ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs IRE: ಜೂನ್‌ ತಿಂಗಳಲ್ಲಿ ಐರ್ಲೆಂಡ್‌ ಎದುರು ಟಿ20ಐ ಸರಣಿ ಆಡಲಿರುವ ಭಾರತ!

ಭಾರತ ಹಾಗೂ ಐರ್ಲೆಂಡ್‌ ತಂಡಗಳು ಜೂನ್‌ ತಿಂಗಳಲ್ಲಿ ಟಿ20ಐ ಸರಣಿಯಲ್ಲಿ ಕಾದಾಟ ನಡೆಸಲಿವೆ. ಈ ಬಗ್ಗೆ ಕ್ರಿಕೆಟ್‌ ಐರ್ಲೆಂಡ್‌ ಮಾರ್ಚ್‌ 19 ರಂದು ಖಚಿತಪಡಿಸಿದೆ. ಅಂದ ಹಾಗೆ ಪಾಲ್‌ ಸ್ಟರ್ಲಿಂಗ್‌ ಅವರು ಐರ್ಲೆಂಡ್‌ ತಂಡದ ನಾಯಕತ್ವದಿಂದ ಕೆಳಗೆ ಇಳಿದಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ವೈಟ್‌ಬಾಲ್‌ ಸರಣಿಗೂ ಮುನ್ನ ಭಾರತ, ಐರ್ಲೆಂಡ್‌ ಎದುರು ಟಿ20ಐ ಸರಣಿಯಲ್ಲಿ ಕಾದಾಟ ನಡೆಸಲಿದೆ.

IND vs IRE: ಐರ್ಲೆಂಡ್‌ ಎದುರು ಭಾರತ ತಂಡಕ್ಕೆ ಟಿ20ಐ ಸರಣಿ!

ಜೂನ್‌ ತಿಂಗಳಲ್ಲಿ ಭಾರತ vs ಐರ್ಲೆಂಡ್‌. -

Profile
Ramesh Kote Mar 20, 2026 1:09 PM

ನವದೆಹಲಿ: ಪಾಲ್‌ ಸ್ಟರ್ಲಿಂಗ್‌ (Paul Sterling) ಅವರು ನಾಯಕತ್ವದಿಂದ ಕೆಳಗೆ ಇಳಿದಿರುವ ಹಿನ್ನೆಲೆಯಲ್ಲಿ ನೂತನ ನಾಯಕತ್ವದಲ್ಲಿ ಐರ್ಲೆಂಡ್‌ ತಂಡ ಜೂನ್‌ ತಿಂಗಳಲ್ಲಿ ಭಾರತದ ಎದುರು ಟಿ20ಐ ಸರಣಿಯನ್ನು (IND vs IRE) ಆಡಲಿದೆ. ಮಾರ್ಚ್‌ 19 ರಂದು ಪಾಲ್‌ ಸ್ಟರ್ಲಿಂಗ್‌ ಅವರು ಟಿ20ಐ ನಾಯಕತ್ವವನ್ನು ತೊರೆದಿದ್ದಾರೆ. ಐರ್ಲೆಂಡ್‌ ಹಾಗೂ ಭಾರತ ನಡುವಣ ಟಿ20ಐ ಸರಣಿ ಸಂಬಂಧ ಬಿಸಿಸಿಐ (BCCI) ಹಾಗೂ ಕ್ರಿಕೆಟ್‌ ಐರ್ಲೆಂಡ್‌ ಈಗಾಗಲೇ ಚರ್ಚೆಗಳನ್ನು ನಡೆಸುತ್ತಿವೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ತಿಳಿಸಿದೆ. ಜುಲೈ ತಿಂಗಳಲ್ಲಿ ಭಾರತ ತಂಡ, ವೈಟ್‌ಬಾಲ್‌ ಸರಣಿಯನ್ನು ಆಡಲು ಇಂಗ್ಲೆಂಡ್‌ಗೆ ಪ್ರವಾಸವನ್ನು ಮಾಡಲಿದೆ. ಈ ಸರಣಿಗೂ ಮುನ್ನ ಜೂನ್‌ನಲ್ಲಿ ಭಾರತ ತಂಡ, ಐರ್ಲೆಂಡ್‌ನಲ್ಲಿ ಚುಟುಕು ಸರಣಿಯನ್ನು ಆಡಲಿದೆ.

ಭಾರತ ಹಾಗೂ ಐರ್ಲೆಂಡ್‌ ತಂಡಗಳ ನಡುವಣ ಟಿ20ಐ ಸರಣಿ ಹಾಗೂ ಪಾಲ್‌ ಸ್ಟರ್ಲಿಂಗ್‌ ಅವರು ನಾಯಕತ್ವದಿಂದ ಕೆಳಗೆ ಇಳಿದ ಬಗ್ಗೆ ಐರ್ಲೆಂಡ್‌ ಕ್ರಿಕೆಟ್‌ ಹೈ ಪರ್ಫಾಮೆನ್ಸ್‌ ಡೈರೆಕ್ಟರ್‌ ಗ್ರಹಾಮ್‌ ವೆಸ್ಟ್‌ ಅವರು ತಮ್ಮ ಅಧಿಕೃತ ಹೇಳಿಕೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

“2028ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆದಿರುವ ಹಿನ್ನೆಲೆಯಲ್ಲಿ ಪಾಲ್‌ ಸ್ಟರ್ಲಿಂಗ್‌ ಅವರು ಟಿ20ಐ ತಂಡದಿಂದ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರವು ಹೊಸ ನಾಯಕನಿಗೆ ತನ್ನ ಶೈಲಿ ಮತ್ತು ವಿಧಾನವನ್ನು ಜಾರಿಗೆ ತರುವ ಅವಕಾಶವನ್ನು ನೀಡುತ್ತದೆ. ಈ ಪ್ರಕ್ರಿಯೆ ಜೂನ್‌ನಲ್ಲಿ ನಡೆಯಲಿರುವ ಭಾರತ ತಂಡದ ವಿರುದ್ಧದ ಸರಣಿಯಿಂದಲೇ ಆರಂಭವಾಗಲಿದೆ,” ಎಂದು ಅವರು ಹೇಳಿದ್ದಾರೆ.

AI ದುರುಪಯೋಗದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಗೌತಮ್ ಗಂಭೀರ್!

2026ರ ಐಪಿಎಲ್ ಟೂರ್ನಿಯ ಬಳಿಕ ಅಫ್ಘಾನಿಸ್ತಾನ ತಂಡದ ವಿರುದ್ಧ ಒಂದು ಟೆಸ್ಟ್ ಮತ್ತು ಮೂರು ಪಂದ್ಯಗಳ ಒಡಿಐ ಸರಣಿಯನ್ನು ಆಡಲಿದೆ. ಈ ಸರಣಿಯ ಕೊನೆಯ ಒಡಿಐ ಪಂದ್ಯ ಜೂನ್ 20ರಂದು ನಡೆಯಲಿದೆ. ನಂತರ ಜುಲೈ ಒಂದರಂದು ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕಣಕ್ಕಿಳಿಯಲಿದೆ. ಇದರ ನಡುವಣ ಅವಧಿಯಲ್ಲಿ ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿ ನಡೆಯುವ ಸಾಧ್ಯತೆ ಇದೆ.

ಪಾಲ್‌ ಸ್ಟರ್ಲಿಂಗ್ ನಾಯಕತ್ವ ತ್ಯಜಿಸಲು ಕಾರಣವೇನು?

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಐರ್ಲೆಂಡ್‌ ತಂಡ ನೀರಸ ಪ್ರದರ್ಶನವನ್ನು ತೋರಿದ ಕಾರಣ, ಪಾಲ್‌ ಸ್ಟರ್ಲಿಂಗ್‌ ಅವರು ಐರ್ಲೆಂಡ್ ಟಿ20ಐ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಐರ್ಲೆಂಡ್ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಗುಂಪು ಹಂತದಲ್ಲೇ ಟೂರ್ನಿಯಿಂದಲೇ ಹೊರಬಿದ್ದಿತು. ಅವರು ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತರೆ, ಜಿಂಬಾಬ್ವೆ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಯಿತು. ಪಾಲ್‌ ಸ್ಟರ್ಲಿಂಗ್‌ ಅವರು ಇನ್ನು ಮುಂದೆ ಒಡಿಐ ತಂಡದ ನಾಯಕನಾಗಿ ಮುಂದುವರಿಯಲಿದೆ.

IPL 2026: ನೇಥನ್‌ ಎಲ್ಲಿಸ್‌ ಔಟ್‌, ಟೂರ್ನಿಯ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಶಾಕ್‌!

“ನಾನು ಟಿ20 ನಾಯಕತ್ವದಿಂದ ಹಿಂದೆ ಸರಿದರೂ, ಐರ್ಲೆಂಡ್ ತಂಡದೊಂದಿಗೆ ನನ್ನ ಬದ್ಧತೆ ಮುಂದುವರಿಯುತ್ತದೆ. ಒಡಿಐ ನಾಯಕನಾಗಿ ನನ್ನ ಪಾತ್ರವನ್ನು ನಿರ್ವಹಿಸುತ್ತೇನೆ. ಆಟಗಾರನಾಗಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಆಸೆ ಇದೆ ಮತ್ತು ಈ ನಿರ್ಧಾರವು ಮೈದಾನದಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ,” ಎಂದು ಪಾಲ್‌ ಸ್ಟರ್ಲಿಂಗ್‌ ತಿಳಿಸಿದ್ದಾರೆ.

“ಈಗ ತಂಡ ಹೊಸ ಅಧ್ಯಾಯಕ್ಕೆ ಕಾಲಿಡುವ ಸರಿಯಾದ ಸಮಯ ಎಂದು ನನಗೆ ಅನಿಸುತ್ತದೆ. ಮುಂದಿನ ಟಿ20 ನಾಯಕನಿಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸಿನತ್ತ ಸಾಗಲು ಒಟ್ಟಾಗಿ ಕೆಲಸ ಮಾಡುತ್ತೇವೆ,” ಎಂದು ಅವರು ಹೇಳಿದ್ದಾರೆ.