ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಕ್ರೀಡೆಯಿಂದ ರಾಜಕೀಯ ದೂರವಿರಬೇಕುʼ: ಭಾರತ-ಪಾಕ್‌ ಏಷ್ಯಾ ಕಪ್‌ ವಿವಾದದ ಬಗ್ಗೆ ಎಬಿಡಿ ಪ್ರತಿಕ್ರಿಯೆ!

ಏಷ್ಯಾ ಕಪ್‌ ಟೂರ್ನಿಯಲ್ಲಿ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ವಿದ್ಯಮಾನಗಳ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ದಿಗ್ಗಜ ಎಬಿ ಡಿವಿಲಿಯರ್ಸ್‌ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕ್ರೀಡೆಯಲ್ಲಿ ರಾಜಕೀಯ ಇರಬಾರದು ಹಾಗೂ ಎರಡೂ ತಂಡಗಳ ಆಟಗಾರರು ಆಟವನ್ನು ಆನಂದಿಸಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಏಷ್ಯಾ ಕಪ್‌ ವಿವಾದದ ಬಗ್ಗೆ ಎಬಿ ಡಿ ವಿಲಿಯರ್ಸ್‌ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿ: ಇತ್ತೀಚೆಗೆ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್‌ ಆಗಿತ್ತು. ಕಳೆದ ಭಾನುವಾರ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ (IND vs PAK) ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸಿ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ 9ನೇ ಏಷ್ಯಾ ಕಪ್‌ ಅನ್ನು ತನ್ನದಾಗಿಸಿಕೊಂಡಿತ್ತು. ಇದಾದ ಬಳಿಕ ಭಾರತ ತಂಡ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಹಾಗೂ ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಅವರ ನಡುವೆ ಹೈಡ್ರಾಮಾ ನಡೆದಿತ್ತು. ನಖ್ವಿ ಅವರಿಂದ ಟ್ರೋಫಿಯನ್ನು ಪಡೆಯುವುದಿಲ್ಲ ಎಂದು ಭಾರತ ತಂಡ ಪಟ್ಟು ಹಿಡಿದಿತ್ತು. ಇದಾದ ಬಳಿಕ ನಖ್ವಿ ಟ್ರೋಫಿಯೊಂದಿಗೆ ವಾಪಸ್‌ ತಮ್ಮ ಕಚೇರಿಗೆ ತೆರಳಿದ್ದರು. ಇದೀಗ ಈ ಹೈಡ್ರಾಮಾ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ (AB De Villiers) ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ವಿವಾದದ ಬಗ್ಗೆ ಎಬಿಡಿ ಬೇಸರ ವ್ಯಕ್ತಪಡಿಸಿದ್ದಾರೆ. ಕ್ರೀಡೆಯಲ್ಲಿ ರಾಜಕೀಯ ಇರಬಾರದು ಎಂದು ಹೇಳಿದ್ದಾರೆ. ಎರಡೂ ತಂಡಗಳ ಆಟಗಾರರು ಆಟದಲ್ಲಿ ರಾಜಕೀಯವನ್ನು ತರಬಾರದು ಎಂದು ಹೇಳಿದ್ದಾರೆ. ಇದಕೂ ಮುನ್ನ ಭಾರತ ತಂಡದ ಮಾಜಿ ನಾಯಕ ಕಪಿಲ್‌ ದೇವ್‌, ಸೈಯದ್‌ ಕಿರ್ಮಾನಿ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕ್ರೀಡೆಯನ್ನು ರಾಜಕೀಯೇತರವಾಗಿ ನೋಡಬೇಕೆಂದು ಅವರು ಹೇಳಿದ್ದಾರೆ.

IND vs PAK: ಐಸಿಸಿ ಟೂರ್ನಿಗಳಿಂದ ಬ್ಯಾನ್‌ ಮಾಡಬೇಕೆಂದ ಪಾಕ್‌ ಮಾಜಿ ನಾಯಕ ರಶೀದ್‌ ಲತಿಫ್‌!

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಎಬಿ ಡಿ ವಿಲಿಯರ್ಸ್‌, "ಟ್ರೋಫಿಯನ್ನು ಯಾರು ವಿತರಿಸುತ್ತಿದ್ದಾರೆ ಎಂಬುದರ ಬಗ್ಗೆ ಟೀಮ್ ಇಂಡಿಯಾ ಸ್ವಲ್ಪ ಮಟ್ಟಿಗೆ ಸಂತೋಷವಾಗಿರಲಿಲ್ಲ. ಅದು ಕ್ರೀಡೆಗೆ ಸೇರಿದೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯವನ್ನು ಬದಿಗಿಡಬೇಕು. ಕ್ರೀಡೆ ಒಂದು ವಿಷಯ ಮತ್ತು ಅದು ಹೇಗಿದೆಯೋ ಹಾಗೆಯೇ ಆಚರಿಸಬೇಕು," ಎಂದು ಹೇಳಿದ್ದಾರೆ.

ಇಂತಹ ಘಟನೆಗಳು ಆಟಗಾರರನ್ನು ಅತ್ಯಂತ ಕಠಿಣ ಸ್ಥಿತಿಯಲ್ಲಿ ಇರಿಸುತ್ತವೆ, ಅಲ್ಲಿ ಅವರು ತಮ್ಮ ಸಾಧನೆಗಳನ್ನು ಆಚರಿಸುವ ಬದಲು ರಾಜಕೀಯ ವಿವಾದಗಳ ಭಾರವನ್ನು ಹೊರಲು ಒತ್ತಾಯಿಸಲ್ಪಡುತ್ತಾರೆ ಎಂದು ದಕ್ಷಿಣ ಆಫ್ರಿಕಾದ ದಂತಕಥೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

IND vs PAK: ಪಾಕಿಸ್ತಾನಕ್ಕೆ ಮುಖಭಂಗ, 9ನೇ ಏಷ್ಯಾ ಕಪ್‌ ಗೆದ್ದು ಸಂಭ್ರಮಿಸಿದ ಭಾರತ!

"ಅದನ್ನು ನೋಡಲು ತುಂಬಾ ಬೇಸರವಾಗಿದೆ, ಆದರೆ ಭವಿಷ್ಯದಲ್ಲಿ ಅವರು ವಿಷಯಗಳನ್ನು ಸರಿಪಡಿಸುತ್ತಾರೆ ಎಂದು ಆಶಿಸುತ್ತೇವೆ. ಇದು ಕ್ರೀಡೆಯನ್ನು, ಆಟಗಾರರನ್ನು, ಕ್ರೀಡಾಪಟುಗಳನ್ನು, ಕ್ರಿಕೆಟಿಗರನ್ನು ತುಂಬಾ ಕಠಿಣ ಸ್ಥಿತಿಯಲ್ಲಿ ಇರಿಸುತ್ತದೆ, ಮತ್ತು ಇದನ್ನು ನಾನು ನೋಡಲು ಇಷ್ಟಪಡುವುದಿಲ್ಲ. ಕೊನೆಯಲ್ಲಿ ಅದು ತುಂಬಾ ವಿಚಿತ್ರವಾಗಿತ್ತು. ಅತ್ಯಂತ ಮುಖ್ಯವಾದ ವಿಷಯದ (ಕ್ರಿಕೆಟ್ ಸ್ವತಃ) ಮೇಲೆ ಕೇಂದ್ರೀಕರಿಸೋಣ. ಭಾರತ ನಿಜವಾಗಿಯೂ ಬಲಿಷ್ಠವಾಗಿ ಕಾಣುತ್ತಿದೆ. ಆ ಟಿ20 ವಿಶ್ವಕಪ್‌ ಟೂರ್ನಿಗಾಗಿ ತಯಾರಿ ನಡೆಸುತ್ತಿದೆ. ನೆನಪಿಡಿ, ಅದು ತುಂಬಾ ದೂರದಲ್ಲಿಲ್ಲ ಮತ್ತು ಅವರು ಬಹಳಷ್ಟು ಪ್ರತಿಭೆಯನ್ನು ಹೊಂದಿರುವಂತೆ ಕಾಣುತ್ತಾರೆ. ಅವರು ದೊಡ್ಡ ಕ್ಷಣಗಳನ್ನು ಚೆನ್ನಾಗಿ ಆಡುತ್ತಾರೆ. ತುಂಬಾ ಅದ್ಭುತವಾಗಿದೆ, ”ಎಂದು ಡಿವಿಲಿಯರ್ಸ್ ಶ್ಲಾಘಿಸಿದ್ದಾರೆ.