ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ICC ODI World Cup 2026: ಪಂತ್‌-ಕಿಶನ್‌ ನಡುವೆ ಸೂಕ್ತ ವಿಕೆಟ್‌ ಕೀಪರ್‌ ಅನ್ನು ಆರಿಸಿದ ಆರ್‌ ಅಶ್ವಿನ್‌!

ಮುಂದಿನ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡಕ್ಕೆ ಇಶಾನ್‌ ಕಿಶನ್‌ ಹಾಗೂ ರಿಷಭ್‌ ಪಂತ್‌ ಅವರ ನಡುವೆ ವಿಕೆಟ್‌ ಕೀಪರ್‌ ಅನ್ನು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಆಯ್ಕೆ ಮಾಡಿದ್ದಾರೆ. ಸದ್ಯ ಏಕದಿನ ತಂಡದಲ್ಲಿ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಕೆಎಲ್‌ ರಾಹುಲ್‌ ಅವರು ಆಡಿದ್ದಾರೆ ಹಾಗೂ ಎರಡನೇ ವಿಕೆಟ್‌ ಕೀಪರ್‌ ಆಗಿ ಇಶಾನ್‌ ಕಿಶನ್‌ ಆಡುತ್ತಿದ್ದಾರೆ.

ಏಕದಿನ ವಿಶ್ವಕಪ್‌ಗೆ ಸೂಕ್ತ ವಿಕೆಟ್‌ ಕೀಪರ್‌ ಆರಿಸಿದ ಅಶ್ವಿನ್‌.

ನವದೆಹಲಿ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ (ICC ODI World Cup 2027) ಭಾರತ ತಂಡ ಇಂದಿನಿಂದಲೇ ಸಜ್ಜಾಗುತ್ತಿದೆ. ಬಲಿಷ್ಠ ಸಂಯೋಜನೆಯನ್ನು ಕಟ್ಟಲು ಬಿಸಿಸಿಐ ಆಯ್ಕೆದಾರರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಪ್ರಸ್ತುತ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದಲೇ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಅತ್ಯುತ್ತಮ ಪ್ರಯೋಗವನ್ನು ನಡೆಸುತ್ತಿದೆ. ಹಲವು ಮಾಜಿ ಕ್ರಿಕೆಟಿಗರು ಕೂಡ ಭಾರತ ತಂಡದ ಆಯ್ಕೆಯ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ವಿಕೆಟ್‌ ಕೀಪರ್‌ ಸ್ಥಾನಕ್ಕೂ ಕೂಡ ಚರ್ಚೆಗಳು ನಡೆಯುತ್ತಿವೆ. ಇದರ ಬಗ್ಗೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಅವರು ತಮ್ಮದೇ ಆಯ್ಕೆಯನ್ನು ಮುಂದಿಟ್ಟಿದ್ದಾರೆ.

ಇದೀಗ ಭಾರತ ಏಕದಿನ ತಂಡದಲ್ಲಿ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಕೆಎಲ್‌ ರಾಹುಲ್‌ ಅವರು ಆಡುತ್ತಿದ್ದರೆ, ಎರಡನೇ ವಿಕೆಟ್‌ ಕೀಪರ್‌ ಆಗಿ ಇಶಾನ್‌ ಕಿಶನ್‌ ಆಡುತ್ತಿದ್ದಾರೆ. ಆದರೆ, ದೀರ್ಘಾವಧಿ ವಿಕೆಟ್‌ ಕೀಪರ್‌ ಆಗಿದ್ದ ರಿಷಭ್‌ ಪಂತ್‌ ಸದ್ಯ 50 ಓವರ್‌ಗಳ ಸ್ವರೂಪದ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೂ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಭಾರತ ತಂಡದ ವಿಕೆಟ್‌ ಕೀಪರ್‌ ಸ್ಥಾನಗಳು ಇನ್ನೂ ಖಚಿತವಾಗಿಲ್ಲ. ಇನ್ನೂ ಒಂದು ವರ್ಷ ಸಮಯವಿದೆ. ಹಾಗಾಗಿ ಭಾರತ ತಂಡದ ವಿಕೆಟ್‌ ಕೀಪರ್‌ಗಳ ಸ್ಥಾನಕ್ಕೆ ಕೆಎಲ್‌ ರಾಹುಲ್‌ ಅವರ ಜೊತೆಗೆ ಇಶಾನ್‌ ಕಿಶನ್‌ ಮತ್ತು ರಿಷಭ್‌ ಪಂತ್‌ ನಡುವೆ ಪೈಪೋಟಿ ನಡೆಯುತ್ತಿದೆ.

ʻಮೊಹಮ್ಮದ್‌ ಸಿರಾಜ್‌ ಅವರನ್ನು ಏಕೈಕ ಸ್ವರೂಪಕ್ಕೆ ಸೀಮಿತ ಮಾಡಿದ್ದೇವೆʼ: ಆಕಾಶ್‌ ಚೋಪ್ರಾ!

ಈ ಬಗ್ಗೆ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಅವರು ಪ್ರತಿಕ್ರಿಯಿಸಿದ್ದಾರೆ. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, ಏಕದಿನ ವಿಶ್ವಕಪ್‌ ಟೂರ್ನಿಯ ಭಾರತ ತಂಡಕ್ಕೆ ಸೂಕ್ತ ವಿಕೆಟ್‌ ಕೀಪರ್‌ ಅನ್ನು ಆಯ್ಕೆ ಮಾಡಿದ್ದಾರೆ. ಕೆಎಲ್‌ ರಾಹುಲ್‌ ಅವರು ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಮುಂದುವರಿದರೂ, ಎರಡನೇ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಪಂತ್‌ ಅಥವಾ ಕಿಶನ್‌ ಒಬ್ಬರು ಆಯ್ಕೆಯಾಗಿ, ಇನ್ನೊಬ್ಬರು ಹೊರಬೀಳಬಹುದು.

"ಕೆಎಲ್‌ ರಾಹುಲ್‌ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿದ್ದಾರೆ ಹಾಗೂ ಇಶಾನ್‌ ಕಿಶನ್‌ ಅವರು ತಮ್ಮ ಶತಕದ ಮೂಲಕ ವಿಶ್ವಕಪ್‌ ತಂಡದ ಮೀಸಲು ವಿಕೆಟ್‌ ಕೀಪರ್‌ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಆದರೆ, ಏಕದಿನ ವಿಶ್ವಕಪ್‌ ಟೂರ್ನಿಗೆ ಇನ್ನೂ ಸಾಕಷ್ಟು ಸಮಯಿದೆ, ಹಾಗಾಗಿ ರಿಷಭ್‌ ಪಂತ್‌ ಅವರ ಬಗ್ಗೆ ಈಗಲೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸಮಂಜಸವಲ್ಲ. ಏಕದಿನ ಕ್ರಿಕೆಟ್‌ ತಂಡದ ಮಧ್ಯಮ ಕ್ರಮಾಕದಲ್ಲಿ ಪಂತ್‌ ಯೋಗ್ಯ ಪ್ರದರ್ಶನವನ್ನು ತೋರಿದ್ದಾರೆ. ಕಿಶನ್‌ ಅಸಾಧಾರಣ ಇನಿಂಗ್ಸ್‌ ಆಡಿದ್ದಾರೆ ಹಾಗಾಗಿ ಅವರನ್ನು ಈಗಲೇ ಮುಂದಕ್ಕೆ ತಳ್ಳಲು ಸಾಧ್ಯವಾಗುವುದಿಲ್ಲ," ಎಂದು ಹೇಳಿದ್ದಾರೆ.

ಏಕೈಕ ಭಾರತೀಯನಿಗೆ ಸ್ಥಾನ, ತಮ್ಮ ನಚ್ಚಿನ ಟೆಸ್ಟ್‌ ತಂಡದ ಪ್ಲೇಯಿಂಗ್‌ XI ಆರಿಸಿದ ಸ್ಟುವರ್ಟ್‌ ಬ್ರಾಡ್‌!

ವಾಷಿಂಗ್ಟನ್‌ ಸುಂದರ್‌ ಪರಿಣಾಮಕಾರಿ ಪ್ರದರ್ಶನ ತೋರಬೇಕಾಗಿದೆ: ಅಶ್ವಿನ್‌

ವಾಷಿಂಗ್ಟನ್‌ ಸುಂದರ್‌ಗೆ ಭಾರತ ತಂಡದಲ್ಲಿ ನಿರಂತರ ಅವಕಾಶಗಳನ್ನು ನೀಡಲಾಗುತ್ತಿದೆ, ಆದರೆ, ಅವರು ಇನ್ನಷ್ಟು ಪರಿಣಾಮಕಾರಿ ಪ್ರದರ್ಶನವನ್ನು ತೋರಬೇಕಾಗಿದೆ. ಟೆಸ್ಟ್‌ ತಂಡದಲ್ಲಿ ಅವರು ಉತ್ತಮ ಪ್ರದರ್ಶನವನ್ನು ತೋರಿದ್ದಾರೆ, ಅದನ್ನೇ ಅವರು ಒಡಿಐ ಕ್ರಿಕೆಟ್‌ನಲ್ಲಿ ಮುಂದುವರಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

"ಭಾರತ ತಂಡದಲ್ಲಿ ವಾಷಿಂಗ್ಟನ್‌ ಸುಂದರ್‌ ಅವರು ಸಾಕಷ್ಟು ಅವಕಾಶಗಳನ್ನು ತೆಗೆದುಕೊಂಡಿದ್ದಾರೆ. ಟೀಮ್‌ ಮ್ಯಾನೇಜ್‌ಮೆಂಟ್‌ ಅವರನ್ನು ದೀರ್ಘಾವಧಿ ಬೆಂಬಲಿಸಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು ಕೆಲ ಅದ್ಭುತ ಪ್ರದರ್ಶನಗಳನ್ನು ತೋರಿದ್ದಾರೆ. ಆದರೆ, ಅವರು ಇನ್ನಷ್ಟು ಉತ್ತಮ ಪ್ರದರ್ಶನಗಳನ್ನು ನೀಡಬೇಕಾದ ಅಗತ್ಯವಿದೆ," ಎಂದು ಆರ್‌ ಅಶ್ವಿನ್‌ ಸಲಹೆ ನೀಡಿದ್ದಾರೆ.