ಮುಂಬೈ: ನ್ಯೂಜಿಲೆಂಡ್ ವಿರುದ್ಧ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women ODI World Cup 2025) ಟೂರ್ನಿಯಲ್ಲಿ ಪಂದ್ಯದಲ್ಲಿ (INDW vs NZW) ಭಾರತ ತಂಡದ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಾಲ್ (Pratika Rawal) ಅವರು ಶತಕವನ್ನು ಸಿಡಿಸಿದರು. ಆ ಮೂಲಕ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ರಾವಲ್ ಕಲೆ ಹಾಕಿದ್ದಾರೆ. ಆ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿನ ತಮ್ಮ ಮೊದಲನೇ ಶತಕದ ಮೂಲಕ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಹಾಗೂ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದಾರೆ. ಇದರ ಜೊತೆಗೆ ಸ್ಮೃತಿ ಮಂಧಾನಾ ಜೊತೆಗೆ ಮುರಿಯದ ಮೊದಲನೇ ವಿಕೆಟ್‌ಗೆ ದ್ವಿಶತಕದ ಜತೆಯಾಟವನ್ನು ಆಡಿದ್ದಾರೆ.
ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತದ ಪರ ಇನಿಂಗ್ಸ್ ಆರಂಭಿಸಿದ ಪ್ರತಿಕಾ ರಾವಾಲ್ ಹಾಗೂ ಸ್ಮೃತಿ ಮಂಧಾನಾ ಮುರಿಯದ ಮೊದಲನೇ ವಿಕೆಟ್‌ಗೆ 212 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ರಾವಲ್, 134 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 122 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಅವರು ಈ ಪಂದ್ಯದಲ್ಲಿ ತಮ್ಮ ಮಹಿಳಾ ಒಡಿಐ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಕಲೆ ಹಾಕಿದರು.
IND vs AUS: ಆಸ್ಟ್ರೇಲಿಯಾ ಎದುರು ಎರಡನೇ ಪಂದ್ಯದಲ್ಲಿಯೂ ಸೋತು ಒಡಿಐ ಸರಣಿ ಕಳೆದುಕೊಂಡ ಭಾರತ!
ವೇಗವಾಗಿ 1000 ಒಡಿಐ ರನ್ ಗಳಿಸಿದ ಪ್ರತಿಕಾ ರಾವಲ್
ತಮ್ಮ 23ನೇ ಒಡಿಐ ಪಂದ್ಯದಲ್ಲಿಯೇ ಪ್ರತಿಕಾ ರಾವಲ್ ಈ ಸಾಧನೆಗೆ ಭಾಜನರಾದರು. ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಒಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು, ಅಂದಿನಿಂದ ರನ್ ಹೊಳೆ ಹರಿಸುತ್ತಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 1000 ರನ್‌ಗಳನ್ನು ಪೂರ್ಣಗೊಳಿಸಿದ ಜಂಟಿ ದಾಖಲೆಯನ್ನು ಪ್ರತಿಕಾ ರಾವಲ್ ಬರೆದಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಲಿಂಡ್ಸೆ ರೀಲರ್ ಅವರ ಜೊತೆ ಈ ದಾಖಲೆಯನ್ನು ಹಂಚಿಕೊಂಡಿದ್ದಾರೆ. 1988 ರಲ್ಲಿ ಆಸೀಸ್ ಆಟಗಾರ್ತಿ ಈ ಮೈಲುಗಲ್ಲು ತಲುಪಿದ್ದರು.
ಇನ್ನು 21ನೇ ಶತಕಮಾನದಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಮತ್ತು ನಿಕೋಲ್ ಬಾಲ್ಟನ್ ಅವರನ್ನು ರಾವಲ್ ಹಿಂದಿಕ್ಕಿದ್ದಾರೆ.
ಅತ್ಯಂತ ವೇಗವಾಗಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 1000 ರನ್ ಗಳಿಸಿದವರು
ಪ್ರತಿಕಾ ರಾವಲ್ (ಭಾರತ) 23 ಇನಿಂಗ್ಸ್ 2025
ಲಿಂಡ್ಸೆ ರೀಲರ್ (ಆಸ್ಟ್ರೇಲಿಯಾ) 23 ಇನಿಂಗ್ಸ್ 1988
ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ) 25 ಇನಿಂಗ್ಸ್ 2013
ನಿಕೋಲ್ ಬಾಲ್ಟನ್ (ಆಸ್ಟ್ರೇಲಿಯಾ) 25 ಇನಿಂಗ್ಸ್ 2016
ಬೆಲಿಂಡಾ ಕ್ಲಾರ್ಕ್ (ಆಸ್ಟ್ರೇಲಿಯಾ) 27 ಇನಿಂಗ್ಸ್ 1997
ಲೌರಾ ವೂಲ್‌ವಾಡ್ತ್ (ದಕ್ಷಿಣ ಆಫ್ರಿಕಾ) 27 ಇನಿಂಗ್ಸ್ 2018
ಮಿಥಾಲಿ ರಾಜ್ ದಾಖಲೆ ಮುರಿದ ರಾವಲ್
ಈ ಮೈಲುಗಲ್ಲು ತಲುಪಿದ ಅತ್ಯಂತ ವೇಗದ ಭಾರತೀಯ ಮಹಿಳಾ ಕ್ರಿಕೆಟಿಗ ಎಂಬ ಮಿಥಾಲಿ ರಾಜ್ ಅವರ ದಾಖಲೆಯನ್ನು ಪ್ರತಿಕಾ ರಾವಲ್ ಮುರಿದಿದ್ದಾರೆ. ಈ ಬೃಹತ್ ಮೈಲುಗಲ್ಲು ತಲುಪಲು ಮಾಜಿ ನಾಯಕಿ 29 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಭಾರತದ ಪುರುಷ ಕ್ರಿಕೆಟಿಗರಲ್ಲಿ ಶುಭಮನ್ ಗಿಲ್ (19 ಇನ್ನಿಂಗ್ಸ್‌ಗಳು) ಮಾತ್ರ ಕಡಿಮೆ ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ರಾವಲ್, ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ (24) ಅವರ ದಾಖಲೆಯನ್ನು ಮುರಿದಿದ್ದಾರೆ.