ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಸಿಸಿಐ ಆಯ್ಕೆ ಸಮಿತಿಗೆ ಮುಖಸ್ಥರಾಗಿ ಪ್ರಜ್ಞಾನ್‌ ಓಜಾ ನೇಮಕ, ಸೆಲೆಕ್ಷನ್‌ ಕಮಿಟಿಗೆ ರಮೇಶ್‌ ಪೊವಾರ್‌ ಸೇರ್ಪಡೆ!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಪಶ್ಚಿಮ ವಲಯದ ಆಯ್ಕೆಗಾರರಾಗಿ ಅಜಿತ್ ಅಗರ್ಕರ್ ಅವರ ಸ್ಥಾನಕ್ಕೆ ರಮೇಶ್ ಪೊವಾರ್ ನೇಮಕಗೊಂಡಿದ್ದಾರೆ. ಆದರೆ, ಐವರು ಸದಸ್ಯರ ಆಯ್ಕೆ ಸಮಿತಿಯ ಮುಖ್ಯಸ್ಥರ ಸ್ಥಾನಕ್ಕೆ ಪ್ರಜ್ಞಾನ್ ಓಜಾ ಅವರನ್ನು ನೇಮಿಸಲಾಗಿದೆ.

ಬಿಸಿಸಿಐ ಆಯ್ಕೆ ಸಮಿತಿಗೆ ಮುಖಸ್ಥರಾಗಿ ಪ್ರಜ್ಞಾನ್‌ ಓಜಾ ನೇಮಕ!

ಬಿಸಿಸಿಐ ಆಯ್ಕೆ ಸಮಿತಿಗೆ ಪ್ರಜ್ಞಾನ್‌ ಓಜಾ ನೇಮಕ, ಸೆಲೆಕ್ಷನ್‌ ಕಮಿಟಿಗೆ ರಮೇಶ್‌ ಪವಾರ್‌. -

Profile
Ramesh Kote Oct 19, 2026 4:38 PM

ನವದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಆಯ್ಕೆ ಸಮಿತಿಯ ಮುಖ್ಯಸ್ಥರ ಸ್ಥಾನಕ್ಕೆ ಪ್ರಜ್ಞಾನ್‌ ಓಜಾ (Pragyan Ojha) ಅವರನ್ನು ಬಿಸಿಸಿಐ ನೇಮಕ ಮಾಡಿದ್ದು, ಪಶ್ಚಿಮ ವಲಯದ ಆಯ್ಕೆಗಾರರಾಗಿ ಅಜಿತ್‌ ಅಗರ್ಕರ್‌ ಅವರ ಸ್ಥಾನಕ್ಕೆ ಮಾಜಿ ಸ್ಪಿನ್ನರ್‌ ರಮೇಶ್‌ ಪೊವಾರ್‌ (Ramesh Powar) ಅವರನ್ನು ಆರಿಸಲಾಗಿದೆ. ಈ ಬಗ್ಗೆ ಬಿಸಿಸಿಐ ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ರಮೇಶ್‌ ಪೊವಾರ್‌ ಅವರು ಪ್ರಜ್ಞಾನ್ ಓಜಾ, ಆರ್‌ಪಿ ಸಿಂಗ್, ಶಿವಸುಂದರ್ ದಾಸ್ ಮತ್ತು ಅಜಯ್ ರಾತ್ರಾ ಅವರೊಂದಿಗೆ ಭಾರತ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯನ್ನು ಸೇರಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಆಯ್ಕೆಗಾರರ ಹುದ್ದೆ ಖಾಲಿ ಇರುವುದಾಗಿ ಬಿಸಿಸಿಐ ಪ್ರಕಟಿಸಿತ್ತು. ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳನ್ನು ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಸದಸ್ಯರಾಗಿರುವ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (CAC) ಸಂದರ್ಶನ ನಡೆಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ.

ʻಜಸ್‌ಪ್ರೀತ್‌ ಬುಮ್ರಾಗೆ ಒಂದು ನ್ಯಾಯ, ಮೊಹಮ್ಮದ್‌ ಶಮಿಗೆ ಒಂದು ನ್ಯಾಯವೇ?: ಬಿಸಿಸಿಐ ವಿರುದ್ಧ ಕೈಫ್‌ ಕಿಡಿ!

ಪ್ರಜ್ಞಾನ್ ಓಜಾ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕವಾಗಿದ್ದೇಕೆ?

ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಕಾರಣ ಪ್ರಜ್ಞಾನ್ ಓಜಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಭಾರತದ ಪರ ಎಡಗೈ ಸ್ಪಿನ್ನರ್ ಪ್ರಜ್ಞಾನ್ ಓಜಾ 24 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮತ್ತೊಂದೆಡೆ, ಶಿವಸುಂದರ್ ದಾಸ್ ಭಾರತ ಪರ 23 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌ಪಿ ಸಿಂಗ್ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದರೆ, ಅಜಯ್ ರಾತ್ರಾ ಆರು ಹಾಗೂ ರಮೇಶ್ ಪೊವಾರ್ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.



ಪ್ರಜ್ಞಾನ್ ಓಜಾ ಅವರು 2025ರ ಸೆಪ್ಟೆಂಬರ್‌ನಲ್ಲಿ ಆರ್‌ಪಿ ಸಿಂಗ್ ಅವರೊಂದಿಗೆ ಆಯ್ಕೆ ಸಮಿತಿಗೆ ಸೇರ್ಪಡೆಯಾಗಿದ್ದರು. ಅಜಯ್ ರಾತ್ರಾ 2024ರಲ್ಲಿ ಸಮಿತಿಗೆ ಸೇರಿದ್ದರು. ಇನ್ನು ಶಿವಸುಂದರ್ ದಾಸ್ ಅವರು ಅಜಿತ್ ಅಗರ್ಕರ್ ಅವರೊಂದಿಗೆ 2023ರ ಜೂನ್‌ನಲ್ಲಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.

ರಮೇಶ್‌ ಪೊವಾರ್‌ ಯಾರು?

ಮುಂಬೈ ಮೂಲದ ಆಫ್‌ಸ್ಪಿನ್ ಬೌಲರ್ ರಮೇಶ್ ಪೊವಾರ್ ಭಾರತ ತಂಡದ ಪರ ಎರಡು ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಉತ್ತಮ ಆಟಗಾರ ಎಂಬ ಹೆಸರು ಗಳಿಸಿದ್ದರೂ, ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರಂತಹ ಪ್ರಮುಖ ಸ್ಪಿನ್ನರ್‌ಗಳು ಭಾರತ ತಂಡದಲ್ಲಿದ್ದ ಅದೇ ಕಾಲಘಟ್ಟದಲ್ಲಿ ಆಡಿದ್ದರಿಂದ ಪೊವಾರ್‌ಗೆ ನಿರಂತರವಾಗಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ.

ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕವೂ ಪೊವಾರ್ ಭಾರತೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2018ರಲ್ಲಿ ಹಾಗೂ 2021ರಿಂದ 2022ರವರೆಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ (COE) ನಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

IND vs NZ: ಜಸ್‌ಪ್ರೀತ್‌ ಬುಮ್ರಾರ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ರವಿ ಶಾಸ್ತ್ರಿ ಮಹತ್ವದ ಹೇಳಿಕೆ!

ಇದರ ಜೊತೆಗೆ, ಮುಂಬೈ ತಂಡದ ಮುಖ್ಯ ಕೋಚ್ ಆಗಿದ್ದ ಅವರು 2021ರ ವಿಜಯ್ ಹಝಾರೆ ಟ್ರೋಫಿಯಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ನಂತರ 2023ರಿಂದ 2026ರವರೆಗೆ ಗುಜರಾತ್ ತಂಡದ ಮುಖ್ಯ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಪಶ್ಚಿಮ ವಲಯದ ಆಯ್ಕೆಗಾರರಾಗಿ ನೇಮಕಗೊಂಡಿರುವ ಪೊವಾರ್, ಭಾರತೀಯ ಕ್ರಿಕೆಟ್‌ನ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಲಿದ್ದಾರೆ.