ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಂಜಾಬ್‌ ಕಿಂಗ್ಸ್‌ಗೆ ಆಘಾತ, 2025ರ ಐಪಿಎಲ್‌ ಟೂರ್ನಿಯಿಂದ ಲಾಕಿ ಫರ್ಗ್ಯೂಸನ್‌ ಔಟ್‌!

Lockie Ferguson ruled out of IPL 2025: ಪಂಜಾಬ್‌ ಕಿಂಗ್ಸ್‌ ತಂಡದ ಹಿರಿಯ ವೇಗಿ ಲಾಕಿ ಫರ್ಗೂಸನ್‌ ಅವರು ಗಾಯದ ಕಾರಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹೊರ ನಡೆದಿದ್ದಾರೆಂದು ಪಿಬಿಕೆಎಸ್‌ ಫಾಸ್ಟ್‌ ಬೌಲಿಂಗ್‌ ಕೋಚ್‌ ಜೇಮ್ಸ್‌ ಹೋಪ್ಸ್‌ ತಿಳಿಸಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದದ ಪಂದ್ಯದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದರು.

2025ರ ಐಪಿಎಲ್‌ ಟೂರ್ನಿಯಿಂದ ಲಾಕಿ ಫರ್ಗ್ಯೂಸನ್‌ ಔಟ್‌!

2025ರ ಐಪಿಎಲ್‌ ಟೂರ್ನಿಯಿಂದ ಲಾಕಿ ಫರ್ಗ್ಯೂಸನ್‌ ಔಟ್‌.

Profile Ramesh Kote Apr 14, 2025 9:00 PM

ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಪಂಜಾಬ್‌ ಕಿಂಗ್ಸ್‌ (Punjab Kings) ವೇಗಿ ಲಾಕಿ ಫರ್ಗ್ಯೂಸನ್‌ (Lockie Ferguson) ಅವರು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆಂದು ಪಿಬಿಕೆಎಸ್‌ ಫಾಸ್ಟ್‌ ಬೌಲಿಂಗ್‌ ಕೋಚ್‌ ಜೇಮ್ಸ್‌ ಹೋಪ್ಸ್‌ ಮಾಹಿತಿ ನೀಡಿದ್ದಾರೆ. ಹೈದರಾಬಾದ್‌ ಪಂದ್ಯದಲ್ಲಿ ಕಿವೀಸ್‌ ವೇಗಿ ಕೇವಲ ಎರಡು ಎಸೆತಗಳನ್ನು ಮಾತ್ರ ಎಸೆದಿದ್ದರು. ಆದರೆ, ಗಾಯವಾದ ಕಾರಣ ಅವರು ತಮ್ಮ ನಾಲ್ಕು ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಮೈದಾನವನ್ನು ತೊರೆದಿದ್ದರು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಟೂರ್ನಿಯಲ್ಲಿ ಅತ್ಯುತ್ತಮ ಆರಂಭ ಕಂಡಿರುವ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ಗೆ ಆಘಾತವಾಗಿದೆ.

"ಲಾಕಿ ಫರ್ಗ್ಯೂಸನ್‌ ಅವರು ಸದ್ಯ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ತಕ್ಷಣ ಹೊರ ನಡೆದಿದ್ದಾರೆ ಹಾಗೂ ಅವರು ಟೂರ್ನಿಯ ಕೊನೆಯ ಹಂತದಲ್ಲಿ ತಂಡಕ್ಕೆ ಲಭ್ಯರಾಗುವುದು ಬಹುತೇಕ ಅನುಮಾನವಾಗಿದೆ. ಅವರು ತನಗೆ ತಾನೇ ತುಂಬಾ ಹಾನಿ ಮಾಡಿಕೊಂಡಿದ್ದಾರೆಂದು ನಾನು ಭಾವಿಸುತ್ತೇನೆ," ಎಂದು ಪಂಜಾಬ್‌ ಕಿಂಗ್ಸ್‌ ವೇಗದ ಬೌಲಿಂಗ್‌ ಕೋಚ್‌ ತಿಳಿಸಿದ್ದಾರೆ.

IPL 2025: ಲಖನೌ ಸೂಪರ್‌ ಜಯಂಟ್ಸ್‌ಗೆ ಸೇರಲು ಸಜ್ಜಾಗುತ್ತಿರುವ ಅಪಾಯಕಾರಿ ವೇಗಿ!

ಪಂಜಾಬ್‌ ಕಿಂಗ್ಸ್‌ ತಂಡದ ವೇಗಿ ಲಾಕಿ ಫರ್ಗ್ಯೂಸನ್‌ ಅವರು ಆಡಿದ ನಾಲ್ಕು ಪಂದ್ಯಗಳಿಂದ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಸ್ಥಿತಿಯಲ್ಲಿ ಲಾಕಿ ಫರ್ಗ್ಯೂಸನ್‌ ಅವರ ಸ್ಥಾನಕ್ಕೆ ಇನ್ನೂ ಬದಲಿ ಆಟಗಾರನನ್ನು ಸೂಚಿಸಿಲ್ಲ. ಅಝಮತ್‌ವುಲ್ಲಾ ಒಮರ್ಜಾಯ್‌ ಅವರು ಕೂಡ ಪಂಜಾಬ್‌ಗೆ ಆಯ್ಕೆಯಾಗಿದ್ದಾರೆ ಹಾಗೂ ಕನ್ನಡಿಗ ವೈಶಾಖ್‌ ವಿಜಯ್‌ಕುಮಾರ್ ಅವರು ಕೂಡ ಲಾಕಿ ಫರ್ಗ್ಯೂಸನ್‌ ಅವರ ಸ್ಥಾನವನ್ನು ತುಂಬಬಹುದು. ಇವರು ಪಂಜಾಬ್‌ ತಂಡದ ಮೊದಲನೇ ಪಂದ್ಯದಲ್ಲಿ ಮಿಂಚಿದ್ದರು.

ಯುಜ್ವೇಂದ್ರ ಚಹಲ್‌ ಫಾರ್ಮ್‌ಗೆ ಮರಳಬೇಕು

ಪ್ರಸಕ್ತ ಐಪಿಎಲ್‌ ಟೂರ್ನಿಯಲ್ಲಿ ಯುಜ್ವೇಂದ್ರ ಚಹಲ್‌ ಅವರು ಫಾರ್ಮ್‌ಗೆ ಮರಳಬೇಕೆಂದು ಪಂಜಾಬ್‌ ಕಿಂಗ್ಸ್‌ ನಿರೀಕ್ಷೆ ಮಾಡುತ್ತಿದೆ. ಕಳೆದ ಐದು ಪಂದ್ಯಗಳಲ್ಲಿ 11ರ ಎಕಾನಮಿ ರೇಟ್‌ನಲ್ಲಿ ಚಹಲ್‌ ಕೇವಲ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್‌ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲಬೇಕೆಂದರೆ ಚಹಲ್‌ ಫಾರ್ಮ್‌ಗೆ ಮರಳುವುದು ತುಂಬಾ ಅಗತ್ಯವಿದೆ ಎಂದು ಬೌಲಿಂಗ್‌ ಕೋಚ್‌ ಜೇಮ್ಸ್‌ ಹೋಪ್ಸ್‌ ತಿಳಿಸಿದ್ದಾರೆ.



"ನಮ್ಮ ಬೌಲಿಂಗ್‌ ಅಟ್ಯಾಕ್‌ನಲ್ಲಿ ಯುಜ್ವೇಂದ್ರ ಚಹಲ್‌ ಅವರನ್ನು ಇನ್ನಷ್ಟು ಆಟಕ್ಕೆ ಕರೆ ತರಬೇಕು. ಏಕೆಂದರೆ ಅವರು ಸದ್ಯ ಪರಿಸ್ಥಿತಿಯಲ್ಲಿ ಆಟದಲ್ಲಿ ಉಳಿಯುವ ಹಾದಿಯಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಏಕೆಂದರೆ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದ ಅತ್ಯಂತ ಪ್ರಮುಖ ಸಮಯದಲ್ಲಿ ಕೇವಲ ಒಂದು ಓವರ್‌ ಬೌಲ್‌ ಮಾಡಿದ್ದರು. ಅವರು ಒಳ್ಳೆಯ ಓವರ್‌ ಅನ್ನು ಬೌಲ್‌ ಮಾಡಿದ್ದರು ಆದರೆ, ಅವರನ್ನು ಇನ್ನಷ್ಟು ಹೆಚ್ಚಿನದಾಗಿ ಟೂರ್ನಿಗೆ ಕರೆ ತರುವುದಾಗಿದೆ. ನಾವು ಇನ್ನೂಆಡಿರುವುದು ಕೇವಲ ಐದು ಪಂದ್ಯಗಳು ಮಾತ್ರ. ನಾವು ಈ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲಬೇಕೆಂದರೆ, ಚಹಲ್‌ ನಮಗೆ ಅಗತ್ಯವಿದೆ," ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಹೇಳಿದ್ದಾರೆ.