಡಿ ಎಂದು ಅವರು ಸಲಹೆ ನೀಡಿದ್ದಾರೆ.

ಭಾರತ ತಂಡಕ್ಕೆ ಒಂದು ಬದಲಾವಣೆ ಸೂಚಿಸಿದ ಪಾರ್ಥಿವ್‌ ಪಟೇಲ್‌!

ಭಾರತ ತಂಡಕ್ಕೆ ಒಂದು ಬದಲಾವಣೆ ಸೂಚಿಸಿದ ಪಾರ್ಥಿವ್‌ ಪಟೇಲ್‌. -

Profile
Ramesh Kote Jul 9, 2026 8:27 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯದಲ್ಲಿ (IND vs ENG) ಭಾರತ ತಂಡ ತನ್ನ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಳ್ಳಬೇಕೆಂದು ಗುಜರಾತ್‌ ಟೈಟನ್ಸ್‌ ಸಹಾಯಕ ಕೋಚ್‌ ಪಾರ್ಥಿವ್‌ ಪಟೇಲ್‌ (Parthiv Patel) ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಸಲಹೆಯನ್ನು ನೀಡಿದ್ದಾರೆ. ಸಂಜು ಸ್ಯಾಮ್ಸನ್‌ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕು ಹಾಗೂ ಇವರಿಗೆ ಶಿವಂ ದುಬೇ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಹೇಳಿದ್ದಾರೆ. ನಾಲ್ಕನೇ ಪಂದ್ಯ ಜುಲೈ 9 ರಂದು ಬ್ರಿಸ್ಟಲ್‌ ಕೌಂಟಿ ಗ್ರೌಂಡ್‌ನಲ್ಲಿ ನಡೆಯಲಿದೆ.

ಜಿಯೊ ಹಾಟ್‌ಸ್ಟಾರ್‌ನ ಗೇಮ್‌ಪ್ಲ್ಯಾನ್‌ನಲ್ಲಿ ಮಾತನಾಡಿದ ಪಾರ್ಥಿವ್‌ ಪಟೇಲ್‌,"ಸೂರ್ಯವಂಶಿ ಓಪನರ್‌ ಆಗಿ ಆಡಲಿ. 3, 4 ಹಾಗೂ 5 ಕ್ರಮಾಂಕಗಳಲ್ಲಿ ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌ ಹಾಗೂ ಶ್ರೇಯಸ್‌ ಅಯ್ಯರ್‌ ಬ್ಯಾಟ್‌ ಮಾಡಬಹುದು. ಅಗ್ರ ಏಳು ಮಂದಿ ಬ್ಯಾಟ್ಸ್‌ಮನ್‌ಗಳ ಪೈಕಿ ಆರು ಮಂದಿ ಎಡಗೈ ಬ್ಯಾಟ್ಸ್‌ಮನ್‌ಗಳಿದ್ದಾರೆ. ಒದು ವಿಧದ ಬ್ಯಾಟ್ಸ್‌ಮನ್‌ಗಳಿಗೆ ಬೌಲ್‌ ಮಾಡುವುದು ಬೌಲರ್‌ಗಳಿಗೆ ಸುಲಭ ಹಾಗೂ ಇದು ಎಡಗೈ ಬ್ಯಾಟರ್‌ಗಳಿಗೆ ಕಷ್ಟವಾಗುತ್ತದೆ."

IND vs ENG: ಭಾರತ ತಂಡದ ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರ ಸೂಚಿಸಿದ ಪಾರ್ಥಿವ್‌ ಪಟೇಲ್‌!

"ಮೈದಾನದ ಆಯಾಮಗಳನ್ನು ಗಮನಿಸಿದರೆ ಬ್ಯಾಟಿಂಗ್ ಕ್ರಮದಲ್ಲಿಯೂ ವೈವಿಧ್ಯತೆ ಅಗತ್ಯವಿದೆ. ಆದ್ದರಿಂದ ಸಂಜು ಸ್ಯಾಮ್ಸನ್ ತಂಡಕ್ಕೆ ಮರಳಲೇಬೇಕು. ಜೊತೆಗೆ ಉಪನಾಯಕನಾಗಿರುವ ಕಾರಣ ತಿಲಕ್ ವರ್ಮಾಗೂ ಅವಕಾಶ ನೀಡಬೇಕು. ಇದರ ಪರಿಣಾಮವಾಗಿ ಶಿವಂ ದುಬೆ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಅಕ್ಷರ್ ಪಟೇಲ್ ಅವರನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಬಹುದು. ಬೌಲಿಂಗ್ ವಿಭಾಗದಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವೈಭವ್‌ ವಿಕೆಟ್‌ ಬಗ್ಗೆ ಪಟೇಲ್‌ ಪ್ರತಿಕ್ರಿಯೆ

ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಜೋಫ್ರಾ ಆರ್ಚರ್, ವೈಭವ್ ಸೂರ್ಯವಂಶಿಗೆ ನಿರಂತರವಾಗಿ ಶಾರ್ಟ್-ಪಿಚ್ ಎಸೆತಗಳ ಮೂಲಕ ಪರೀಕ್ಷೆ ನಡೆಸುತ್ತಿದ್ದು, ಆ ತಂತ್ರವು ಈಗಾಗಲೇ ಎರಡು ಬಾರಿ ಯಶಸ್ವಿಯಾಗಿದೆ. ಇದೇ ರೀತಿಯ ಯೋಜನೆಯನ್ನು ಮುಂದಿನ ದಿನಗಳಲ್ಲಿ ಇತರ ಬೌಲರ್‌ಗಳೂ ಅನುಸರಿಸುವ ಸಾಧ್ಯತೆ ಇದೆ ಎಂದು ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

"ಜೋಫ್ರಾ ಆರ್ಚರ್ ಮಾತ್ರವಲ್ಲ, ಐಪಿಎಲ್ ಪಂದ್ಯಗಳನ್ನು ನೋಡಿರುವ ಎಲ್ಲರಿಗೂ ವೈಭವ್ ಸೂರ್ಯವಂಶಿ ವಿರುದ್ಧ ಉದ್ದೇಶಪೂರ್ವಕವಾಗಿ ಶಾರ್ಟ್-ಪಿಚ್ ಬೌಲ್ ಮಾಡಲಾಗುತ್ತಿದೆ ಎಂಬುದು ಅಚ್ಚರಿಯ ವಿಷಯವಾಗುವುದಿಲ್ಲ. ವಿಕೆಟ್ ತಂದ ಎಸೆತ ಮಾತ್ರವಲ್ಲ, ಅದರ ಹಿಂದಿನ ಎಸೆತವೂ ಶಾರ್ಟ್ ಬಾಲ್ ಆಗಿತ್ತು. ಮೊದಲ ಪಂದ್ಯದಲ್ಲಿ ಅವರು ಸಿಕ್ಸರ್ ಬಾರಿಸಿದ ಎಸೆತವೂ ಇದೇ ಲೈನ್‌ನಲ್ಲಿತ್ತು. ಅಷ್ಟೇ ವ್ಯತ್ಯಾಸವೆಂದರೆ ಆ ಚೆಂಡು ಅಷ್ಟು ಎತ್ತರಕ್ಕೆ ಬೌನ್ಸ್ ಆಗಿರಲಿಲ್ಲ."

ʻನನಗೆ ವಿಶ್ರಾಂತಿ ಬೇಡʼ: ಸಂಜು ಸ್ಯಾಮ್ಸನ್‌ ಪಾತ್ರದಲ್ಲಿ ಗಂಭಿರ್‌ರನ್ನು ಟೀಕಿಸಿದ ಆರ್‌ ಅಶ್ವಿನ್‌!

"ವೈಭವ್ ಸೂರ್ಯವಂಶಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಮುಂದುವರಿದಂತೆ, ಗಂಟೆಗೆ 145 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಬರುವ ಇಂತಹ ಶಾರ್ಟ್-ಪಿಚ್ ಎಸೆತಗಳನ್ನು ನಿರಂತರವಾಗಿ ಎದುರಿಸಬೇಕಾಗುತ್ತದೆ. ಆದ್ದರಿಂದ, ಅವರು ಇಂತಹ ಬೌಲಿಂಗ್‌ನ್ನು ಎಷ್ಟು ಪರಿಣಾಮಕಾರಿಯಾಗಿ ನಿಭಾಯಿಸುತ್ತಾರೆ ಎಂಬುದೇ ಮುಂದಿನ ದಿನಗಳಲ್ಲಿ ಪ್ರಮುಖ ಪ್ರಶ್ನೆಯಾಗಲಿದೆ. ಏಕೆಂದರೆ ಪ್ರತಿಯೊಬ್ಬ ಬೌಲರ್ ಕೂಡ ಇದೇ ದುರ್ಬಲತೆಯನ್ನು ಗುರಿಯಾಗಿಸಿಕೊಂಡು ಬೌಲ್‌ ಮಾಡಲು ಪ್ರಯತ್ನಿಸುತ್ತಾರೆ," ಎಂದು ಅಕ್ಷರ್‌ ಪಟೇಲ್ ಹೇಳಿದ್ದಾರೆ.