ನವದೆಹಲಿ: ಭಾರತೀಯ ಕ್ರಿಕೆಟ್‌ನ ಸ್ಪಿನ್ ಬೌಲಿಂಗ್ ದಂತಕತೆ ರವಿಚಂದ್ರನ್ ಅಶ್ವಿನ್ (R Ashwin) ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಆಗಸ್ಟ್ 27 ರಂದು ಸ್ಪಿನ್ ದಂತಕತೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅವರು ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಆಡಿದ 221 ಪಂದ್ಯಗಳಿಂದ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ತಂಡ (Indian Cricket Team), ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದೀಗ ಐಪಿಎಲ್ ಟೂರ್ನಿಗೂ ಕೂಡ ಅವರು ಗುಡ್‌ಬೈ ಹೇಳಿದ್ದಾರೆ.
1.ಅಶ್ವಿನ್‌ರ ಮಂಕಡಿಂಗ್ ರನ್‌ಔಟ್ ವಿವಾದ
2019ರ ಐಪಿಎಲ್ ಟೂರ್ನಿಯಲ್ಲಿ ಆರ್ ಅಶ್ವಿನ್ ಬೌಲ್ ಮಾಡುತ್ತಿದ್ದ ವೇಳೆ ನಾನ್-ಸ್ಟ್ರೈಕರ್‌ನ ತುದಿಯಲ್ಲಿದ್ದ ಜೋಸ್ ಬಟ್ಲರ್ ಕ್ರೀಸ್ ತೊರೆದಿದ್ದರು. ಈ ವೇಳೆ ಅಶ್ವಿನ್, ಜೋಸ್ ಬಟ್ಲರ್ ಅವರನ್ನು ಮಂಕಡ್ ರನೌಟ್ ಮಾಡಿದ್ದರು. ಈ ಇಡೀ ವಿಷಯದ ಬಗ್ಗೆ ಎಲ್ಲರಿಗೂ ವಿಭಿನ್ನ ಅಭಿಪ್ರಾಯಗಳಿದ್ದವು. ಇದರ ಬಗ್ಗೆ ಸಾಕಷ್ಟು ಗದ್ದಲವಿತ್ತು. ಈ ವೇಳೆ ಆರ್ ಅಶ್ವಿನ್ ಅವರ ಕ್ರೀಡಾ ಸ್ಪೂರ್ತಿಯನ್ನು ಪ್ರಶ್ನೆ ಮಾಡಲಾಗಿತ್ತು.
ಐಪಿಎಲ್ ವೃತ್ತಿ ಜೀವನಕ್ಕೆ ಹಠಾತ್ ವಿದಾಯ ಹೇಳಿ ಶಾಕ್ ನೀಡಿದ ಆರ್ ಅಶ್ವಿನ್!
2.ಐಪಿಎಲ್‌ನಲ್ಲಿ ರಿಟೈರ್ ಔಟ್ ಆದ ಮೊದಲ ಆಟಗಾರ
2022ರ ಐಪಿಎಲ್ ಟೂರ್ನಿಯಲ್ಲಿ ರವಿಚಂದ್ರನ್ ಅಶ್ವಿನ್ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೇಮ್ ಪ್ಲ್ಯಾನ್ ಕಾರಣದಿಂದ ರಿಟೈರ್ ಔಟ್ ಆಗಿದ್ದರು. ಐಪಿಎಲ್ ಟೂರ್ನಿಯಲ್ಲಿ ರಿಟೈರ್ ಔಟ್ ಆದ ಐಪಿಎಲ್‌ನ ಮೊದಲ ಆಟಗಾರ ಎನಿಸಿಕೊಂಡಿದ್ದರು. ಇದರ ನಂತರವೂ, ಅಶ್ವಿನ್ ಆಟದ ಉತ್ಸಾಹಕ್ಕೆ ಅನುಗುಣವಾಗಿ ಇದನ್ನು ಸರಿಯಾಗಿ ಮಾಡಿದ್ದಾರೋ ಇಲ್ಲವೋ ಎಂಬ ಬಗ್ಗೆ ಗದ್ದಲವಿತ್ತು.
3.ಯೂಟ್ಯೂಬ್‌ನಲ್ಲಿ ಸಿಎಸ್‌ಕೆ ತಂಡದ ಕಾರ್ಯತಂತ್ರದ ಬಗ್ಗೆ ಚರ್ಚೆ
ರವಿಚಂದ್ರನ್ ಅಶ್ವಿನ್ ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದರು. ಇದರಿಂದ ಸಾಕಷ್ಟು ವಿವಾದ ಉಂಟಾಗಿತ್ತು. ಈ ವಿವಾದದ ನಂತರ 2025ರ ಐಪಿಎಲ್‌ನ ಇನ್ನುಳಿದ ಋತುವಿನಲ್ಲಿ ತಮ್ಮ ಚಾನೆಲ್‌ನಲ್ಲಿ ಸಿಎಸ್‌ಕೆ ತಂಡದ ಯಾವುದೇ ಪೂರ್ವವೀಕ್ಷಣೆ ಅಥವಾ ವಿಮರ್ಶೆಯನ್ನು ಮಾಡುವುದಿಲ್ಲ ಎಂದು ಅಶ್ವಿನ್ ಘೋಷಿಸಿದ್ದರು.
ʻನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿʼ: ವಿದೇಶಿ ಕ್ರಿಕೆಟ್ ಪಂಡಿತರನ್ನು ಜಾಡಿಸಿದ ಸುನೀಲ್ ಗವಾಸ್ಕರ್!
4.ಡೆವಾಲ್ಡ್ ಬ್ರೆವಿಸ್ ವಿವಾದದಲ್ಲಿ ಅಶ್ವಿನ್
ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ 2025ರ ಮಧ್ಯದಲ್ಲಿ ಡೆವಾಲ್ಡ್ ಬ್ರೆವಿಸ್ ಅವರನ್ನು ಖರೀದಿಸಲು ಐಪಿಎಲ್ ಹೆಚ್ಚುವರಿ ಹಣವನ್ನು ಪಾವತಿಸಲು ಸಿದ್ಧವಾಗಿದೆ ಎಂದು ಹೇಳಿದ್ದರು. ಆದಾಗ್ಯೂ, ಇದರ ನಂತರ, ಸಿಎಸ್‌ಕೆ ತನ್ನ ಅಧಿಕೃತ ಹೇಳಿಕೆಯನ್ನು ನೀಡಿತ್ತ. ಐಪಿಎಲ್ ನಿಯಮಗಳ ಪ್ರಕಾರ ಬ್ರೆವಿಸ್ ಅವರನ್ನು ಫ್ರಾಂಚೈಸಿ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿತ್ತು.