IPL 2025: ಲಖನೌ ಸೂಪರ್ ಜಯಂಟ್ಸ್‌ಗೆ ಸೇರಲು ಸಜ್ಜಾಗುತ್ತಿರುವ ಅಪಾಯಕಾರಿ ವೇಗಿ!
Mayank Yadav set to join LSG: ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಫಾಸ್ಟ್ ಬೌಲರ್ ಮಯಾಂಕ್ ಯಾದವ್ ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಸೇರ್ಪಡೆಯಾಗಲು ಸಜ್ಜಾಗುತ್ತಿದ್ದಾರೆಂದು ಮೂಲಗಳು ಹೇಳಿರುವುದನ್ನು ಇಂಡಿಯಾ ಟುಡೇ ವರದಿ ಮಾಡಿದೆ.

ಲಖನೌ ಸೂಪರ್ ಜಯಂಟ್ಸ್‌ಗೆ ಸೇರಲು ಸಜ್ಜಾಗುತ್ತಿರುವ ಮಯಾಂಕ್ ಯಾದವ್.

ನವದೆಹಲಿ: ತಮ್ಮ ಮಾರಕ ಬೌಲಿಂಗ್ ಮೂಲಕ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದ ಫಾಸ್ಟ್ ಬೌಲರ್ ಮಯಾಂಕ್ ಯಾದವ್ (Mayank Yadav) ಅವರು ಹದಿನೆಂಟನೇ ಆವೃತ್ತಿಯ ಟೂರ್ನಿಯ ನಿಮಿತ್ತ ಲಖನೌ ಸೂಪರ್ ಜಯಂಟ್ಸ್ (Lucknow Super Giants) ತಂಡಕ್ಕೆ ಸೇರ್ಪಡೆಯಾಗಲಿದ್ದಾರೆಂದು ವರದಿಯಾಗಿದೆ. ಅವರು ಸದ್ಯ ಬೆಂಗಳೂರಿನ ನ್ಯಾನಷಲ್ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ ಹಾಗೂ ಅವರು ಸದ್ಯ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂದು ಎನ್‌ಸಿಎ ತಿಳಿಸಿದೆ. ಈ ಬಗ್ಗೆ ಮೂಲಗಳು ತಿಳಿಸಿರುವುದನ್ನು ಇಂಡಿಯಾ ಟುಡೇ ವರದಿ ಮಾಡಿದೆ. ಈಗಾಗಲೇ ಬ್ಯಾಟಿಂಗ್‌ನಲ್ಲಿ ಅಪಾಯಕಾರಿಯಾಗಿ ಕಾಣುತ್ತಿರುವ ಲಖನೌ ತಂಡ, ಮಯಾಂಕ್ ಯಾದವ್ ಬಂದರೆ ಬೌಲಿಂಗ್‌ನಲ್ಲಿ ಅತ್ಯಂತ ಅಪಾಯಕಾರಿಯಾಗಿ ಕಾಣಲಿದೆ.
ಕಳೆದ ಆವೃತ್ತಿಯಲ್ಲಿ ಐಪಿಎಲ್ ಟೂರ್ನಿಯಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದರ ಹೊರತಾಗಿಯೂ ಮಯಾಂಕ್ ಯಾದವ್ ಅವರನ್ನು ಲಖನೌ ಫ್ರಾಂಚೈಸಿ 11 ಕೋಟಿ ರೂ. ಗಳಿಗೆ ಉಳಿಸಿಕೊಂಡಿತ್ತು. ಇತ್ತೀಚಿನ ವರದಿಗಳ ಪ್ರಕಾರ ಮಯಾಂಕ್ ಯಾದವ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಹಾಗೂ ಐಪಿಎಲ್ ಟೂರ್ನಿಯಲ್ಲಿ ಫಿಟ್ ಇದ್ದಾರೆಂದು ಎನ್‌ಸಿಎ ವೈದ್ಯಕೀಯ ತಂಡ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮಯಾಂಕ್ ಯಾದವ್ ಏಪ್ರಿಲ್ 15 ರಂದು ಲಖನೌ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆಂದು ವರದಿಯಾಗಿದೆ.
GT vs LSG: ಗುಜರಾತ್ ಟೈಟನ್ಸ್‌ಗೆ ಶಾಕ್ ನೀಡಿದ ಲಖನೌ ಸೂಪರ್ ಜಯಂಟ್ಸ್!
ಸ್ಟ್ರೆಸ್ ಇಂಜುರಿಯಿಂದ ಬಳಲುತ್ತಿದ್ದ ಮಯಾಂಕ್ ಯಾದವ್ ಅವರು ಏಪ್ರಿಲ್ ಎರಡು ವಾರ ಸಂಪೂರ್ಣ ಫಿಟ್ ಆಗಲಿದ್ದಾರೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಕಾಲ್ಬೆರಳಿನ ಕಾರಣ ಅವರು ಆಗಮನ ತಡವಾಗಲು ಕಾರಣವಾಗಿದೆ. ಜಸ್ಟಿನ್ ಲ್ಯಾಂಗರ್ ಅವರು ಈ ಆವೃತ್ತಿಯಲ್ಲಿ ಆರಂಭದಲ್ಲಿ ಮಯಾಂಕ್ ಯಾದವ್ ಅವರ ಗಾಯದ ಬಗ್ಗೆ ಮಾತನಾಡಿದ್ದರು. ಅನಿರೀಕ್ಷಿತವಾಗಿ ಹಾಸಿಗೆಯನ್ನು ಒದೆಯುವ ಸಮಯದಲ್ಲಿ ಮಯಾಂಕ್ ಯಾದವ್ ಅವರ ಕಾಲ್ಬೆರಳಿಗೆ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದರು.
ಮಯಾಂಕ್ ಯಾದವ್ ಮರಳುವಿಕೆಯಿಂದ ಲಖನೌ ಸೂಪರ್ ಜಯಂಟ್ಸ್ ತಂಡ ಇನ್ನಷ್ಟು ಬಲಿಷ್ಠವಾಗಲಿದೆ. ಈ ಆವೃತ್ತಿಯ ಆರಂಭದಲ್ಲಿ ಲಖನೌ ಫ್ರಾಂಚೈಸಿ ಶಾರ್ದುಲ್ ಠಾಕೂರ್ ಅವರನ್ನು ಖರೀದಿಸಿತ್ತು. ಮೊಹ್ಸಿನ್ ಖಾನ್ ಗಾಯಕ್ಕೆ ತುತ್ತಾಗಿದ್ದರಿಂದ ಟೂರ್ನಿಯಿಂದ ಹೊರ ಬಿದ್ದಿದ್ದರು. ಹಾಗಾಗಿ ಇವರ ಸ್ಥಾನದಲ್ಲಿ ಮೆಗಾ ಹರಾಝಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶಾರ್ದುಲ್ ಠಾಕೂರ್‌ಗೆ ಅವಕಾಶವನ್ನು ನೀಡಲಾಗಿತ್ತು.
🚨 GOOD NEWS FOR LUCKNOW 🚨
— Johns. (@CricCrazyJohns) April 14, 2025
- Mayank Yadav is likely to join the LSG squad tomorrow. [Sports Tak] pic.twitter.com/iPfRqP1ahb
ನಾಲ್ಕನೇ ಸ್ಥಾನದಲ್ಲಿರುವ ಲಖನೌ
ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ತಂಡ, ಇಲ್ಲಿಯ ತನಕ ಆಡಿದ ಆರು ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಏಪ್ರಿಲ್ 14 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಖನೌ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.